ಕರ್ಮಾಗ್ನಿ (ಶ್ರೀ ನರಸಿಂಹ 52)

ಕರ್ಮಾಗ್ನಿ (ಶ್ರೀ ನರಸಿಂಹ 52)

ಅರಿಯದಲೆ ಮುಟ್ಟಿದರು  ಅಗ್ನಿಯೆಂಬುದನು ನೀನು


ಅರಿಯದೆ ಮುಟ್ಟಿಹನೆಂದು ಸುಡದೆ ಬಿಡುವುದೇನು


ಅರಿತೊ,ಅರಿಯದೆಯೊ ಹೇಗೆ ಮುಟ್ಟಿದರು ಅದನು


ಗುಣವದರದು ತಿಳಿ,ಸುಡುವುದದು ಮುಟ್ಟಿದವರನು


 


ಅರಿತು,ಅರಿಯದೆ ಮಾಡಿದರು ಅಹಿತ ಕರ್ಮಗಳನು


ನೀಡುವುದದು ನೀ ಬಯಸದಿಹ ಕೆಡುಕಿನ ಪಲಗಳನು


ಅರಿಯದೆ ಆಗಿಹ  ಅಹಿತಕೆ ಕ್ಷಮೆಯೂ ದೊರಕಿದರು


ಅರಿತು  ಮಾಡುವ ಅಹಿತಕೆ ಕ್ಷಮೆಯಿಲ್ಲ ಕೋರಿದರು


 


ಮಾಡದಿರು ಕರ್ಮಗಳ ಜಗದಿ ಪರರ ಮನ ನೋಯಿಸಲು


ಇದುವೆ ಸುಲಭ ಮಾರ್ಗವು ಶ್ರೀನರಸಿಂಹನನು ಮೆಚ್ಚಿಸಲು

Rating
No votes yet

Comments

Submitted by Prakash Narasimhaiya Tue, 10/30/2012 - 16:43

ಆತ್ಮೀಯ ಸತೀಶರೆ ,
ಕರ್ಮವನ್ನು ಅಗ್ನಿ ಎಂದಿರುವ ನಿಮ್ಮ ಕವನ ಸುಂದರವಾಗಿ ಮೂಡಿದೆ. ಕರ್ಮ ಶೇಷವನ್ನು ಸುಟ್ಟು ಭಸ್ಮ ಮಾಡಲೇಬೇಕು, ವಿಧಿ ಇಲ್ಲ. ಇಂದೋ, ಮುಂದೋ, ಮತ್ತೆ ಮುಂದೆಂದೋ .......ಕರ್ಮ ಅಗ್ನಿಯಲ್ಲಿ ಬೇಯಲೇ ಬೇಕು.
ಧನ್ಯವಾದಗಳು.

Submitted by saraswathichandrasmo Wed, 10/31/2012 - 20:34

ಚೆನ್ನಾಗಿದೆ. ಇಷ್ಟವಾಯಿತು.