"ಸ್ನೇಹದುಂಬಿ"
ಕವನ
ಬಾಳಿನಾ ಹೂತೋಟದೀ ದುಂಬಿಯೊಂದು ಹಾರಿದೇ
ಸ್ನೇಹಕಾಗಿ ತಾ ಹುಡುಕಿ ನೊಂದು ಹಾಡಿದೇ (ಪ)
ಸ್ನೇಹವೆಂಬ ಹೂವ ಕಾಣದೆ ಬೆಂದ ಹೃದಯವು ನೊಂದಿದೇ
ನೊಂದ ಹೃದಯವು ವಿಧಿಯನು ತಾ ನಿಂದಿಸುತಲಿ ನಿಂತಿದೆ (ಪ)
ಸಿಕ್ಕಿತೊಂದು ಹೂ ಅದಕೆ ಬಾಳಿನಾ ಆ ತೊಟದೇ
ಸ್ವರ್ಗವೇ ತನದಾಯಿತೆಂದು ಭ್ರಮಿಸಿ ಹರುಷದಿ ನಲಿದಿದೆ (ಪ)
ವಿಧಿಯ ಲೀಲೆ ಯಾರು ಅರಿವರು ಮುಂದೆ ಹೀಗಿಹುದೆಂದು
ತೋಟದೊಡೆಯನು ಕಿತ್ತನದನು ದೇವನಾ ಮುಡಿಗೆಂದು (ಪ)
-ಎಂ.ಎಸ್.ಮುರಳಿಧರ್, ಶಿರಾ
Comments
ಉ: "ಸ್ನೇಹದುಂಬಿ"
In reply to ಉ: "ಸ್ನೇಹದುಂಬಿ" by makara
ಉ: "ಸ್ನೇಹದುಂಬಿ"