ನಾನಾರು...?

ನಾನಾರು...?

ಕವನ

ನಾನು...... ನೀನು.... ?



ಕವಿಯಾಗ ಹೊರಟೆ
ಕವಿತೆ ಮರೆತು ಬಿಟ್ಟೆ,


ಕುಣಿಯಲೆಂದು ಎದ್ದೆ
ತಾಳ ತಪ್ಪಿ ಬಿದ್ದೆ


ಅಲೆದಲೆದು ಬೇಸತ್ತು
ಮುಗಿಸಿ ಎಲ್ಲ ಕಸರತ್ತು
ನಿನ್ನಲ್ಲಿ ಒಂದಾಗಿ ನಿಂದೆ
ಎಲ್ಲ ನಾನಾಗಿಹುದ ಕಂಡೆ
ಸತ್ಯದ ಸಿಹಿಯ ನಾನುಂಡೆ, ಸಂತಸಗೊಂಡೆ


 



 

Comments