ಪಿಳ್ಳಂಗೋವಿಯ ಚೆಲ್ವ ಕೃಷ್ಣನ...

ಪಿಳ್ಳಂಗೋವಿಯ ಚೆಲ್ವ ಕೃಷ್ಣನ...

 

 

ಮೆಲ್ಲ ಮೆಲ್ಲನೆ ಕೊಳಲಿನಿಂಚರದಿ  ಬೃಂದಾವನವ ತುಂಬಿದನ

ಮಂದೆ ಮಂದೆ ಆಕಳನೋಡಾಡಿಸುತಲಿ ನಲಿವ ಗೊಲ್ಲನ

ಇಂದ್ರ ಯಾಗಗಳ ಬೀಳುಗಳೆಯಲೈದ ರಕ್ಕಸರ  ಕೊಂದಿಹನ

ಚಂದದಿ ನೆನೆ  ನಾಲಿಗೆ ನೀ ಗೊಲ್ಲತಿಯರ ಹೆಗಲೇರಿ ಮೆರೆವನ!

 

 

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತದಿಂದ):

 

ಮಂದಂ ಮಂದಂ ಮಧುರ ನಿನದೈಃ ವೇಣುಮ್ ಆಪೂರಯಂತಂ

ಬೃಂದಂ ಬೃಂದಾವನಭುವಿ ಗಾವಂ ಚಾರಯಂತಂ ಚರಂತಂ |

ಛಂದೋಬಾಗೇ ಶತಮಖಮುಖ  ಧ್ವಂಸಿನಾಂ ದಾನವಾನಾಂ

ಹಂತಾರಂ ತಂ ಕಥಯ ರಸನೇ ಗೋಪಕನ್ಯಾ ಭುಜಂಗಂ ||

 

-ಹಂಸಾನಂದಿ

 

ಕೊ: 'ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? ' ಅನ್ನುವುದು ಪುರಂದರ ದಾಸರ ಒಂದು ಜನಪ್ರಿಯ ರಚನೆ.

 

ಕೊ.ಕೊ: ಮೂಲದಲ್ಲಿ ಇಲ್ಲದ ಕೆಲವು ಪದಗಳು ಅನುವಾದದಲ್ಲಿದ್ದರೂ ಭಾವಕ್ಕೆ ಅಷ್ಟು ಅಡ್ಡಿಯಾಗಿಲ್ಲವೆಂದುಕೊಂಡಿರುವೆ.

 

ಕೊ. ಕೊ. ಕೊ : ನನ್ನ ಆರಿಸಿದ ಅನುವಾದಗಳ ಪುಸ್ತಕ ’ಹಂಸನಾದ’ ಕೊಳ್ಳಲು ಇಲ್ಲಿ ಚಿಟಕಿಸಿ.

 

(ಚಿತ್ರ ಕೃಪೆ: http://www.exoticindiaart.com/sculptures/fluting_krishna_rk46.jpg)

Rating
No votes yet