ರಾಷ್ಟ್ರಕವಿಗೆ ನುಡಿ ನಮನ

ರಾಷ್ಟ್ರಕವಿಗೆ ನುಡಿ ನಮನ

ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ ೭-೨-೧೯೨೬ ರಂದು ಜನಿಸಿದರು. ತಂದೆ ಶಾಂತವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹೊನ್ನಾಳಿ, ರಾಮಗಿರಿ, ಬೆಲಗೂರು. ಪ್ರೌಢಶಾಲೆಗೆ ಸೇರಿದ್ದು ದಾವಣಗೆರೆ. ಕಾಲೇಜು ವಿದ್ಯಾಭ್ಯಾಸ ಮೈಸೂರು. ಬಿ.ಎ. ಆನರ್ಸ್‌ ಮತ್ತು ಎಂ.ಎ. ಪದವಿಯಲ್ಲಿ ಮೂರು ಸುವರ್ಣ ಪದಕ. ೧೯೪೯ರಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ ಆರಂಭ. ೧೯೬೩-೬೬ರವರೆಗೆ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರ ಹುದ್ದೆ. ೧೯೬೬ರಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ೧೯೮೬ರಲ್ಲಿ ನಿವೃತ್ತರಾದರು.

ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ. ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ರಾಜ್ಯಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ, ಮದರಾಸಿನ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ, ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ.

ಇವರು ರಚಿಸಿದ ಸಾಹಿತ್ಯದ ನಾನಾ ಪ್ರಕಾರದ ಕೃತಿಗಳು ಮಹತ್ವಪೂರ್ಣ. ಕವನಸಂಕಲನ- ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ತೀರ್ಥವಾಣಿ, ಕಾರ್ತೀಕ, ದೀಪದ ಹೆಜ್ಜೆ, ಅನಾವರಣ, ತೆರೆದ ದಾರಿ, ಗೋಡೆ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ ಮೇಲೆ. ವ್ಯಕ್ತಿಚಿತ್ರ-ಶಿವಯೋಗಿ ಸಿದ್ಧರಾಮ; ಪ್ರವಾಸಕಥನ-ಮಾಸ್ಕೋದಲ್ಲಿ ೨೨ ದಿನ, ಗಂಗೆಯ ಶಿಖರಗಳಲ್ಲಿ, ಅಮೆರಿಕದಲ್ಲಿ ಕನ್ನಡಿಗ. ಸಾಹಿತ್ಯ ವಿಮರ್ಶೆ/ಕಾವ್ಯ ಮೀಮಾಂಸೆ-ವಿಮರ್ಶೆಯ ಪೂರ್ವ ಪಶ್ಚಿಮ, ಪರಿಶೀಲನ, ಗತಿಬಿಂಬ, ಪ್ರತಿಕ್ರಿಯೆ, ನವೋದಯ, ಅನುರಣನ, ಸೌಂದರ‍್ಯ ಸಮೀಕ್ಷೆ, ಮಹಾಕಾವ್ಯದ ಸ್ವರೂಪ, ಕಾವ್ಯಾರ್ಥ ಚಿಂತನ ಇತ್ಯಾದಿ..

ಸಂದ ಪ್ರಶಸ್ತಿಗಳು-ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿ ಮುಂತಾದುವು.

ಇಂದು(೨೩-೧೨-೨೦೧೩) ಈ ಮಹಾನ್ ಕವಿಚೇತನ ನಮ್ಮನ್ನೆಲ್ಲಾ ಅಗಲಿ ಕನ್ನಡಾಂಬೆಯ ಮಡಿಲಿನಲ್ಲಿ ಚಿರನಿದ್ರೆಗೆ ಜಾರಿದ್ದಾರೆ. ಕನ್ನಡನಾಡಿನ ಕವಿಕುಲದ ಸೂರ್ಯ ಇಂದು ಅಸ್ತಂಗತರಾಗಿದ್ದಾರೆ. ಇವರು ಕನ್ನಡ ಭಾಷೆಗೆ ನೀಡಿದ ಸೇವೆ ಎಂದೂ ಅಜರಾಮರ. 

ವೇದಾಂತಿ ಹೇಳಿದನು ಈ ಬದುಕು ಶೂನ್ಯ ಶೂನ್ಯ | ಕವಿನಿಂತು ಸಾರಿದನು ಓ ಇದು ಅಲ್ಲ ಶೂನ್ಯ | ಜನ್ಮ ಜನ್ಮದಿ ಸವಿದೆ ನಾನೆಷ್ಟು ಧನ್ಯ||  

ನೀವು ಇದ್ದ ಯುಗದಲ್ಲಿರುವ ನಾವೇ ಧನ್ಯ... ಧನ್ಯ. 

Comments

Submitted by H A Patil Mon, 12/23/2013 - 17:40

ಮಾನ್ಯರೆ ರಾಷ್ಟ್ರಕವಿಗಳ ಸಾವಿನ ವಿಷಯ ತಿಳಿದು ದುಃಖವಾಯಿತು.ಸಜ್ಜನ ಸಹೃದಯ ಕವಿ ಜಿ.ಎಸ್.ಶಿವರುದ್ರಪ್ಪರವರ ಸಾವು ಕನ್ನಡ ನಾಡಿಗೆ ತುಂಬಲಾರದ ನಷ್ಟ. ಻ವರ ಾತ್ಮಕ್ಕೆ ಚಿರಶಾಂತಿ ದೊರಕಲಿ ಎಂಬ ಆಶಯದೊಂದಿಗೆ.

Submitted by partha1059 Mon, 12/23/2013 - 19:41

ಹಾಗೆ ಸಂಪದದ ಮುಖಪುಟದಲ್ಲಿ ಜಿ ಎಸ್ ಎಸ್ ರವರ ಸಂದರ್ಶನವಿದೆ ದ್ವನಿ ಅತ್ಯಂತ ಸ್ವಷ್ಟವಾಗಿದೆ ಹಾಗೆ ಸಂದರ್ಶಕರ ದ್ವನಿ ಕೂಡ
ಜಿಎಸ್ಎಸ್ ರವರಿಗೆ ನಮನ ರೂಪದಲ್ಲಿ ಒಮ್ಮೆ ಆ ಸಂದರ್ಶನನ್ನು ಎಲ್ಲರೂ ಕೇಳಬಹುದು.....
http://sampada.net/article/1165

Submitted by venkatb83 Tue, 12/24/2013 - 14:16

In reply to by partha1059

ಸದಾ ಪ್ರಚಾರ ಬಯಸುವ -ಸಾಹಿತಿಗಳ ಮಧ್ಯೆ ಇವರದು ಸೀದಾ ಸಾದಾ ನೇರ ನಿಷ್ಟುರ ನಡೆ -. ಮಾತು ನಂತರ -ಕೃತಿ ಮೊದಲು ವ್ಯಕ್ತಿತ್ವ ..
ಸುಗಮ ಸಂಗೀತ ಎಲ್ಲೆಲ್ಲೂ ಮೊಳಗಲಿಕ್ಕೆ ಕಾರಣಕರ್ತರಲ್ಲಿ ಒಬ್ಬರು ಮತ್ತೊಬ್ಬರು ದಿವಂಗತ ಸಿ ಅಶ್ವಥ್ ಅವರು .
ಅವರು
ಹಚ್ಚಿದ ಅಕ್ಷರಗಳ ಹಣತೆ -ಅದರ ದೀಪದ ಬೆಳಕು ಸದಾ ಕರುನಾಡನ್ನು ಬೆಳಗುತ್ತದೆ..
ಆಶಾವಾಧವನ್ನು ಜೀವಂತವಾಗಿಡುವ ಅವರ ಸಾಲು -ಹಣತೆ ಹಚ್ಚುತ್ತೇನೆ ನಾನು ..ನಾವ್ ಹೇಗೆ ಮರೆಯುವೆವು?
ಅವರ ಆತ್ಮಕ್ಕೆ ಶಾಂತಿ ಸಿಗಲಿ ಸದ್ಗತಿ ಲಭಿಸಲಿ ..

Submitted by swara kamath Tue, 12/24/2013 - 16:38

ರಾಷ್ಟ್ರಕವಿ ಜಿಎಸ್ಎಸ್ ಅವರ ಕಿರುಪರಿಚಯ ನೀಡಿ ಅವರಿಗೆ ಶೃದ್ಧಾಂಜಲಿ ಅರ್ಪಿಸಿದ ತಮ್ಮ ಲೇಖನ ಮೆಚ್ಚುಗೆ ಆಯಿತು.ಅಸ್ತಂಗತರಾದ ಈ ಮಾಹನ್ ಕವಿಗೆ ಚರಮಗೀತೆ ಹಾಡಿ ನಾವೆಲ್ಲರೂ ನಮಿಸೋಣ. ರಮೇಶ ಕಾಮತ್.