ಜೀವನದ ಕಾರು
ಪ್ರಿಯ ಓದುಗರೆ,
ಇದು ನನ್ನ ಮೂದಲ ಕ್ರತಿ.
ನಿಮ್ಮ ಆಶೀರ್ವಾದಗಳೊಂದಿಗೆ, ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.ವಂದನೆಗಳೂಂದಿಗೆ - ಮಧ್ವೇಶ್.
ಜೀವನದ ಕಾರು
ನಾನು ಒಂದು ಕಾರನ್ನು ಕೊಂಡೆ
ಆ ಕಾರಿನಲ್ಲಿ ಒನ್ದ್ ಹೊಸ ಪ್ರಪಂಚ ಕಂಡೆ
.
ನಾ ಕಾರಿನಲ್ಲಿ ಹೊಗುತ್ತಿದ್ದೆ ಮುಂದೆ
ನನ್ನ ಮನಸ್ಸು ಹೊಗುತ್ತಿತ್ತು ಹಿಂದೆ
.
ಆ ದಿನಗಳನ್ನು ನೆನಪಿಸಿಕೊಳ್ಳುತ್ತ
ಆ ತೊದಲು ನುಡಿಗಳನ್ನು ನೆನೆಯುತ್ತ
,
ಕಾರು ಹೋಗುತಿತ್ತು ಮುಂದೆ
ನನ್ನ ಮನಸ್ಸು ಹಿಂದೆ
,
ಅಮ್ಮ ಕೇಳಿದ್ದಳು ನೀ ದೊಡ್ಡವನಾದ ಮೇಲೆ?
ಏನಾಗುತ್ತಿ ಎಂದು ,ತೊದಲಿದ್ದೆ ನಾ ಡಾಕ್ಟರ್ ಆಗುವೆ
ಕಾರಲ್ಲಿ ಬಂದು ಇಳಿಯುವೆ ಎಂದು!
ಆ ಕನಸು ಆ ಮನಸ್ಸು, ಆಗಲಿಲ್ಲ ನನಸು,
ಮುಂದೆ ಬಂದದೆಲ್ಲ ಜೀವನದಲ್ಲಿ ಬಿರಸು
,
ಅಮ್ಮಅಪ್ಪನಿಗೆ, ಅರೋಗ್ಯದ ಬಿರಸು,
ಮನೆಯ ವಾತಾವರಣವಾಗಿರಲಿಲ್ಲ ಸಲೀಸು
,
ಕಾರು ಹೋಗುತಿತ್ತು ಮುಂದೆ,
ನನ್ನ ಮನಸ್ಸು ಹಿಂದೆ
,
ಅಣ್ಣನಿಗೆ ಹೊರ ಊರಲ್ಲಿ ಕೆಲಸ
ನನಗಾಯಿತು ಮನೆಯ ಜವಾಬ್ದಾರಿಯ ಕೆಲಸ
,
ನನಗೊಂದು ಕೆಲಸ ಹುಡುಕಿಕೊಂಡೆ,
ನನ್ನಲಿರುವ ಚೇತನವ ಕಂಡುಕೊಂಡೆ
,
ಏನಾದರು ಸಾಧಿಸುವ ಛಲ , ಆಗಲಿಲ್ಲ ವಿಫಲ,
ಸಿಕ್ಕಿತು ಅದರ ಸಂ¥ÀÇtð ಫಲ,
ಕಾರು ಹೋಗುತಿತ್ತು ಮುಂದೆ
ನನ್ನ ಮನಸ್ಸು ಹಿಂದೆ
,
ನಾ ಕಂಪನಿಯನ್ನು ಮಾಡುತಿದ್ದೆ ಮ್ಯಾನೇಜ್ ,
ಆಗಲೇ ನನಗಾಯಿತು ಮ್ಯಾರೇಜ್
, ನನ್ನ ಮನದನ್ನೆಯಾಗಿ ಬಂದಿದ್ಡಳು ಶೋಭ ಆಗಲೇ
ನನ್ನ ಜೀವನದಲ್ಲಿ ನಿತ್ಯವೂ ಹಬ್ಬ
,
ಅಮ್ಮನೆಂದಳು ನೀನೊಂದು ಮನೆಯ ಕಟ್ಟು
ನಾವು ಮಹಡಿ ಮನೆಯ ಕಟ್ಟಿದೆವು ಶ್ರಮಪಟ್ಟು
ಅಮ್ಮ ಅಪ್ಪನ ನೆನಪಲ್ಲೆ ಮನೆಯಾಯಿತು ಆದಾಗಲೇ ಆಮ್ಮ ಅಪ್ಪ ಹೇಳಿದ್ದರು ಬಾಳಿಗೆ ಇತಿಶ್ರೀ ತೊದಲು ನುಡಿಯಂತೆ ಇಂದು ತಂದಿದ್ದೆ ಸ್ವಿಫ್ಟ್ ಕಾರು ಈಗ ನನ್ನ ಹೆಂಡತಿಯದೆ SWIFT ಕಾರು ಬಾರು, ಕಾರಿನಲ್ಲಿನ ರೇಡಿಯೊ ಗುನುಗುತಿತ್ತು, ಕಾರ್,ಕಾರ್, ಎಲ್ ನೋಡಿ ಕಾರ್, ಈಗ ನನಗೆ ಅವಳೇ ನಲ್ಮೆಯ ಕಂದ,
ನಾನೇ ಅವಳ ಬಾಳ ಮುಕುಂದ , - ಮಧ್ವೇಶ್.