ವಚನೇ ಕಾ ದರಿದ್ರತಾ?

ವಚನೇ ಕಾ ದರಿದ್ರತಾ?

ಕವನ

ಗಿಣಿರಾಮ ಮಂಗಳವ ತೋರಿಸುವ ಚೀಟಿಯನು

ಹುಡುಕಿ ತೆಗೆ ಮರೆಯದೆಯೆ ಸಂತೋಷದಿಂದ

ಸುಖದ ದಿನಗಳನಿಂದು ಬಯಸುತಿಹ ಮನುಜರಿಗೆ

ನಿನ್ನ ಕಣಿಯಿಂದುಂಟುಮಾಡು ಆನಂದ                 [೧]

ಅನುದಿನವು ಬದುಕಿನಲಿ ಕಷ್ಟ ಸಂಕಟ ಮುಸುಕಿ

ಬಾಳು ಗೋಳಾಗುತ್ತಲಿರಲು  ಮಾನವರು

ಸುಖದ ದಿನಗಳ ಕಾಂಬ ಒಂದೇ ಹಂಬಲದಲ್ಲಿ

ದಿವಸಗಳ ನೂಕುತ್ತ ಬಸವಳಿಯುತಿಹರು                [೨]

ಸುಳ್ಳಿನಿಂದಲೆ ಜನರು ಸಂತೋಷಗೊಳುವಾಗ

ಪ್ರಿಯವಾಗದಂತೆ ಫಲ ನುಡಿವೆಯೇಕೆ?

ಎಲ್ಲೆಲ್ಲು ಕೊರತೆಯೇ ತುಂಬಿರುವ ಲೋಕದಲಿ

ಒಳ್ಳೆ ಮಾತಿಗು ಕೂಡ ಕೊರತೆ ಬೇಕೇ?                  [೩]

Comments