ವಿಷಾದ...
ಕವನ
ಬೆಳೆವ ಚಿಗುರನು ಚಿವುಟಿ
ಉಗುರಿಂದ!
ಅರಳಿದಾ ಹೂವನ್ನು ಸುರುಟಿ
ಬೆರಳಿಂದ!
ದೂರ ಸರಿದನಲ್ಲಾ
ಈ ನನ್ನ ನಲ್ಲ
ಒಲಿದ ಹೆಣ್ಣಿನ ಒಲವ
ತುಳಿದು ಕಾಲಿಂದ!
ಬದುಕಾಯಿತು ಭಾರ;
ಸವಿಯು ಸರಿಯಿತು ದೂರ
ಈ
ಒಡೆದ ಹಾಲಿಂದ
-ಮಾಲು
- Log in to post comments