ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ!

ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ!

ಅದೇಕೋ ಏನೊ, ನಾನು ಸಿನಿಮಾ ಹಾಡುಗಳನ್ನು ಕೇಳುವಾಗ ಕೆಲವೇ ಕೆಲವು ಹಾಡುಗಳು ಮಾತ್ರ ನನಗೆ ಬಹಳ ಇಷ್ಟವಾಗುತ್ತಿದ್ದವು. ನಾನು ೩ ವರುಷದವನಾಗಿನಿಂದ ಸುಮಾರು ೨೦ ವರುಷಗಳ ಕಾಲ ಸಿನಿಮಾ / ಶಾಸ್ತ್ರೀಯ ಸಂಗೀತ (ಕರ್ಣಾಟಕ ಮತ್ತು ಹಿಂದೂಸ್ತಾನಿ ಎರಡೂ ಶೈಲಿಗಳು) ಕೇಳುತ್ತಿದ್ದೆ (ಅಥವಾ ಕಿವಿಯ ಮೇಲೆ ಬೀಳುತ್ತಿತ್ತೆಂದರೆ ಸರಿಯೇನೋ). ಆದರೆ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಪಿ.ಯು.ಸಿ / ಕಾಲೇಜು ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿದ್ದದ್ದು - ರೇಡಿಯೋದಲ್ಲಿ ರಾತ್ರಿ ಹತ್ತೂವರೆಯಿಂದ ಹನ್ನೊಂದರವರೆಗೆ ಆಲ್ ಇಂಡಿಯ ರೇಡಿಯೊ ಉರ್ದು ಸರ್ವಿಸ್ ಕೇಂದ್ರದಲ್ಲಿ ಪ್ರಸಾರವಾಗುತ್ತಿದ್ದ ಹಳೆಯ ಅಂದರೆ ೫೦-೬೦ರದಶಕದ ಹಿಂದಿ ಚಿತ್ರಗೀತೆಗಳು, ಹನ್ನೊಂದರಿಂದ ಹನ್ನೊಂದೂವರೆವರೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನಂತರ ಹನ್ನೊಂದೂವರೆಯಿಂದ ಒಂದೂವರೆವರೆಗೆ ಆಕಾಶವಾಣಿ ರಾಷ್ಟ್ರೀಯ ಪ್ರಸಾರಣ್ ಸೇವಾ ಕೇಂದ್ರದಿಂದ ಮತ್ತೆ ಹಳೆಯ ಹಿಂದಿ ಚಿತ್ರಗೀತೆಗಳು ಹೀಗೆ. ಪರೀಕ್ಷೆಗೆ ಓದುತ್ತಿದ್ದಾಗಲೂ ಹಿನ್ನೆಲೆಯಲ್ಲಿ ರಾತ್ರಿಯೆಲ್ಲಾ ಟ್ರಾನ್ಸಿಸ್ಟರ್ ಹಾಡುತ್ತಲೇ ಇರುತ್ತಿತ್ತು. ಎಷ್ಟೋ ಬಾರಿ ಅದನ್ನು ಆರಿಸಲು ಮರೆತು ಬೆಳಿಗ್ಗೆ ಎದ್ದಾಗ ಆರಿಸಿದ್ದೂ ಉಂಟು!

ಹೀಗೊಮ್ಮೆ ಅಂದರೆ ಸುಮಾರು ೨೫ ವರುಷಗಳಹಿಂದೆ ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಂದು ಆಲೋಚನೆ ಬಂತು - ಏಕೆ ನನಗಿಷ್ಟವಾದ ಹಾಡುಗಳ ಪಟ್ಟಿ ಮಾಡಬಾರದು? ಆಮೇಲೆ ಅವುಗಳನ್ನು ಯಾವುದಾದರೂ ಕ್ಯಾಸೆಟ್ ಅಂಗಡಿಗಳಲ್ಲಿ ಕೊಟ್ಟು ರೆಕಾರ್ಡ್ ಮಾಡಿಸಿಕೊಂಡರೆ, ನನಗಿಷ್ಟವಾದದ್ದನ್ನು ನನಗೆ ಬೇಕೆನಿಸಿದಾಗ ಕೇಳಬಹುದಲ್ಲ? -ಎಂದು (ಆ ಕಾಲದಲ್ಲಿ ಅದೊಂದೇ ಬಗೆಯಾಗಿತ್ತು; ಇನ್ನೂ ಕಂಪ್ಯೂಟರ್ ಯುಗ ಹೆಚ್ಚು ರೂಢಿಯಲ್ಲಿ ಬಂದಿರಲಿಲ್ಲ). ಸರಿ - ದೆಹಲಿ ಬರುವುದರೊಳಗೆ ಪಟ್ಟಿ ಸಿದ್ಧವಾಗಿತ್ತು. ಅದನ್ನು ಅವಲೋಕಿಸಿದರೆ ಸುಮಾರು ಹಾಡುಗಳ ರಾಗ ಒಂದೇ ರೀತಿಯದ್ದೇನೋ ಅನಿಸುತ್ತಿತ್ತು. ಆಮೇಲೆ ವೃತ್ತಿ ಜೀವನದ ದೊಂಬರಾಟದ ಸಮಯದಲ್ಲಿ ಆ ಪಟ್ಟಿಯಲಿರುವ ಹಾಡುಗಳನ್ನು ರೆಕಾರ್ಡ್ ಮಾಡಿಸುವ ಸಂದರ್ಭ ಒದಗಿ ಬರಲೇ ಇಲ್ಲ. ಆದರೆ ಆ ಪಟ್ಟಿ ಬೆಳೆಯುತ್ತಲೇ ಹೋಗುತ್ತಿತ್ತು.

೧೫ ವರುಷದ ಹಿಂದೆ, ಒಮ್ಮೆ ಹೈದರಾಬಾದಿಗೆ ತರಬೇತಿಗೆಂದು ಹೋಗಿದ್ದಾಗ ಬಸ್ಸಿನಲ್ಲಿ ಹಿರಿಯರೊಬ್ಬರ ಪರಿಚಯವಾಯಿತು. ನಾನು ಹಳೆಯ ಚಿತ್ರಗಳ ಹಾಡುಗಳನ್ನೆ ಗುನುಗುನಿಸುತ್ತಿದ್ದನ್ನು ಗಮನಿಸಿದ ಆ ಹಿರಿಯರು ನಿಮಗೆ ಹಳೆಯ ಸಿನಿಮಾ ಹಾಡುಗಳೆಂದರೆ ಬಹಳ ಇಷ್ಟವೇ ಎಂದು ಮಾತಿಗೆಳೆದರು. ಹೀಗೇ ಮಾತಿನಲ್ಲಿ ಅವರೆಂದದ್ದು - ೫೦-೬೦ರ ದಶಕದ ಹಾಡುಗಳು ೯೦ರ ದಶಕದಲ್ಲೂ ಜನಮಾನಸದಲ್ಲಿ ಉಳಿಯುವುದಕ್ಕೆ ಕಾರಣ - ಆಗಿನ ಕಾಲದ ಸಂಗೀತ ನಿರ್ದೇಶಕರು ರಾಗ ಸಂಯೋಜನೆಯಲ್ಲಿ ಹೆಚ್ಚಾಗಿ ಶಾಸ್ತ್ರೀಯ ರಾಗಗಳನ್ನು ಅವುಗಳ ಶುದ್ಧ ರೂಪದಲ್ಲಿ ಬಳಸುತ್ತಿದ್ದದ್ದು ಮತ್ತು ಗಾಯಕ / ಗಾಯಕಿಯರು ಹಾಡುವಾಗ ಹಿನ್ನೆಲೆ ವಾದ್ಯಗಳ ಆರ್ಭಟ ಇಲ್ಲದೇಇದ್ದದ್ದು.

ಇದು ನನ್ನಲ್ಲಿ ಬೆಳೆಯುತ್ತಲೇ ಇದ್ದ ಪಟ್ಟಿಯಲ್ಲಿ ಆ ಹಾಡುಗಳ ರಾಗಯಾವುದಿರಬಹುದೆಂದು ಹುಡುಕಲು ಹಚ್ಚಿತು. ಆ ಸಮಯಕ್ಕಾಗಲೇ ನಗರಗಳಲ್ಲಿ ಇಂಟರ್ ನೆಟ್ ಸಾಕಷ್ಟು ವ್ಯಾಪಿಸಿದ್ದರಿಂದ ಅದು ಹೆಚ್ಚು ಸಮಯ ಹಿಡಿಯಲಿಲ್ಲ. ಈ ಹುಡುಕಾಟದಿಂದ ನಾನು ಕಂಡುಕೊಂಡ ಅಚ್ಚರಿಯ ಅಂಶವೆಂದರೆ ನನ್ನ ಪಟ್ಟಿಯಲ್ಲಿದ್ದ ಹಾಡುಗಳಲ್ಲಿ ಸುಮಾರು ಮುಕ್ಕಾಲುವಾಸಿಯವು ಹಿಂದೋಳ ಅಥವಾ ಮಾಲಕೌಂಸ್ ರಾಗ ಆಧಾರಿತವಾಗಿದ್ದವು! ಉದಾಹರಣೆಗೆ -

ಕನ್ನಡದಲ್ಲಿ - ನಾಂದಿ ಚಿತ್ರದ ’ಚಂದ್ರಮುಖೀ ಪ್ರಾಣಸಖೀ ಚತುರೆಯೆ ನೀ ಹೇಳೇ...’; ಸ್ಕೂಲ್ ಮಾಸ್ಟರ್ ಚಿತ್ರದ ’ಭಾಮೆಯ ನೋಡಲು ತಾ ಬಂದ...’

ತಮಿಳಿನಲ್ಲಿ - ಬಾಗ್ಯಲಕ್ಷ್ಮಿ ಚಿತ್ರದ ’ಮಾಲೈ ಪೊಳುದಿನ್ ಮಯಕತ್ತಿಲೇ ನಾನ್...’;ವೈದೇಹಿ ಕಾತ್ತಿರುಂದಾಳ್ ಚಿತ್ರದ ’ಅಳಗು ಮಲರಾಡ ...(ಅದರ ಕನ್ನಡದ ರೀಮೇಕ್ ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಚಿತ್ರದ ’ಮುರಿದಿರುವ ಕೊಳಲು ನುಡಿಸುವರಾರು..."), ಮೋಟಾರ್ ಸುಂದರಂ ಚಿತ್ರದ - ಮನಮೇ ಮುರುಗನಿನ್ ಮಯಿಲ್ ವಾಹನಮ್

ತೆಲುಗಿನಲ್ಲಿ - ಲವಕುಶ ಚಿತ್ರದ ’ರಾಮಕಥನು ವಿನುರಯ್ಯಾ..’ ಅನಾರ್ಕಲಿ ಚಿತ್ರದ ’ರಾಜಶೇಖರಾ ನೀಪೈ....’ ಸುವರ್ಣ ಸುಂದರಿ ಚಿತ್ರದ ’ಪಿಲ್ವಕುರಾ ಅಲುಗಕುರಾ..’

ಹಿಂದಿಯಲ್ಲಿ - ನವರಂಗ್ ಚಿತ್ರದ ’ಆಧಾ ಹೈ ಚಂದ್ರಮಾ ರಾತ್ ಆಧೀ..(ಈ ಒಂದು ಹಾಡನ್ನು ನೋಡುವುದಕ್ಕಾಗಿ ಪಿಯುಸಿಯಲ್ಲಿದ್ದಾಗ ಕ್ಲಾಸಿನ ೨ ಪಿರಿಯಡ್ ಚಕ್ಕರ್ ಹಾಕಿ ಮಾರ್ನಿಂಗ್ ಷೋನಲ್ಲಿ ನವರಂಗ್ ಚಿತ್ರ ನೋಡಿದ್ದೆ!) ಮತ್ತು  ’ತೂ ಛುಪೀ ಹೈ ಕಹಾ...’ ಬೈಜೂ ಬಾವ್ರಾ ಚಿತ್ರದ ’ ಮನ್ ತಡಪತ್ ಹರಿದರ್ಶನ್ ಕೊ ಆಜ್...’ ಸುರ್ ಸಂಗಮ್ (ತೆಲುಗಿನ ಶಂಕರಾಭರಣಮ್ ಚಿತ್ರದ ರೀಮೇಕ್) ಚಿತ್ರದ ’ಆಜ್ ಸುರ್ ಕೆ ಪಂಛೀ ಗಾಯೆ..’, ದೇವ್ ಕನ್ಯಾ ಚಿತ್ರದ ’ಪಗ್ ಘುಂಗರೂ ಬೋಲೆ ಛನನನಛನ್...’ ಮೆಹರ್ಬಾನ್ ಚಿತ್ರದ ’..ಸಾವನ್ ಕಿ ರಾತ್ ಕಾರಿ ಕಾರಿ..’

ಆದರೆ ನನ್ನ ಪಟ್ಟಿಯಲ್ಲಿ ಇನ್ನೂ ಕಾಲುವಾಸಿ ಹಾಡುಗಳು ಹಿಂದೋಳ / ಮಾಲಕೌಂಸ್ ಅಲ್ಲದಿದ್ದರೂ ಇಷ್ಟವಾಗುತ್ತಿದ್ದವು. ಅವುಗಳ ರಾಗ ಯಾವುದೆಂದು ಹುಡುಕಿದಾಗ ಕಂಡದ್ದು ಅವು

ಮೋಹನ / ಭೂಪ್ - ಅವಳಿ ಜವಳಿ ಚಿತ್ರದ ’ಸರಸದ ಈ ಪ್ರತಿ ನಿಮಿಷಾ..’ ಆಟೋರಾಜ ಚಿತ್ರದ ’... ನನ್ನ ಆಸೆ ಹಣ್ಣಾಗೀ ನನ್ನ ಬಾಳ ಕಣ್ಣಾಗೀ..’ , ಹಿಂದಿಯ ಭಾಭಿ ಕಿ ಚೂಡಿಯಾನ್ ಚಿತ್ರದ ’ಜ್ಯೋತ್ ಕಲಶ್ ಛಲಕೇ..’ ರುಡಾಲಿ ಚಿತ್ರದ ಭೂಪೇನ್ ಹಜ಼ಾರಿಕರ ..ದಿಲ್ ಭೂಮ್ ಭೂಮ್ ಕರೇ...’ ಇತ್ಯಾದಿ

ಆಭೇರಿ / ಭೀಮ್ ಪಲಾಸ್ - ಗೆಜ್ಜೆ ಪೂಜೆ ಚಿತ್ರದ ’ಪಂಚಮ ವೇದ ಪ್ರೇಮದ ನಾದ..’ ಬಭ್ರುವಾಹನ ಚಿತ್ರದ ’ಈ ಸಮಯ ಆನಂದಮಯಾ.., ಹಿಂದಿಯ ಫಕೀರಾ ಚಿತ್ರದ ’ದಿಲ್ ಮೆ ತುಝ್ಹೇ ಬಿಠಾ ಕೆ’ ಶರ್ಮೀಲಿ ಚಿತ್ರದ ’ಖಿಲ್ ತೆ ಹೈ ಗುಲ್ ಯಹಾನ್..ಇತ್ಯಾದಿ.

ಇವು ಹಿಂದೋಳ / ಮಾಲಕೌಂಸ್ ನನಗೆ ಇಷ್ಟವಾಗಲು ಕಾರಣವೇನಿರಬಹುದೆಂಬ ಪ್ರಶ್ನೆಯ ಉತ್ತರದ ಹುಡುಕಾಟದಲ್ಲಿದ್ದಾಗ ಸಂಪದದಲ್ಲಿ ಹಿರಿಯ ಸಂಪದಿಗ ಹಂಸಾನಂದಿಯವರು ಸೊಗಸಾಗಿ ವಿಶ್ಲೇಷಿಸಿ ಬರೆದ ಕಣಾಟಕ ಸಂಗೀತದ ರಸಾನುಭವ http://sampada.net/blog/hamsanandi/05/03/2007/3347  ;  ಮೋಹನ, ಹಿಂದೋಳ ರಾಗಗಳ ಮತ್ತು ರಾಗಗಳ ಗ್ರಹ ಭೇದದಿಂದ ವ್ಯುತ್ಪನ್ನವಾಗುವ ಜನ್ಯರಾಗಗಳ ಮೇಲಿನ ಲೇಖನಗಳನ್ನು ಓದಿದೆ. ಅದರಲ್ಲಿ ಮತ್ತು ವೈಕಿ ಪೀಡಿಯ ಲೇಖನಗಳಲ್ಲಿ ಹಿಂದೋಳ - ಮೊಹನ ರಾಗಗಳು ಒಂದೇ ಜಾತಿಯವಾಗಿದ್ದು - ಔಡವ-ಔಡವ(pentatonic symmetrical - ಆರೋಹಣ-ಅವರೋಹಣಗಳೆರಡರಲ್ಲೂ ೫ ಸ್ವರಗಳು ಮಾತ್ರ), ಕೇವಲ ಒಂದು ಸ್ವರವನ್ನು  ವ್ಯತ್ಯಾಸ ಮಾಡುವುದರಿಂದ ಹಿಂದೋಳದಿಂದ ಮೋಹನ, ಶುದ್ಧ ಧನ್ಯಾಸಿ, ಶುಧ್ಧ ಸಾವೇರಿ ಮತ್ತು ಮಧ್ಯಮಾವತಿ ರಾಗಗಳನ್ನು ಹೇಗೆ ಪಡೆಯಬಹುದೆಂಬ ವಿವರ ಸಿಕ್ಕಿತು.

ಇನ್ನು ಆಭೇರಿ / ಭೀಮ್ ಪಲಾಸ್ ಏಕೆ ಇಷ್ಟವಾಯಿತೆಂಬ ಪ್ರಶ್ನೆಯ ಉತ್ತರಹುಡುಕುವುದಕ್ಕಾಗಿ ಆ ರಾಗದ ಸ್ವರಗಳನ್ನು ಗಮನಿಸಿದೆ - ಇನ್ನೊಂದು ಆಶ್ಚರ್ಯ - ಆಭೇರಿ / ಭೀಮ್ ಪಲಾಸ್ ರಾಗಗಳ ಆರೋಹಣ ಸ್ವರಗಳು ಶುಧ್ಧ ಧನ್ಯಾಸಿಯದೇ ಆಗಿದ್ದು, ಅವರೋಹಣದ ಸ್ವರಗಳು ಮಾತ್ರ ಖರಹರಪ್ರಿಯ ರಾಗದ್ದವು. ಅಂದರೆ ಇದೊಂದು ಔಡವ-ಸಪ್ತಕ ರಾಗ. ಆಭೇರಿ / ಭೀಮ್ ಪಲಾಸ್ ಗಳ ಆರೋಹಣ /ಶುಧ್ಧ ಧನ್ಯಾಸಿ (ಹಿಂದೂಸ್ತಾನಿಯ ರಾಗ ’ಧನಿ’)ಯ ಸ್ವರಗಳಿಗೂ, ಹಿಂದೋಳ/ಮಾಲಕೌಂಸ್ ಸ್ವರಗಳಿಗೂ ಒಂದು ಸ್ವರದಲ್ಲಿ ಮಾತ್ರ ವ್ಯತ್ಯಾಸ - ಅದರಿಂದಲೇ, ಆ ರಾಗ ಹಾಡುಗಳನ್ನು ಕೇಳುವಾಗ ಅವುಗಳಲ್ಲಿ ಹಿಂದೋಳ/ಮಾಲಕೌಂಸ್ ಗಳ ಸಾಮ್ಯತೆಇದೆಯೇನೋ ಅನ್ನಿಸುತ್ತಿತ್ತು. ಇದನ್ನೇ ಹಂಸಾನಂದಿಯವರು ’ಪ್ಯಾಟ್ರನ್ ಮ್ಯಾಚಿಂಗ್’ ಎಂದು ಅವರ ಲೇಖನದಲ್ಲಿ ವಿವರಿಸಿದ್ದಾರೆ.

ಈ ನನ್ನ ರಾಗ/ಸ್ವರಾನ್ವೇಷಣೆಯಿಂದ ನಾನು ಕಂಡುಕೊಂಡ ಅಂಶವೆಂದರೆ ನಾನು ಕೇಳುವ ಸಂಗೀತದಲ್ಲಿ ಈ ಔಡವ ರಾಗಗಳಿದ್ದರೆ ಅವು ನನಗೆ ಥಟ್ಟನೆ ಇಷ್ಟವಾಗುತ್ತವೆ ಎಂದು (ಮೊದಲ ನೋಟದಲ್ಲೇ ಪ್ರೇಮವುಂಟಾಗುವಂತೆ!!!). ಇದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಯ ಹುಳ ಈಗ ನನ್ನನ್ನು ಕಾಡತೊಡಗಿತು! ಸರಿ, ನನಗೆ ಮೊಟ್ಟ ಮೊದಲು ಇಷ್ಟವಾದಂತಹ ಸಂಗೀತ (ಹಾಡು, ವಾದ್ಯ ಸಂಗೀತ) ಯಾವುದಾಗಿತ್ತೆಂದು ಹುಡುಕಲು ನನ್ನ ನೆನಪಿನಾಳಕ್ಕೆ ಧುಮುಕಿದೆ. ಅದು ಯಾವುದೆಂದರೆ - ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಮಧ್ಯಾಹ್ನ ಪ್ರಸಾರವಾಗುತ್ತಿದ್ದ (ಈಗಲೂ ಪ್ರಸಾರವಾಗುತ್ತಿರುವ) ’ವನಿತಾ ವಿಹಾರ’ ಕಾರ್ಯಕ್ರಮದ ಶೀರ್ಷಕ ವಾದ್ಯಸಂಗೀತ - ಸಿಗ್ನೇಚರ್ ಟ್ಯೂನ್ ! ಸರಿ, ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಾಣಾಧಿಕಾರಿಯಾಗಿರುವ ನನ್ನ ಮಿತ್ರನಿಗೆ ಮಿಂಚಂಚೆ ಕಳುಹಿಸಿದೆ - ಆ ವಾದ್ಯ ಸಂಗೀತದ ರಾಗ ಯಾವುದೆಂದು ತಿಳಿದುಕೊಳ್ಳಲು. ಇಂದು ಬೆಳಿಗ್ಗೆ ಉತ್ತರ ಬಂದಾಗ ನನಗೆ ಪರಮಾಶ್ಚರ್ಯ!!! - ಆ ವಾದ್ಯ ಸಂಗೀತವೂ ಹಿಂದೋಳ ರಾಗದ ಆಧಾರಿತವಾಗಿದೆ!!!

ಕಡೆಗೂ ನನ್ನ ಹಿಂದೋಳ / ಮಾಲಕೌಂಸ್ ಹುಚ್ಚಿಗೆ ಮೂಲ ಕಂಡುಕೊಂಡೆ! ಅದು ನಾನು ಬಹುಶಃ ೩ ವರುಷದವನಾಗಿದ್ದಾಗಿನಿಂದ ಕೇಳುತ್ತಿದ್ದ ಆ ವನಿತಾ ವಿಹಾರದ ಸಿಗ್ನೇಚರ್ ಟ್ಯೂನ್! ನನಗೆ ಸಂಗೀತ ಜ್ಞಾನವು ಸೊನ್ನೆಯಾಗಿದ್ದರೂ ನನ್ನ ಮಿದುಳು ಮೊಟ್ಟಮೊದಲು ಅಚ್ಚೊತ್ತಿಕೊಂಡ ರಾಗ ಈ ಹಿಂದೋಳ / ಮಾಲಕೌಂಸ್!

ಇಲ್ಲಿಗೆ ಮುಗಿಯಲ್ಲಿಲ್ಲ - ನನಗೇಕೆ ಈ ಪೆಂಟಾಟೋನಿಕ್ ರಾಗಗಳೇ ಹಿಡಿಸಬೇಕು - ಇದರಲ್ಲಿ ನನ್ನ ಮೆದುಳಿನ ಪಾತ್ರವೇನು - ಎಂಬ ಹೊಸ ಹುಳ ಹೊಕ್ಕಿಸಿಕೊಂಡೆ!

ಅದನ್ನು ಮುಂದಿನ ಭಾಗದಲ್ಲಿ ಬರೆಯುತ್ತೇನೆ -”ಸಂಗೀತ ಮತ್ತು ಮೆದುಳು-ನರ ವಿಜ್ಞಾನ ಇತ್ಯಾದಿ’

- ಕೇಶವ ಮೈಸೂರು

Comments

ನೋಡಿದರೆ ನೀವು ಕಡೇಯದಾಗಿ ಬರೆದ ಬರಹ ಪುಳಿಯೋಗರೆ ಬಗ್ಗೆ, ಆದ ಸಂಪದದಲ್ಲಿ ಕೆಲವು ದಿನ ಅದೊಂದು ಸಂವಾದ ಏರ್ಪಟ್ಟು, ವಾದಗಳು ಎಲ್ಲೆಲ್ಲಿಗೋ ಹೋಗಿದ್ದವು. ದೀರ್ಘ ವಿರಾಮದ ನಂತರದ ಬರಹ !

ಕುತೂಹಲಕಾರೀ ವೈಜ್ಞಾನಿಕ ವಿಶ್ಲೇಷಣೆ ! ಒಂದು ಸಣ್ಣ ಸಂದೇಹ, ಡಾಕ್ಟ್ರೆ - ಹಿಂದೋಳ/ಮಾಲ್ ಕೌಂಸ್ ಜೊತೆಗೆ ಇತರ ರಾಗಗಳು ನಿಮಗೆ ಅಷ್ಟು ಇಷ್ಟವಾಗವೇ? ನಿಮ್ಮ ಬರಹ ನನ್ನನ್ನೂ ವಿಚಾರಕ್ಕೆ ಹಚ್ಚಿತು. ನಾನು ಹೆಚ್ಚಾಗಿ ಕೇಳುವುದು ಹಿಂದೂಸ್ತಾನಿ ಮತ್ತು ಸ್ವಲ್ಪಮಟ್ಟಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ. ದರಬಾರೀ ಕಾನಡಾ, ಕಲಾವತಿ ರಾಗೇಶ್ವರಿ, ಶಂಕರಾ, ಪೂರಿಯಾ, ಮಾರವಾ, ಯಮನ್, ಜಿಂಜೋಟಿ, ಮಧುಕೌಂಸ್, ಚಂದ್ರಕೌಂಸ್, ಶ್ರೀ, ತೋಡಿ, ಮಲ್ಹಾರ ಪ್ರಕಾರಗಳು, ಗಾವಟಿ, ಆಭೇರಿ, ಹಂಸಧ್ವನಿ, ಸರಸ್ವತಿ, ಕೌಶೀ ಕಾನಡಾ, ಇತ್ಯಾದಿಯಾಗಿ ಅನೇಕ ರಾಗಗಳು ನನಗೆ ಹಿಡಿಸುತ್ತವೆ. ಆದರೆ ರಾಗಕ್ಕಿಂತಲೂ ಹೆಚ್ಚು ಮುಖ್ಯವೆನಿಸುವುದು ಯಾರು ಹಾಡುತ್ತಿದ್ದಾರೆ ಯಾ ಬಾರಿಸುತ್ತಿದ್ದಾರೆ ಎನ್ನುವುದು ಮತ್ತು ನಾನು ಕೇಳುತ್ತಿರುವ ಸಮಯ ಮತ್ತು ಆ ಸಮಯದಲ್ಲಿ ನನ್ನ ಸುತ್ತಲಿನ ವಾತಾವರಣ. ಉದಾಹರಣೆಗೆ ಸುಬ್ಬುಲಕ್ಷ್ಮಿಯವರ ನಗುಮೋಮುವಿಗಿಂತ ವಿದ್ಯಾಭೂಷಣರು ಹಾಡಿದ್ದು ಹೆಚ್ಚು ಇಷ್ಟ.

ಶ್ರೀಕರ್ ಅವರೆ, ನಿಮಗೆ "ದರಬಾರೀ ಕಾನಡಾ" ಇಷ್ಟ. ನನಗೂ ಈಗಿನ ದಡಬಾಡ ಕಾನಡಾ ಸಿನಿಮಾ ಹಾಡುಗಳು ಅದೂ ಹಿಂದಿ ಗಾಯಕರು ಕೂಗಾಡಿದ್ದು ಬಹಳ ಇಷ್ಟ :) ಕೇಶವರೆ, ನಿಮ್ಮ ರಾಗದ ವಿಶ್ಲೇಷಣೆ ಚೆನ್ನಾಗಿದೆ. ಮುಂದಿನ ಭಾಗದ ನಿರೀಕ್ಷೆಯಲ್ಲಿರುವೆ.

@ ಗಣೇಶಣ್ಣ, "ನನಗೂ ಈಗಿನ ದಡಬಾಡ ಕಾನಡಾ ಸಿನಿಮಾ ಹಾಡುಗಳು ಅದೂ ಹಿಂದಿ ಗಾಯಕರು ಕೂಗಾಡಿದ್ದು ಬಹಳ ಇಷ್ಟ :) " ಸಂಗೀತದ್ವೇಷಿ ಔರಂಗಜೇಬನ ಪ್ರಭಾವ ನಿಮ್ಮ ಮೇಲಿಲ್ಲದಿರುವುದು ಒಳ್ಳೆಯ ಸಂಗತಿ. :-))) ಅಂದಹಾಗೆ, "ದಡಬಾಡ" ಪದವನ್ನು ತುಳುಭಾಷಿಗರು ಬಳಸಿದ್ದು ನಾನು ಕೇಳಿಲ್ಲ. ಇದು ಕೊಂಕಣಿ ಪದವಿರಬಹುದೇ ?

ಕನ್ನಡ/ಆಂಗ್ಲ ಪದ: ಸಮಗ್ರ ಹುಡುಕಾಟ ನಿಘಂಟುಗಳು: ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಕೋಶ ದಡಬಡ ಅನ್ನು ಹೊಂದಿರುವ ಪದಗಳು ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ದಡಬಡ ನಾಮಪದ (ದೇ) ಆತುರ, ವೇಗ, ಗಡಿಬಿಡಿ ಪೊಯ್ ಕ್ರಿಯಾಪದ (ದೇ) ೧ ಹೊಡೆ, ಬಡಿ ೨ ಕಡಿ, ಕತ್ತರಿಸು ೩ ತಾಕು, ತಗಲು ೪ ಮಿಡಿ, ಮೀಟು ೫ ತಬಲ, ಮೃದಂಗ ಮೊ. ವಾದ್ಯಗಳನ್ನು ಬಾಜಿಸು ೬ ದಡಬಡಿಸು, ಬಡಿದುಕೊಳ್ಳು ೭ ಪೆಟ್ಟನ್ನು ಹೊಂದು ೮ (ಭೂತ ಪಿಶಾಚಿಗಳಂತೆ) ಮೆಟ್ಟಿಕೊಳ್ಳು, ಆವರಿಸು ೯ ಕೊರೆ, ಕಂಡರಿಸು ೧೦ ನಾಶಮಾಡು ೧೧ ಗುಣಿಸು ೧೨ ಸುರಿ, ಎರೆ ೧೩ ವರ್ಷಿಸು, ಕರೆ ೧೪ ನೆಡು, ನಾಟು ೧೫ ಅಚ್ಚಿಗೆ ಹಾಕು, ಎರಕಕ್ಕೆ ಹಾಕು ೧೬ ಎರಚು, ಸೂಸು ೧೭ ಬೀಸು, ತೀಡು ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು rattle ಕ್ರಿಯಾಪದ 1) ದಡಬಡ, ಕಟಕಟ-ಶಬ್ದಮಾಡು 2) ದಡಬಡನೆ ಓಡಾಡು 3) (ಜಯಿಸುವ ಬಗ್ಗೆ) ಕಾತರಗೊಳ್ಳು, ವ್ಯಾಕುಲದಿಂದಿರು, ಸ್ತಂಭೀಭೂತನಾಗು, ಬೆಪ್ಪನಾಗಿರು, ಗಾಬರಿಗೊಳಿಸು, ದಿಗಿಲುಬೀಳಿಸು ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು hustle ಕ್ರಿಯಾಪದ ೧ ದೂಡು, ದಬ್ಬು, ಸೆಣಸು ೨ ದಡಬಡನೆ ಮಾಡು (ಕೆಲಸಗಳನ್ನೆಲ್ಲ ದಡಬಡನೆ ಮಾಡಿ ಮುಗಿಸಿದ) ನಿಮ್ಮದೇ ನಿಘಂಟು ಗರಿ - -ಗರಿ(ಒಂದು ಪ್ರತ್ಯಯ); ಮೇಲಿಂದಮೇಲೆ ಅದನ್ನೇ ಹೇಳುತ್ತಿರು/ಮಾಡುತ್ತಿರು; ಕಾರು ಅನ್ನೊ ಅರ್ಥ ಬರಲು ಬಳಸುವ ಹಿನ್ನೊಟ್ಟು (ಪರಪ್ರತ್ಯಯ); a suffix to make some phrases to verb; ಉದಾ1: ಬುಸುಗರಿ = ಬುಸುಗುಟ್ಟು; ಉದಾ2: ಲೊಟಗರಿ = ಲೊಟಲೊಟ ಅನ್ನು; ಗೊಣಗು; ಉದಾ3: ದಡಗರಿ = ದಡಬಡ ಒಡಾಡುತ್ತಿರು, ಸಂಭ್ರಮ ಪಡು; ಸಡಗರದಲ್ಲಿರು (ಅತಿ ಉತ್ಸಾಹ ಇರುವುದು);

ಪಾರ್ಥ ಸಾರ್, ನಿಮ್ಮ ಶ್ರಮಕ್ಕೆ ಧನ್ಯವಾದಗಳು. ನಾನು ಸದ್ಯಕ್ಕೆ ಮಂಗಳೂರಿನಲ್ಲಿದ್ದು, ತುಳು, ಕೊಂಕಣಿ, ಬ್ಯಾರಿ/ಮಲಬಾರಿ ಶಬ್ದಗಳು ಕಿವಿಗಳ ಮೇಲೆ ಬೀಳುತ್ತಿರುತ್ತವೆ. ಅಂಥಹ ಪದಗಳಲ್ಲಿ "ದಡಬಾಡ" ವೂ ಒಂದು. ಪದದ ಅರ್ಥ ಸ್ವಲ್ಪಮಟ್ಟಿಗೆ ಗೊತ್ತಿದೆ. ಆದರೆ ಈ ಪದದ ಬಳಕೆ ತುಳು ಅಥವಾ ಹವ್ಯಕರಲ್ಲಿ ನಾನು ಕೇಳಿಲ್ಲ, ಕೊಂಕಣಿಗರು, ಮತ್ತು ಕೊಂಕಣಿ ಕ್ಯಾಥಲಿಕರು ಬಳಸಿದ್ದು ಕೇಳಿದ ಹಾಗಿದೆ. ಈ ಅಂಶವನ್ನೇ ನಾನು ಕೇಳಿದ್ದು.

ಅತ್ತ್ ಮಾರಾಯರೆ..yo ಭಟ್ಟ್ರು " ಅಡಬಡಾ .." ಪಂಡ್‌ದು ಬರೇಂಡ ಅಯ್‌ನ್ ಕವಿತೆ ಪಣ್ಪೆರ್! ಕೆಲವರೆಗ್ ಆಧ್ಯಾತ್ಮಲಾ ತೋಜುಂಡ್! ಯಾನ್ "ದಡಬಡ್" ಬರೇಂಡ ಶ್ರೀಕರ್‌ಜಿ ತುಳು ಚರಿತ್ರೆ ಬುಕ್ , ಪಾರ್ಥೆರ್ ಕನ್ನಡ ಡಿಕ್ಷ್‌ನರಿ ನಾಡ್ವೆರ್ ದಾಯೆಗ್!? :)
Submitted by keshavmysore Fri, 10/04/2013 - 01:27

ಪಾರ್ಥ, ಶ್ರೀಕರ್ ಮತ್ತು ಗಣೇಶರ ಪ್ರೊತ್ಸಾಹದ ನುಡಿಗಳಿಗೆ ಧನ್ಯವಾದಗಳು. ಶ್ರೀಕರ್ ಅವರೆ, ನಾನು ಹಿಂದೋಳ / ಮಾಲಕೌಂಸ್ ಅಲ್ಲದೆ ಬೇರೆ ರಾಗಗಳನ್ನೂ ಕೇಳುತ್ತೇನೆ. ಆದರೆ ಅವು ಹುಚ್ಚು ಹಿಡಿಸುವುದಿಲ್ಲ. ಅಥವಾ ಗಣೇಶರು ರಾಮ್ ಕುಮಾರ್ ರವರ ’ಸಂಗೀತದ ಗುಂಗು’ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಹೇಳಿದರಲ್ಲಾ - ಎದ್ದು ಕುಣಿಯುವಂತಾಗುತ್ತದೆಂದು - ಆ ರೀತಿ ನನಗೆ ಆಗುವುದು ಈ ಮಾಲಕೌಂಸ್ ನಿಂದ ಮಾತ್ರ - ಗಾಯನ ಧೃತ್ ಗತಿಯಲ್ಲಿದ್ದರೆ ಕುಣಿಯುವಂತೆ, ವಿಲಂಬಿತ ಗತಿಯಲ್ಲಿದ್ದರೆ ಇಹವನ್ನೇ ಮರೆತು ತಲೆದೂಗುವಂತೆ! ಇನ್ನು ಗಾಯನ ಮುಖ್ಯವೋ ಅಥವಾ ಗಾಯಕ/ಕಿ ಮುಖ್ಯವೋ ಎಂಬ ಪ್ರಶ್ನೆಗೆ ಉತ್ತರ - ನನಗೆ ಈ ರಾಗಗಳ ಮೋಹ ಎಷ್ಟೆಂದರೆ ಅವನ್ನು ಯಾರು ಹಾಡಿದರೂ / ನುಡಿಸಿದರೂ ಅದು ಕರ್ಣಾನಂದಕರವೇ! ಉದಾಹರಣೆಗೆ ಕಳೆದ ಒಂದು ತಿಂಗಳಿನಿಂದ ಈ ಕೆಳಗಿನ ಕೊಂಡಿಗಳಲ್ಲಿರುವ ೨ ಗಾಯನಗಳನ್ನು ಸುಮಾರು ನೂರಕ್ಕೂ ಹೆಚ್ಚು ಬಾರಿ ಕೇಳಿದ್ದೇನೆ, ಇನ್ನೂ ಕೇಳುತ್ತಿದ್ದೇನೆ ಆದರೂ ಮನಸ್ಸಿನ್ನೂ ಸ್ಯಾಚುರೇಷನ್ ಪಾಯಿಂಟ್ ತಲುಪಿಲ್ಲ! https://www.youtube.... https://www.youtube.... https://www.youtube.... ಈ ಮೂರು ಕೊಂಡಿಗಳೂ ಒಂದೇ ಗಾಯನದ ೩ ಭಾಗಗಳು ಮತ್ತು ಈ ಕೆಳಗಿನದು ಮಾಲಕೌಂಸ್ / ಹಿಂದೋಳ ಜುಗಲ್ಬಂದಿ, https://www.youtube.... ಇವುಗಳ ಗಾಯಕರು ತೀರ ಹೊಸಬರೇ! ಇನ್ನು ಶ್ರೀಕರ್ ರ ಸಂದೇಹಕ್ಕೆ ಉತ್ತರ - ನಾನು ಇಷ್ಟ ಪಡುವ ರಾಗಗಳೆಂದರೆ - ಕ್ರಮವಾಗಿ ೧ರಿಂದ ೫೦ ಸ್ಥಾನಗಳಲ್ಲಿ - ಹಿಂದೋಳ / ಮಾಲಕೌಂಸ್, ಮತ್ತು ಕೌಂಸ್ ಗುಂಪಿನದ್ದೇ ಆದ ಚಂದ್ರಕೌಂಸ್, ಮಧುಕೌಂಸ್, ಜೋಗ್ ಕೌಂಸ್, ಕೌಂಸಿ ಕಾನಡ ಇತ್ಯಾದಿ ಮತ್ತು ಶುಧ್ಧ ಧನ್ಯಾಸಿ / ಧನಿ, ನಂತರದ ೧೦ಸ್ಥಾನಗಳಲ್ಲಿ - ಭೀಮ್ ಪಲಾಸ್ / ಆಭೇರಿ, ಮತ್ತು ಮೋಹನ / ಭೂಪ್, ನಂತರದ ೧೦ ಸ್ಥಾನ - ರಾಗ ದರ್ಬಾರಿ, ದರ್ಬಾರಿ ಕಾನಡ, ನಂತರ ರಾಗ ಜೋಗ್, ದೇಶ್, ನಂತರ ಉಳಿದ ರಾಗಗಳು! ಹೀಗೆ ರಾಗಗಳ ಹೆಸರನ್ನು ಧಾರಾಳವಾಗಿ ಉದುರಿಸುತ್ತಿರುವೆನಾದರೂ - ರಾಗ / ಸ್ವರಗಳ ಜ್ಞಾನ ಅತ್ಯಲ್ಪವೇ! ಆದರೆ ಯಾವುದಾದರೂ ಹೊಸ ಹಾಡೊಂದು ನನಗೆ ಇಷ್ಟವಾದರೆ ಅದು ಈ ರಾಗಳಲ್ಲಿ ಒಂದಾಗಿರುವುದು ೯೦ ಪ್ರತಿಶತ ಗ್ಯಾರಂಟಿ! - ಕೇಶವ ಮೈಸೂರು

1. ಮಾಲ್ ಕೌಂಸ್ ನಲ್ಲಿ ಒಂದು ಅಪೂರ್ವ ಅನುಭವ ನೀಡುವ ಕುಮಾರ ಗಂಧರ್ವರ CD ( ಮ್ಯೂಸಿಕ್ ಟುಡೇ ಪ್ರಕಾಶಕರು - ಬೈಠಕ್ series vol. 4 ) ಕೇಳಿದ್ದೀರಾ ? ಕೊಂಡಿ ಇಲ್ಲಿದೆ. ""ಆನಂದ ಮನಾ ...... " http://www.dhingana.... ಶಿವಪುತ್ರಪ್ಪ ಸಿದ್ದರಾಮಯ್ಯ ಕೋಂಕಾಳಿಮಠ ಅಲಿಯಾಸ್ ಕುಮಾರಗಂಧರ್ವರು ಬೆಳಗಾವಿಯ ಬಳಿಯ ಸುಳೇ ಭಾವಿಯಲ್ಲಿ ಹುಟ್ಟಿದ ಕನ್ನಡಿಗರು. 2. ಹಾಗೆಯೇ, ಉಸ್ತಾದ್ ಅಮೀರ್ ಖಾನ್ ಸಾಹೇಬರ ಮಾಲ್ ಕೌಂಸ್ (ಜಿನಕೇ ಮನ ರಾಮ ವಿರಾಜೇ) HMV http://www.youtube.c... 3. ಹರಿಪ್ರಸಾದ್ ಚೌರಾಸಿಯಾ ರವರ ತಬಲಾ ರಹಿತ ಕೊಳಲುವಾದನ http://www.youtube.c...
Submitted by RAMAMOHANA Sat, 10/05/2013 - 13:56

ಕೇಶವ‌ ರೆ ಆ ಹಿಂದೋಳ‌ ರಾಗವೇ ಹಾಗೆ. ಸಾಧಾರಣ‌ `ಗಾಂದಾರ‌` ಸ್ವರ ದಿಂದ‌ ಶುದ್ಧ‌ ` ಮದ್ಯಮ` ಕ್ಕೆ ಜಾರುವಾಗ‌ ಶರೀರದ‌ ನರ‌ ನಾಡಿಗಳಲ್ಲಿ ಉಂಟಾಗುವ‌ ನಡುಕ‌ ಆ ಆನಂದವನ್ನು ನೀಡುತ್ತವೆ. ಹಾಗೆಯೆ ತಾವು ಹೇಳಿದಂತೆ ಔಡವ‌ ಸ್ವರ‌ ಏರಿಳಿತ‌ ರಾಗಗಳ‌ ಗಮ್ಮತೇ ಹಾಗೆ, ಸ್ವರ‌ ಜಾರಿಕೆ ಭೇದ‌, ಮತ್ತು ಸ್ವರ‌ ಸ್ಥಾನದ‌ ಅಂತರಗಳು (ಸರಿಯಾಗಿ ಮಿಡಿದಾಗ‌) ಆನಂದವನ್ನುಂಟು ಮಾಡುವ‌ ನಾಡಿಯನ್ನು ಮಿಡಿಸುತ್ತವೆ. `ಶಿವರಂಜಿನಿ` ರಾಗವನ್ನೂ ಕೇಳಿನೋಡಿ. ಅದೂ `ಔಡವ‌` ಪರಿಮಿತ‌ ರಾಗ‌ . ಧನ್ಯವಾದಗಳು, ತಮ್ಮ‌ ಸಂಶೋಧನೆ ಮುಂದುವರೆಯಲಿ.... ರಾಮೋ.
Submitted by keshavmysore Sat, 10/05/2013 - 15:00

ಶ್ರೀಕರ್ ರವರೆ, ಕೊಂಡಿಗಳಿಗಾಗಿ ಧನ್ಯವಾದಗಳು. ಕುಮಾರ ಗಂಧರ್ವರ ಆ ಗಾಯನ Maestros Choice ಆಲ್ಬಂನದ್ದು. ಅದರಲ್ಲೇ ಇದ್ದ ಇನ್ನೆರಡು ಮಾಲಕೌಂಸ್ ನ ಗಾಯನ ಮತ್ತು YouTubeನ ಎರಡೂ ಗಾಯನಗಳನ್ನು ತಕ್ಷಣವೇ ಡೌನ್ ಲೋಡ್ ಮಾಡಿಕೊಂಡೆ!
Submitted by Shreekar Sat, 10/05/2013 - 19:14

"ಹುಚ್ಚೆದ್ದು ಕುಣಿಯೋಣ ಅನ್ಸುತ್ತೆ !" ಒಳ್ಳೆಯ ಶಾಸ್ತ್ರೀಯ ಸಂಗೀತವನ್ನು, ಅದರಲ್ಲೂ ಮಾಲ್ ಕೌಂಸ್ ಅಂಥಹ ರಾಗವನ್ನು ಕೇಳಿದಾಗ ಆಗುವುದು ಇಷ್ಟೇನೇ? ಇಂಥಹ ಪ್ರತಿಕ್ರಿಯೆ ನಮ್ಮಲ್ಲಿ ಬಾಲಿವುಡ್ ನ ಐಟಮ್ ಸಾಂಗ್ ಕೇಳಿದಾಗಲೂ ಎದ್ದು ಕುಣಿಯೋಣವೆನಿಸುತ್ತದೆ ಅಲ್ಲವೇ? ದಬಾಂಗ್ ನ ಮುನ್ನೀ ಬದ್ ನಾಮ್ ಹುಯೀ, ಡಾರಲಿಂಗ್ ತೇರೇ ಲಿಯೇ ನೋಡಿದಾಗ ಅಥವಾ ಕೈಲಾಶ್ ಖೇರ್ ಕೇಳಿದಾಗ, .... ಇತ್ಯಾದಿ. ಶಾಸ್ತ್ರೀಯ ಸಂಗೀತದ, ಅದರಲ್ಲೂ ಹಿಂದುಸ್ತಾನಿಯ ಶಕ್ತಿ ಇವುಗಳನ್ನೂ ಮೀರಿ ನಿಂತಿದೆ ಎಂದು ನನ್ನ ನಂಬಿಕೆ. ಅಲೌಕಿಕ (ಔಟ್ ಆಫ್ ದಿಸ್ ವರ್ಲ್ಡ್ ) ಅನುಭವ ಉಂಟು ಮಾಡುವ ಶಕ್ತಿ ಹಿಂದೂಸ್ತಾನಿ ಸಂಗೀತದಲ್ಲಿದೆ ಎಂಬುದನ್ನು ನಾನು ಸ್ವತಹ ಅನುಭವಿಸಿದ್ದೇನೆ. ಆದರೆ ಇಂತಹ ಪರಿಣಾಮ ಭಾಂಗ್ ಮತ್ತಿತರ ಮಾದಕ ದ್ರವ್ಯಗಳ ಸೇವನೆಯಿಂದಲೂ ಸಾಧ್ಯ ?

ಕೇಶವ್ ಸರ್, ಮಾಲ್ ಕೌಂಸ್ ಭಂಡಾರ ಇಲ್ಲಿದೆ ನೋಡಿ. ಹಿಂದೂಸ್ತಾನಿ ಸಂಗೀತದ ವಿಶ್ವಕೋಶ http://www.parrikar....

ಧನ್ಯವಾದಗಳು ಶ್ರೀಕರ್; ಅದರೊಳಗೆ ಧುಮುಕಿ ಹುಡುಕುತ್ತೇನೆ, ಸದ್ಯಕ್ಕೆ ನನ್ನಲ್ಲಿ ಸುಮಾರು ೧೫೦ ಆಡಿಯೊ, ೨೦೦ಕ್ಕೊ ಹೆಚ್ಚು ವಿಡಿಯೋ ಸಂಗ್ರಹವಿದೆ. ನನ್ನ ಬಳಿ ಯಾವುದು ಇಲ್ಲ ಎಂದು ಹುಡುಕಿತೆಗೆಯಬೇಕು ಅಷ್ಟೆ!

ಸರಿಯಾಗಿ ಹೇಳಿದಿರಿ ಶ್ರೀಕರ್. ಆದರೆ ಇದು ನಿಮಗಿಷ್ಟವಾದ ಸಂಗೀತವನ್ನು ಕೇಳಿದಾಗ ಮೆದುಳಿನಲ್ಲಿ ಉಂಟಾಗುವ ಒಂದು ಬಗೆಯ ಪರಿಣಾಮ. ರಾಮ್ ಮೋಹನರು ವಿವರಿಸಿದದು ಇನ್ನೊಂದು ಬಗೆಯದು. ದಬಾಂಗ್ ಹಾಡು ಕೇಳಿದಾಗ ಕುಣಿಯಬೇಕೆನಿಸುವವರಿಗೆ ಹಿಂದೂಸ್ತಾನಿ ಸಂಗೀತ ಕೇಳಿದಾಗ ಮೈಲು ದೂರ ಓಡಿಹೋಗಬೇಕೆನಿಸಬಹುದು! ಸಂಗೀತದ ನಶೆ ಒಂದು ರೀತಿಯಲ್ಲಿ ಕೆಲವು ಮಾದಕ ದ್ರವ್ಯಗಳ ನಶೆಗೆ ಹೋಲಿಸಬಹುದು ಎಂದು ಸಂಗೀತ - ನರ ವಿಜ್ಞಾನ ಸಂಶೋಧನೆ ಹೇಳುತ್ತದೆ - ಆದರೆ ಅವುಗಳಂತೆ ನಿಮ್ಮನ್ನು ನಿಷ್ಪ್ರಯೋಜಕರನ್ನಾಗಿ ಮಾಡಿಬಿಡುವುದಿಲ್ಲ, ಬದಲಾಗಿ ಸಂಗೀತ ನಿಮ್ಮಲ್ಲಿ ಧನಾತ್ಮಕ ಭಾವನೆಗಳನ್ನು ಹುಟ್ಟುಹಾಕುತ್ತದೆ. ಇವನ್ನೇ ನನ್ನ ಲೇಖನದ ಮುಂದಿನ ಭಾಗದಲ್ಲಿ ಚರ್ಚಿಸುತ್ತೇನೆ.
Submitted by Shreekar Mon, 10/07/2013 - 22:18

ಗಣೇಸಣ್ಣೆರೆ, ಯೀರ್ ತೆಲಿಕೆದ ಬೊಳ್ಳಿ, ಕುಸಲ್ದ ಅರಸೆ ! :-))) ನಮ ಬೇಜಾರಾಂಡ ಯೀರ್ ಸಂಪದೊಟು ಬರೆತಿನ ಓದದ್ ಎಂಕಲ್ನ ದುಃಖ ದೂರ ಮಲ್ಪುವ ! ವಿಷಯ ಇಂಚ ಉಪ್ಪುನಗ ಯೀರೇ ಬೇಜಾರ್ ಮಲ್ತಂಡ ಎಂಚ !

:) ಶ್ರೀಕರ್‌ಜಿ, ನಿಮಗೆ ತುಳು ಚೆನ್ನಾಗಿ ಬರುತ್ತದೆ. ಕುಸಲ್ದ ಅರಸೆ- ನವೀನ್ ಪಡೀಲ್, ದೇವ್ದಾಸ್ ಕಾಪಿಕಾಡ್..ಅವರ ತುಳು ನಾಟಕಗಳನ್ನು ನೋಡಿದ್ದೀರಾ? ಇಲ್ಲಿ ನೀವು ಮತ್ತು ಕೇಶವರು ಹಾಡುಗಳ ಕೊಂಡಿ ಕೊಟ್ಟು ನನಗೂ ಹುಚ್ಚು ಹಿಡಿಸಿದ್ದೀರಿ. :) ನಿನ್ನೆ ರಾತ್ರಿ ಹಾಡುಗಳನ್ನು ಕೇಳಿ ಮಲಗುವಾಗ ರಾತ್ರಿ ಒಂದು ಗಂಟೆ ಕಳೆದಿದೆ. ಈಗಲೂ ಹಾಡುಗಳನ್ನು ಕೇಳಿಕೊಂಡು ಬರೆಯುತ್ತಿರುವೆ. ಹಂಸಾನಂದಿಯವರಿಗೆ ಹಿಂದೊಮ್ಮೆ ಹೇಳಿದ್ದೆ..ಅವರು ಮೋಹನ ರಾಗದ ಪಾಠ ಮಾಡಿದ್ದಾಗ- ಶಾಸ್ತ್ರೀಯ ಸಂಗೀತದ ಎಬಿಸಿಡಿ ಗೊತ್ತಿಲ್ಲದ ನಮಗೆ ಹೀಗೆ ರಾಗದ ಪರಿಚಯ ಮಾಡಿಸಿ ಅಂತ. ನೀವೆಲ್ಲಾ ಹೀಗೆ ಶಾಸ್ತ್ರೀಯ ಸಂಗೀತದ ಚರ್ಚೆ ಮುಂದುವರೆಸಿ(ಕೊಂಡಿಗಳೊಂದಿಗೆ).

ಅಪೂರ್ವ ಆನಂದ ನೀಡುವ ಇನ್ನೊಂದು ಮಾಲಕೌಂಸ್ ಕೃತಿ - ಶ್ರೀಮತಿ ಶೃತಿ ಸಾಡೋಲಿಕರ್ ಹಾಡಿದ ’ಫಾಗ್ ಖೇಲತ್ ಬ್ರಿಜ ಸುಂದರಿ ನಂದಲಾಲ ಘರ್ ಆಯೇ’. ಇದನ್ನು ಇಲ್ಲಿ ಕೇಳಿ: http://mio.to/album/... ಈ ಆಲ್ಬಮ್ಮಿನಲ್ಲಿರುವ ೩ ಕೃತಿಗಳಲ್ಲಿ ೨ನೆಯದು. ಇದನ್ನು ನಾನು ಹಳೆಯ musicindiaonline ವೆಬ್ ತಾಣದಿಂದ ಡೌನ್ ಲೋಡ್ ಮಾಡಿಕೊಂಡಿದ್ದೆ. ಆದರೆ ಈ ತಾಣದ ಹೊಸ ಆವೃತ್ತಿಯಲ್ಲಿ ಆ ಸೌಲಭ್ಯವಿಲ್ಲ. ನಿಮಗೆ ಇಷ್ಟವಾದಲ್ಲಿ ನನ್ನ keshavmysore@gmail.com ಗೆ ಮಿಂಚಂಚೆ ಬರೆದರೆ ಅದರ ಆಡಿಯೋ ಕಳುಹಿಸುತ್ತೇನೆ. ಪ್ರಸ್ತುತ ಶ್ರೀಮತಿ ಶೃತಿ ಸಾಡೋಲಿಕರ್ ಲಖನೌನಲ್ಲಿರುವ ಭಾತ್ ಖಂಡೇ ಸಂಗೀತ ಮಹಾವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. - ಕೇಶವ ಮೈಸೂರು

ನೀವು ಪ್ರಾಯಶಃ ಕೇಳಿರದ ಒಂದೆರಡು ಕೌಂಸಗಳು: ನಂದಕೌಂಸ್ ಪರ್ವೀನ್ ಸುಲ್ತಾನಾ - ವ್ಯಾಕುಲ ನೈನ ನೀರ ಬಹಾಯೇ .... ಪಡೂನ್ ತೋರೆ ಪೈಯ್ಯಾನ್ http://www.youtube.com/watch?v=Re75ew_Q6MI ಅದೇ ರಾಗ ಉಸ್ತಾದ್ ಅಮ್ಜಾದ್ ಅಲಿ ಖಾನ್ ಸರೋದ್ ನಲ್ಲಿ http://www.raaga.com/player4/?id=304994&mode=100&rand=0.29370906587653766 ರಾಗ್ ಚಂದ್ರನಂದನ್ ಚಂದ್ರಕೌಂಸ್ + ನಂದಕೌಂಸ್ + ಜೋಗ್ ಕೌಂಸ್ + ಕೌಶಿ ಕಾನಡಾ ರಾಗಗಳ ಮಿಶ್ರಣ --- ಉಸ್ತಾದ್ ಅಲಿ ಅಕ್ಬರ್ ಖಾನ್ ನಿರ್ಮಿತ. http://www.youtube.com/watch?v=_CtXORtvvYM