ಅ ಕಪ್ ಓಫ್ ಕಾಫಿ ... ಸಿಪ್ - ೪೩

ಅ ಕಪ್ ಓಫ್ ಕಾಫಿ ... ಸಿಪ್ - ೪೩

ಸಿಪ್ ೪೩

 

 

ಹಿಂದಿನ ಸಿಪ್ 

 

ಮೂರು ರೌಂಡ್ ಕ್ಲಿಯರ್ ಮಾಡ್ಕೊಂಡು, ಎಚ್.ಆರ್ ರೌಂಡ್ ನಲ್ಲಿ ಪೇ ನೂ ಫೈನಲ್ ಆಯಿತು. ಜೋಯಿನಿಂಗ್ ಡೇಟ್ ಅನ್ನು ನವೆಂಬರ್ ಫಸ್ಟ್ ವೀಕ್ ಗೆ ಕೊಟ್ರು. ಕಳೆದ ನಾಲ್ಕು ತಿಂಗಳಿಂದ ಮಾಡಿದ ಹೋರಾಟಕ್ಕೆ ಒಂದು ಅಂತ್ಯ ಸಿಕ್ಕಂತಾಯಿತು. ಡ್ರೀಮ್ ಟೆಕ್ ನಲ್ಲಿ ಎರಡೂವರೆ ವರ್ಷ ಮಾಡಿದ ಕೆಲಸಕ್ಕೆ ಒಂದು ಚೂರು ರೆಕೊಗ್ನಿಶನ್ ಸಿಗದಾಗ ಕಂಪೆನಿಗೆ ಸೆಡ್ಡು ಹೊಡೆದು ಹೋಗಬೇಕು ಎಂದು ತೆಕೊಂಡ ನಿರ್ಧಾರಕ್ಕೆ ಈಗ ನಿಜವಾದ ಅರ್ಥ ಬಂದಂತಾಯಿತು. ಮೊದಲಿಗೆ ಬೆಂಗಳೂರು ಬಿಟ್ಟು ಬೇರೆ ಕಡೆಗೆ ಹೋಗಲು ಮನಸಿಲ್ಲದ ನನಗೆ ಚೆನ್ನೈ ಗೆ ಆಫರ್ ಇದೆ ಎಂದು ತಿಳಿದಾಗ ಮನಸಲ್ಲಿರುವ ಪ್ರೇಮಕ್ಕೆ ಒಂದು ಒಳ್ಳೆಯ ಕ್ಲೈಮಾಕ್ಸ್ ಸಿಕ್ಕಿತು ಎಂದು ನಾನು ನನ್ನ ರೆಸ್ಯುಂ ಅನ್ನು ಈ ಎಂಏನ್ಸಿ ಗೆ ಫಾರ್ವರ್ಡ್ ಮಾಡಿದ್ದೆ. ಮನಸ್ಸು ಹಿಗ್ಗುತಿತ್ತು. ಆಕೃತಿಗೆ ಈಗ ಫೋನ್ ಮಾಡಿ ವಿಷಯ ತಿಳಿಸುವ ಅಂದುಕೊಂಡೆ.

ನಾನು ಅಂದುಕೊಳ್ಳುವಷ್ಟರಲ್ಲೇ ಮೊಬೈಲ್ ರಿಂಗಾಯಿತು. ವರ್ಷಾ.

ಒಂದು ಪ್ರೀತಿಯನ್ನುನೆನಪಿಸಿದಾಗ ಇನ್ನೊಂದು ಪ್ರೀತಿ ನನ್ನನು ನೆನಪಿಸುತ್ತಿತ್ತು. ಮೂರನೇ ಪ್ರೀತಿ ಬೆಂಗಳೂರು ಸೇರಿ ಮೌನದಲ್ಲಿತ್ತು.

"ವೈಭು, ಏನಾಯ್ತೋ...?"
"ಆಯ್ತೇ, ಡೆಸ್ಟಿನೇಶನ್ ಚೆನ್ನೈ ಸುಕ್ಸುಸ್ ಫುಲ್"
ವರ್ಷಳಿಗೆ ನಾನು ಈ ಇಂಟರ್ವ್ಯೂ ಕಾಲ್ ಬಗ್ಗೆ ಹೇಳಿದ್ದೆ, ಇನ್ನೂ ಯಾರಿಗೂ ಇದರ ಬಗ್ಗೆ ವರದಿ ಮುಟ್ಟಿಸಿರಲಿಲ್ಲ. ವರ್ಷ ಆಕೃತಿ ದೂರವಾದಾಗಿಂದ ನನಗೆ ಹತ್ತಿರವಾಗಿದ್ದಳು, ನನಗಿಂತ ನನ್ನ ಮನೆಯವರಿಗೆ ಇವಳು ಹತ್ತಿರವಾದದ್ದು ನನಗೂ ಮುಂಚಿನಕ್ಕಿಂತ ಹತ್ತಿರವಾಗಲು ಕಾರಣ ವಾಯಿತು ಎಂದು ಹೇಳಿದರೆ ತಪ್ಪಾಗಲಾರದು.

ನನ್ನ  ಸುಕ್ಸುಸ್ ಸ್ಟೋರಿ ಕೇಳಿ ಅವಳು ಸಂಭ್ರಮಿಸಲಿಲ್ಲ. ಬದಲಿಗೆ ಮೌನಕ್ಕೆ ಜಾರಿದಳು.
ಅವಳ ಮೌನದ ಕಾರಣ ನನಗೆ ತಿಳಿದಿತ್ತು. ಅವಳದ್ದೂ ನನ್ನ ಮನೆಯವರದ್ದೇ ಆಶಯವಾಗಿತ್ತು. ಆದರೆ ಒಬ್ಬಳಿಗೆ ಮನಸ್ಸು ದೇಹ ಒಪ್ಪಿಸಿ ಆದ ಮೇಲೆ ಇವಳಿಗೆ ಅದನ್ನು ಕೊಡಲು ಮನಸಾಗಲಿಲ್ಲ. ಅದಕ್ಕಾಗಿ ನಾನು ಅವಳಲ್ಲಿ ಇಬ್ಬರ ನಡುವೆ ಕಳೆದ ಹದಿನೈದು ವರ್ಷದಿಂದ ನಡೆಯುತ್ತಿರುವ ಗೆಳೆತನವನ್ನೇ ಮುಂದುವರೆಸಿದ್ದೆ.

"ವರ್ಷಾ, ಏನಾಯ್ತೆ..?"
"ಏನ್ ಆಗಬಾರದು ಅನ್ಕೊಂಡಿದ್ದೆ ಅದೇ ಆಗೋಯ್ತು..."
ಮೌನದಲ್ಲಿದ್ದೆ. ಅವಳು "ನಿನ್ನ ಪ್ರತಿಯೊಂದು ವಿಷಸ್ ನೆರವೆರಲಿ ಎಂದು ಬೇಡುವ ದೇವರಿಗೆ ನಾನು ನಿನ್ನ ಈ ಇಂಟರ್ವ್ಯೂ ಕ್ಲೀರ್ ಆಗದೆ ಇರಲಿ ಎಂದು ಬೇಡಿದ್ದೆ ಬಂತು." ಎನ್ನುತ್ತಾ ಮೌನಕ್ಕೆ ಜಾರಿದಳು.
"ವರ್ಷಾ, ಆಕೃತಿ ಗಾಗಿ ನಾನು ಚೆನ್ನೈ ಒಪ್ಪಿದೆ ಕಣೇ, ಇನ್ನು ನೀನು ನನಗೆ ಕೊಟ್ಟ ಪ್ರಾಮಿಸ್ ನಂತೆ ನನ್ನ ಮನೆಯವರನ್ನು ಒಪ್ಪಿಸ ಬೇಕಿದೆ, ಪ್ಲೀಸ್ ಡಾ ಇದೊಂದೇ ನಾನು ನಿನ್ನಿಂದ ಬಯಸುವುದು."
"ನಾನು ಬಯಸಿದ್ದು ನಿನ್ನನ್ನು, ನೀನು ನನ್ನಿಂದ ನನ್ನ ಪ್ರೇಮವನ್ನು ಸಮಾಧಿ ಕಟ್ಟುವ ಕೆಲಸವನ್ನು ಬಯಸುತಿದ್ದಿಯಲ್ಲ.. ವೈಭು.."
ಸುಮ್ಮನಾದೆ.
ಅವಳು ಮುಂದುವರಿಸಿದಳು " ನೀನು ನನ್ನಲ್ಲಿ ಯಾವಾಗಲು ಕೆಲ್ತಿದ್ದಿಯಲ್ಲ ನಿನಗೆ ಬಾಯ್ ಫ್ರೆಂಡ್ ಸಿಕ್ಕಿಲ್ವಾ ಹೇಳಿ, ಹೇಳ್ತೇನೆ ಕೇಳು ನಂಗೆ ಅವನು ಸಿಕ್ಕಿ ಎಷ್ಟೋ ಸಮಯ ಆಯಿತು, ನನಗೆ ಅವನು ಬಾಯ್ ಫ್ರೆಂಡ್ ಆದರೆ ಅವನಿಗೆ ನಾನು ಬರಿಯ ಫ್ರೆಂಡ್, ಅವನ ಪಾಲಿಗೆ ಬೇರೆ ಯಾರೋ ಗರ್ಲ್ ಫ್ರೆಂಡ್ ಅನ್ನು ತಿದ್ದೆನಲ್ಲಾ ನಾನು, ಇವತ್ತು ಹೇಳ್ತೇನೆ ಅವನು ಯಾರು ಎಂದು" ಎಂದು ಬಿಕ್ಕಳಿಕೆ ಮುಂದುವರಿಸಿದಳು.
ಆ ಬಾಯ್ ಫ್ರೆಂಡ್ ನಾನೇ ಎಂದು ನನಗೆ ಗೊತ್ತಿತ್ತು. ಆದರೂ ಸುಮ್ಮನಾದೆ.   

ಅವಳು ಮುಂದುವರಿಸಿದಳು "ನನ್ನ ಆ ಬಾಯ್ ಫ್ರೆಂಡ್ ನೀನೆ ಕಣೋ, ಬಾಲ್ಯದಲ್ಲಿ ಮನೆಯವರು ಹಚ್ಚಿದ ಪ್ರೀತಿ ಹದಿಹರೆಯದಲ್ಲಿ ಉಜ್ವಲವಾಗಿ ಉರಿಯಲು ಶುರು ಮಾಡಿತು. ಹಿಂದಿನಂತೆ ನಿನಗೆ ನಾನು ಹತ್ತಿರವಾಗೆ ಇದ್ದೆ, ಈ ಸಲುಗೆಯನ್ನು ನೀನು ಗೆಳೆತನ ಅಂದುಕ್ಕೊಂಡೆ, ಆದರೆ ಅದು ನನಗೆ ಗೆಳೆತನ ವಾಗಿರದೇ ನಿನ್ನಲ್ಲಿನ ಮೌನ ಪ್ರೀತಿಯಾಗಿತ್ತು. ಈ ಮೌನ ಪ್ರೀತಿ ಮಾತಾಡದೆ ಇರಲು ಕಾರಣ ನೀನು ಬೇರೆಯವಳಲ್ಲಿ ಹುಡುಕಿದ ನಿನ್ನ ಗಾಡ ಪ್ರೀತಿ. ನಿನಗೆ ಆಕೃತಿಯಲ್ಲಿ ಒಲವು ಹೆಚ್ಚಾಗುತ್ತಾ ಹೋದಂತೆ ನನ್ನ ಪ್ರೇಮ ಜ್ಯೋತಿ ಲಯ ತಪ್ಪಿ ಉರಿಯಲು ಶುರುವಾಯಿತು. ಅವಳಲ್ಲಿ ತೋರಿಸಿಕೊಳ್ಳಲಾಗದಷ್ಟು ಕಿಚ್ಚು ಏರಿಸಿತು.

ಆದರು ನಾನು ಅವಳನ್ನು ನಿನಗೆ ಜೋಡಿಸಲು ಮನೆಯವರನ್ನು ಒಪ್ಪಿಸುವೆ ಎಂದು ಪ್ರಾಮಿಸ್ ಕೊಟ್ಟೆ, ಯಾಕೆ ಹೇಳು, ನಾನು ಪ್ರೀತಿಸಿದ ವ್ಯಕ್ತಿ ಅವನ ಪ್ರೀತಿ ಕಳಕ್ಕೊಂಡು ದಿನ ದೂಡುವುದು ನನಗೆ ಇಷ್ಟ ವಿರಲಿಲ್ಲ. ನನ್ನ ಮೌನದಲ್ಲಿ ಹುಟ್ಟಿದ ಆ ಮೌನ ಪ್ರೀತಿಯನ್ನು ನಾನು ಮೌನದಲ್ಲೇ ಚಿವುಟಿದೆ.

ಮುಂದೊಂದು ದಿನ ಆಕೃತಿ ಚೆನ್ನೈಗೆ ಮರಳಿದಾಗ ನಿನಗೆ ಮತ್ತೆ ಹತ್ತಿರವಾಗಲು ಪ್ರಯತ್ನಿಸಿದೆ, ಅದಕ್ಕೆ ಕಾರಣ ಅಲ್ಲಿ ಆಕ್ರುತಿಗೆ ಮನೆಯವರು ಸಂಭಂಧ ಗೊತ್ತು ಮಾಡುತಿದ್ದರು. ಒಂದು ಹೆಣ್ಣಾಗಿ ಅವಳು ಮನೆಯವರನ್ನು ಎದುರು ಹಾಕಲು ಸಾದ್ಯವಿರಲಿಲ್ಲ, ನಿನ್ನ ವಿಷಯವನ್ನು ಮನೆಯವರಿಗೆ ಹೇಳುವಂತೆ ಯೂ ಇರಲಿಲ್ಲ. ಅಂದರೆ ಇನ್ನು ಮೂರು ನಾಲ್ಕು ತಿಂಗಳಲ್ಲಿ ಅವಳು ಆ ಸುನಿಲ್ ನ ಕೈ ಹಿಡಿದು ನಿನ್ನ ಬಿಟ್ಟು, ದೇಶ ಬಿಟ್ಟು ಹೊರಟು ಹೋಗ್ತಾಳೆ, ನಂತರ ನೀನು ನಿನ್ನ ಮಾತಿನಂತೆ ನಿನ್ನ ಲೈಫ್ ನಲ್ಲಿ ಸೆಟಲ್ ಆಗ್ತೀಯಾ, ಅಷ್ಟರಲ್ಲಿ ನನ್ನ ಮೆಡಿಕಲ್ ಕೂಡ ಮುಗಿದಿರುತ್ತೆ. ಮನೆಯವರ ಮನಸ್ಸಿನಂತೆ ನೀನು ನನ್ನ ಸೇರ್ತೀಯ ಅಂದುಕ್ಕೊಂಡಿದ್ದೆ.. ಆದ್ರೆ ...." ಬಿಕ್ಕಳಿಕೆ ಅತಿ ಆಯಿತು.

"ವರ್ಷಾ, ಸೋರಿ ಕಣೇ ... ನಂಗು ನೀನು ಇಷ್ಟ ಆದ್ರೆ ಬಾಳ ಸಂಗಾತಿಯಾಗಿ ಎಂದಿಗೂ ನಾನು ನಿನ್ನನ್ನು ನೋಡಲಿಲ್ಲ." ಎಂದು ನನ್ನ ಭಾವನೆಯನ್ನು ಅಲ್ಲೇ ಬಿಟ್ಟು ಬಿಟ್ಟೆ.
"ಆಲ್ ದಿ ಬೆಸ್ಟ್ ವೈಭು, ನಿನ್ನ ಪ್ರೀತಿ ಫಲಿಸಿತು,  ಚೆನ್ನೈಗೆ ಹೋಗು ಅಲ್ಲಿ ಅವರನ್ನು ಸೇರಿ ಕೋ, ನಿನಗೆ ಆಕೃತಿ ಫಿಟ್ ಆಗ್ತಾಳೆ, ನಂಗೆ ಬೇರೆ ಯಾರಾದ್ರು ಸಿಕ್ಕೆ ಸಿಗ್ತಾನೆ, ನಿನ್ನ ಮನೆಯವರಿಗೆ ಒಪ್ಪಿಸುವ ಜವಾಬ್ಧಾರಿ ನನಗೆ ಬಿಟ್ಟು ಬಿಡು, ನಾನು ನಿಮ್ಮಿಬ್ಬರನ್ನು ಒಟ್ಟು ಮಾಡಲು ಎಲ್ಲ ಪ್ರಯತ್ನ ಮಾಡುತ್ತೇನೆ, ನನಗೆ ನಿನ್ನ ಮೇಲೆ ಇದ್ದ ಪ್ರೀತಿಯ ಮೇಲೆ ಪ್ರಮಾಣ ಮಾಡಿ ಹೇಳ್ತಾ ಇದ್ದೇನೆ" ಎಂದಳು ವರ್ಷ.

ವರ್ಷನ ತ್ಯಾಗಕ್ಕೆ ಮನಸಲ್ಲಿ ಮರುಕ ಹುಟ್ಟುತ್ತಿತ್ತು. ತೋರಿಸಿಕೊಡಲು ಮನಸ್ಸಾಗಲಿಲ್ಲ.
ಅವಳು "ನಾಳೆ ಅಲ್ಲ ಅವಳ ಬರ್ತ್ ಡೇ..? ಏನು ಪ್ಲಾನ್ಸ್..?"
"ಏನು ಇಲ್ಲ.."
"ಅವಳನ್ದಂತೆ ನೀನು ಡಂಬು ನೇ, ಒಂದು ಚೂರು ರೋಮಾನ್ಸ್ ಸೆನ್ಸ್ ಇಲ್ಲ..."ಎಂದು ಮೊದಲಿನಂತೆ ನಕ್ಕಳು ವರ್ಷ. ಅವಳ  ಈ ಉಲ್ಲಸಿತ ಮಾತು ಕೇಳಿ ಅವಳ ಮನಸ್ಸಲ್ಲಿನ ಭಾವನೆ ಮಜಲು ಬದಲಾಯಿಸಿದೆ ಎಂದು ತಿಳಿದು ನಾನು
"ಏನ್ ಮಾಡ್ಲಿ ಹೇಳು.."
"ಮನೆಗೆ ಹೋಗು, ಸುರ್ಪ್ರೈಸ್ ವಿಸಿಟ್ ಕೊಡು"
"ಹೋಗ್ತೇನೆ, ಈಗಲೇ ಹೊರಟೆ"
"ಮಂಗಾ ಈಗ ಹೋಗ್ತೀಯಾ..."
"ಹೌದು"
"ರಾತ್ರಿ ಹನ್ನೆರಕ್ಕೆ ಹೋಗು ಅಂದಿದ್ದು, ಈಗ ಹೋಗಿ ಏನು ಮಾಡ್ತೀಯ...?"
"ರಾತ್ರೀನಾ... ಮನೆಯವರು ನನ್ನ ಮೇಲೆ ಇಟ್ಟ ವಿಶ್ವಾಸ ಒಂದೇ ದಿನಕ್ಕೆ ಕರಗಿ ಹೋಗಬಹುದು, ಮತ್ತೆ ನಾನು ಅವಳನ್ನು ಇನ್ನು ಯಾವತ್ತೂ ಸೇರಲಿಕ್ಕೆ ಆಗಲಿಕ್ಕಿಲ್ಲ..." ಅಂದೇ ನಾನು.
ಅವಳು "ಆಲೋಚಿಸುವ ಆಂಗಲ್ ಬದಲಾಯಿಸು"
"ಅರ್ಥ ಆಗ್ಲಿಲ್ಲ "
"ಡಂಬು ... ಯಾವುದಕ್ಕೂ ಪ್ರಯೋಜನ ಇಲ್ಲ ನೀನು" ವರ್ಷ ಮೊದಲ ಬಾರಿಗೆ ಡಂಬು ಅಂದಿದ್ದು ಏನೋ ಒಂದು ತಾರಾ ಖುಷಿ ಕೊಟ್ಟಿತು.

ಅವಳು ಮುಂದುವರಿಸಿದಳು "ನೋಡು ಅವಳ ದೊಡ್ಡಪ್ಪನನ್ನು ಭೇಟಿಯಾಗಿ ಈ ಸುರ್ಪ್ರೈಸ್ ವಿಷಯ ತಿಳಿಸು, ನಿನ್ನ ಮೇಲೆ ಪ್ರೀತಿ ಇರುವ ಅವರು ಇದಕ್ಕೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಾರೆ."
"ಹೌದಲ್ಲಾ.. ನಾನು ಈ ಬಗ್ಗೆ ಆಲೋಚನೆ ಮಾಡೇ ಇಲ್ಲ"
"ತಲೆಯಲ್ಲಿ ಬರೀ ಆಕೃತಿ ತುಂಬಿರುವಾಗ ಬೇರೆ ವಿಚಾರಗಳಿಗೆ ಎಲ್ಲಿ ಜಾಗ ...?"
"ಹೌದು !!" ಅಂದೇ ನಾನು ತುಸು ನಗುತ್ತಾ.
"ಹೌದಂತೆ ಹೌದು... ಫೋನ್ ಕಟ್ ಮಾಡಿ ಆ ಗಣಪತಿ ಮಹಾ ಪ್ರಭು ವನ್ನು ವರೆಸುವ ಕಡೆಗೆ ಗಮನ ಹರಿಸು"
"ನೀನೆ ಹೆಲ್ಪ್ ಮಾಡ್ಬೇಕು."
"ಆ ದಿನ ಮಹಾಬಲಿಪುರಂ ಗೆ ಹೋದಾಗ ನನ್ನ ಹೆಲ್ಪ್ ಕೇಳಿ ನೀನು ಅವರನ್ನು ಬೀಳಿಸಿದ್ದಿಯಾ..? ಇಲ್ಲ ಅಲ್ಲಾ .. ನಿನ್ನಲ್ಲಿ ಆ ಟೇಲೆಂಟ್ ಇದೆ. ಗೋ ಅಹೆಡ್ .. ಆಲ್ ದಿ ಬೆಸ್ಟ್" ಎಂದಳು
ನಾನು "ಥ್ಯಾಂಕ್ಸ್ ಕಣೇ ಬಾಯ್" ಎಂದು ರಾತ್ರಿಯ ಸುರ್ಪ್ರೈಸ್ ಬಗ್ಗೆ ತಲೆ ಓಡಿಸುತಿದ್ದೆ.

ಆ ಬದಿಯಲ್ಲಿ ವರ್ಷನ ಬಿಕ್ಕಳಿಕೆ ಮುಂದುವರಿದಿತ್ತು, ಆಲೋಚಿಸುತಿದ್ದ ಕಿವಿಗಳಿಗೆ ಕಟ್ ಮಾಡದ ಕರೆಯಲ್ಲಿ ಅದು ಮೆಲುವಾಗಿ ಕೇಳುತಿತ್ತು.

****************




ಗಣಪತಿಯವರಿಗೆ ಕರೆ ಮಾಡಿದೆ. ನನ್ನ ಚೆನ್ನೈ ಇಂಟರ್ವ್ಯೂ ಬಗ್ಗೆ ಹೇಳಿದೆ. ಅವರಿಗೆ ತುಂಬಾ ಖುಷಿ ಆಯಿತು. ಅವರು ನನ್ನ ಭೇಟಿಯನ್ನು ಬಯಸಿದರು. ಅವಾಗ ನಾನು ನನ್ನ ರಾತ್ರಿಯ ಸುರ್ಪ್ರೈಸ್ ಬಗ್ಗೆ ಹೇಳಿದೆ.
ಅವರಿಗೆ ಹುಡುಗನಲ್ಲಿನ ಹುಡುಗಾಟಿಕೆಯ ಆಳ ತಿಳಿದು ನನ್ನಲ್ಲಿ "ನಾನೇ ಬಂದು ನಿನನ್ನು ರೆಸಿವ್ ಮಾಡಬೇಕು ಅನ್ಕೊಂಡಿದ್ದೆ, ಆದ್ರೆ ನಾನು ಮನೆಯ ಕೆಲಸದಲ್ಲಿ ಸಲ್ಪ ಬ್ಯುಸಿ ಇದ್ದೇನೆ, ಬರಲಾಗುವುದಿಲ್ಲ, ಇಮಾಮ್ ನನ್ನು ಐ ಟಿ ಪಾರ್ಕ್ ಗೆ ಕಳಿಸಿ ಕೊಡ್ತೇನೆ. ಇನ್ನೂ ನಲವತ್ತೈದು ನಿಮಿಷದಲ್ಲಿ ಅವನು ಅಲ್ಲಿ ಇರ್ತಾನೆ. ಇಬ್ಬರು ಸೇರಿ ಊಟ ಮುಗಿಸಿ ಸಲ್ಪ ಚೆನ್ನೈ ಸುತ್ತಿ ಹನ್ನೆರಡಕ್ಕೆ ಮನೆ ಸೇರಿ,ನಾವು ಮನೆಯಲ್ಲಿರುವುದಿಲ್ಲ"

"ಏನಾಯ್ತು..?"

"ಶನಿವಾರ ಅಲ್ಲ ಹೊರಗೆ ಊಟ"ಅಂದರು.

"ಥ್ಯಾಂಕ್ಸ್ ದೊಡ್ಡಪ್ಪಾ, ಅವಳಿಗೆ ಈ ಸುರ್ಪ್ರೈಸ್ ಬಗ್ಗೆ ಹೇಳ್ ಬೇಡಿ" ಅಂದೇ ನಾನು.
ಅವರು "ಇಲ್ಲ ಹೇಳಲ್ಲಾ. ಬಾ ಆರಾಮಾಗಿ ಮತ್ತೆ ಮಾತಾಡುವ" ಎನ್ನುತ್ತಾ ಕರೆ ಕಟ್ ಮಾಡಿದರು.

ಹತ್ತು ನಿಮಿಷದಲ್ಲಿ ಇಮಾಮ್ ಕರೆ ಮಾಡಿ ನಾನಿರುವ ಜಾಗದ ಅಡ್ರೆಸ್ ಕೇಳಿದ.

ಗಂಟೆ ಏಳುವರೆ ದಾಟಿತ್ತು, ನಗರದ ಮಧ್ಯದಿಂದ ಇಲ್ಲಿ ತಲುಪಲು ೧೮ ಕಿ.ಮಿ ಇದ್ದರೂ ಸಂಜೆಯ ಹೆವಿ ಟ್ರಾಫಿಕ್ ನಲ್ಲಿ ಬರಲು ಒಂದು ಗಂಟೆಗೂ ಜಾಸ್ತಿ ಬೇಕಿತ್ತು. ಐ ಟಿ ಪಾರ್ಕ್ ನ ಹೊರಗಿನ ಸಿ.ಸಿ.ಡಿ ಯಲ್ಲಿ ಕಾಫಿ ಹೀರುತ್ತಾ ನಾನು ಹಿಂದೆ ನಡೆದು ಬಂದ ದಾರಿಯನ್ನು ನೆನಪಿಸುತಿದ್ದೆ. ಆಕೃತಿಯೊಂದಿಗಿನ ಮೊದಲ ಕಪ್ ಆಫ್ ಕಾಫಿ ಸವೆದ ಆ ಟೇಬಲ್ ಮೇಲೆ ಕೂತಿದ್ದೆ. ಮನಸ್ಸು ಹಿಂದಿನ ದಿನಗಳನ್ನು ನೆನೆಸಿ ಸಂಭ್ರಮಿಸುತಿತ್ತು. ಎಲ್ಲ ಒಂದು ರೀತಿಯಲ್ಲಿ ಸೆಟ್ಟಲ್ ಆದದನ್ನು ಕಂಡು ಉಲ್ಲಸಿತ ವಾಗಿತ್ತು. ಇವತ್ತು ಇಲ್ಲಿ ಸೆಲೆಕ್ಟ್ ಆದ ವಿಚಾರ ಅಮ್ಮನಿಗೆ ಹೇಳಿರಲಿಲ್ಲ.

ಮನೆಗೆ ಕರೆ ಮಾಡಿದೆ. "ಅಮ್ಮಾ ನಿಮಗಿವತ್ತು ಒಂದು ಸಿಹಿ ಸುದ್ದಿ ಇದೆ" ಎಂದೆ.
"ಬೆಂಗಳೂರಲ್ಲಿ ಕೆಲ್ಸಾ ಸಿಕ್ತಾ...?" ಅಂದರು ಆಶಾವಾದಿ ಅಮ್ಮ.
"ಕೆಲಸ ಸಿಕ್ತು, ಆದ್ರೆ ಬೆಂಗಳೂರಿನಲ್ಲಿ ಅಲ್ಲ ಚೆನ್ನೈ ನಲ್ಲಿ" ಅಂದೆ.
"ಮತ್ತೆ ಚೆನ್ನೈ ತೆಕೊಂಡಿಯೇನೋ...?"
"ಹೌದು" ಅಂದೆ
"ಈಚೆಗೆ ನಿನಗೆ ಪುಣೆ ಗಿಂತ ಚೆನ್ನೈ ಧ್ಯಾನ ಹೆಚ್ಚಾದಂತೆ ಇದೆ, ಯಾಕೆ ಚೆನ್ನೈ ಒಪ್ಪಿದಿ...? ಬೆಂಗಳೂರು ಸಿಗುವ ವರೆಗೆ ಡ್ರೀಮ್ ಟೆಕ್ ಸಾಕು ಎನ್ನುತ್ತಿದ್ದವನು ಅಚಾನಕ್ಕಾಗಿ ಚೆನ್ನೈ ಸೇರಲು ಕಾರಣ..." ಎನ್ನುತ್ತಾ ಸುಮ್ಮನಾದರು.

ಕಳೆದ ಕೆಲವು ತಿಂಗಳಿನಿಂದ ನನ್ನ ಮಾತಿನಲ್ಲಿ ಆಕೃತಿ ಮತ್ತು ಚೆನ್ನೈ ನ ಪ್ರಸ್ತಾವನೆಯನ್ನು ಅಮ್ಮ ಗಮನಿಸಿದ್ದರು, ಅವರಿಗೆ ಮಗ ತಮ್ಮ ಗಡಿ ದಾಟಿ ಬೇರೆ ಕಂಪೌಂಡ್ ಹಾರುವ ಬಗ್ಗೆ ಆಗಲೇ ಅನುಮಾನ ಬಂದಿತ್ತು. ಇವತ್ತು ನನ್ನ ಸೆಲೆಕ್ಷನ್ ಅವರಿಗೆ ಇದಕ್ಕೆ ಇಂಬು ಕೊಡುವಂತಿತ್ತು.

ನಾನು "ಕಾರಣ ಏನು ಇಲ್ಲ ಅಮ್ಮಾ, ಅದು ಎಂಎನ್ಸಿ, ಅದರದ್ದು ಬೆಂಗಳೂರಿನಲ್ಲಿ ಯೂ ಬ್ರಾಂಚ್ ಇದೆ, ನನ್ನದೇ ಸ್ಕಿಲ್ ಹೇಳಿ ಇಂಟರ್ವ್ಯೂ ಅಟೆಂಡ್ ಮಾಡಿದೆ, ಸೆಲೆಕ್ಟ್ ಆದೆ, ಸದ್ಯಕ್ಕೆ ಚೆನ್ನೈ , ಮುಂದೆ ನೋಡಿದರಾಯಿತು, ಬೆಂಗಳೂರಿನ ಬ್ರಾಂಚ್ ಗೆ ಟ್ರಾನ್ಸ್ ಫರ್ ತೆಕ್ಕೊಂಡ್ರಾಯಿತು... ಸುಮ್ನೆ ತಲೆ ಹಾಳ್ ಮಾಡ ಬೇಡ" ಎಂದು ಸಮಾಧಾನಿಸಿದೆ.

ಅವರು "ನಂಗೆ ನನ್ನ ವೈಭು ಹ್ಯಾಂಗ್ ಹೇಳ್ ಗೊತ್ತಿತ್ತ್ , ಆದ್ರೆ ಊರ್ವರ್ ಏನೇನೋ ಹೇಳುವಾಗ ಹೆದರಿಕೆ ಆತ್ "ಅಂದ್ರು ಕುಂದಾಪ್ರ ಧಾಟಿಯಲ್ಲಿ.ಅಪ್ಪನಿಗೆ ವರದಕ್ಷಿಣೆಯಾಗಿ ಸಿಕ್ಕ ಕುಂದ ಕನ್ನಡ ಮದುವೆಯಾಗಿ ೩೦ ವರ್ಷ ದಾಟಿದ್ದರೂ ಅಮ್ಮನಲ್ಲಿ ತಾಜಾ ಆಗಿಯೇ ಉಳಿದಿತ್ತು. ಭಾವುಕ ಆದಾಗ ಅದು ಹೊರ ಬರುತಿತ್ತು.

"ಅದ್ ಬಿಡಮ್ಮಾ, ಹಂಗೇನು ಆತಿಲ್ಲ , ನೀನ್ ಹೆದ್ರ್ ಬ್ಯಾಡ್ " ಅಂದೆ ನನಗೆ ಬರುವ ಅಲ್ಪ ಸಲ್ಪ ಕುಂದ ಕನ್ನಡದಲ್ಲಿ.
"ಯಾವಗ ಜೋಇನ್ ಆತ್ಯಾ ...?"
"ಇನ್ ಎರಡ್ ತಿಂಗ್ಳ್ ಇತ್ತ್"

ಅಮ್ಮನಿಗೆ ಯಾಕೋ ತುಂಬಾ ಖುಷಿ ಆಯಿತು. ಅವರಲ್ಲಿ ನಾನು " ಶುರುಕ್ ರೆಸೈನ್ ಮಾಡಕ್, ಆಮೇಲೆ ಅವರ್ ಟೈಮ್ ಕೋಡ್ ತ್ರ್, ನಡುಲ್ಲಿ ಬ್ಯಾರೆ ಕಂಪೆನಿ ಸಿಕ್ರೆ ಅಲ್ಲಿ ನಾನ್ ಟ್ರೈ ಮಾಡ್ತೆ ಆಮ್ಮಾ, ಬೆಂಗಳೂರು ಸಿಕ್ರೆ ಅಲ್ಲೇ ಜೋಯಿನ್ ಆತೇ" ಅಂದೆ.
ಅದಕ್ಕವರು "ನಿನ್ನ ಆಸೆ ನೆರ್ವೆರ್ತ್ ಮಗಾ, ದೇವರಿದ್ದ.." ಅಂದ್ರು.ಅವರ ತಲೆಯಲ್ಲಿನ ಆಕೃತಿಯ ಸಂಶಯ ಮಾಯವಾಗಿತ್ತು.

ಕರೆ ಮುಗಿಸಿದ ನಂತರ ಮತ್ತೆ ಪುನಃ ಭೂತ, ವರ್ತಮಾನ ಭವಿಷ್ಯದ ಬಗ್ಗೆ  ಖಾಲಿ ಕಪ್ ನಲ್ಲಿ ವಿಶ್ಲೆಶಿಸುತಿದ್ದೆ.

ಇಮಾಮ್ ಅಡ್ರೆಸ್ ಹುಡುಕಿ ತಲುಪುವಾಗ ಒಂಬತ್ತು ದಾಟಿತ್ತು. ನಡು ದಾರಿಯಲ್ಲಿ ಒಂದು ಬೇಕರಿಯಿಂದ ಕೇಕ್ ಖರೀದಿಸಿ "ಹ್ಯಾಪಿ ಬರ್ತ್ ಡೇ ಟು ಟ್ರಾನ್ಸ್ಲೆಟರ್ " ಎಂದು ಬರೆಸಿ ಮತ್ತೆ ಕಾರ್ ಹತ್ತಿದೆ.

ಊಟ ಮುಗಿಸಿ ಮನೆಗೆ ತಲುಪುವಾಗ ಹನ್ನೊಂದು ದಾಟಿತ್ತು. ಶನಿವಾರ ಆದರಿಂದ ಮನೆಯಲ್ಲಿ ಯಾರು ಇರಲಿಲ್ಲ. ಎಲ್ಲರು ಎಂದಿನಂತೆ ಹೊರ ಹೋಗಿದ್ದರು. ಚಿಕಪ್ಪ ನನಗೆ ನಡುವಲ್ಲಿ ಕರೆ ಮಾಡಿ ನನ್ನ ಸುರ್ಪ್ರೈಸ್ ಬಗ್ಗೆ ವಿಚಾರಿಸಿದ್ದರು. ನಾನು ಮನೆ ತಲುಪಿರುವ ವಿಚಾರ ತಿಳಿಸಿದಾಗ ಅವರು ನನ್ನನ್ನುಸುರ್ಪ್ರೈಸ್ ಗೆ ತಯಾರಾಗುವಂತೆ ಹೇಳಿದರು.ಮತ್ತು ತಾವು ಹನ್ನೆರಡಕ್ಕೆ ಸರಿಯಾಗಿ ಮನೆಗೆ ಬರುವುದಾಗಿ ತಿಳಿಸಿದರು.

ಒಂದು ಗಂಟೆ ನನ್ನ ಕೈಯಲ್ಲಿ ಇತ್ತು, ಅವಳಿಗೆ ಕೊಡಬೇಕಾದ ಸುರ್ಪ್ರೈಸ್ ನ ಮಟ್ಟವನ್ನು ಮುಗಿಲಿನೆತ್ತರಕ್ಕೆ ಏರಿಸಲು ಇದು ನನಗೆ ಸಾಕಾಗಿತ್ತು. ಇಮಾಮು ಜೊತೆಗಿದ್ದ. ಕೆಳಗಿನ ಹಾಲ್ ನಲ್ಲಿ ತಂದಿದ್ದ ಬಲೂನ್, ಬಣ್ಣದ ಕಾಗದ ದಿಂದ ಮಗುವಿನ ಮೊದಲ ಹುಟ್ಟು ಹಬ್ಬದ ಆಚರಣೆಯಂತೆ ಮನೆಯನ್ನು ಶೃಂಗರಿಸಿದೆವು.

ಗೇಟ್ ನಲ್ಲಿ ಹೊಂಡ ಸಿಟಿ ಯ ಹೊರ್ನ್ ಕೆಳುತಿದ್ದಂತೆ ಹಾಲ್ ನ ಎಲ್ಲ ದೀಪಗಳನ್ನು ಆರಿಸಿ ಇಮಾಮ್ ಹೊರಗೆ ಹೋದ. ನಾನು ಒಳಗಿದ್ದೆ ಕತ್ತಲಲ್ಲಿ ಯಾರಿಗೂ ಕಾಣುತ್ತಿರಲಿಲ್ಲ.

ದೊಡ್ಡಪ್ಪ ಮತ್ತು ಚಿಕ್ಕಪ್ಪನಿಗೆ ಒಳಗಿನ ಎಲ್ಲದರ ಬಗ್ಗೆ ಮಾಹಿತಿ ಇತ್ತು, ಉಳಿದವರಿಗೆ ಮನೆಯಲ್ಲಿನ ಅಂಧಕಾರದ ಕಾರಣ ಗೊತ್ತಿರಲಿಲ್ಲ.

ಗೋಪಾಲನ್ ಇಮಾಮ್ ನಲ್ಲಿ "ಕಾರ್ ಸರಿ ಆಯ್ತೇನೋ..?" ಅಂದ.
ಇಮಾಮ್ "ಹೌದು, ಆಯಿಲ್ ಮುಗ್ದು ಹೋಗಿತ್ತು ಸರಿ ಆಯಿತು" ಎಂದು ಒಂದು ನಾಜೂಕಿನ ಸುಳ್ಳು ಹೇಳಿದ.
"ಯಾಕಾಗಿ ಒಳಗಿನ ಲೈಟ್ಸ್ ಹಾಕಿಲ್ಲಾ..?" ಎಂದು ಇನ್ನೊಂದು ಪ್ರಶ್ನೆ ಇಟ್ಟರು.
"ಪವರ್ ಕಟ್, ಜೆನೆರೆಟರ್ ರೂಂ ಗೆ ಹೋಗುವಷ್ಟರಲ್ಲಿ ನೀವು ಬಂದ್ರಿ" ಎಂದು ಇನ್ನೊಂದು ಸುಳ್ಳು ಬಿಟ್ಟ.
ಗಣಪತಿ ಅವನಲ್ಲಿ "ಸರಿ ನೀನು ಅದನ್ನು ಆನ್ ಮಾಡು" ಎನ್ನುತ್ತಾ ಕಣ್ಣು ಮಿಟುಕಿದರು.


ಆಕೃತಿ ಮನೆಯನ್ನು ಪ್ರವೇಶಿಸಿದಳು. ಎಲ್ಲವು ಕತ್ತಲಲ್ಲಿ ಮುಳುಗಿತ್ತು. ಅವಳನ್ನು ಎಲ್ಲರು ಹಿಂಬಾಲಿಸಿದರು, ಇಮಾಮ್ ಹಾಲ್ ನ ಲೈಟ್ ಆನ್ ಮಾಡಿದ.

ಎಲ್ಲರಿಗು ಆಶರ್ಯ, ಹಾಲ್ ನ ಚಿತ್ರಣ ಬದಲಾಗಿತ್ತು. ನಡುವಿನ ಟೇಬಲ್ ಮೇಲೆ ಕೇಕ್ ಇತ್ತು.

ಅಡುಗೆ ಕೋಣೆಯ ಬಾಗಿಲಿನ ಸ್ಕೀರ್ನ್ ನ ಎಡೆಯಲ್ಲಿ ನನ್ನನ್ನು ನಾನು ಅಡಗಿಸಿ ಕ್ಕೊಂಡಿದ್ದೆ.

ಆಕೃತಿ "ಥ್ಯಾಂಕ್ಸ್ ಪೆರಿಯಪ್ಪಾ ..." ಎನ್ನುತ್ತಾ ಅವರನ್ನು ತಬ್ಬಿದಳು. ಇದು ಅವಳ ಮೊದಲ ಬರ್ತ್ಡೆ  ಆಗಿತ್ತು ಮನೆಯವರೊಂದಿಗೆ. ಆರ್ಥೋಡಾಕ್ಸ್ ಫ್ಯಾಮಿಲಿ ಯಲ್ಲಿ ಇಂತಹ ಆಘೋಷಣೆ ಈ ಮೊದಲು ನಡೆದಿರಲಿಲ್ಲ, ಎನ್ನುವುದು ಅವಳ ನಗುವಲ್ಲಿ ವ್ಯಕ್ತ ವಾಗುತಿತ್ತು.

ಗಣಪತಿ "ಹೇಗಿದೆ, ಸುರ್ಪ್ರೈಸ್ ..?"
"ಅನ್ ಬಿಲಿವೆಬಲ್, ನಿಮಗೂ ಈ ರೀತಿ ಸುರ್ಪ್ರೈಸ್ ಕೊಡಲು ಬರುತ್ತೆ ಎಂದು ಗೊತ್ತಿರಲಿಲ್ಲ.." ಅಂದಳು ಆಕೃತಿ.
ಅವರು "ಸುರ್ಪ್ರೈಸ್ ಅಂದ್ರೆ ಬರೀ ವೈಭವ್ ನ ಸೊತ್ತಾ ..?" ಎಂದರು.
ಅವಳು ಸುಮ್ಮನಾದಳು, ಮತ್ತೆ ತುಟಿ ಅಗಲಿಸಿ "ವೈಭು, ಸುರ್ಪ್ರೈಸ್ ಪಾರ್ಟಿ.." ಎಂದಳು.
ಗಣಪತಿ "ವೈಭೂ" ಎಂದು ನನ್ನನ್ನು ಕೂಗಿದರು.

ತೆರೆಮರೆಯಲ್ಲಿದ್ದ ನಟ ರಂಗ ಪ್ರವೇಶಿಸಿದ. ನಡುವಲ್ಲಿ ಇದ್ದ ನಾಯಕ ನಟಿಯ ಆಶ್ಯರ್ಯಕ್ಕೆ ಕೊನೆಯೇ ಇರಲಿಲ್ಲ. ಅವಳೊಂದಿಗೆ ಗೋಪಾಲನ್, ಮನೆಯ ಮೂವರು ಹೆಂಗಸರು, ಇಬ್ಬರು ಮಕ್ಕಳು ಆಶ್ಯರ್ಯದಲ್ಲೇ ನನ್ನನ್ನು ಸ್ವಾಗತ ಕೋರಿದರು.
ನಡುವಲ್ಲಿ ಒಂದು ಜೋಡಿ ಸಂಶಯದ ಕಣ್ಣು ನನ್ನನ್ನು ದಿಟ್ಟಿಸಿ ನೋಡುತಿದ್ದದ್ದು ನನ್ನ ಗಮನಕ್ಕೆ ಬಂತು. ಅದನ್ನು ಮರೆ ಮಾಡಿ ಎಲ್ಲ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡಕ್ಕೊಂಡೆ.

ಆಕೃತಿ ಕೇಕ್ ಕತ್ತರಿಸಿದಳು. ಎಲ್ಲರಿಗೆ ತಿನಿಸಿದಳು.

ಎಲ್ಲ ಸಂಭ್ರಮ ಮುಗಿದ ಬಳಿಕ ಗಣಪತಿ ಮನೆಯಲ್ಲಿರುವ ಆ ಹೊಸ ಹೆಂಗಸಿಗೆ ನನ್ನನ್ನು ಪರಿಚಯಿಸುತ್ತಾ "ವೈಭವ್ ಮೊದಲಿಗೆ ಆಕೃತಿಯ ಫ್ರೆಂಡ್,ಈಗ ನಮ್ಮೆಲ್ಲರ ಫ್ಯಾಮಿಲಿ ಫ್ರೆಂಡ್ ...ಬಂಗಾರ ಹುಡುಗ" ಎಂದರು.
ಆ ಕಣ್ಣುಗಳು ಇನ್ನೂ ನನ್ನನ್ನೇ ದಿಟ್ಟಿಸಿ ನೋಡುತಿದ್ದವು. ದೊಡ್ಡಪ್ಪ ನನ್ನಲ್ಲಿ ತಿರುಗಿ "ಷಣ್ಮುಗಂ ನ ನಾದಿನಿ, ಕೊಯಂಬತ್ತೂರಿನವರು.." ಎಂದರು.
ನಾನು "ಸುನಿಲ್ ನ ಅಮ್ಮ...?"
"ಹೌದು" ಎಂದರು ಗಣಪತಿ.

ಉಳಿದವರು ಎಲ್ಲ ತಮ್ಮ ತಮ್ಮ ರೂಂ ಗೆ ಹೋದ ಬಳಿಕ ನಾನು ಮೇಲಿನ ಗೆಸ್ಟ್ ರೂಂ ಗೆ ಹೋದೆ, ಆಕೃತಿ ತನ್ನ ಭಾವಿ ಅತ್ತೆ ಜೊತೆಗೆ ಮೇಲಿನ ಇನ್ನೊಂದು ಕೋಣೆ ಸೇರಿದಳು.
 
 


ಮುಂದಿನ ಸಿಪ್

Rating
No votes yet