ಸ್ವಗತ

Submitted by Premashri on Wed, 02/27/2013 - 15:03

ಓಡಲಾಗದಿದ್ದರೇನು
ನಡೆದು ಸಾಗುವೆನು
ಕಣ್ಣು ಮಂಜಾದರೇನು
ಸುಲೋಚನ ಧರಿಸುವೆನು
ಹಬೆಯಾಡುವ ಕಾಫಿಯ ಹೀರುತ
ಕವಿತೆಯೋದುವಾನಂದವಿಲ್ಲದಿರೇನು
ಕಿಟಿಕಿಯಾಚೆ ಹಸುರು ರಾಜಿಸುತಿದೆ
ಹೃದಯದೊಳಗಿನ ಬೆಳಕಿನಂತೆ !

Rating
No votes yet