ನನ್ನ ಅಜ್ಜಿ
ಬಹಳ ವರ್ಷಗಳ ನಂತರ ನಾನು ನನ್ನ ಅಜ್ಜಿ ಊರು, ಮಂಜುಗುಡ್ಡೆಗೆ ಕಾಲಿರಿಸಿದ್ದೆ. ಒಮ್ಮೆ ನನ್ನ ಬಾಲ್ಯದ ದಿನಗಳೆಲ್ಲ ಕಪ್ಪುಬಿಳಪು ಚಿತ್ರದಂತೆ ತಟ್ಟನೆ ಕಣ್ಣೆದುರು ಬಂದು ಹೋಯಿತು. ಗಲ್ಲಿ ಗಲ್ಲಿಗೆ ಕಾಲಿರಿಸಿದಂತೆ ಮತ್ತೆ ಹಳೆ ನೆನಪಿನ ಪುಟಗಳು ತಿರುವುತಿತ್ತು. ಸುತ್ತ ಇಬ್ಬನಿ ಮುಸುಕಿದ ಪ್ರದೇಶ. ಬರೇ ಏರು-ಪೇರುಗಳ ಜಾಗಗಳು ಹೆಸರಿಗೆ ತಕ್ಕಂತೆ - ಮಂಜುಗುಡ್ಡೆ. ನಾನು ಈ ಊರು ಬಿಟ್ಟು ೨೫ ವರ್ಷಗಳ ಮೇಲಾಯಿತು. ಹೈಸ್ಕೂಲ್ ಮುಗಿಸಿ ತಂದೆ-ತಾಯಿ ಜೊತೆ ಊರು ಬಿಟ್ಟವನು ಮತ್ತೆ ಈ ಕಡೆ ಬಂದವನೆ ಅಲ್ಲ.ಆದರೂ ಅಲ್ಪ ಸ್ವಲ್ಪ ಬದಲಾವಣೆ ಬಿಟ್ಟರೆ ಹೇಳಿಕೊಳ್ಳುವಂತ change ಎನೂ ತೋರಲಿಲ್ಲ,ಅದೆ ನಾನಿರುವ ಬೆಂಗಳೂರು ವರ್ಷ ವರ್ಷಕ್ಕೂ ಎಂತ ಬದಲಾವಣೆ,೧ ವರ್ಷ ಯಾವುದಾದರು ಜಾಗಕ್ಕೆ ಹೋಗದಿದ್ದರೆ ಮತ್ತೆ ಆ ಜಾಗ ಗುರುತು ಸಿಗೋದು ಕಷ್ಟವೆ ಸರಿ ಎಂದುಕೊಂಡು ಮೂಲೆಯ ಒಂದು ಪೆಟ್ಟಿಗೆಯಂತಹ ಅಂಗಡಿ ಹೊಕ್ಕೆ.
ನನ್ನ ಅಜ್ಜನ ಹೆಸರಾದ ವೆಂಕಟರಾಜಪ್ಪನ ಹೆಸರು ಹೇಳಿ ಅವರ ಮನೆಯ ವಿಳಾಸ ಕೇಳಿ,ಅವನು ತೋರಿದ ದಾರಿ ಹಿಡಿದು ಹೊರಟೆ.
ಸರಿ ಸುಮಾರು ೨೫ ವರ್ಷಗಳ ನಂತರ ತನ್ನ ಅಜ್ಜನ ಮನೆಗೆ ಹೋಗುತ್ತಿರುವ ಸಂಭ್ರಮ ಒಂದು ಕಡೆಯಾದರೆ, ಅಜ್ಜ ಅಜ್ಜಿಯ ಗುರುತೆ ಮರೆತ ಬೇಸರ ಮತ್ತೊಂದೆಡೆ. ಅಮ್ಮ ಅಜ್ಜಿಯೋಂದಿಗೆ ಜಗಳವಾಡಿ ಊರು ಬಿಡಲೇ ಬೇಕು ಎಂದು ಹಟ ಹಿಡಿದು ಪಟ್ಟಣ ಸೇರಿದ ಮೇಲೆ ಈ ಕಡೆ ಮತ್ತೆ ತಲೆ ಹಾಕಿ ಸಹ ಮಲಗಿರಲಿಲ್ಲ.ಒಬ್ಬನೆ ಮಗನನ್ನು ಕಳೆದುಕೊಂಡು ಎಷ್ಟು ದುಃಖ ಪಟ್ಟಿದ್ದರೂ ಅಜ್ಜಿ ಎಂದುಕೊಳ್ಳುತ್ತಾ ಹೆಜ್ಜೆ ಮುಂದಿಟ್ಟೆ. ದಾರಿಯಲ್ಲಿ ವಿಳಾಸ ಕೇಳುತ್ತಾ ಅಂತು ಮನೆ ಎದಿರು ಬಂದೆ. ಹಾಳು ಬಿದ್ದ ಮನೆಯಂತಿದ್ದ ಆ ಮನೆಯನ್ನೆ ಹಾಗೆ ದಿಟ್ಟಿಸಿ ನೋಡಿದೆ.ಹೆಂಚಿನ ಮನೆ,ಮುಂದಿನ ಅಂಗಳ ತುಂಬೆಲ್ಲ ಹುಲ್ಲು ಬೆಳೆದು ಎತ್ತರವಾಗಿತ್ತು.ಹಾಗೆ gateನಂತೆ ಅಡ್ಡಲಾಗಿಟ್ಟಿದ್ದ ಮರದ ದಿಣ್ಣೆ ಸರಿಸಿ ಒಳ ಹೊಕ್ಕೆ. ಮನೆಯ ಹೆಬ್ಬಾಗಿಲ ಬಳಿ ಬಂದು ನಿಲ್ಲುತಿದ್ದ ಹಾಗೆ ಹೆಬ್ಬಾಗಿಲಿಗೆ ಹತ್ತಿದ ಒರಳೆ ಕಣ್ಣಿಗೆ ರಾಚಿತು.ಒಂದು ಭಾಗ ಪೂರ ತಿಂದು ಈಗಲೊ ಅಗಲೊ ಅನ್ನುವಂತಿತ್ತು.
ಒಣಗಿದ ಗಂಟಲಲ್ಲೆ ಮೂರು ಬಾರಿ ಅಜ್ಜಿ ಎಂದು ಜೋರಾಗಿ ಕೂಗಿದ ನಂತರ ಒಳಗಿಂದ ಬೆನ್ನು ಬಾಗಿಹೋದ ಅಜ್ಜಿ ಹಣೆಯ ಮೇಲೆ ಕೈ ಇಟ್ಟು "ಯಾರೂ....." ಎಂದು ನಡುಗುವ ಆ ದನಿಯಲ್ಲೆ ಕೇಳುತ್ತಾ ಬಂದಳು.ಅಜ್ಜಿಯನ್ನು ನೋಡಿದಕೂಡಲೆ ಇದು ನನ್ನ ಅಜ್ಜಿಯೆ ಹೌದ ಎಂದೆನ್ನಿಸಿತು. ನೇರವಾಗಿದ್ದ ಬೆನ್ನು ಮುರಿದು ಬಾಗಿ ಹೋಗಿತ್ತು, ಹಲ್ಲುಗಳೆಲ್ಲ ಉದುರಿ ಹೋಗಿ ಮುಖದಲ್ಲಿ ನೆರಿಗೆ ಕಟ್ಟಿತ್ತು. ಅಜ್ಜಿ ಅವನ ಹತ್ತಿರ ಬಂದು ದಿಟ್ಟಿಸಿ ನೋಡಿದರೂ ಗುರುತು ಸಿಗಲಿಲ್ಲ. ತನಗೇ ಅಜ್ಜಿಯ ಗುರುತು ಸಿಗದಾಗ ಅಜ್ಜಿಗೆಲ್ಲಿ ನನ್ನ ಗುರುತು ಸಿಗುತ್ತೆ ಎಂದುಕೊಂಡೇ "ನನ್ನ ಗುರುತು ಸಿಗಲಿಲ್ವಾ ಅಜ್ಜಿ" ಎಂದೆ. "ಇಲ್ಲ ಮಗ...ಯಾರು " ಎಂಬುತ್ತರ ಬಂತು.
ನನ್ನ ಹಾಗು ನನ್ನ ತಂದೆಯ ಹೆಸರು ಹೇಳುತಿದ್ದ ಹಾಗೆ ಅಜ್ಜಿಯ ದನಿ ಮತ್ತೂ ನಡುಗಿತು "ಅಂತೂ ಈ ಮುದಿ ಅಜ್ಜಿನ ಇವರು ಬಿಟ್ಟು ಹೋದ ಮೇಲೆ ಈಗ ನೆನಪಾಯಿತ ಮಗಾ" ಎಂದು ದುಃಖಿಸಿದಳು. "ಸೀತಾರಾಮನಿಗಂತು ತನ್ನ ಹೆತ್ತವಳು ಒಬ್ಬಳಿದ್ದಾಳೆ ಎಂಬುದೆ ನೆನಪಿಲ್ಲವೇನೋ, ಆ ಹಿಡುಂಬಿ ಸೆರಗಲ್ಲಿ ಮಲಗಿದ ಮೇಲೆ.." ಎಂದು ಹೇಳುತ್ತಾ ಹೋಗಿ ಆ ಹೆಬ್ಬಾಗಿಲ ಮೇಲೆ ಒರಗಿ ಕುಳಿತಳು."ಹಾಗೇನು ಇಲ್ಲ ಅಜ್ಜಿ ,ಅಪ್ಪ ದಿನಾ ನಿನ್ನ ನೆನೆಸಿಕೋಳ್ಳುತ್ತಾರೆ ಅಜ್ಜಿ,ಅವರೇ ನೋಡಿ ಬರಲು ಕಳುಸಿದ್ದು ಅಜ್ಜಿ,ಅವರಿಗೆ ಬರಲು,ಬಂದು ಮುಖ ತೋರಿಸಲು ಆಗದೆ" ಎಂದೆ.
"ಹೆತ್ತ ತಾಯಿಗೆ ಮುಖ ತೋರಿಸಲು ನಾಚಿಕೆಯಂತಾ ಅವನಿಗೆ? ಅದೇ ಆ ಮನೆಹಾಳಿ ನಿನ್ನ ತಾಯಿ ಹಿಂದೆ ನನ್ನ,ನನ್ನವರನ್ನ ಬಿಟ್ಟು ಹೋಗುವಾಗ ಎಲ್ಲಿ ಹೋಗಿತ್ತಂತೆ ಈ ನಾಚಿಕೆ" ಪ್ರತ್ಯುತ್ತರ ಪ್ರಶ್ನೆಯಂತೆ ಬಂತು.
ನನಗೆ ಏನು ಹೇಳಬೇಕು ತೋರದೆ "ಅಜ್ಜ ಎಲ್ಲಿ?" ಎಂದೆ. ಅಜ್ಜಿ ಕಣ್ಣೀರಿಡುತ್ತ "ಅವರು ನನ್ನ್ ಒಬ್ಬಂಟಿ ಮಾಡೀ ಹೋಗಿ ಆಗಲೆ ೩ ಮಳಿಕಾಲ ಬಂದೋಯಿತು".
ಅಷ್ಟರಲ್ಲಿ gateನ ಬಳಿಯಿಂದ "ಅಜ್ಜೀ...." ಎಂಬ ದನಿ ಬಂತು.ಅಜ್ಜಿ ಕಣ್ಣು ಸಣ್ಣ ಮಾಡುತ್ತಾ ಹುಬ್ಬು ಕಟ್ಟುತ್ತಾ ನೋಡಿ ಯಾರು ಸರಿ ತೋರದ ಮಂಜು ಕಣ್ಣಿನಲ್ಲಿ "ಯಾರು.." ಎಂದು ಕೇಳಿದಳು.
"ನಾನು ಅಜ್ಜಿ ಕೇಶವ, ಬಂಗಾರಕೊಪ್ಪು ಮನೆ..." ಎನ್ನುತ್ತಾ ಒಳಹೊಕ್ಕ."ಬರುವ ಸಂಕ್ರಾಂತಿಯಾದ ೩ ದಿನಕ್ಕೆ ನನ್ನ ಮದುವೆ ಅಜ್ಜಿ ನಿಮ್ಗೆ ಹೀಳ್ಕಿ ಹೋಪು ಅಂತ ಬಂದಿ" ಎಂದ. "ಓ ಕೇಶವನಾ..ಹುಂ ಆಗಲಿ ಮಗ ಒಳ್ಳೆಯದಾಗಲಿ" ಎಂದಳು.
ನನ್ನನ್ನು ನೋಡುತ್ತಾ ಅವನು ಪರಿಚಯ ಕೇಳಿದನು.ತನ್ನ ಮೊಮ್ಮಗ ಎಂದು ಅಜ್ಜಿ ಹೇಳುತಿದ್ದಂತೆ,ನನಗು ಒಂದು ಹೇಳಿಕೆ ಕೊಟ್ಟು ಹೋರಟನು. ಅಜ್ಜಿ ನನ್ನ ಕಡೆ ತಿರುಗಿ "ನೀನು ಮದಿ ಗಿದಿ ಮಾಡ್ಕೋಳಿಲ್ಯಾ ಮಗಾ... ಇಷ್ಟ ಸಣ್ಣನಿದ್ದಿ ನಾ ಕಾಣ್ವತಿಗೆ" ಎಂದು ಕೇಳಿದಳು. ಇಲ್ಲ ಎಂದಷ್ಟೆ ಹೇಳಿ ಸುಮ್ಮನಾದೆ. ನನ್ನ ಮನಸು ನನ್ನ ಯವ್ವನದ ದಿನಕ್ಕೆ ಉರುಳಿತು.
ಎಲ್ಲರಂತೆ ತಾನು ಪ್ರೀತಿ ಮಾಡ ಬೇಕು, ಪ್ರೇಮ ವಿವಾಹವೇ ಆಗ ಬೇಕು ಎಂದುಕೊಳ್ಳುತ್ತಿದ್ದ ಕಾಲ ಅದು. ಯಾವೊಬ್ಬ ಹುಡುಗಿಯು ಸಿಗದೆ ಸರಿಯಾಗಿ,ಪ್ರೀತಿಸಿದವಳೋಂದಿಗೆ ಜಗಳವಾಡಿ ಮುಗಿಸಿ, ಆ ಬೇಸರದಲ್ಲೆ ಬರುವಾಗ ದಾರಿಯಲ್ಲಿ ಕೈ ಬೀಸಿ ಕರೆದ ,ನೆಲ ಸಹ ಸರಿ ತೋರದಂತೆ ಬೆಳೆದ ಆ ಹೆಣ್ಣಿನ ಹಿಂದೆ ಹೋದದ್ದು. ಅದಾದ ನಂತರ ತನ್ನ ಮೇಲೆ ತನಗೆ ಬೇಸರ ಕಾಡಿ ಮತ್ತೆ ಯವ ಹುಡುಗಿಯ ವಿಚಾರಕ್ಕೆ ಹೋಗದೆ ಮದುವೆಯೂ ಆಗದೆ ಹಾಗೆ ಉಳಿದದ್ದು ನೆನೆಯುತ್ತಾ ಕುಳಿತೆ.
ಮತ್ತೆ ಈ ಲೋಕಕ್ಕಿ ಬಂದಾಗ ಎದುರಿದ್ದ ಅಜ್ಜಿ ಇರಲಿಲ್ಲ.ಮನೆಯೋಳಗೆಲ್ಲೋ ಗುನುಗುತಿದ್ದದ್ದು ಕೇಳೀಸಿತು. ತಲೆ ಬಾಗಿಸುತ್ತಾ ಮನೆ ಒಳ ಹೊಕ್ಕೆ. ಮನೆ ಕತ್ತಲಿಂದ ಕೂಡಿತ್ತು.ಒಡೆದ ಹೆಂಚಿನ ರಂದ್ರದಿಂದ ರವಿ ಕಿರಣ ಸಣ್ಣ ರೀಖೆಗಳಾಗಿ ಅಲ್ಲಲ್ಲಿ ಒಳ ಬಂದಿದ್ದು ಬಿಟ್ಟರೆ ಬೇರೆ ಬೇಳಕೇ ಇರಲಿಲ್ಲ.
ಅಜ್ಜಿ ಒಳಗೆ ಅಡುಗೆ ಕೋಣೆಯಲ್ಲೇನೋ ಮಾಡುತಿದ್ದದ್ದು ಕಂಡು ಹಾಗೆ ಮುಂದೆ ಹೋಗಿ ಹಿತ್ತಲಿನ ತೋಟಕ್ಕೆ ಬಂದೆ.ಅಲ್ಲೆ ಸ್ವಲ್ಪ ವಿಹರಿಸಿ ಅಲ್ಲೆ ಇದ್ದ ಕಲ್ಲು ಹಾಸಿನ ಮೇಲೆ ಕುಳಿತೆ.
ತಾನು ಈ ಮನೆ ಬಿಟ್ಟು ಹೋದ ನಂತರ ಸಾದನೆ,ಗುರಿ,ಓದು ಎಂಬ ಗೀಳು ಹಿಡಿದು, ಸ್ನೇಹಿತರೆಲ್ಲಾ ಪ್ರವಾಸ,ಅದು ಇದು ಎಂದು ತಿರುಗುವಾಗ ಅದನ್ನೆಲ್ಲಾ ಬದಿಗೊತ್ತಿ ಪುಸ್ತಕದ ಹುಳು ಆದದ್ದು. engineering ಮುಗಿಸಿ ಒಂದು mnc company ಯಲ್ಲಿ ಕೆಲಸ ಗಿಟ್ಟಿಸಿ ಅಮೇರಿಕಕ್ಕೆ ೩ ವರ್ಷಗಳ ಕಂಪನಿ ಕೆಲಸಕ್ಕೆ ಹೋದದ್ದು.ಈ ಎಲ್ಲದರ ಮಧ್ಯೆ ಮಾಡಿಕೊಂಡ ಕೆಲವು ಪ್ರೇಮ ಪ್ರಕರಣಗಳು ಎಲ್ಲಾ ಚಿಂತನಾ ಲಹರಿಯಲ್ಲೊಮ್ಮೆ ಸುಳಿದಾಡಿತು.
ಸುತ್ತಲೂ ಮಂಜು ಇನ್ನು ಹರಡೇ ಇದ್ದುದ್ದರಿಂದ ನನಗೆ ಮಧ್ಯಹ್ನ ಆದದ್ದರ ಅರಿವು ಆದದ್ದು ಅಜ್ಜಿ ಊಟಕ್ಕೆಂದು ಕರೆದಾಗ ಕೈ ಗಡಿಯರ ನೋಡಿ.ಆಗಲೆ ೧ ಗಂಟೆ ಆಗಿತ್ತು.
ಅಜ್ಜಿ ತಟ್ಟೆಯಲ್ಲ ಇಟ್ಟು ಸಿದ್ದ ಮಾಡಿದ್ದಳು.ನಾನು ಕೈ ಕಾಲು ತೋಳೆದು ಬಂದೆ ಅಷ್ಟರಲ್ಲಿ ಅಜ್ಜಿ "ಇವರು ಇದ್ದಾಗ ಕೂಡಿಟ್ಟಿದ್ದ ಅಕ್ಕಿಯಲ್ಲಾ ಯವಾಗಲೋ ಆಗಿ ಹೋಯಿತ್ತು,ಆಗ ಬಂದೀನಲ ಕೇಶವ ಅವ್ನೇ ಇತ್ತೀಚ್ಗೆ ಅಕ್ಕಿ,ಕಾಯಿ ಪಲ್ಯೆ ತಂದ್ ಕೊಡ್ವ, ಇವರು ಇದ್ದಾಗ ಅವ್ನ ತಂದೀಗೇನೊ ಆಗ್ ಬಂದೀರಂತೆ, ಅದ್ಕೆ ಈಗ ಅದ್ನ ಹಿಂಗಾರು ತೀರ್ಸ್ತಿ ಅಂತೇಹ್ಳಿ ತಂದ್ ಕೊಡ್ವ" ಎಂದು ಹೇಳುತ್ತಾ ಊಟ ಬಡಿಸಿದಳು.ನಾನು ಏನು ಮಾತಾಡಲಿಲ್ಲ.
"ನಿನ್ನ ತಂದೆ ಹೆಂಗಿದ್ನ .." ಕೊನೆಗು ತನ್ನ ಮಗನ ಮೇಲಿನ ಪ್ರೀತಿ ಹೊರ ಹಾಕಿ ಕೇಳಿದಳು ಅಜ್ಜಿ."ಹುಂ.." ಎಂದೆನೆ ಹೋರತು ಬೇರೇನು ಹೇಳಲಿಲ್ಲ.
ಊಟ ಮುಗಿಸಿ ಹಾಗೆ ಒಂದು ಸಣ್ಣ ನಿದ್ದೆ ಮಾಡಿ ಎದ್ದೆ.ಆಗಲೆ ಸಂಜೆ ಆಗಿತ್ತು. ಮನೆಯೋಳಕ್ಕೆ ಬರುತಿದ್ದ ಬೆಳಕು ಮಂದ ಆಗಿತ್ತು. ಮೂಲೆಯಲೊಂದು ಸಣ್ಣ ದೀಪ ಉರಿತಿದದ್ದು ತೋರಿತು.ಎದ್ದು ಹೋರಗೆ ಬಂದೆ ,ಅಜ್ಜಿ ಅಲ್ಲೆ ಅಡ್ಡಾಡುತಿದ್ದರು. ನನ್ನ ಕಂಡು "ನಿದ್ದೆ ಬಂತಾ ಮಗ" ಕೇಳಿದಳು. "ಹುಂ" ಎಂದವನೆ "ನೀವು ನಿದ್ದೆ ಮಾಡಿಲ್ವಾ" ಕೇಳಿದೆ. "ಇಲ್ಲಾ ಮಗ,ನಂಗೆ ನಿದ್ದೆ ಕಮ್ಮಿ ಆಗಿದೆ,ಇನ್ನ ಈಗ್ಲೂ ಮಲ್ಗಿರೆ ರಾತ್ರಿ ಬೆನ್ ನೋಯಿತದೆ" ಎಂದಳು.
ನಾನು ಸುಮ್ಮನಾದೆ.ಸುತ್ತ ಹಚ್ಚ ಹಸಿರು,ತಂಪು ಗಾಳಿ ನನ್ನ ಬೆಂಗಳೊರಿನಲ್ಲಿ ಹುಡುಕಿದರು ಸಿಗದ ವಾತಾವರಣನ ಆಸ್ವಾಧಿಸುತ್ತಾ ನಿಂತೆ.
"ಕೇಶವನ ಮದಿ ಮುಗ್ಸಿ ಹೋತಿ ಅಲ್ದಾ" ಕೇಳಿದಳು.ಅಜ್ಜಿಯ ಮಾತು ಕಿವಿಗೆ ಬಿದ್ದು "ಇಲ್ಲ ಅಜ್ಜಿ ನಾಳೆನೆ ಹೋಗಬೇಕು"ಎಂದೆ. ಮತ್ತೆ ಮಾತು ಮುಂದುವರೆಸಿ "ಅಜ್ಜಿ ನೀವು ಯಾಕೆ ನನ್ನ ಜೊತೆ ಬರಬಾರದ್ದು? ಅಲ್ಲಿ ಅಪ್ಪ ಇರುತ್ತಾರೆ ,ನಾನಿರುತ್ತೇನೆ,ಇಲ್ಲಿ ಒಬ್ಬರೆ ಎನು ಮಾಡ್ತಿರ" ಕೇಳಿದೆ.ಅಜ್ಜಿ ಏನು ಮಾತಾಡದೆ ಮನೆ ಒಳಗೆ ಹೋದಳು. ನನಗೆ ಏನು ಮಾಡಬೇಖು ತಿಳಿಯಲಿಲ್ಲ,ಹಾಗೆ ಒಂದು ಸುತ್ತು ತಿರುಗಾಟ ಮಾಡಿ ಬರಲು ಹೊರ ಹೊರಟೆ.
ಮರಳಿ ಬರುವಾಗ ಕತ್ತಲಾಗಿತ್ತು.ಅಜ್ಜಿ ಚಿಮಣಿ ಹಚ್ಚಿ ಒಳಗೆ ಮಣಿ ಸರ ಹಿಡಿದು ಯಾವುದೋ ಮಂತ್ರ ಪಟಿಸುತಿದದ್ದು ತೋರಿತು. ನಾನು ಕೈ ಕಾಲು ತೊಳೆದು ಬರುವಾಗ ಆಗಲೆ ತಟ್ಟೆ ಎಲ್ಲ ಇಟ್ಟು ಊಟಕ್ಕೆ ಸಿದ್ದಪಡಿಸಿದ್ದಳು.ಒಳಗೆ ಹೋಗಿ ಊಟಕ್ಕೆ ಕುಳಿತೆ.ಅಜ್ಜಿ ಒಂದು ಮಾತು ಆಡಲಿಲ್ಲ.ನಾನಾಗೆ ಮಾತಾಡಿಸಿದರೂ ಅಜ್ಜಿ ಮೌನ ಮುರಿಯಲಿಲ್ಲ.ನನಗೆ ಎನು ಮಾಡಬೇಕು ತೋಚದೆ ಸುಮ್ಮನಾದೆ. ಅಜ್ಜಿ ಹಾಗೆ ಮಲಗಿ ಬಿಟ್ಟರು. ನಾನು ಏನು ಮಾಡಬೇಕು ತಿಳಿಯದೆ ಮಲಗಿದೆ.ಎಷ್ಟು ಹೊತ್ತಾದರು ನಿದ್ದೇನೆ ಬರಲಿಲ್ಲ.
ಅದೆಷ್ಟು ಹೊತ್ತಿಗೆ ನಿದ್ದೆ ಬಂದಿತ್ತೂ ತಿಳಿಯಲಿಲ್ಲ.ಕಣ್ಣಿಗೆ ಸೂರ್ಯನ ಕಿರಣದ ಶಾಖ ತಾಗಿ ಎಚ್ಚರಗೊಂಡೆ.ಗಂಟೆ ೧೧ ಆಗಿತ್ತು. ಎದ್ದು ಮುಖ ತೊಳೆದು ಸ್ನಾನ ಮುಗಿಸಿ ಬಂದೆ.ಅಜ್ಜಿ ಮನೆಯಲೆಲ್ಲು ತೋರಲಿಲ್ಲ. ಅಡುಗೆ ಕೋಣೆಯಲ್ಲಿ ತಿಂಡಿ ಮಾಡಿಟ್ಟಿದ್ದಳು. ಅದನ್ನು ತಿನ್ನುವಷ್ಟರಲ್ಲಿ ಗಂಟೆ ೧೨.೩೦ ಆಗಿತ್ತು.ಇನ್ನು ನಾನು ಹೊರಡಬೇಕು ಎಂದು ಹೊರಗೆ ಬಂದೆ ಅಜ್ಜಿ gate ಬಳಿ ಬರುತಿದ್ದದ್ದು ತೋರಿತು.
"ಇದು ಈ ಊರ ದೇವಿ ಪ್ರಸಾದ.ತಕೊ ದೇವೆ ಒಳ್ಳೆದ್ ಮಾಡ್ತ್ಲು" ಎಂದು ಪ್ರಸಾದ ನನ್ನ ಕೈಗಿತ್ತಳು."ಎಷ್ಟೊತ್ತಿಗೆ ಹೋರಡ್ತೆ" ಕೇಳಿದಳು. "ಇನ್ನು ಸ್ವಲ್ಪ ಹೊತ್ತು ಬಿಟ್ಟು" ಎಂದೆ. ಯಾಕೊ ಮತ್ತೆ ನೀವು ಬರಲ್ವಾ ಎಂದು ಕೇಳ ಬೇಕು ಎನ್ನಿಸಲೇ ಇಲ್ಲ.
ಮನೆ ಬಿಟ್ಟು ಹೋರಡುವಾಗ ಅಜ್ಜಿಗೆ ನಮಸ್ಕರಿಸಿ ಹೊರಟೆ.ಅಜ್ಜಿಯ ಕಣ್ಣಲ್ಲಿ ನೀರು ತುಂಬಿತ್ತು. "ಆಗಾಗ ಬಾ" ಎಂದು ಅವರ ಮನದಲ್ಲಿ ಹೇಳಬೇಕು ಅಂತಿದ್ದರೊ ಇಲ್ಲವೊ ನಾನೆ "ಆಗಾಗ ಬಂದು ಹೋಗ್ತೀನಿ ಅಜ್ಜಿ, ಆರೊಗ್ಯ ಜೋಪಾನ" ಎಂದು ಹೇಳಿ ಹೊರಟೆ.
ದಾರಿಯುದ್ದಕ್ಕೊ ನನಗೆ ಒಂದು ತರಹದ ಬೇನೆ ಕಾಡುತಿತ್ತು.ಇಷ್ಟೆಲ್ಲ ದುಡ್ಡು, ಹೆಸರು ಎಲ್ಲಾ ಸಂಪಾದಿಸಿ ಮಾಡಿದ್ದಾದರು ಏನು.ಕೈ ತುಂಬ ಹಣ ,ಹಣ ಮತ್ತೆ ಹಣ ಅಷ್ಟೆ. ವಯಸ್ಸಾದ ಅಜ್ಜಿಯನ್ನು ಸಹ ನೋಡುವ ಯೋಗ್ಯತೆಯು ಇಲ್ಲ ಎಂದುಕೊಳ್ಳುತ್ತ ಮನೆಗೆ ಬಂದೆ.ಅಪ್ಪ,ಅಮ್ಮನ photo ಮೇಲಿದ್ದ ಹೂವು ಆಗಲೆ ಬಾಡಿ ಹೊಗಿತ್ತು. ಅದನ್ನು ತೆಗೆದು fridgeಲಿದ್ದ ಬೇರೆ ಹೂವನ್ನು ಹಾಕಿ ಹಾಗೆ ನೋಡುತ್ತಾ ನಿಂತೆ.
ಎಂದು ಓದಿ ಮುಗಿಸಿದಳು ಸುಚಿತ್ರ ತನ್ನ ಗಂಡ ಕಿಶೋರನ dairyಯನ್ನು. ದಿನಾಂಕ ೫ ವರ್ಷದ ಹಿಂದಿನದ್ದಾಗಿತ್ತು.ಕಿಶೋರ ಬಂದೊಡನೆ ಇದರ ಬಗ್ಗೆ ಕೇಳಿದಳು "ಯಾಕೆ ತನಗೆ ಈ ವಿಚಾರ ಹೇಳಿಲ್ಲ" ಎಂದಳು. "ಹೇಳುವ ಸಂದರ್ಭ ಬಂದಿರಲಿಲ್ಲ ಅದಕ್ಕೆ" ಎಂದುತ್ತರಿಸಿದ. "ಅಲ್ಲಿಂದ ಬಂದ ಮೇಲೆ ನಾನು ಬದಲಾಗಿದ್ದು, ನಿನ್ನ ಮದುವೆ ಆದದ್ದು,ಒಂದು ಮಗು ಹುಟ್ಟದ್ದು" ಎಂದು ಮುಂದುವರೆಸಿದ."ಮತ್ತೆ ಅಜ್ಜಿ?" ಮರು ಪ್ರಶ್ನೆ ಬಂತು. ಈಗ ಅವನಿಗೆ ಏನು ಹೇಳಬೇಕು ತೋಚಲಿಲ್ಲ."ಅದೇ ನನ್ಗೆ ಯಾವಾಗಲು ಕಾಡುವ ಬೇಸರದ ಸಂಗತಿ.ನನಗೆ ಮತ್ತೆ ಅಜ್ಜಿಯನ್ನು ನೋಡಲು ಹೋಗೊಕೆ ಆಗಲೆ ಇಲ್ಲ" ಎಂದ. ಸುಚಿತ್ರಾಗೆ ಈಗ ಕೋಪ ಮತ್ತು ಜಾಸ್ತಿ ಆಯಿತು "ಸಾಕು ಮಾಡಿ ,ಏನು ಯಾರು ಮಾಡದ ಕೆಲಸ ನೀವು ಮಾಡುತಿಲ್ಲ,ಒಂದು ದಿನ ಹೋಗಿ ಬರಲು ಆಗಲಿಲ್ಲ ಅನ್ನ ಬೇಡಿ.ಅದೆಲ್ಲ ನಂಗೆ ಗೊತ್ತಿಲ್ಲ ಈಗಲೆ ಅಲ್ಲಿಗೆ ಹೋಗಬೇಕು ಕರೆದು ಕೊಂಡು ಹೋಗಿ" ಎಂದು ಹಟ ಹಿಡಿದಳು. ಅನಾಥೆಯಾದ ಅವಳನ್ನು ೫ ವರ್ಷದ ಹಿಂದೆ ಮದುವೆ ಆಗಿದ್ದ ಕಿಶೋರ. ಸರಿ ಎಂದವನೆ ಮತ್ತೆ ತನ್ನ ಊರಿಗೆ ಹೊರಟನು. ತನ್ನ ಮನೆ ಎದುರಿಗೆ ಬಂದನು.ಮನೆ ಪಾಳು ಬಿದ್ದಿತ್ತು.ಅಜ್ಜಿಯ ಸುಳಿವಿರಲಿಲ್ಲ.
enchara.wordpress.com