“ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....

“ಪಾರಮಾರ್ಥಿಕ ರಾಮ” ನೀಡುವನೇ “ರಾಜಕೀಯ” ಅನುಗ್ರಹ?....

Comments

ಬರಹ

 


        ‘ಕೇಸರಿ ಭಯೋತ್ಪಾದಕತೆ’ ಎನ್ನುವ ಅಪಪ್ರಚಾರವನ್ನು ಸುಳ್ಳು ಮಾಡಲು ‘ಕೇಸರಿವಂತ’ರಿಗೆ ಸಕಾಲ. ಒಂದು ತುಂಡು ಭೂಮಿಯ ವ್ಯಾಜ್ಯದಲ್ಲಿ, ರಾಮ ಎಂಬ ಅಲೌಕಿಕ ಅನುಭೂತಿಯನ್ನು ವಿನಿಮಯ ಮಾಡಿಕೊಳ್ಳಹೋದ ಬಾಲಶವನ್ನೀಗ ತಿದ್ದಿಕೊಳ್ಳಬಹುದು! ಮೊಕದ್ದಮೆಗಳು ನಡೆಯುವುದು ಲೌಕಿಕ ನ್ಯಾಯಾಲಯಗಳಲ್ಲಿ. ವ್ಯಾವಹಾರಿಕ ಸಾಕ್ಷ್ಯಾಧಾರಗಳ ಮೇಲೇ ಅದರ ತೀರ‍್ಪು. ‘ಎರಡೆರಡ್ಲ ನಾಕು’ ಎನ್ನುವ ನ್ಯಾಯವನ್ನೇ ಅವು ಹೇಳುವುದು. ಲೆಕ್ಕಾಚಾರಕ್ಕೆ ದುಃಖ ಬೇಕೆ?


        “ಹಿಂದೂ” ಮೌಲ್ಯಗಳನ್ನು ಕಾಪಾಡಬೇಕು; ಬಹುಸಂಖ್ಯಾತರ ‘ಮಾನ’ಕ್ಕೆ ನ್ಯಾಯ ಸಿಕ್ಕಬೇಕು ಎಂಬ ಲೌಕಿಕ ಚಳುವಳಿ ತಪ್ಪಲ್ಲ. ಆದರೆ ‘ಹಿಂದೂ ಸಮಾಜ ಒಂದು’ ಎಂದು ಕೆಲವು ನೈಜ ಸಂಘಟನೆಗಳೊಡನೆ ಕಪಟ ರಾಜಕಾರಣಿಗಳು ವೇದಿಕೆಗಳಲ್ಲಿ ಕೈ ಎತ್ತಿ ಕೂಗು ಹಾಕುವ ಬಾಲಿಶ ಆವೇಶ, ಕುಂಟು ನೆಪಗಳಿಂದ ಆ ಒಗ್ಗಟ್ಟು ಹುಟ್ಟುವುದಿಲ್ಲ. ಅದಾಗಬೇಕಾದರೆ, ನಾವು ನಂಬಿದ ದೇವರ ಸಾಮ್ರಾಜ್ಯದಲ್ಲಿ ಅನ್ಯಾಯ ನಡೆಯುವುದಿಲ್ಲ; ಅಲ್ಲಿ ಶೋಷಣೆ, ವಂಚನೆ, ಕ್ಷುಲ್ಲಕ ಕದನ-ಕಾರ್ಪಣ್ಯಗಳಿರುವುದಿಲ್ಲವೆಂಬಂತೆ ಬದುಕುವ ಮಾನವ ಹೃದಯಗಳು ಬೇಕಾಗುತ್ತವೆ; ಇದಕ್ಕಾಗಿ, ಜಾತಿ-ಕುಲ-ಗೋತ್ರಗಳ ಭೇದವಿಲ್ಲದೆ  ಸಮಾಜದ ಎಲ್ಲಾ ಸದಸ್ಯರಿಗೆ ಸಮಾನ ಸಂಸ್ಕಾರ  ಉಂಟುಮಾಡುವ ಆವಶ್ಯಕತೆ ಉಂಟಾಗುತ್ತದೆ. ಹಿಂದೂ ಹೆಸರಿನ ಪ್ರತಿಯೊಂದು ಅಖಾಡಾಗಳೂ, ಮಠ-ಪೀಠಗಳೂ ಇನ್ನಾದರೂ ಈ ಜವಾಬ್ದಾರಿಯನ್ನು ನಿಸ್ಪೃಹತೆಯಿಂದ ವಹಿಸಿಕೊಳ್ಳಬೇಕಾಗುತ್ತದೆ.  


ಆರ್. ಕೆ. ದಿವಾಕರ


ಕರೆ: 9448047559


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet