ಮಳೆಯು ಬಂದಿದೆ .....

ಮಳೆಯು ಬಂದಿದೆ .....

ಕವನ

 

 
 
 

ಮಳೆಯು ಬಂದು ಮನವು ಇಂದು ಹಸಿಯಾಗಿದೆ 

ಇಲ್ಲೇ ಎಲ್ಲೋ ಇದ್ದ ಬೇಸರಿಕೆ ಮಾಯವಾಗಿದೆ 
ತಂಪು ತಂಗಾಳಿ ಮೂಡಿಸಿ ನವೀನ ಕೌತುಕ 
ಕರೆದೊಯ್ದಿದೆ ನನ್ನ ಕರೆದೊಯ್ದಿದೆ ನಿನ್ನ .
 
ಜೊತೆಯಲಿ ನಡೆಯುವ ಮಳೆಯಲಿ ನೆನೆಯುತ 
ತನು ಮನ ಒಂದಾಗಲು ನಲಿಯುತ 
ಕಲಿಸಿದೆ ಹೊಸ ಭಾಷೆ ; ನುಡಿಸಿದೆ ಹೊಸ ರಾಗ 
ನಾನಾದೆ ಮೌನ , ನೀನದರ  ಭಾವ 
 
ಕಾಲುನಡಿಗೆಯಲ್ಲೇ ಸವಿಯುವ ಈ ಬಾಳಪಯಣ 
ಕಾಲುದಾರಿಗೆ ಕೊಟ್ಟೆ ನೀ ಹೊಸ ರೂಪ 
ಕಲಿಸಿದೆ ಹೊಸ ಪಾಠ ; ಹಾಡಿಸಿದೆ ಹೊಸ ಹಾಡ
ನಾ ಕಂಡೆ ಕನಸಾ,ನೀನೆ ಅದರ ತುಂಬಾ .
 

 

 

Comments