ಮನಃ ಏವ ಕಾರಣಂ ಬಂಧಮೋಕ್ಷಯೋ: (ಹಾಗೇ ಸುಮ್ಮನೆ)
ನೂರು ಪುಟದ ೨ ಪೇಪರು ಬಂದು ಬೀಳುತ್ತವೆ. ನಾನು ತಿರುವಿ ಹಾಕುತ್ತೇನೆ ಒಂದರ್ಧ ಗಂಟೆ.ನಾನು ಪೇಪರ್ ಓದಬೇಕು/ತಿರುವಿ ಹಾಕಬೇಕು ಎಂದು ನಿರ್ಣಯಿಸಿದವರು ಯಾರು?ನಾನು ಇದನ್ನು ಮಾಡದಿದ್ದರೆ ಏನಾಗುತ್ತದೆ ?
ಮುನ್ನೂರು ಟೀ ವೀ ಚಾನೆಲ್ಲುಗಳಿವೆ. ನಾನೇಕೆ ಟೀವೀ ನೋಡಬೇಕು? ಚಾನೆಲ್ ಬದಲಿಸಬೇಕು? ಮನೆಯಲ್ಲಿ ಟೀವೀ ಇದ್ದಾಕ್ಷಣ ಟೀವೀ ಆನ್ ಮಾಡಬೇಕು ಏಕೆ?
ಸಾವಿರ ಪುಟದ ವಿದೇಶೀ ಕಾದಂಬರಿ ಇಟ್ಟುಕೊಂಡು ಯಾವಾಗ ಅದನ್ನು ಓದಿ ಮುಗಿಸಿಯೇನು ಅಂದುಕೊಳ್ಳುವುದೇಕೆ?
ಇಂಟರ್ನೆಟ್ಟಿನಲ್ಲಿ ದಿನವೂ ಗೂಗಲ್ ರೀಡರಿನಲ್ಲಿ ಸುಮಾರು ಸಾವಿರ ಹೊಸ ಸಂಗತಿಗಳು ಸೇರ್ಪಡೆ ಆಗುತ್ತವೆ. ದಿನವೂ ಅವುಗಳನ್ನು ಗಮನಿಸಿ ತೆಗೆದು ಹಾಕಬೇಕೇಕೆ ?
ಒಂದೂವರೆ ಸಾವಿರ ಕನ್ನಡ ಪುಸ್ತಕಗಳು , ಇನ್ನೂ ಐದು ವರ್ಷದ ಕೊರವಂಜಿ ಸಂಚಿಕೆಗಳು , ಇಪ್ಪತ್ತೈದು ವರ್ಷದ ಅಪರಂಜಿ ಸಂಚಿಕೆಗಳು ಓದಲು ಬಾಕಿ ಇವೆ . ಓದಬೇಕೆಂದು ಇಟ್ಟುಕೊಂಡದ್ದೂ ನಾನೇನೇ , ಇನ್ನೂ ಇಷ್ಟೆಲ್ಲ ಬಾಕಿ ಅಂದುಕೊಳ್ಳುವುದೂ ನಾನೇನೇ ಅಲ್ಲವೆ?
ಸಂಪದದಲ್ಲೋ ಫೇಸ್ಬುಕ್ಕಿನಲ್ಲೋ ವಿಕಿಪೀಡಿಯದಲ್ಲೋ ನಾನು ಪೋಸ್ಟ್ ಮಾಡುವುದೇಕೇ? ಯಾರಾದರೂ ಹೊಗಳಲಿ , ಬೆನು ತಟ್ಟಲಿ ಎಂದೇ ?
ಯಾರ ಯಾರ ಜತೆಗೋ ನನ್ನನ್ನು ಹೋಲಿಸಿಕೊಳ್ಳುವುದೇಕೆ? ಸಂತಸಪಡುವುದೇಕೇ? ಬೇಜಾರು ಮಾಡಿಕೊಳ್ಳುವುದೇಕೆ?
ಯಾವುದೋ ಝೆನ್ ಕತೆ ನೆನಪಾಗುತ್ತದೆ- ಯಾವನೋ ಗುರುವಿನ ಬಳಿ ಬಂದು ಅಲವತ್ತುಕೊಳ್ಳುತ್ತಾನೆ - ಗುರುಗಳೇ ಈ ಬಂಧನದಿಂದ ಬಿಡಿಸಿ ಅಂತ .ಗುರು ಕೇಳುತ್ತಾನೆ- ಯಾರು ನಿನ್ನನ್ನ ಕಟ್ಟಿ ಹಾಕಿರೋದು ? ಅಂತ!!
ಬಂಧನಕ್ಕೂ ಮೋಕ್ಷಕ್ಕೂ (ಬಿಡುಗಡೆಗೂ) ಮನಸ್ಸೇಕಾರಣವಂತೆ!
ಜಗತ್ತಿನ ಕೇಂದ್ರದಲ್ಲಿರುವದು ನಾನೇ.
ಈ ನಾನು ಎನ್ನುವುದು ನನ್ನ ಮನಸ್ಸು .
ಈ ನನ್ನ ಮನಸ್ಸಿನಲ್ಲಿ ಇರುವುದು ಕಾಮ, ಕ್ರೋಧ , ಭಯ , ಆಸೆ , ಮುಂತಾದವು .
ಇವೇ ನನ್ನ ಎಲ್ಲ ಕ್ರಿಯೆಗಳನ್ನೂ ಪ್ರತಿಕ್ರಿಯೆಗಳನ್ನೂ ನಿಯಂತ್ರಿಸುವುದು , ನಿರ್ಧರಿಸುವುದು.
ಈ ಮನಸ್ಸನ್ನೂ , ನನ್ನ ಕ್ರಿಯೆಗಳನ್ನೂ ಪ್ರತಿಕ್ರಿಯೆಗಳನ್ನೂ ಗಮನಿಸಿಕೊಳ್ಳುವುದು , ಅರಿತುಕೊಳ್ಳುವುದು ಒಂದು ಬಗೆಯ ಧ್ಯಾನವೇನೋ . ಅದರಿಂದ ಒಂದು ತರಹ ಬಿಡುಗಡೆ ಸಿಗುವ ಹಾಗೆ ತೋರುತ್ತದೆ.
Comments
ಶ್ರೀಕಾಂತರವರೆ ತುಂಬಾನೆ ನಿಜ ,
ಶ್ರೀಕಾಂತರವರೆ ತುಂಬಾನೆ ನಿಜ , ಎಲ್ಲಕ್ಕು ಕಾರಣ ನಮ್ಮ ಮನಸ್ಸೆ . ಕಷ್ಟ ಸುಖಗಳಿಗು ಕಾರಣ ಮನಸ್ಸೆ ನೀವು ಯಾವುದನ್ನು ಸುಖ ಅಂದುಕೊಳ್ಳೂವಿರೊ ಅದು ಮತ್ತೊಬ್ಬರಿಗೆ ಕಷ್ಟ ಎನಿಸಿರಬಹುದು . ಹೆಂಡದ ವಾಸನೆ ಸಹಿಸಲು ನನಗೆ ಕಷ್ಟ ಆದರೆ ಕುಡಿಯುವನಿಗೆ ಸುಖವಲ್ಲವೆ. ಪ್ರಪಂಚಚಲ್ಲಿ ಎಲ್ಲವು ಹಾಗೆ . ಕೆಲವು ದಿನದ ಕೆಳಗೆ ಗೆಳೆಯನೊಬ್ಬ ಹೇಳಿದ, ನಾನು ಸುಖವಾಗಿರುವೆನೊ ಕಷ್ಟದಲ್ಲಿರುವೆನೊ ನನಗೆ ಗೊತ್ತಿಲ್ಲ ಎಂದು. ಹೊರಗಿನ ಪ್ರಪಂಚ ಅರಿಯುವ ಅಗತ್ಯಕ್ಕಿಂತ ನಮ್ಮ ಮನಸ್ಸನ್ನು ನಾವೆ ಅರಿತುಕೊಳ್ಳುತ್ತ ಸಾಗಿದರೆ ಅಲ್ಲಿ ದೊಡ್ಡವಿಶ್ವವೆ ಇದೆ. ಹಾಗೆ ನಮ್ಮ ಜೀವನದ ಚಿಕ್ಕ ದೊಡ್ಡ ಗುರಿಗಳು ಇರುತ್ತವೆ (ನೀವು ಹೇಳಿರುವುದು ಎಲ್ಲವು ಸೇರಿ) ಅದನ್ನೆಲ್ಲ ಮಾಡಿ ಮುಗಿಸುವೆವೊ ಇಲ್ಲವೊ ಗೊತ್ತಿಲ್ಲ . ಕಡೆಗೊಮ್ಮೆ ಕಂಡೆಕ್ಟರ್ ಕೂಗಿದಾಗ ಅರ್ದ ನಿದ್ರೆಯಲ್ಲಿದ್ದರು ಸರಿ, ಎದ್ದು ಬಸ್ಸನ್ನು ಇಳಿದು ಹೋಗಲೆ ಬೇಕು. ಅರ್ದ ನಿದ್ರೆಯಿಂದ ಮತ್ತೊಂದು ನಿದ್ರೆಗೆ ....ಅಮೋಘ್ಹ ನಿದ್ರೆಗೆ ..
In reply to ಶ್ರೀಕಾಂತರವರೆ ತುಂಬಾನೆ ನಿಜ , by partha1059
ಸ್ರೀಕಾನ್ಥ್ ಅವರೆ,
ಸ್ರೀಕಾನ್ಥ್ ಅವರೆ,
+1 ಪಾರ್ಥ ಅವರ ಪ್ರತಿಕ್ರಿಯೆ ಒಪ್ಪುತ್ತೀನಿ.
ನಾನು ಬರೆದ ಪುಸ್ತಕ ವನ್ನು ಓದಿ ಮನಸ್ಸನ್ನು ಹಿಡಿತಗೊಳಿಸುವ ಬಗ್ಗೆ ಮಾಹಿತಿ ಇದೆ. ವಿವೇಕಾನಮ್ದರ ಮೇಲಿನ ಪುಸ್ತಕ, ಬರೆದಿರುವರು ಪುರುಷೋತ್ತಮಾನಮ್ದರು!
ಮೀನಾ.
"ಸಂಪದದಲ್ಲೋ ಫೇಸ್ಬುಕ್ಕಿನಲ್ಲೋ
"ಸಂಪದದಲ್ಲೋ ಫೇಸ್ಬುಕ್ಕಿನಲ್ಲೋ ವಿಕಿಪೀಡಿಯದಲ್ಲೋ ನಾನು ಪೋಸ್ಟ್ ಮಾಡುವುದೇಕೇ? ಯಾರಾದರೂ ಹೊಗಳಲಿ , ಬೆನು ತಟ್ಟಲಿ ಎಂದೇ ?"
;()0000
ಮಿಶ್ರಿಕೋಟಿ ಅವರೇ ಈ ತರಹದ ಭಾವಗಳು ಬಹುಶ ಎಲ್ಲರ ಮನದಲ್ಲಿ ಮೂಡುವ ಭಾವನೆಗಳೇ ಅನ್ಸುತ್ತೆ . ಮೇಲಿನ ಸಾಲುಗಳನ್ನ ಓದಿದಾಗ ನಾ ಹಲವು ಬಾರಿ ಹಾಗೆ ಯೋಚಿಸಿರುವೆ .. ಉತ್ತರ ಸಿಕ್ಕಿಲ್ಲ ..!!
ಶುಭವಾಗಲಿ
\।