ಚಿತ್ರ ಪ್ರವಾಸ : ಮುಳ್ಳಯನ ಗಿರಿ

ಚಿತ್ರ ಪ್ರವಾಸ : ಮುಳ್ಳಯನ ಗಿರಿ

ಮುಳ್ಳಯನಗಿರಿ  ಚಿಕ್ಕಮಂಗಳೂರಿಗೆ ಸುಮಾರು ನಲವತ್ತು ಕಿ.ಮಿ. ದೂರದಲ್ಲಿರುವ ಪ್ರಕೃತಿ ಉಸಿರಾಡುವ ಸ್ಥಳ. ಉದ್ದಕ್ಕು ಹರಡಿ ನಿಂತ ಬಾಬಬುಡನ್ ಗಿರಿ ಶ್ರೇಣಿಗಳು, ಆ ಬೆಟ್ಟಗಳನ್ನೆಲ್ಲ ಆವರಿಸಿ ನಿಂತಿರುವ ಹಸಿರಿನ ಹೊದ್ದಿಗೆ,  ಆಕಾಶಕ್ಕು ಭೂಮಿಗು ಪ್ರಕೃತಿ ನಿರ್ಮಿಸಿರುವ ’ಜಾರುಬಂಡೆ’ಯಂತೆ  ಕಾಣುವ ಪರ್ವತಗಳು. ಕಾಫಿ ತೋಟ , ಹನುಮ ಹೊತ್ತುತಂದ ಸಂಜೀವಿನ ಪರ್ವತದ ಭಾಗ ಎಲ್ಲವು ಸುತ್ತವರೆದು ಸ್ಥಳದ ಆಕರ್ಷಣೆ ಹೆಚ್ಚಿಸುತ್ತದೆ. ಕನ್ನಡ ಸಿನಿಮಾ ನಿರ್ದೇಶಕರಿಗೆ (ವಿಷೇಶ ವಾಗಿ ಪುಟ್ಟಣ ಕಣಗಾಲ್) ಶಾಶ್ವತ ಹೊರಾಂಗಣ ಚಿತ್ರಿಕರಣದ ಸ್ಟುಡಿಯೋ ಆನ್ನಬಹುದೇನೊ. ಹಿಮಾಲಯ ಹಾಗೂ ನೀಲಗಿರಿಗಳ ನಡುವೆ ಸಮುದ್ರಮಟ್ಟದಿಂದ ೬೩೦೦ ಅಡಿಗಳಷ್ಟು ಎತ್ತರದಲ್ಲಿರುವ ಕರ್ನಾಟಕದ ಶೃಂಗ, ಈ ಮುಳ್ಳಯನಗಿರಿ.  ಕಡೆಯಲ್ಲಿ ಸುಮಾರು ೩೦೦ ಮೆಟ್ಟಿಲು ಹತ್ತಬೇಕಾಗಿರುವದಾದರು, ವಾಹನದಲ್ಲಿ ಹೋಗಬಹುದು. ಆದರೆ ನೀವೆ ವಾಹನ ಚಾಲನೆ ಮಾಡುವಿರಾದರೆ ಎಚ್ಚರ , ಇಲ್ಲಿ ವಾಹನ ಮುನ್ನಡೆಸಲು ಅತ್ಯಂತ ಪಳಗಿದ ಡ್ರೈವರ್ ಬೇಕಾಗಿರುತ್ತದೆ. ವಾಹನದಲ್ಲಿ ಇಳಿಯುವಾಗ ಅತಿ ಎಚ್ಚರಿಕೆಯ ಅಗತ್ಯವಿದೆ. ಮೆಟ್ಟಿಲುಗಳನ್ನು ಹತ್ತಲು ಅಂತ ಕಷ್ಟವೆಂದೇನು ಅನಿಸುವದಿಲ್ಲ. ಗಿರಿಯ ತುದಿಯಲ್ಲಿರುವ ಮುಳ್ಳಯನ ದೇವಾಲಯದಲ್ಲಿ ಹೋಗಿ ನಿಂತರೆ ಸಾರ್ಥಕ ಭಾವ. ಡಿಸೆಂಬರ್ ಹಾಗೂ ಜನವರಿಯಲ್ಲಿ ಹೋಗುವವರು ಬೆಳಗ್ಗೆ ಮುಂಚೆಯೆ ಹೋದರೆ ಆವರಿಸಿರುವ ಹಿಮವನ್ನು ಆಸ್ವಾದಿಸಬಹುದು. 

 

 

 

 

 

 

ನಾವು ಹತ್ತುವದೇನು ಮಹಾ ನಮಗಿಂತ ಮೊದಲೆ ಅಲ್ಲಿ ಇದ್ದ ದನಗಳನ್ನು ನೋಡಿ

 

Rating
No votes yet

Comments

Submitted by ಗಣೇಶ Tue, 01/15/2013 - 23:56

ಪಾರ್ಥರೆ, "ಪ್ರೇಮವೆಂಬ... "ಕವಿತೆಯಲ್ಲಿ ಹಾಕಿದ ಚಿತ್ರ ನೋಡಿ ಸ್ವಲ್ಪ ಗಾಬರಿಯಾಗಿದ್ದೆ. ಇಲ್ಲಿ ಆ ಹುಡುಗಿಯ ಕಲ್ಲಿನ ಮೇಲೆ ಕುಳಿತ ಎರಡನೇ ಚಿತ್ರ ನೋಡಿ ಸಮಾಧಾನವಾಯಿತು. ಚಿತ್ರಗಳೆಲ್ಲಾ ಚೆನ್ನಾಗಿದೆ.

Submitted by venkatb83 Wed, 01/16/2013 - 15:24

In reply to by ಗಣೇಶ

ಗುರುಗಳೇ ಈ ಪ್ರವಾಸಿ ಬರಹ‌.....
ಸೂಪರ್ ‍ಸಖತ್..!!

ಚ್ಹಿತ್ರ ಸಹಿತ‌ ಪ್ರವಾಸಿ ಬರಹ‌ ಇಸ್ಟ ಆಯ್ತು...
ನಾವೂ ಅಲ್ಲಿಗೆ ಹೋಗಬೇಕಿದೆ...
ಒಳಿತಾಗಲಿ..

\|/

Submitted by partha1059 Wed, 01/16/2013 - 17:43

In reply to by Premashri

ಪ್ರೇಮಶ್ರಿಯವರೆ ವ0ದನೆಗಳು, ಎಲ್ಲ ಕಡೆಗು ಹೋಗಿದ್ದೇವು ಬೆಳಗ್ಗೆ ಎ0ಟಕ್ಕೆ ಚಿಕ್ಕಮ0ಗಳೂರು ಬಿಟ್ಟು ಮುಳ್ಳಯನ‌ ಗಿರಿ , ಬಾಬ‌ ಬುಡನ್ ಗಿರಿ, ಅಲ್ಲಿ0ದ‌ ಕೆಮ್ಮಣ್ಣುಗು0ಡಿ , ನ0ತರ‌ ಕಲ್ಲತ್ತಗಿರಿ, ನಡು ನಡುವೆ ಶೂಟಿ0ಗ್ಸ್ ಸ್ಪಾಟ್ ಗಳು, ಮಣಿಕ್ಯದಾರ‌ ಮು0ತಾದವು , ದಾರಿಯಲ್ಲಿಯ‌ ಕಾಪಿ ತೋಟಗಳು ಎಲ್ಲವನ್ನು ನೋಡಿದೆವು :‍)

Submitted by partha1059 Wed, 01/16/2013 - 17:39

In reply to by ಗಣೇಶ

ಗಣೇಶರೆ ನಿಜಕ್ಕು ಕುಳಿತ‌ ಆ ಸ್ಥಳ‌ ಸುರಕ್ಷಿತವಾಗಿರಲಿಲ್ಲ ಎ0ದು ನಮಗೆ ಅನ್ನಿಸಿದ್ದು ಅಲ್ಲಿ0ದ‌ ಕೆಳಗೆ ಬ0ದು ಮೇಲೆ ನೋಡಿದಾಗಲೆ ? ಕಾಲು ಜಾರಿದರೆ ಎಲ್ಲಿ ಹೋದರು ಎ0ದು ಪತ್ತೆಯಾಗದ‌ ಜಾಗ‌ ಅದು. ನಿಮ್ಮ ಮೆಚ್ಚುಗೆಗೆ ವ0ದನೆಗಳು

Submitted by bhalle Wed, 01/16/2013 - 20:02

ಸೊಗಸಾದ ಚಿತ್ರಗಳು ಪಾರ್ಥರೇ ... ಮತ್ತೊಮ್ಮೆ ನಿಮ್ಮನ್ನು ನೋಡಿ ಖುಷಿಯಾಯ್ತು ... ಬೆಟ್ಟದ ಮೇಲೆ ನಿಂತ ದನಗಳ ಚಿತ್ರ ನೋಡಿ 'ಕಲ್ಮಾಡಿಯ ಕೋಣ'ದ ಕಥೆ ನೆನಪಾಯ್ತು ...

Submitted by partha1059 Thu, 01/17/2013 - 10:27

In reply to by bhalle

ಬಲೆ ಬಲೆಯವರೆ ವ0ದನೆಗಳು, ಸದ್ಯ ನಮ್ಮನ್ನು ನೋಡಿ ಕಲ್ಮಾಡಿಯ‌ ಕೋಣಗಳ‌ ನೆನಪಾಗಲಿಲ್ಲವಲ್ಲ ಅದೆ ಸಮಾದಾನ‌!ನಿಮಗೆ ಮೊದಲೆ 'ರಾಮನ‌' ನೆನಪು, ಚೀನಿಯರ‌ ಕನ್ಪ್ಯೂಷನ್ ಎಲ್ಲ ಸೇರಿದೆ :‍) , ಹಾಗಾಗಿ ದನಗಳ‌ ಚಿತ್ರ ನೋಡಿ ಸ0ತಸವಾಯಿತು, ನಿಮ್ಮನ್ನು ನೋಡಿ ಕಲ್ಮಾಡಿಯ‌ ಕೋಣ‌ ನೆನಪಾಯಿತು ಎ0ದು ಬರೆಯಲಿಲ್ಲ ಪುಣ್ಯ :‍)

Submitted by bhalle Thu, 01/17/2013 - 21:56

In reply to by partha1059

'ಬಲೆ ಬಲೆ' ಎಂದು ಹೇಳಿ ನನ್ನನ್ನು ಸ್ಪೈಡರ್ ಮ್ಯಾನ್' ಮಾಡಿದ ಹಾಗಿದೆ .. ಭಲೆ ಭಲೆ :-)))

ನಮಗೆ ದನಗಳೂ, ಕೋಣಗಳೂ ಒಂದೇ ರೀತಿ ಕಂಡರೂ ಅವು ಮೀಟಿಂಗ್ ಕರೆಯದೆ ಇರೋದ್ರಿಂದ ಅವುಗಳಿಂದ ತೊಂದರೆ ಇಲ್ಲ :-)))

Submitted by bhalle Sun, 01/20/2013 - 04:22

In reply to by partha1059

ಆಗಬಹುದು ಪಾರ್ಥರೇ ... ಮುಂದಿನ ಬಾರಿ ಭಾರತಕ್ಕೆ ಬಂದಾಗ ಖ೦ಡಿತ ಮೀಟಿಂಗ್ ಕರೆಯುವೆ ... ಒಂದಿಬ್ಬರು ಚಿಂಕಿಗಳನ್ನೂ ಕರೆಸಿದರೆ ಚೆನ್ನ :-)