"ಸ್ನೇಹ"
ಸ್ನೇಹ ಒಂದು ಸುಂದರ ಕವನ,
ನೂರಂದು ಭಾವನೆಗಳ ಮಿಲನ,
ಬದುಕಿನ ಜಂಜಟಾದಲ್ಲಿ ಬೇಸತ್ತ,
ಮುಗ್ಧ ಮನಸ್ಸಿನಗೆ ಸಂಚಲನ ಈ ಸ್ನೇಹ,
ತಂದೆ- ತಾಯಿ ನಂತರದ ಸಂಬಂಧವೆ ಈ ಸ್ನೇಹ,
ಹಾಲು ಜೇನು ಬೆರೆತ ಹಾಗೆ ಈ ಸ್ನೇಹ,
ಸ್ನೇಹವೆಂಬುದು ಒಂದು ಸುಂದರ ಸಂಬಂಧ,
ಬಾಲ್ಯದಲ್ಲಿ ಆಟವಾಡಿ ಜಗಳ ಮಾಡಿದ ಸ್ನೇಹ,
ಸ್ನೇಹದಲ್ಲಿ ಬರುವುದು ಕೋಪ-ತಾಪ ಸಾಮಾನ್ಯ,
ಮನಸ್ಸು ನೊಂದಾಗ ಚೈತನ್ಯ ಕೊಡುವುದು ಈ ಸ್ನೇಹ ,
ಸ್ನೇಹದಲ್ಲಿ ಬರಬಾರದು ಮನಸ್ತಾಪ,
ಸ್ನೇಹದಲ್ಲಿ ಇರಬಾರದು ಸಿರಿವಂತಿಕೆಯ ತಾರತಮ್ಯತೆ,
ಸಾಗರದಂತೆ ಸದಾ ಸಾಗುತಿರಲಿ ಈ ಸ್ನೇಹ,
ಆಕಾಶದಂತೆ ವಿಶಾಲವಾಗಿರಲಿ ಈ ಸ್ನೇಹ,
ಜೀವನದ ಕೊನೆಯವರಿಗೂಸದಾ ಇರಲಿ ಈ ಸ್ನೇಹ,
ನಿಮ್ಮ ಸ್ನೇಹವೇ ನನಗೆ ವಜ್ರ ಕವಚ,
ಹೃದಯದಲ್ಲಿ ಅಮರವಾಗಲಿ ಈ ಸ್ನೇಹ,
ಸದಾ ಮಿನುಗುತ್ತಿರಲಿ ಆಕಾಶದ ನಕ್ಷತ್ರದಂತೆ ನಮ್ಮ ಈ ಸ್ನೇಹ.
Rating