ಒಂದರ ಜೊತೆಗೊಂದು

Submitted by sitaram G hegde on Sat, 06/30/2012 - 11:42
ಬರಹ

ಯಾರಿಗೆ
ಹೆಚ್ಚು
ಖುಷಿ?
ಕಾಡಿ-ಬೇಡಿ
ಗೋಗೆರೆದು
ಅಂಗಲಾಚಿ
ಕೊನೆಗೂ
ಮುತ್ತು
ಗಿಟ್ಟಿಸಿಕೊಂಡ
ನನಗೋ?....
ಬಿಂಕ-ಬಿನ್ನಾಣ
ಹುಸಿಕೋಪ-ಸಿಡುಕು
ಎಲ್ಲ ತೋರಿ
ಬಳಿಕ
ಲಜ್ಜೆ ಕಳಚಿ
ಕೆನ್ನೆಗೆ
ತುಟಿಯೊತ್ತಿದ
ನಿನಗೋ?........
+++++++++++++

ನಿನ್ನ
ಕಾದು
ಕಳೆದ
ಕ್ಷಣಗಳು,
ನಿನ್ನ
ನೆನಪನ್ನು
ಕೊಲ್ಲುತ್ತಾ
ದೂಡುತ್ತಿರುವ

ದಿನಗಳು
ಎರಡೂ
ಕಷ್ಟವೇ...........
+++++++++

Comments