ಮಾತೃಭೂಮಿಯ ಮೇಲೇಕಿಷ್ಟು ಮತ್ಸರ

Submitted by Chikku123 on Fri, 08/31/2012 - 16:25

ಊರಿದ ಬುವಿ
ಉಣ್ಣುವ  ಅನ್ನ
ಉಸಿರಾಡುವ ಗಾಳಿ
ಉಟ್ಟ ಬಟ್ಟೆ
ಎಲ್ಲವೂ ಇಲ್ಲಿಯದೇ

ರಕ್ತ ಹಂಚಿಕೊಂಡ
ಭಾವನೆಗಳನ್ನು ಬೆಸೆದ
ಅಣ್ಣ ತಮ್ಮ ಅಕ್ಕ ತಂಗಿಯರೂ
ಬಂಧು ಬಾಂಧವರೂ
ಎಲ್ಲರೂ ಇಲ್ಲಿಯವರೇ

ಭೂಮಿಯ ಉರಿಸಿ
ಅನ್ನಕೆ ವಿಷ ಬೆರೆಸಿ
ಗಾಳಿಯ ಮಲಿನಗೊಳಿಸಿ
ಬಂಧುಗಳ ನೆತ್ತರ ಹರಿಸಿ
ಬಟ್ಟೆ ಬದಲಾಯಿಸುವ ಘೋರ ಮನಸ್ತಿತಿಯೇಕೆ?

Rating
No votes yet

Comments