ಕರ್ಮ ಫಲಸಾರ‌ !

ಕರ್ಮ ಫಲಸಾರ‌ !

ಕವನ

  ಹೇ  ದೇವ !  ಜಗತ್ ರಕ್ಷಕ  ಅಂತರ್ಯಾಮಿ


  ಹೇಳುವರು ಎಲ್ಲಾ ನೀ ಎಂದೂ ನಿಷ್ಪಕ್ಷಪಾತಿ  


  ನನ್ನ ಮನಸ್ಸಿಗೆ ಕೊಟ್ಟಿಲ್ಲ  ಸಮಾಧಾನ ಈ ಸಂಗತಿ.


 


 ಏಕೆ ಈ ತಾರತಮ್ಯ ಜಗದಲಿ


 ಬಡವರು- ಬಲ್ಲಿದರು


ಸುಕೃತ ಯೋಗಿಗಳು- ವಿಕೃತ ಕಾಮಿಗಳು


ಸಜ್ಜನರು- ದುರ್ಜನರು


ಮಾತುಬಲ್ಲವರು- ಮೂಕರು


ದೃಷ್ಟಿಯುಳ್ಳವರು- ಅಂಧರು


ಶಕ್ತರು - ನಿರ್ಬಲರು


ಸಭ್ಯರು- ಅಸಭ್ಯರು


ಸಮೃದ್ಧ -ದುರ್ಬಿಕ್ಷ


ಎಲ್ಲಿದೆ  ಕೊನೆ ಈ ಸಮತೋಲನವಿಲ್ಲದ  ಪಟ್ಟಿಯಲಿ


 


ಇದೆಲ್ಲಾ ನಮ್ಮ ಕರ್ಮ ಫಲಸಾರ


ಗೊತ್ತಾಯಿತೆ ಯಾರು ಈ ತಾರತಮ್ಯ ಸೂತ್ರಧಾರ 


     ಅಪರಾಧಕೆ  ಶಿಕ್ಷೆ


     ಸಜ್ಜನಿಕೆಗೆ   ರಕ್ಷೆ


ಈ ಜಗವು ಮೌನದಲಿ,ಛಲದಲಿ


ಪರಿಹರಿಸುವುದು ಪ್ರತಿ ತಪ್ಪನು


ಸರಿತೂಗಿಸುವುದು ಗಣಿತ ಶಾಸ್ತ್ರದ  ಸೆಮೀಕರಣದಂತೆ


ದೇವ ! ನಿನ್ನ ಕಾನೂನು ರೀತಿ- ನೀತಿ  ಗ್ರಹಿಸಲು


ಹೊಡದೋಡಿಸುವುದು ನಾಸ್ತಿಕತೆ ಬೆಳಸುವುದು ಆಸ್ತಿಕತೆ.


  


ಶ್ರೀ ನಾಗರಾಜ್ 

Comments