ಮತ್ತೆ ಮಳೆ ಬರುವುದೇ...

ಮತ್ತೆ ಮಳೆ ಬರುವುದೇ...

ಕವನ

 

ಮತ್ತೆ ಮಳೆ ಬರುವುದೇ
ಅತ್ತ  ಹೊಳೆ ಹರಿವುದೆ
ಬಿತ್ತ ಕಾಳು ಮೊಳಕೆ ಒಡೆದು 
ಎಳೆಯ ಪೈರು ಬೆಳೆವುದೆ 
 
ಮತ್ತೆ ಮಳೆ ಬರುವುದೇ
ಸುಡುವ ಬೇಗೆ ತೊಡವುದೇ 
ಕಡಲ ತಡಿಯ ಮಳಲ ಮೇಲೆ
ಒಡಲು ಇಡಲು ಬಿಡುವುದೆ
 
ಮತ್ತೆ ಮಳೆ ಬರುವುದೆ
ಮುಡಿವ ಮೊಲ್ಲೆ ಬಿರಿವುದೇ
ಭಾಂಡವ ಮಧು ತುಂಬಿ ಬಿಡುವ
ದುಂಬಿ ಹಿಂಡು ನೆರೆವುದೆ
 
ಮತ್ತೆ ಮಳೆ ಬರುವುದೆ
ಎಲ್ಲ ನೆನಪ ತರುವುದೆ
ನಲ್ಲ ನುಡಿದ ಬೆಲ್ಲದ ನುಡಿ
ಮೆಲ್ಲನೆದೆ ಮಿಡಿವುದೆ 
-ಮಾಲು 

Comments

Submitted by venkatb83 Mon, 10/29/2012 - 16:24

"ಭಾಂಡವ ಮಧು ತುಂಬಿ ಬಿಡುವ
ದುಂಬಿ ಹಿಂಡು ನೆರೆವುದೆ
"
>>>>ಭಾಂಡವ

ಆ ಪದದ ಅರ್ಥ ಗೊತ್ತಾಗ್ಲಿಲ್ಲ..

ಮಳೆ ಖಂಡಿತ ಬರಲಿದೆ..
"ಭರವಸೆಯೇ ಬೆಳಕು"

ಕವನ ಸಖತ್ ...
ಶುಭವಾಗಲಿ..

\|