ಕಾಮನಬಿಲ್ಲು ಕಮಾನು ಕಟ್ಟಿದೆ - ಕವನ

ಕಾಮನಬಿಲ್ಲು ಕಮಾನು ಕಟ್ಟಿದೆ - ಕವನ

ಕವನ

ಇತ್ತೀಚಿಗೆ ನಮ್ಮ ದುಬೈ ಮಂಜಣ್ಣ ಅವರು ಬರೆದ ಕಾಮನ ಬಿಲ್ಲು ಕಮಾನು ಕಟ್ಟಿದೆ ಬರಹ ನೋಡಿದಾಗ ಮನದಲ್ಲಿ ಮೂಡಿದ ಸಾಲುಗಳಿವು


ಯಾರು ಕಟ್ಟಿದರು ಈ ಸೇತುವೆಯ

ಬಾನಿಂದ ಬುವಿಗೆ ಬಾಗಿದ ಈ ಸೇತುವೆಯ

 

ಏಳು ವಿವಿಧ ಬಣ್ಣದ ಕಂಬಿಗಳ ಜೋಡಿಸಿ

ಚಿತ್ತಾರವಾಗಿ ಮೂಡಿದ ಈ ಸೇತುವೆಯ ಕಟ್ಟಿದವರ್ಯಾರು

 

ವರ್ಷಗಳು ಬೇಡವಾಯಿತು ಇದ ನಿರ್ಮಿಸಲು

ಕ್ಷಣಮಾತ್ರದಲ್ಲಿ ನಿರ್ಮಾಣವಾದ ಇದರ ಸೃಷ್ಟಿಕರ್ತ ಯಾರು

 

ಕ್ಷಣದಲ್ಲಿ ಮೂಡಿ ಕ್ಷಣದಲಿ ಮೋಡಿ ಮಾಡಿ

ಮರುಕ್ಷಣದಲ್ಲೇ ಮಾಯವಾಗಿಬಿಡುವ ನಿನ್ನ ಮಾಯೆ ಏನು...

Comments