ಅಂತರಾಳ

ಅಂತರಾಳ

ಮುಸ್ಸಂಜೆಯ ತಂಪಲಿ  
ನಸುಗಪ್ಪಿನ ಸೊಂಪಲಿ 
ಪ್ರಣಯಕಂತ  ಸನಿಹ 
ಬಾರದಿರೋ ಇನಿಯ 
ಸೋತು ಹೋಗುವೆನು ನಿನ್ನಲಿ. 
 
ಆ ಕುಡಿ ಮೀಸೆಯ ಅಂಚಲಿ  
ನೂರಾಸೆಯು ಬಲಿತಿಹುದು 
ಬಲ ತೋಳಿನ ಬಂದಿಯಲಿ 
ನನ್ ಬಳಸೋ ಸಂಚಿಹುದು 
ದೂರದಿ ನಿಲ್ಲು ; ಕರಗಿದೆ ಕಲ್ಲು 
ಸೋತು ಹೋಗುವೆನು ನಿನ್ನಲಿ. 
 
ಬರಸೆಳೆಯೋ ನೋಟದಲಿ 
ಜಡ ಮನಸೇ ನಡುಗಿಹುದು 
ಬರಿ ಮಾತಿನ ಮೋಡಿಯಲಿ 
ಮೈ ಮನವೇ ಮರೆತಿಹುದು  
ಆವರಿಸದಿರು ನನ್ನೊಡಲ; ಬಿಸಿಯುಸಿರೊಳು ಬೆರೆತು 
ಸೋತು ಹೋಗುವೆನು ನಿನ್ನಲಿ.