ಸಾಧನೆ

Submitted by GOPALAKRISHNA … on Sat, 04/28/2012 - 09:50
ಬರಹ

 ಹಸಿರು ಬಣ್ಣದ

ಸಿಪ್ಪೆಯನ್ನು

ನವೋತ್ಸಾಹದಿಂದ

ಕಳಚಿದಾಗ

ಕಂಡದ್ದೇನು?

ಬರೀ ನಾರು.

ಹತಾಶನಾಗದೆ

ನಾರುಗಳೆಲ್ಲವನ್ನೂ

ಕಿತ್ತುಕಿತ್ತೆಸೆದಾಗ

ಕಂಡಿದ್ದು ಭದ್ರವಾದ 

ರಕ್ಷಣಾ ಕವಚ

ಅಪ್ರತಿಭನಾಗದೆ

ಒಡೆದಾಗ ಕಂಡದ್ದು

ಸಾಧನೆಯಿಂದ ಸಿಕ್ಕಿದ

ಮಧುರ ಫಲ-

ಪಾನೀಯ.

ಎಲ್ಲರಿಗೂ ಹಂಚಿ

ಒಂದಷ್ಟನ್ನು

ನಾನೂ ತಿಂದು

ನಿಟ್ಟುಸಿರಿಟ್ಟು

ದಣಿವೆಲ್ಲವನ್ನೂ ಮರೆತೆ,

ಸುಖಿಯಾದೆ

Comments