?

?

ಬರಹ

ಹೌದು......ಈಗಲೂ ನಾ
ಅದೇ ಜಗುಲಿಯಲಿ
ಅದೇ ಭಂಗಿಯಲಿ
ಅದೇ ರಾಗವ... ಹಾಡುತಾ
.... ಕೂತಿದ್ದೇನೆ

ನಿನಗಾಗಿ ನಾ .....ಕಾಯುತಿಲ್ಲ
......ಕಾಯಬೇಕಾಗಿಲ್ಲ
ನಿನ್ನೊಂದಿಗೆ ಕೊಂಡುಹೋದ
ಪ್ರಶ್ನೆ.... ಉತ್ತರ ಬೇಕಿದೆ
ನಿನ್ನೊಂದಿಗೆ ಬಾಡಿಹೋದ
ಚಿಗುರು-ಕನಸು....ಲೆಕ್ಕ ಬೇಕಿದೆ

ನಿನಗಾಗಿ ನಾ ........ ಹಾಡಲಿಲ್ಲ
'ರಾಗ'ದ ಹೊರತು ... ನನ್ನ ಬಳಿ
....... ಏನೂ ಇರಲಿಲ್ಲ
....... ಏನೂ ಇಲ್ಲ

ಬಂದು ಹೋಗು......ಓಮ್ಮೆ
ಅರ್ಥ ನೀಡು.....
ಹಾದಿಗಲ್ಲದಿದ್ದರೂ....... ಅಂಥ್ಯಕ್ಕೆ