ಇದ್ಯಾರು ಕೊಟ್ಟ ಶಾಪ....

ಇದ್ಯಾರು ಕೊಟ್ಟ ಶಾಪ....

ಕವನ

ನಾ  ಹುಟ್ಟಿದಾಗಿನಿಂದ,
ನೀ ನಿಲ್ಲದಂತೆ ಓಡುತಿರುವೆ,
ಇದ್ಯಾರು  ಕೊಟ್ಟ ಶಾಪ ನಿನಗೆ.....
ನಾ ಅತ್ತರೂ ನೀ ನಿಲ್ಲುತ್ತಿಲ್ಲ ,
 ನಾ ನಕ್ಕರೂ ನೀ ನಿಲ್ಲುತ್ತಿಲ್ಲ ,
  ನಾ ಕರೆದರೂ ನೀ ಕೇಳುತಿಲ್ಲ ,
ಇದ್ಯಾರು ಕೊಟ್ಟ ಶಾಪ ನಿನಗೆ .....
ಎಸ್ಟೋ ನಡೆದವು  ಶಾಂತಿ ಕ್ರಾಂತಿ, 
ಏನೇ ಆದರು ನಿನಗ್ಯಾಕಿಲ್ಲ ವಿಶ್ರಾಂತಿ, 
ಇದ್ಯಾರು ಕೊಟ್ಟ ಶಾಪ ನಿನಗೆ .....
ಓ ಸಮಯವೇ ಬಾ ನನ್ನೊಡನೆ ,
ಹೇಳು ನನಗೆ ನೀ ಬಂದೊಡನೆ,
ಇದ್ಯಾರು ಕೊಟ್ಟ ಶಾಪ ನಿನಗೆ ...........
 

Comments