??.....

??.....

ಕವನ

 ಬದುಕೆಂಬ ಈ ಸಾಗರದಲ್ಲಿ 

ಸಾಗುತ್ತಿರುವ ಜೀವನ 
ದೋಣಿಗೆ ನಾವಿಕನಾರು?
ಜನನ-ಮರಣಗಳ ನಡುವಿನ 
ಈ ಪಯಣದ ಎಲ್ಲೆ ಎಲ್ಲಿದೆ?
ಪ್ರವಾಹದ ಅಬ್ಬರದಲೆಗಳಿಗೆ 
ಸಿಲುಕಿ ನಲುಗುತ್ತಿದೆ,
ಪಾರಾಗಬಹುದೇ ಎಲ್ಲ 
ತೊಡರುಗಳನ್ನು ಮೀರಿ
ಈಜಿ ದಡ ಸೇರಬಲ್ಲುದೆ?
ಅಥವಾ
ಕಡಲ ತಳ ಸೇರುವುದೇ
ಸುಳಿಯ ಸೆಳೆತಕ್ಕೆ ಸಿಲುಕಿ?
ಯಾವುದೇ ಇರುವಿಕೆಯ 
ಗುರುತುಗಳಿಲ್ಲದಂತೆ??
 

Comments