ಭಾವಮೌನ

ಭಾವಮೌನ

ಕವನ

ಏನೋ ಒಂಥರಾ ಭಾವಮೌನ 

ಏನೋ ಒಂಥರಾ ನೀರವತೆ 


ತಪ್ಪ್ಯಾರದೋ ಅರಿಯೆನು , ಆದೆವು ನಾವು ದೂರ-ದೂರ 

ಮತ್ತೆ ಒಂದಾಗಲು ಸಾಧ್ಯವಾ ?

ಈ ದೂರವೇ ಆತ್ಮೀಯವಾಗಿರುವಾಗ , ಏಕೆ ಆ ಪ್ರಶ್ನೆ ?

ಹೋದರೇನು ನೀ ದೂರ 

ನಿನ್ನ ಸಿಹಿ ನೆನಪಿನ ಶಿಖರವಿದೆ ನನ್ನಲ್ಲಿ ಜೀವಂತ.


ಬೇರೆಯಾಗಬೇಕ್ಕೆಂದೇ ಒಂದಾಗಿದ್ದೆವಾ ನಾವು 

ಬೇರೆಯಾಗಬೇಕ್ಕೆಂದೇ ಒಂದಾಗಿದ್ದೆವಾ ನಾವು 


ಭಾವಸಂಚಾರದ ವೇಗ ಮಿತಿಮೀರಿದೆ 

ಬಿಕ್ಕಿ ಬಿಕ್ಕಿ ಅಳುವ ಆಸೆಯಾಗಿದೆ ಮನಕೆ 

ತಿದ್ದಿ ತಿದ್ದಿ ಬರೆವ ಆಸೆಯಾಗಿದೆ ಅದಕೆ 

ಎಲ್ಲಿ ನಿಲ್ಲುವುದೋ ಈ ಪಯಣ ತಿಳಿಯೆನು 


ಏನೋ ಒಂಥರಾ ಭಾವಮೌನ 

ಏನೋ ಒಂಥರಾ ನೀರವತೆ