ಎದೆಗೂಡಲ್ಲಿ...
ಕವನ
ಎದೆಗೂಡಲ್ಲಿ ಮಿನುಗುವ ನೆನಪುಗಳ ತಾರೆ
ಹನಿಯಮುತ್ತುಗಳು ಕೂಡಿ ಒಂದಾದ ನೀರೆ
ಸೂರ್ಯಕಿರಣವು ಮಳೆಯ ಸೋಕಿ ಮೂಡಿದ ಕಾಮನಬಿಲ್ಲಿನ ಬಳೆ
ಕೆರೆಯ ಕರೆಗೆ ಮೊಳಗಿದ ತಾವರೆ, ಏನು ನಿನ್ನ ಪ್ರೇಮದ ಲೀಲೆ!
ಅತಿಯಾಗಿ ಕಾಡಿದೆ ನಿನ್ನ ಪರಿಚಯ
ನಿನ್ನ ಇಂಪಾದ ನಾದಕ್ಕೆ ಮಿಡಿದಿದೆ ಈ ಹೃದಯ
ಮಾತಾದೆ ಮೌನದಲ್ಲಿ, ಬೆರೆತು ಹೋದೆಯಲ್ಲ ನನ್ನ ದಿನಚರಿಯಲ್ಲಿ
ನೀನಿಲ್ಲದೆ ದಾರಿ ಇನ್ನೆಲ್ಲಿ
ಕನಸುಗಳ ಪಟದ ದಾರ ನೀನಾದೆ
ಈ ಬಂಧನದ ಚೆಲುವಿಗೆ ಚಂದ್ರಲೋಕವು ಅರಳಿದೆ
ನನ್ನೀ ಪಯಣದಲ್ಲಿ ನಿನ್ನ ಹಾಜರಿ ಜರೂರಿ
ಜಂಟಿಯಾಗಿ ಹೋಗುವ ಸವಾರಿ ಪ್ರೀತಿಯ ರಥವನ್ನೇರಿ
Comments
ಉ: ಎದೆಗೂಡಲ್ಲಿ...
ಉ: ಎದೆಗೂಡಲ್ಲಿ...
ಉ: ಎದೆಗೂಡಲ್ಲಿ...
ಉ: ಎದೆಗೂಡಲ್ಲಿ...