ಟ್ರೈನ್ ಮಿಸ್ ಮಾಡಬೇಡಿ..

ಟ್ರೈನ್ ಮಿಸ್ ಮಾಡಬೇಡಿ..

"ಚೆನ್ನೈ ಎಕ್ಸ್‌ಪ್ರೆಸ್" ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ದಾಖಲೆ ವಿಷಯ ಬದಿಗಿರಲಿ. ಈ ಸಿನೆಮಾ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರ ಮನರಂಜಿಸುವುದು.
ಆಕ್ಟಿಂಗ್ ವಿಷಯದಲ್ಲಿ ನಾಯಕ ಶಾರುಕ್ ಖಾನ್ ಮಿಂಚಿಂಗ್. ಹಾಸ್ಯ ಪ್ರಸಂಗಗಳಲ್ಲಿ ಟಾಪ್ ಕ್ಲಾಸ್. ಗಂಟು ಮೋರೆಯವರೂ ಸಹ ಹೊಟ್ಟೆಹಿಡಕೊಂಡು ನಗದಿದ್ದರೆ ಬೆಟ್!
ದೂದ್ ಸಾಗರ್, ಮುನ್ನಾರ್, ಗೋವಾ ಇತ್ಯಾದಿ ಸ್ಥಳಗಳ ಅತ್ಯುತ್ತಮ ಸೀನರಿ..
ಹಾಡುಗಳೂ ಸಹ ಒಂದಕ್ಕಿಂದ ಒಂದು ಸೂಪರ್..ಅದರ ಚಿತ್ರೀಕರಣವೂ ಸಹ.
ರೋಹಿತ್ ಶೆಟ್ಟಿಯವರ ಡೈರೆಕ್ಷನ್ ಅಂದ ಮೇಲೆ ಫೈಟ್, ಕಾರ್ ಚೇಸ್, ಬ್ಲಾಸ್ಟ್ ..ಇತ್ಯಾದಿ ಇದ್ದೇ ಇದೆ-ಊಟಕ್ಕೆ ಉಪ್ಪಿನಕಾಯಿ ತರಹ ಜಾಸ್ತಿಯೂ ಇಲ್ಲ, ಕಮ್ಮಿಯೂ ಇಲ್ಲ.
ದೀಪಿಕಾ ಸಹ ಖಾನ್‌ಗೆ ಸರಿಸಾಟಿಯಾಗಿ  ಅಭಿನಯಿಸಿರುವಳು. ಚಿತ್ರ ನೋಡಿ ಒಂದು ವಾರ ಕಳೆದಿದ್ದರೂ ಇನ್ನೂ ದೀಪಿಕಾಳೇ ಕಾಣಿಸುತ್ತಿರುವಳು-"ತಂಗಬಲೀ....ಇತ್ತ ವರಾದೆ.." :)
ಕೊನೆಯಲ್ಲಿ ಆಲ್ ದಿ ರಜನಿ ಫ್ಯಾನ್ಸ್ "ಲುಂಗಿ ಡ್ಯಾನ್ಸ್" ನೋಡಲು ಮರೆಯದಿರಿ.

Rating
No votes yet

Comments

Submitted by nageshamysore Fri, 08/30/2013 - 01:16

ಈ ಫಿಲಂ ರಿಲೀಸ್ ಆದ ಮೇಲೆ ಇಂಗ್ಲೀಷ್ ನ್ಯೂಸ್ ಪೇಪರ್ ಒಂದರಲ್ಲಿ 'ಲುಂಗಿ' ಮತ್ತು 'ಲುಂಗಿ ಹಾಡಿನ' ಕುರಿತು ಒಂದು ಆರ್ಟಿಕಲ್ ಬಂದಿತ್ತು (ಟೈಮ್ಸ್ ಆಪ್ ಇಂಡಿಯಾಂತ ಕಾಣುತ್ತೆ - ಗೆಳೆಯರೊಬ್ಬರು ಫಾರ್ವರ್ಡ್ ಮಾಡಿದ್ದರು). ಅದನ್ನು ಓದಿದ ಪ್ರಭಾವಾನೊ ಏನೊ - ಮೊನ್ನೆ ನಾನೂ ಹೋಗಿ ಒಂದು ಸರಂಗ್ ಖರೀದಿಸಿದೆ ! (ಲುಂಗಿಯ ಇಂಡೋನೇಶೀಯ ನಾಮಧೇಯ - ಎರಡು ತುದಿಗಳನ್ನು ಸೇರಿಸಿ ಹೊಲೆದು, ಲುಂಗಿಯನ್ನೆ ಲಂಗದ ಹಾಗೆ ಮಾಡಿರುತ್ತಾರೆ. ಆಗ್ನೇಯೇಶೀಯಾದ ವರ್ತಕರಿಂದಲೆ ಇದೂ ಭಾರತಕ್ಕೆ ಬಂತು ಅನ್ನುತ್ತದೆ ಈ ಲೇಖನ)

Submitted by makara Fri, 08/30/2013 - 19:09

In reply to by nageshamysore

ನಾಗೇಶರೇ ಅದು ಬಹುಶಃ ಸುರಂಗ ಇರಬೇಕು. ಅದು ಅವರ ಬಾಯಲ್ಲಿ ಸರಂಗ್ ಆಗಿದೆಯೋ ಏನೋ? ನೀವಿಬ್ಬರೂ ಇಷ್ಟು ಹೇಳಿದ ಮೇಲೆ ಚೆನ್ನೈ ಎಕ್ಸ್‌ಪ್ರೆಸ್ ನೋಡಿಯೇ ತೀರುತ್ತೇನೆ. ಇಷ್ಟರಲ್ಲಾಗಲೇ ಬೆಂಗಳೂರು ಮೆಟ್ರೋ ರಿಲೀಸ್ ಆಗಿದೆ ಅಂತಾ ಸುದ್ದಿ. ಬಹುಶಃ ಸಪ್ತಗಿರಿಯವರು ಇದರ ಮೇಲೆ ಕಾಮೆಂಟ್ ಬರೆಯಬಹುದು. ಅಲ್ಲಿಯವರೆಗೂ ಗಣೇಶ್‌ಜಿ ದೀಪಿಕಾ ಧ್ಯಾನದಲ್ಲಿ ತಲ್ಲೀನರಾಗಬಹುದು. :)

Submitted by ಗಣೇಶ Fri, 08/30/2013 - 23:57

In reply to by nageshamysore

ನಾಗೇಶರೆ,..ಆಗ್ನೇಯೇಶೀಯಾದ ವರ್ತಕರಿಂದಲೆ ಇದೂ ಭಾರತಕ್ಕೆ ಬಂತು ಅನ್ನುತ್ತದೆ ಈ ಲೇಖನ:- ಇಲ್ಲಾ. ಅರ್ಧಗಂಟೆಯಿಂದ ಹಲವು ಪುಸ್ತಕ, ಗ್ರಂಥ, ಇತಿಹಾಸ ಸಂಶೋಧಕರ ಜತೆ ಮಾತುಕತೆ ಮಾಡಿದ ಬಳಿಕ, ಇದು "ತಮಿಳುನಾಡಿ"ನಿಂದಲೇ ವಿದೇಶಕ್ಕೆ ಹೋಯಿತು ಎಂಬ ತೀರ್ಮಾನಕ್ಕೆ ಬಂದಿದ್ದೇನೆ. "ಚೆನ್ನೈ" ಎಕ್ಸ್ಪ್ರೆಸ್ ಸಿನೆಮಾ ಸಹ ಈ ವಾದಕ್ಕೆ ಪೂರಕವಾಗಿದೆ.ಪಂಚೆಯ ಮೂಲ ಮಹಾಭಾರತದಲ್ಲಿದೆ! ಅರ್ಜುನ ದ್ರೌಪದಿಯನ್ನು ಗೆದ್ದು ಬರುವಾಗ ತನ್ನ ತಾಯಿಗೆಂದು ಸೀರೆಯನ್ನು ತಂದಿದ್ದ. ಮನೆಯೊಳಗಿದ್ದ ತಾಯಿಯನ್ನು ಕರೆದು ಹೇಳಿದಾಗ, ತಾಯಿ ಕುಂತಿ ಅದನ್ನು ಮಕ್ಕಳೇ ಹಂಚಿಕೊಳ್ಳಲು ಹೇಳುವಳು. ತಾಯಿಯ ಮಾತಿನಂತೆ ಆ ಸೀರೆಯನ್ನು ಹರಿದು ಐದು ಭಾಗ ಮಾಡಿ, ಐದೂ ಮಂದಿ ಪಾಂಡವರು ಉಟ್ಟುಕೊಂಡರು. ಪಂಚ ಪಾಂಡವರು ಉಟ್ಟುಕೊಂಡ "ಪಂಚೆ"ಯೇ ಲುಂಗಿಯ ಮೊದಲ ಎಂಟ್ರಿ. ಶ್ರೀಧರ್‌ಜಿ, ಸಿನೆಮಾ ನೋಡಿ..ನಿಮಗೂ ದೀಪೀಕಾ ಕಾಟ ಪ್ರಾರಂಭವಾಗುವುದು. :)
ನಾಗೇಶ್, ಶ್ರೀಧರ್‌ಜಿ, ಸಪ್ತಗಿರಿವಾಸಿಯವರಿಗೆ ಧನ್ಯವಾದಗಳು.

Submitted by nageshamysore Sat, 08/31/2013 - 02:49

In reply to by ಗಣೇಶ

ಗಣೇಶ್ ಜಿ, ನಿಮ್ಮ ರಿಸರ್ಚ್ ಕುತೂಹಲಕಾರಿಯಾಗಿದೆ. ಕೆಳಗಿನ ಲೇಖನ ಬರೆದವರನ್ನು ಅವರ ಸುದ್ದಿ ಮೂಲ ತಪ್ಪು ಎಂದು ದಬಾಯಿಸಬಹುದು!

http://economictimes...

The lungi is believed to have been introduced to present-day Andhra Pradesh and Tamil Nadu between the 6th and 10th century AD, during the rule of the Chola dynasty, by traders and sailors who brought it with them from Southeast Asia, according to Sumantra Bakshi, assistant professor at the National Institute of Fashion Technology, Kolkata.

"There is no history of a tubular garment with colours and prints in India before that," says Bakshi. The lungi travelled along the east coast of India and made its way to Odisha and Bengal. That is one reason why the lungi is still more popular in coastal towns than inland. Fisherfolk, including women, wear it not just at home but also to work. Most places where the lungi is popular have intense heat and humidity, which call for loose-fitting apparels.

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Submitted by Shreekar Mon, 09/02/2013 - 12:35

In reply to by nageshamysore

ಕೇರಳದಲ್ಲಿ ಲುಂಗಿಯ ಮಹಾತ್ಮೆ

ಸರ್ವಾಂತರ್ಯಾಮಿ ಮಲಯಾಳಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಹೆಸರಾಗಿದ್ದಾರೆ.

ಆದರೆ ಅವರು ಕೆಲಸ ಮಾಡದೇ ಇರುವ ಒಂದೇ ಒಂದು ಪ್ರದೇಶವೆಂದರೆ ಕೇರಳ !

ಯಾಕೆ ಹೀಗೆ ಎಂದರೆ ಕೇರಳದಲ್ಲಿ ಅವರು ಸದಾ ಲುಂಗಿ ಧರಿಸಿಯೇ ಓಡಾಡುವುದು ಮತ್ತು ಅವರ ಸಮಯವೆಲ್ಲ ತಮ್ಮ ಲುಂಗಿಯನ್ನು ಸುತ್ತಿ, ಎತ್ತಿ ಕಟ್ಟುವುದರಲ್ಲಿಯೇ ವ್ಯಯವಾಗುತ್ತದೆ. :-))))

Submitted by ಗಣೇಶ Tue, 09/17/2013 - 00:21

In reply to by Shreekar

:)))) ವ್ಹಾ..ಶ್ರೀಕರ್‌ಜಿ, ಈ ಪ್ಯಾಂಟ್,ಬರ್ಮುಡಾಗಳೆಲ್ಲಾ ಪಂಚೆ ಮುಂದೆ ಏನೂ ಇಲ್ಲ. ಪಂಚೆ ಯಾರ ಸೈಜಿಗೂ ಫಿಟ್ ಆಗುವುದು:) ಬೇಸಿಗೆಗೆ ಹೇಳಿ ಮಾಡಿದ ಡ್ರೆಸ್. ಮಳೆಗಾಲದಲ್ಲೂ ಮೊಳಕಾಲು ಮಟ್ಟ ನೀರಿದ್ದರೂ ಪಂಚೆ ಎತ್ತಿ ಕಟ್ಟಿ, ಹೊರಟೇಬಿಡಬಹುದು. ಸಮಯಕ್ಕೆ ಚಾಪೆ ಸಿಗದಿದ್ದರೆ ನೆಲಕ್ಕೆ ಹಾಸಿ ಮಲಗಬಹುದು, ಹೊದಿಕೆಯಂತೆ ಹೊದ್ದುಕೊಳ್ಳಬಹುದು, ಮಡಚಿಟ್ಟು ದಿಂಬಿನ ಬದಲೂ ಉಪಯೋಗಿಸಬಹುದು. ಬಿಳಿಪಂಚೆ,ಬಿಳಿ ಶರ್ಟ್ ನನ್ನ ಫೇವರೈಟ್ ಡ್ರೆಸ್. ಬೇಕಿದ್ದರೆ ಪಂಚೆ ಎತ್ತಿಕಟ್ಟಿ ಜಗಳಕ್ಕೂ ನಿಲ್ಲಬಹುದು,ಗೌರವಾನ್ವಿತರು ಬಂದಾಗ ಕೆಳಬಿಟ್ಟು(ಎತ್ತಿ ಕಟ್ಟಿದ್ದನ್ನು ಕೆಳಬಿಟ್ಟು ) ಅವರಿಗೆ ಗೌರವವನ್ನೂ ತೋರಿಸಬಹುದು. ಇದು ಬೇರಾವ ಡ್ರೆಸ್‌ನಲ್ಲಿ ಸಾಧ್ಯ?
ನಾಗೇಶ್‌ ಅವರೆ, ಪಂಚೆಯ ಬಗ್ಗೆ ಸರಿಯಾದ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು.

Submitted by makara Tue, 09/17/2013 - 06:14

In reply to by makara

ಗಣೇಶ್‌ಜಿ , ಮೇಲಿನ ಕೊಂಡಿ ತೆರೆದುಕೊಳ್ಳದಿದ್ದರೆ ಬೇಸರಿಸಬೇಡಿ. ಅದಕ್ಕಾಗಿ ನಮ್ಮ ಜಮಾನದಲ್ಲಿ ಪ್ರಚಲಿತವಿದ್ದ ಲುಂಗಿ ಮಹಾತ್ಮ್ಯೆಯ ಈ ಕವನವನ್ನು ಕೊಡುತ್ತಿದ್ದೇನೆ.

ಉಟ್ಟರೆ ಲುಂಗಿಯಾದೆ,
ಕಟ್ಟಿದರೆ ಪಂಚೆಯಾದೆ,
ಹಾಸಿಕೊಂಡರೆ ಹಾಸಿಗೆಯಾದೆ,
ಹೊದ್ದುಕೊಂಡರೆ ಹೊದಿಕೆಯಾದೆ,
ತಲೆಗೆ ಸುತ್ತಿದರೆ ಮುಂಡಾಸಾದೆ,
ವರೆಸಿಕೊಂಡರೆ ಟುವಾಲಾದೆ,
ನೀನಾರಿಗಾದೆಯೋ ಎಲೆ ಮೂಲಂಗಿ ಪ್ಯಾಂಟೇ?

ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ಗಣೇಶ Tue, 09/24/2013 - 00:21

In reply to by makara

ಶ್ರೀಧರ್‌ಜಿ, ಕವನ ಚೆನ್ನಾಗಿದೆ. ಅಳಿವಿನಂಚಿನಲ್ಲಿರುವ "ಪಂಚೆ-ಲುಂಗಿ"ಗಳು, ಚೆನ್ನೈ ಎಕ್ಸ್‌ಪ್ರೆಸ್‌ನಿಂದಾಗಿ ಉತ್ತರಕ್ಕೂ ಧಾಳಿಯಿಟ್ಟಿವೆ. :)

Submitted by nageshamysore Tue, 09/17/2013 - 06:49

In reply to by ಗಣೇಶ

ಗಣೇಶ್ ಜಿ, ಆ ಲೇಖನ ಹೇಳುವುದು 'ಪ್ರಿಂಟ್ ಆದ ಲುಂಗಿ' ಕುರಿತು. ಅದರಪ್ಪ - ಶುದ್ಧ ಬಿಳಿ ( ರೇಷ್ಮೆ) "ಪಂಚೆಯ" ಮೂಲ ನಮ್ಮದೆ ಬಿಡಿ - ಎಲ್ಲಾ ಆಯಾತ ನಿರ್ಯಾತಗಳ ಕಲಸು ಮೇಲೋಗರ ಅಷ್ಟೆ :-)