ಪುಸ್ತಕನಿಧಿ: ನಾಲ್ಕನೇ ತರಗತಿಗಾಗಿ ಐತಿಹಾಸಿಕ‌ ಕಥೆಗಳು!

ಪುಸ್ತಕನಿಧಿ: ನಾಲ್ಕನೇ ತರಗತಿಗಾಗಿ ಐತಿಹಾಸಿಕ‌ ಕಥೆಗಳು!

೧೯೫೬ ನೇ ಇಸವಿಯ ಮುಂಬೈ ವಿದ್ಯಾ ಇಲಾಖೆಯಿಂದ ಪ್ರಕಟವಾದ ನಾಲ್ಕನೇ ಇಯತ್ತೆಗಾಗಿನ ಪಠ್ಯಪುಸ್ತಕ - ಐತಿಹಾಸಿಕ ಕಥೆಗಳು ಎಂಬ ಪುಸ್ತಕವನ್ನು = ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಅಂತರ್ಜಾಲ ತಾಣದಿಂದ ಹಿಂದೆಂದೋ ಡೌನ್ಲೋಡ್ ಮಾಡಿಕೊಂಡಿದ್ದನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಇಲಾಖೆಯು ಪಟ್ಟಿ ಮಾಡಿ ಕೊಟ್ಟ ಐವತ್ತು ಜನ ಮಹಾಪುರುಷರ ಮತ್ತು ಮಹಾಮಹಿಳೆಯರ ಜೀವನಕಥೆಗಳು ಇವೆ.

ಮಹಾರಾಷ್ಟ್ರ , ಗುಜರಾತ , ಬಂಗಾಲ ಮುಂತಾದ (ನಮಗೆ ) ದೂರದ ಭಾಗಗಳ  ನಾನು ಹೆಸ‌ರೂ ಕೇಳಿಲ್ಲದ‌  ಐತಿಹಾಸಿಕ ಮತ್ತು ಧಾರ್ಮಿಕ ಮಹಾಪುರುಷರ ಬಗೆಗೆ ತಿಳಿದುಕೊಂಡೆ. ಈಗಾಗಲೇ ಪರಿಚಿತರಾಗಿದ್ದ ಇನ್ನು ಕೆಲವರ ಬಗೆಗೆ ಹೆಚ್ಚು ವಿವರವಾಗಿ ಹೆಚ್ಚು ಸರಿಯಾಗಿ ತಿಳಿದುಕೊಂಡೆ.

ಆ ವಯಸ್ಸಿನ‌ ಮಕ್ಕಳಿಗೆ  ಹೇಗೆ ತಿಳಿಸಬೇಕೋ ಆ ಬಗೆಯಲ್ಲಿ ಇವನ್ನು ಬರೆದಿದ್ದಾರೆ.

ಇನ್ನೊಂದು ವಿಶೇಷ ಎಂದರೆ ಮಹಾವ್ಯಕ್ತಿಗಳನ್ನು ಮಾನವರೆಂದು ಪರಿಚಯಿಸಲಾಗಿದೆಯೇ ಹೊರತು ಅತಿಮಾನವರೆಂದು ಪರಿಚಯಿಸಲಾಗಿಲ್ಲ. ಧಾರ್ಮಿಕ ಮಹಾಪುರುಷರ ಮತ್ತು ಭಕ್ತರ ಕತೆಗಳಲ್ಲಿ ಪರಂಪರೆಯಿಂದ ಬಂದ ಪವಾಡದ ಕತೆಗಳಿಗೆ ಹೆಚ್ಚಾಗಿ ಜಾಗ ಕೊಟ್ಟಿಲ್ಲ. ಅನಿವಾರ್ಯವಾಗಿ ಹೇಳಲೇಬೇಕಾದ ಪವಾಡದ ಕತೆಗಳನ್ನು ಕೂಡ ರಂಜಕತೆಯನ್ನು ಕಡಿಮೆ ಮಾಡಿ ಸ್ವಾಭಾವಿಕ ಎನಿಸುವಂತೆ ಹೇಳಲಾಗಿದೆ. ಈ ಐವತ್ತು ಜನರಲ್ಲಿ ಕೆಲವರ ಹೆಸರನ್ನೇ ನಾನು ಕೇಳಿದ್ದಿಲ್ಲ;

ಹಾಗೇ ಪವಾಡಗಳ ಸಂಗತಿಯನ್ನು - ಮಕ್ಕಳಲ್ಲಿ ಕುರುಡುನಂಬಿಕೆಗಳನ್ನು ಉಂಟುಮಾಡದ ಹಾಗೆ - ಹೇಗೆ ತಿಳಿಸಿದ್ದಾರೆ ಎಂಬುದು ಗಮನಿಸತಕ್ಕ ಸಂಗತಿ. ಅಕಾಶವಾಣಿ ಆಯಿತಂತೆ , ಆಕಾಶದಲ್ಲಿ ಬೆಳಕು ಕಂಡಿತಂತೆ, ಐಕ್ಯವಾದರಂತೆ ಮುಂತಾಗಿ ಎಚ್ಚರಿಕೆ ವಹಿಸಿ ಬರೆದಿರುವದು ಮೆಚ್ಚತಕ್ಕ ಸಂಗತಿ.

Rating
No votes yet