ಸಂಬಂಧ

ಸಂಬಂಧ

ಕವನ

''ಸಂಬಂಧ" ಒಂದು  ಸವಿಯಾದ ಅನುಬಂಧ,

ಜನುಮ ಜನುಮದ ಹೃದಯಾನುಬಂಧ.

 

ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಪತಿ-ಪತ್ನಿ,

ಹೀಗಿದೆ ಸಂಬಂಧಗಳ ಸರಮಾಲೆ,

ಆ ದೇವ ನಮಗೆ ತೊಡಿಸಿಹ ಇದರ ಸಂಕೋಲೆ.

 

ಸಂಬಂಧಗಳ ಉಳಿವು-ಅಳಿವು ಇರುವುದು ನಮ್ಮ ಕೈಯಲ್ಲೇ,

ಇದೆಲ್ಲಾ ಮೇಲೆ ಇರುವವನ ಒಂದು ಲೀಲೆ!

 

ಪ್ರೀತಿ-ನಂಬಿಕೆ ಮೇಲೆ ನಿಂತಿದೆ ಸಂಬಂಧಗಳ ಗಟ್ಟಿತನ,

ಇದನ್ನು ತಿಳಿಯದೇ ಆಗುತ್ತಿದೆ ಮನೆ ಮನೆಗಳಲ್ಲಿ ಕದನ.

 

ಕುರುಕ್ಷೇತ್ರದಲ್ಲಿ  ಯುದ್ಧ ಮಾಡಲು ನಿಂತಿದ್ದ ಪಾರ್ಥನಿಗೆ,

ಶಸ್ತ್ರ ಕೆಳಗಿಳಿಸಲು ಮಾಡಿದ್ದು ಈ  ಸಂಬಂಧಗಳೇ,

ಇದಕ್ಕಾಗಿ ಶ್ರೀ ಕೃಷ್ಣ ಬೋಧಿಸಬೇಕಾಯ್ತು  ಭಗವದ್ಗೀತೆ ಅರ್ಜುನನಿಗೆ,

'ತಾನಿಲ್ಲಿ ನಿಮಿತ್ತ ಮಾತ್ರ " ಎಂದರಿವಾಯ್ತು ಆಗ ಆತನಿಗೆ.

 

ಬೇರೇನು ಹೇಳಲಿ ಈ ಸಂಬಂಧಗಳ ಬಗ್ಗೆ,

ಈ  ಲೋಕದಲ್ಲಿ ಇರುವವರೆಗೆ ಇರಬೇಕು,

    ಸಂಬಾಂಧವ್ಯದೊಳಗೆ.

 

Comments