ಶ್ರೀಮಂತಗೊಳಿಸು
ಶಿಖರವೇರುವ ಛಲದಿ
ಹಾದಿಬದಿಯ ಹೂವು
ಹಣ್ಣುಗಳನು ಸವಿಯಲು
ಸಣ್ಣ ಪುಟ್ಟ ಹೆಜ್ಜೆಗಳ
ಗೆಜ್ಜೆನಾದ ಆಲಿಸಲು
ವೇಳೆಯಿಲ್ಲದ ಅವಸರದ
ಬಾಳಿನಲ್ಲೇನಿದೆ ರಸ ತಮ್ಮಾ?
ಕಂದನ ತೊದಲನಾಲಿಸಿ
ತೋಳ ತೊಟ್ಟಿಲಾಗಿಸಲು
ಸತಿಯ ಮನವನರಿತು
ತೋಳಬಂಧಿಯಾಗಿಸಲು
ನೆಮ್ಮದಿಯ ಕಡಲಾಗಿ
ಹೆತ್ತೊಡಲನು ತಣಿಸಲು
ಸಮಯವಿಲ್ಲದೆ ದುಡಿದುಡಿದು
ಗುಡ್ಡೆಹಾಕುವುದರಲ್ಲೇನಿದೆ ಸಿರಿ ತಮ್ಮಾ?
ಸಂಭ್ರಮಾನಂದ ಸಾರ್ಥಕತೆಯಲಿ
ಬದುಕನೇ ಶ್ರೀಮಂತಗೊಳಿಸು ತಮ್ಮಾ
Rating
Comments
ನಿಜ ಈ ತೊಳಲಾಟದ ಜೀವನದಲ್ಲಿ
ನಿಜ ಈ ತೊಳಲಾಟದ ಜೀವನದಲ್ಲಿ ನಿಜವಾದ ಆನಂದವನ್ನು ಕಳೆದು ಕೊಂಡಿದ್ದೇವೆ ಒಳ್ಳಯ ಕವನ ಪ್ರೇಮರವರೇ .....ಸತೀಶ್
In reply to ನಿಜ ಈ ತೊಳಲಾಟದ ಜೀವನದಲ್ಲಿ by sathishnasa
ಮೆಚ್ಚುಗೆಯ ನುಡಿಗಳಿಗೆ
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಸತೀಶ್ ಅವರೆ.
ಅರ್ಥಪೂರ್ಣವಾದ ಕವನ ಪ್ರೇಮಾ ಅವರೆ,
ಅರ್ಥಪೂರ್ಣವಾದ ಕವನ ಪ್ರೇಮಾ ಅವರೆ, ಇಂದಿನ ಯಾಂತ್ರಿಕ ಯುಗದಲ್ಲಿ ಗಳಿಕೆಯೊಂದೇ ಮುಖ್ಯ ಅನ್ನುವಂತಾಗಿದೆ. ನೆಮ್ಮದಿಯ ಕಡಲಾಗಿ
ಹೆತ್ತೊಡಲನು ತಣಿಸಲು, ಸಮಯವಿಲ್ಲದೆ ದುಡಿದುಡಿದು, ಗುಡ್ಡೆಹಾಕುವುದರಲ್ಲೇನಿದೆ ಸಿರಿ ತಮ್ಮಾ?ಸಂಭ್ರಮಾನಂದ ಸಾರ್ಥಕತೆಯಲಿ
ಬದುಕನೇ ಶ್ರೀಮಂತಗೊಳಿಸು ತಮ್ಮಾ+೧ ಧನ್ಯವಾದಗಳು.
In reply to ಅರ್ಥಪೂರ್ಣವಾದ ಕವನ ಪ್ರೇಮಾ ಅವರೆ, by ಮಮತಾ ಕಾಪು
ನಿಮ್ಮ ಪ್ರತಿಕ್ರಿಯೆಯು
ನಿಮ್ಮ ಪ್ರತಿಕ್ರಿಯೆಯು ಉತ್ಸಾಹವನ್ನು ಹೆಚ್ಚಿಸಿತು.ಧನ್ಯವಾದಗಳು ಮಮತಾ ಅವರೆ.
ಇರುವುದನ್ನು ಅನುಭವಿಸದೆ
ಇರುವುದನ್ನು ಅನುಭವಿಸದೆ ಇಲ್ಲದುದನ್ನು ಬಯಸುವ ಧಾವಂತವೀ ಜೀವನವೇ ಎಂಬುದನ್ನು ಬಿಂಬಿಸಿದ ಸಾಲುಗಳು!
In reply to ಇರುವುದನ್ನು ಅನುಭವಿಸದೆ by kavinagaraj
ಧನ್ಯವಾದಗಳು ಕವಿನಾಗರಾಜ್ ಅವರೆ.
ಧನ್ಯವಾದಗಳು ಕವಿನಾಗರಾಜ್ ಅವರೆ.
ಆಚೆ ಈಚೆ ನೋಡುತ್ತಿದ್ದರೆ ಗುರಿ
ಆಚೆ ಈಚೆ ನೋಡುತ್ತಿದ್ದರೆ ಗುರಿ ಮುಟ್ಟುವುದು ಯಾವಾಗ? ದುಡಿದು ದುಡಿದು ಗುಡ್ಡೆ ಹಾಕಿದರೆ ಸತಿಗೆ ತೋಳಬಂಧಿ..:) ---ಕವನ ಚೆನ್ನಾಗಿದೆ.
In reply to ಆಚೆ ಈಚೆ ನೋಡುತ್ತಿದ್ದರೆ ಗುರಿ by ಗಣೇಶ
:) ಧನ್ಯವಾದಗಳು ಗಣೇಶ್ ಅವರೆ.
:) ಧನ್ಯವಾದಗಳು ಗಣೇಶ್ ಅವರೆ.