ಕೋತಿಯಾಟ
ಕವನ
ನೋಡಿ ನಮ್ಮಯ ಮನೆಯ ಅಂಗಳ
ಕಿಂದು ಕೋತಿಯು ಬಂದಿತು
ಒಡೆಯನಾಣತಿಯಂತೆ ಬಾಗುತ
ನಮಗೆ ವಂದನೆ ಸಲಿಸಿತು [೧]
ಎತ್ತಿ ಅಲುಗಾಡಿಸುವ ಬೆತ್ತಕೆ
ಎತ್ತರೆತ್ತರ ಜಿಗಿಯಿತು
ಜಗಲಿಯಂಚಿನ ಕಂಬವೇರುತ
ಕೆಳಗೆ ಲಾಗವ ಹೊಡೆಯಿತು [೨]
ಪೂರ್ವಕಾಲದ ಮದುಮಗಳ ತರ
ಬೆನ್ನು ಬಾಗಿಸಿ ನಾಚಿತು
ಆಧುನಿಕ ವಧು ಹೇಗೆನಲು ತಲೆ
ಯೆತ್ತಿ ನೆಟ್ಟಗೆ ನಡೆಯಿತು [೩]
ಪುಟ್ಟನಿತ್ತಿಹ ಬಾಳೆ ಹಣ್ಣನು
ಮೆಲುತ ಹಲ್ಲನು ಕಿರಿಯಿತು
ಕಣ್ಣು ಮಿಟುಕಿಸಿ ,ಕೈಯ ಕುಲುಕುತ
ಸ್ನೇಹ ಚೇಷ್ಟೆಯನಾಡಿತು [೪]
ಮೈಯ ಕೆದರುತ,ತಲೆಯನಾಡಿಸಿ
ಜನರ ನಗಿಸುತ ಕುಣಿಯಿತು
ಸಿಕ್ಕ ಧನವನು ಧಣಿಯ ಕೈಯಲಿ
ಇಕ್ಕಿ,ಹಿಂದೆಯೆ ಸಾಗಿತು [೫]
Comments
ಉ: ಕೋತಿಯಾಟ
ಉ: ಕೋತಿಯಾಟ
ಉ: ಕೋತಿಯಾಟ
In reply to ಉ: ಕೋತಿಯಾಟ by kamath_kumble
ಉ: ಕೋತಿಯಾಟ
ಉ: ಕೋತಿಯಾಟ
ಉ: ಕೋತಿಯಾಟ
ಉ: ಕೋತಿಯಾಟ