ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)
ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)
ನಡೆದುಹೊರಟಿದ್ರು ಎದುರ್ ಮನೆ ತಾತ
ರಸ್ತೆ ಮಕ್ಳಿಗೆಲ್ಲ ತಾತ ಅಂದ್ರೆ ಏರ್ತಿತ್ತು ಪಿತ್ತ!
ಮೆತ್ತಗೆ ಹಿಂದ್ ಹೋಗಿ ಕಾಲತ್ರ ಪಟಾಕಿ ಇಟ್ರು
"ಢಾಂ" ಅನ್ನೋದ್ನೆ ಕಾಯುತ್ತ ಕಿವಿ ಮುಚ್ಚಿ ನಿಂತ್ರು !
ಪಟಾಕಿ ಮಾಡಿದ್ ಸದ್ದಿಗೆ ಹುಡುಗ್ರೆಲ್ಲ ಬೆಚ್ಚು ,
ತಾತ ಹಿಂದೇನೂ ನೋಡ್ದೆ ನಡೆದಾಗ ಹುಡುಗ್ರೆಲ್ಲ ಪೆಚ್ಚು!
ಹುಡುಗ್ರಿಗೆ ನಿಜ ವಿಷಯ ತಿಳಿದಿಲ್ಲ ಪಾಪ ,
ತಾತಂಗೆ ಶತಕಿವುಡು ಕಿವಿ ಕೇಳ್ಸಲ್ಲ ಪಾಪ
Rating
Comments
ಉ: ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)
:) :) ಪಾರ್ಥರೆ, ಮಕ್ಕಳಿಗಾಗಿ ಕವನ ಎಂದಿದ್ದೀರಿ-ನಿಮ್ಮ ಕವನ ನೋಡಿ ಮಕ್ಕಳು, ಕಿವಿ ಚೆನ್ನಾಗಿರೋ ನಮ್ಮಂತಹ ತಾತನ ಹಿಂದೆ ಪಟಾಕಿ ಇಟ್ಟರೆ!
In reply to ಉ: ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ) by ಗಣೇಶ
ಉ: ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)
ಏನ್ ಮಾಡೋದು ? ಕಿವಿ ಚೆನ್ನಾಗಿದೆಯಲ್ಲ , ಹೆದರಿ ಓಡೋದು ಪಟಾಕಿ ಶಬ್ಧಕ್ಕೆ !
In reply to ಉ: ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ) by partha1059
ಉ: ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)
ಓಡೋದ್ಯಾಕೆ ಅಂತ ನಾನು ಮನೆಯ ಹೊರಗೇ ಹೋಗಲಿಲ್ಲ!
In reply to ಉ: ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ) by kavinagaraj
ಉ: ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)
ನಾವ್ ಪಟಾಕಿ ಹೊಡೆದದ್ದು ಬಹು ಕಡಿಮೆ - ಈಗ್ಗೆ ೧೦ ವರ್ಷಗಳ ಹಿಂದೆ ಕೊನೆಯಾಯ್ತು . ಮೊದಲು ಚಿಕ್ಕವನಿದ್ದಾಗ ಹಳ್ಳಿಯಲ್ಲಿ ಅಕ್ಕ ಪಕಕ್ ಗುಡಿಸಲು ಹಾಗಾಗಿ ಪಟಾಕಿ ಹಚ್ಚಲು ಆಗುತ್ತಿರಲಿಲ್ಲ . ಆಮೇಲೆ ಟೀವಿಲಿ ನೋಡಿ -ಓದಿ ಪಟಾಕಿ ಹೊಡೆಯೋದ್ರಿಂದ ಆಗುವ ವಾಯು ಮಾಲಿನ್ಯ, ನೆಲ ಮಾಲಿನ್ಯ (ದೀಪಾವಳಿ ನಂತರ ಬೀದಿಗಳನ್ನು ನೋಡಿದರೆ ಕಲರ್ ಕಲರ್ ಒನ್ಲಿ ಯಾಶ್ ಕಲರ್ ) .ಚೆ ಛೆ ಅನ್ನಿಸಿತು .. ಹಣತೆ ಬೆಳಗಿ ದೀಪಾವಳಿ ..
ಅಸ್ಟೇ ..
ಈಗ ಪಟಾಕಿ ಹೊಡೆಯುವವರನ್ನು ಅದರಲ್ಲೂ ವಿದ್ಯಾವಂತರು -ಪಟಾಕಿ ಸರಕ್ಕೆ ಬೆಂಕಿ ಹಚ್ಚಿ ಹೊಡೆವುದು ಕಂಡಾಗ ಮನ ಕೊರಗುವುದು ಮರುಗುವುದು .. ;(((
ಹಾಗಯೇ ಈ ಒಂದು ವಾರ ಬೀದಿ ಮತ್ತು ಸಾಕಿದ ನಾಯಿಗಳ ಪಾಡು ಹೇಳೋದು ಹೇಗೆ ?
ಅವುಗಳ ಧೈರ್ಯ ಕುಗ್ಗಿ ಹೃದಯ ಬಡಿತ ಹೆಚ್ಚಿ ಊಟ ನೀರು ಬಿಟ್ಟು ನಿತ್ರಾಣ ಆಗುವವು .. ಬೇಕಾದ್ರೆ ನೀವೇ ನೋಡಿ ...
ಈ ದಿನಗಳಲ್ಲಿ ವಯಸ್ಸಾದವರು ಏನು ನಮ್ಮಂತ ಯುವಕರಿಗೆ ಈ ಶಬ್ದ ಕೇಳಿ ಕಿರಿಕಿರಿ ಅನ್ನಿಸುವುದು . ಮೊನ್ನೆ ನಮ್ಮನೆ ಹತ್ರ ಮಧ್ಯ ರಾತ್ರಿ ಪಟಾಕಿ ಅದೂ ಜೋರ್ ಶಬ್ದ ಮಾಡಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟವರಿಗೆ ಅಗೌರವ ತೋರಿದ್ದು ವಿದ್ಯಾವಂತರೇ -ನಾವ್ ಹೋಗಿ ಬಯ್ದಾಗ ತಮ್ಮ ಮನೆ ಒಳ ಹೊಕ್ಕರು ..
ದೀಪಾವಳಿ ಮೊದಲು ನಂತರ ತಮಿಳುನಾಡಲ್ಲಿ ಅಗ್ನಿ ದುರಂತ ಮಾಮೂಲಿ ;((
ಇದೆಲ್ಲ ಬೇಕಾ?
ಶುಭವಾಗಲಿ
\।/
In reply to ಉ: ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ) by venkatb83
ಉ: ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)
ಇದೆಲ್ಲ ಬೇಕಾ?
.
ಬೇಡ.
ಉ: ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)
ಪಟಾಕಿ ಠುಸ್ ಆಗೋದು ಗೊತ್ತಿತ್ತು . ಆ ಠುಸ್ ಪಟಾಕಿ ಮತ್ತಷ್ಟು ಠುಸ್ ಆಗಿ ಥುಸ್ ಆಗಿದೆ ಅಂತ ಕಾಣುತ್ತದೆ :)