ಜನಪರ ಜ್ಯೋತಿಷ್ಯ- ಮದುವೆಯಲ್ಲಿ ಜಾತಕ ಹೊಂದಾಣಿಕೆ

ಜನಪರ ಜ್ಯೋತಿಷ್ಯ- ಮದುವೆಯಲ್ಲಿ ಜಾತಕ ಹೊಂದಾಣಿಕೆ

ಕಸ್ತೂರಿಯಲ್ಲಿ  'ಜನಪರ ಜ್ಯೋತಿಷ್ಯ' ಎಂಬ ಸರಣಿ ಬರುತ್ತಿದೆ. ಇದರಲ್ಲಿ  ಹಿಂದೆ ಒಂದು ಸಲ ಕಾಳಸರ್ಪಯೋಗ ಮುಂತಾದವು ಸುಳ್ಳು , ಇತ್ತೀಚೆಗೆ ಜ್ಯೋತಿಷಿಗಳು ಜನರನ್ನು  ಹೆದರಿಸಿ ಹಣಗಳಿಸಲು ಇಂಥವನ್ನು ಪ್ರಚಾರಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದರು.

ಅಕ್ಟೋಬರ್ ೨೦೧೦ ರ ಸಂಚಿಕೆಯಲ್ಲಿ  ಮದುವೆಯಲ್ಲಿ ಜಾತಕ ಹೊಂದಾಣಿಕೆಯ ಪದ್ಧತಿಯೂ ಇತ್ತೀಚೆಗಷ್ಟೇ ಬಳಕೆಗೆ ಬಂದದ್ದು ಎಂದು ತಿಳಿಸಿದ್ದಾರೆ. 

 

ಈ ಕೆಳಕಂಡ ಶ್ಲೋಕವನ್ನೂ ಗಮನಿಸಿ. 

    ಕುಲಂ ಚ ಶೀಲಂ ಚ ವಪುರ್ ವಯಶ್ಚ

   ವಿದ್ಯಾಂ ವಿತ್ತಂ ಚ ಸನಾಥತಾಂ ಚ

   ಏತಾನ್ ಗುಣಾನ್ ಸಪ್ತ ಸಮೀಕ್ಷ್ಯ ದೇ

   ಕನ್ಯಾ ವರೇ ಶೇಷಂ ಅಚಿಂತನೀಯಂ

 

(ವಿವಾಹ ಸಂದರ್ಭದಲ್ಲಿ ಕುಲ, ಶೀಲ, ವ್ಯಕ್ತಿತ್ವ ಅಥವಾ ರೂಪ , ವಯಸ್ಸು , ವಿದ್ಯೆ , ಸಂಪತ್ತು,  ಪೋಷಕರು- ಈ ಏಳು ಸಂಗತಿಗಳಲ್ಲದೆ ಬೇರೆ ಯಾವುದನ್ನೂ ವಿಚಾರ ಮಾಡತಕ್ಕದ್ದಲ್ಲ . ಈ ಪಟ್ಟಿಯಲ್ಲಿ ಜಾತಕ ಇಲ್ಲದಿರುವುದನ್ನು ಗಮನಿಸಿ)

 

ಮತ್ತು

  ಕೆ. ಪಿ. ಪೂರ್ಣಚಂದ್ರ  ತೇಜಸ್ವಿ  ಅವರ 'ಮಾಯಾಲೋಕ-೧' ಪುಸ್ತಕವು  ಸಂಗ್ರಹರೂಪದಲ್ಲಿ ಹೋದ ತಿಂಗಳು ಮತ್ತು ಈ ತಿಂಗಳು ಕಸ್ತೂರಿಯಲ್ಲಿ  ಬಂದಿದೆ.

Rating
No votes yet

Comments