ದೇವರಲ್ಲಿ ಮಳೆಗಾಗಿ ಮೊರೆ..

Submitted by ಗಣೇಶ on Tue, 06/24/2014 - 23:57
ಚಿತ್ರ

"ಇನ್ನು ಹದಿನೈದು ದಿನಗಳಲ್ಲಿ ಉತ್ತಮ ಮುಂಗಾರು ಮಳೆಯಾಗದಿದ್ದಲ್ಲಿ, ವಿದ್ಯುತ್ ಉತ್ಪಾದನೆ, ಬೇಡಿಕೆ, ಪೂರೈಕೆ ಸಮತೋಲನ ತಪ್ಪಲಿದೆ. ಆದ್ದರಿಂದ ಉತ್ತಮ ಮಳೆಯಾಗಲಿ ಎಂದು ಪಕ್ಷಾತೀತವಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ."
ಮಾನ್ಯ ಮಂತ್ರಿಗಳೇ ಮನವಿ ಮಾಡಿದ್ದರಿಂದ ಕಡೆಗಣಿಸುವುದು ಸರಿಯಲ್ಲ. ಕೂಡಲೇ ಸಂಪದ ಮಿತ್ರ ಸತೀಶರಿಗೆ ಫೋನ್ ಮಾಡಿದಾಗ "ನರಸಿಂಹ ದೇವರಲ್ಲಿ ಪ್ರಾರ್ಥಿಸುವೆ" ಎಂದು ಹೇಳಿ ಟಕ್ ಅಂತ ಫೋನ್ ಇಟ್ಟರು. ಲಲಿತಾಂಬಿಕೆ ಭಕ್ತರಾದ ಶ್ರೀಧರ್‌ಜಿ ಮೊಬೈಲ್ ಕಾಲ್ ಎತ್ತಲೇ ಇಲ್ಲ. ದೇವಿ ಭಕ್ತ ನಾವಡರಿಗೆ ಫೋನ್ ಮಾಡಿದಾಗ "ಯೋಚಿಸಲೊಂದಿಷ್ಟು" ಸಮಯ ಬೇಕು ಅಂದರು.
"ಆಫೀಸ್ ಟೈಮ್‌ಗೆ ಸರಿಯಾಗಿ BMTC ಖಾಲಿ ಬಸ್ ಸಿಗುವಂತೆ ಮಾಡು ಎಂದು ದಿನಾ ಬೆಳಗ್ಗೆ ಪ್ರಾರ್ಥಿಸುತ್ತೇನೆ. ಒಂದು ದಿನವೂ ಸಿಕ್ಕಿಲ್ಲ. ಇನ್ನು ಮಳೆಗೆ ...ವಿಲ್ಲ. ನೀವು ಹೇಳಿದಿರಿ ಎಂದು ಪ್ರಾರ್ಥಿಸುವೆ, ಆದರೆ ನಿಮ್ಮಲ್ಲಿಗೆ ಬರಲಾಗುವುದಿಲ್ಲ ಮಾರಾಯ್ರೆ." ಅಂದ ಸಪ್ತಗಿರಿವಾಸಿ.
ಲಲಿತಾ ಸಹಸ್ರನಾಮ ಗೀತೆಗಳನ್ನು ರಚಿಸಿದ ನಾಗೇಶರು, ಉತ್ತಮ ಕಾರ್ಯಗಳಿಗೆ ಸದಾ ಸಿದ್ಧರಿರುವ ಕವಿನಾಗರಾಜರು ಬರಲು ಒಪ್ಪಿದರು.
 ನಾನು ಅರೆಬರೆ ದೈವಭಕ್ತ, ನಾಗೇಶರು ಪೂರ್ತಿ ದೈವಭಕ್ತರು,ನಾಗರಾಜರು ನಿರಾಕಾರ ದೈವ ಭಕ್ತರು, ಪಕ್ಷಾತೀತರಾಗಲು ಇನ್ನೊಬ್ಬರ ಅಗತ್ಯವಿದೆ- ನಾಸ್ತಿಕರು! ಕಿವಿಗೆ ಹತ್ತಿ ಇಟ್ಟುಕೊಂಡು ಮಿತ್ರ "ದುರ್ಗುಣ"ರಿಗೆ ಫೋನ್ ಮಾಡಿದೆ-
"**+%॓ &^%* $#@^&& *&*^**..."ಅಂದ್ರು.
ಅಬ್ಬಾ...ಮುಗಿಸಿದ್ರಲ್ಲಾ..ಅವರು ಏನು ಹೇಳಿದರು ಅದು ಮುಖ್ಯ ಅಲ್ಲ. ದೇವರ ವಿಷಯ ಬಂದರೆ ಅವರೆಲ್ಲಿದ್ದರೂ ಬೈಯಲು ಹಾಜರಾಗುವರು ಅಂತ ಗ್ಯಾರಂಟಿ ಇದೆ.
ಮಾರನೇದಿನ ನಾವೆಲ್ಲಾ ಒಟ್ಟಾಗಿ ದೇವರ ಬಳಿ ಹೊರಟೆವು. (ಮೂಗಿನ ಮೇಲಿಂದ ಕೈ ತೆಗೆಯಿರಿ. ಹೇಗೆ ಹೋದೆವು ಅಂತ ತಾನೇ ನಿಮ್ಮ ಪ್ರಶ್ನೆ? ಜ್ಞಾನಿಗಳಿಗೆ ದಾರಿ ಗೊತ್ತಿದೆ, ಅಜ್ಞಾನಿಗಳಿಗೆ ಹೇಳಿ ಪ್ರಯೋಜನವಿಲ್ಲ. ಈ ವಿಷಯ ಬಿಡಿ. ದೇವರ ಬಳಿ ಏನು ಮಾತುಕತೆ ನಡೆಯಿತು ಎಂಬುದು ಮುಖ್ಯ.)
 ದಾರಿಯಲ್ಲಿ ಹೋಗುತ್ತಾ ಕವಿನಾಗರಾಜರು ಹೇಳಿದರು- "ನಾನು ಬೇಡಿಕೆ ಸಲ್ಲಿಸುವ ಮೊದಲು, ನಾಗೇಶರು ದೇವರನ್ನು ಹೊಗಳಿ ಒಂದು ಹಾಡು ಹೇಳಲಿ".
"ಹಾಡು ಅವರು ಬರೆಯಲಿ, ನಾನು ಹಾಡುವೆ" ಎಂದೆ ನಾನು.
"ದೇವರನ್ನೂ ಅಲ್ಲಿಂದ ಓಡಿಸಬೇಕೆಂದಿದ್ದೀರಾ? ನೀವು ಸುಮ್ಮನಿದ್ದರೆ ಸಾಕು." ಅಂದು, ದುರ್ಗುಣರ ಕಡೆ ತಿರುಗಿ- "ನೀವು ಸಹ ಅಲ್ಲಿ ಏನೂ ಮಾತನಾಡಬಾರದು. ನಿಮಗೆ ದೇವರು ಇದ್ದಾರೋ ಇಲ್ಲವೋ ಎಂದು ಪ್ರೂಫ್ ಬೇಕಾಗಿರುವುದು. ಇದ್ದಾರೆ ಎಂದು ಗೊತ್ತಾದ ಮೇಲೆ ಸುಮ್ಮನಿರಬೇಕು." ಅಂದ್ರು.
ದು : "%॑^%&&#@# **(&^%$.." (ಇದೇನೂಂತ ತಲೆಬಿಸಿ ಮಾಡಬೇಡಿ. ನಾವೆಲ್ಲಾ ಮಾಡಿದಂತೆ ನೀವೂ ನಿರ್ಲಕ್ಷಿಸಿ)
ನಾಗರಾಜರ ಬುದ್ಧಿಮಾತು ಕೇಳುತ್ತಾ ಕೇಳುತ್ತಾ ದೇವಲೋಕ ತಲುಪಿದ್ದು ಗೊತ್ತೇ ಆಗಲಿಲ್ಲ! ಎದುರಿಗೆ ಸಾಕ್ಷಾತ್ ದೇವರು!! (ಈಗ ನಾನು ನಿಮ್ಮೆಲ್ಲರ ನಿರೀಕ್ಷೆಯಂತೆ ದೇವರ ಬಗ್ಗೆ ವರ್ಣನೆ ಮಾಡುತ್ತಿದ್ದರೆ, ಮುಖ್ಯ ವಿಷಯ "ಮಳೆ" ಬರಲು ತಡವಾಗುವುದು. ನಾಗೇಶರು "ಪರಿಭ್ರಮಣ" ಮುಗಿಸಿದರೆ, ಈ ವಿಷಯ ಬರೆಯಬಹುದು.)
 ದೇವರ ದೃಷ್ಟಿ ನಮ್ಮ ಮೇಲೆ ಬಿದ್ದಾಗ, ಕವಿನಾಗರಾಜರು ನಾಗೇಶರಿಗೆ ಕಣ್ಸನ್ನೆ ಮಾಡಿದರು. ಸ್ವರಚಿತ ಕವನವನ್ನು ನಾಗೇಶರು ಹಾಡಿದರು. "ವ್ಹಾ..ವ್ಹಾ..ಸುಂದರ ಭಕ್ತಿಗೀತೆ." ಎಂದು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದೆ ನಾನು. ಮೊದಲೇ ಗಂಟಿಕ್ಕಿದ ಹುಬ್ಬನ್ನು ಇನ್ನಷ್ಟು ಗಂಟಿಕ್ಕಿ -"ಯಾರಲ್ಲಿ, ಈತನನ್ನು ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿ"ಎಂದರು ದೇವರು!
(ಮುಂದುವರೆಯುವುದು)
 

Rating
No votes yet

Comments

partha1059

Wed, 06/25/2014 - 08:42

ದಾರಿ ಗೊತ್ತಿಲ್ಲ‌ ಅಂದರೆ ಕೇಳಿ ಹೋಗುವದಲ್ಲವಾ ? ನೀವು ದೇವರು ಎಂದು ದಾರಿ ತಪ್ಪಿ ಮತ್ತೆಲ್ಲಿಗೋ ಹೋದ‌ ಹಾಗಿದೆ, ಬಹುಶ: ಸಿನಿಮಾ ನಟ‌ ದೊಡ್ಡಣ್ಣ‌ (ಯಮಧರ್ಮರಾಯನ‌ ಪಾತ್ರದಾರಿ) ನ‌ ಹತ್ತಿರ‌ ಹೋಗಿರಬಹುದು ಬಿಡಿ.
ದಾರಿ ಗೊತ್ತಿರುವವರನ್ನು ಬಿಟ್ಟು ಹೋದರೆ ಹೀಗೆ ಹಾಗುವುದು :‍)

'ಅವರನ್ನೂ' ಜೊತ್‌ಗೆ ಕರೆದೊಯ್ದದ್ದು .......!!!
ಪವರ್ ಮಿಸ್ನಿಸ್ಟರ್ - ಅಯ್ಯೋ ಪಾ .....!!
ಅಣು -ಪಣು ಕಲ್ಲು ಇದ್ದಿಲು -ಪವನ ಯಾವುದೇ ರೀತಿಯ ವಿದ್ಯುತ ಉತ್ಪಾದನೆ ಆದರೂ ಆಗ್ಲೂ ಈಗಲೂ ನಮ್ಮ ದೇಶ ಹೆಚ್ಚು ಅವಲಂಬಿತ ಆಗಿರೋದು ಜಲ ವಿದ್ಯುತ್ಗೆ .. ಅದು ಕೊಂಚ ಕಡಿಮೆ ವೆಚ್ಚದ್ದು ಅಂತ .....!! ಆಗ್ಲೂ ಈಗಲೂ ಸರಕಾರದಲ್ಲಿರುವ ಮುಖ್ಯಸ್ಥರಿಗೆ ಉಚಿತವಾಗಿ ಧಾರಾಳವಾಗಿ ಸಿಗುವ ಸೂರ್ಯನ ಬೆಳಕು ಇನ್ನೂ ಚುರುಕು ಮುಟ್ಟಿಸಿದ ಹಾಗಿಲ್ಲ ...ಅಥವಾ ಅದರಲ್ಲಿ ಅವ್ಯವಹಾರಕ್ಕೆ ಸಾಧ್ಯವಿಲ್ಲ ಅಂತಲೋ .......ಮನಸು ಆಗಿಲ್ಲ ...!!
ಗುಜರಾತಲ್ಲಿ ಸಾವಿರಾರು ಎಕರೆ ಒಣ ಭೂಮಿಯಲ್ಲಿ ಅದು ಸಾದ್ಯವಾಯ್ತು ....:((
ಮನೆಯಿಂದ ಮೊದಲ ಸ್ಟಾಪು -ಕೊನೆಯ ಸ್ಟಾಫು ಮೆಜೆಸ್ಟಿಕ್ -ಹಾಗ್ಯೆ ಅಲ್ಲಿ ಮೊದಲ ಸ್ಟಾಪ್ -ಕೊನೆ ಸ್ಟಾಪ್ ಕೋರಮಂಗಲ -ಹಾಗಾಗಿ ಹೋಗ್ವಾಗ ಬರುವಾಗ ಸೀಟು ತಪ್ಪಿಸಿಕೊಳ್ಳುವ -ನಿಂತು ಪ್ರಯಾಣಿಸುವ ಪ್ರಶ್ನೆಯೇ ಇಲ್ಲ .... ಏನೋ ಕೊಂಚ ಲೇಟ್ ಆದರೆ ನಿರ್ವಾಹಕ ಚಾಲಕ್ರ ಮೇಲೆ ವಸಿ ರೇಗಾಡೋದು ಮಾತ್ರ ...!!
ಉದ್ದ ಕೂದಲು -ಪಾರ್ಕುಟ್ ಸ್ಕೂಟರು, ದಪ್ಪಗೆ ಎಂದೆಲ್ಲ ಸುಳ್ಳು ಸುಳ್ಳೇ ಹೇಳುತ್ತಾ ..........ರಿ ,
ಮೊನ್ನೆ ನಾನು ನೀವು ಸಿಕ್ಕಾಗ -ಜೊತೆಗೆ ಊಟ ಮಾಡುವಾಗ ಮಾತಾಡಿದಾಗ ನೀವ್ 'ಈ' ಬರ್ಹದ ಬಗ್ಗೆ ಹೇಳಿರಲಿಲ್ಲ ....!!
ನಮ್ಮ ವಿಶೇಷಾತಿವಿಶೇಷ ಭೇಟಿ -ಬಗ್ಗೆ ಬರಹ ನೀವು ಬರೆಯೂವಿರೋ?
ನಾನೇ ಬರೆಯಲೋ?
ಸಂಪದ ಓದುಗ ಬಳಗ ಅದ್ಕಾಗಿ ಖಂಡಿತ ಕುತೂಹಲ್ದಿಂದ ಕಾಯಲಿದೆ ಅನಿಸುತ್ತಿದೆ ..
ನಿಮಮ ಬರಹ್ದ ಮುಂದಿನ ಭಾಗ ರಾತ್ರಿ ಕಾಲ್ ಮಾಡುವಾಗ ಹೇಳಿ .....
ಶುಭವಾಗಲಿ...
ನನ್ನಿ
\|/

>>ಮೊನ್ನೆ ನಾನು ನೀವು ಸಿಕ್ಕಾಗ -ಜೊತೆಗೆ ಊಟ ಮಾಡುವಾಗ ಮಾತಾಡಿದಾಗ ನೀವ್ 'ಈ' ಬರ್ಹದ ಬಗ್ಗೆ ಹೇಳಿರಲಿಲ್ಲ ....!!
-ಸಪ್ತಗಿರಿವಾಸಿಯವರೆ, "ಜೊತೆಗೆ ಊಟ ಮಾಡುವಾಗ" ಬರೆಯಬಾರದಿತ್ತು. ಮೊನ್ನೆ ಮನೆಗೆ ಬಂದವನೇ, ಹಸಿವಿಲ್ಲ, ರಾತ್ರಿ ಊಟ ಬೇಡ ಅಂದಿದ್ದೆ. ಈಗ ನಿಮ್ಮ ಪ್ರತಿಕ್ರಿಯೆ ಓದಿದ ನನ್ನಾಕೆ ಒಂದು ಗಂಟೆ ಕ್ಲಾಸ್ ತೆಗೆದುಕೊಂಡಳು :( . ದೇವರಲ್ಲಿ ಮೊರೆಯ ಮುಂದಿನ ಭಾಗ ಬರೆಯಲಾಗಲಿಲ್ಲ..

>>ದಾರಿ ಗೊತ್ತಿರುವವರನ್ನು ಬಿಟ್ಟು ಹೋದರೆ ಹೀಗೆ ಆಗುವುದು :‍)
:) :) ನಿಮ್ಮನ್ನು ಹುಡುಕಿ ಹುಡುಕಿ ಸಾಕಾಯಿತು. ಸಿಕ್ಕೇ ಇಲ್ಲಾ. ಕವಿನಾಗರಾಜರು ದಾರಿ ತಪ್ಪಲಿಕ್ಕಿಲ್ಲ ಅನ್ನೋ ಧೈರ್ಯದಿಂದ ಜತೆಗೆ ಹೊರಟೆವು. :)
ಪಾರ್ಥಸಾರಥಿ ಹಾಗೂ ಶ್ರೀನಿವಾಸ ಮೂರ್ತಿಯವರಿಗೆ ಧನ್ಯವಾದಗಳು.

ಗನೇ"ಸಣ್ಣ‌" ನವರ‌ ಪ್ರಯತ್ನದ‌ ಫಲವೋ ಏನೋ ಕಾಣೇ, ದುಬೈನಲ್ಲೂ ಈ ದಿನ‌ ಮೋಡ‌ ಕವಿದ‌ ವಾತಾವರಣವಿದೆ, ರಾತ್ರಿಗೆ ತುಂತುರು ಮಳೆಯ‌ ಸಾಧ್ಯತೆಯೂ ಇದೆಯಂತೆ!

ದುಬೈನಲ್ಲೂ ಮಳೆ! ಮಳೆ ಸುರಿದು ನೆರೆ ಬರಬೇಕಾದ ಮಂಗಳೂರಲ್ಲಿ ಬಿಸಿಲು..
ನಿಮ್ಮಲ್ಲೂ ಬರಲಿ, ನಮ್ಮಲ್ಲೂ ಮಳೆ ಬರಲಿ.
ಹೊರಗೆ ಮಳೆಯಾಗದಿದ್ದರೂ ಸಂಪದದಲ್ಲಿ ಮಂಜಣ್ಣ ಕಾಣಿಸಿದರಲ್ಲಾ. ಅದೇ ಖುಷಿ.

neela devi kn

Thu, 06/26/2014 - 08:17

ಗಣೇಶ್ ರವರಲ್ಲಿ ನಮಸ್ಕಾರಗಳು
ನಮ್ಮಲ್ಲೂ ಮೋಡ ಕವಿದಿತ್ತು.ಮಳೆಗಾಗಿ ನಾನು ನಿನ್ನೆ ಹನುಮಂತನನ್ನು "ಈ ದಿನವಾದರೂ ಜೋರಾಗಿ ಮಳೆ ಬರಲಿ" ಎಂದು ಪ್ರಾಥಿಸಿದೆ. ವರುಣನಿಗೆ ಕೋಪಬಂದು ನನನ್ನು ಬಿಟ್ಟು ಹನುಮಂತನನ್ನು ಪ್ರಾಥಿಸುತ್ತಿದ್ದಾಳೆ ಎಂದು ಮೋಡಗಳನ್ನೆಲ್ಲಾ ಕಟ್ಟಿ ಎಳೆದುಕೊಂಡು ಹೊರಟುಹೋದ‌. ನೀಳಾ

ಅಯ್ಯೋ ದೇವರೆ..
ದೇವಲೋಕದಿಂದ ಹೊರಬಂದು, ವರುಣನಿಗೆ ಇನ್ಫ್ಲೂಯೆನ್ಸ್ ಮಾಡಿಸಿ, ಅಮೇರಿಕಾದಲ್ಲಿ ಸುರಿಬೇಕಿದ್ದ ಮಳೆ ಮೋಡಗಳನ್ನು ತರಿಸಿದ್ದೆವು. ಛೇ..

nageshamysore

Fri, 06/27/2014 - 21:14

<<<{ನಾಗೇಶರು "ಪರಿಭ್ರಮಣ" ಮುಗಿಸಿದರೆ, ಈ ವಿಷಯ ಬರೆಯಬಹುದು.}>>>
ಮೂರ್ತಿಗಳು ಪರಿಭ್ರಮಣ ಸೆಂಚುರಿ ಹೊಡೆಯಲಿ ಅಂದರು. ಅವರ ಮಾತನ್ನು ಹುಡುಗಾಟಕ್ಕೆ ನಿಜ ಅಂದುಕೊಂಡೆ, ಅದು ಮುಗಿಸಿ ದೇವರ ವಿವರಣೆಗೆ ಅಂತ ಕೂತರೆ ಇನ್ನೆಷ್ಟು ಕಂತಾಗುವುದೊ ಆ ಭಗವಂತನೆ ಬಲ್ಲ! ಅಂದ ಹಾಗೆ ದೇವರ ಕುರಿತದ್ದೆ ಒಂದು ಸ್ಟೋರಿ ಮಾಡಿ ಯಾಕೆ ಬರೆಯಬಾರದು ಅಂತಲೂ ಅನ್ನಿಸಿತು, ನೋಡೋಣ, ಪರಿಭ್ರಮಣ ಮುಗಿದ ನಂತರ ಇನ್ನು ಬರೆಯುವ ಕಸುವುಳಿದಿದ್ದರೆ ಅದೂ ಆಗಿಬಿಡುವುದೊ ಏನೊ? :-)
ಏನೆ ಆಗಲಿ ಜತೆಗೆ ಶ್ರೀಧರ ಬಂಡ್ರಿಯವರಿದ್ದರೆ ಚೆನ್ನಾಗಿರುತ್ತಿತ್ತು. ಶ್ರೀಲಲಿತೆಯ ಕಡೆಯಿಂದ ಪ್ರಭಾವ ಬೀರಿಸುವ ದಾರಿಯನ್ನು ಪ್ರಯತ್ನಿಸಬಹುದಿತ್ತು - ಪ್ರಿಯಾರಿಟಿ ಮಳೆಗೆ !

>>ಪರಿಭ್ರಮಣ ಮುಗಿದ ನಂತರ ಇನ್ನು ಬರೆಯುವ ಕಸುವುಳಿದಿದ್ದರೆ...
ನಾಗೇಶರೆ, ಕಸುವಿನ ಪ್ರಶ್ನೆಯೇ ಇಲ್ಲ. ನೀವು ಪರಿಭ್ರಮಣದ ಜತೆ ಜತೆಗೆ ಇನ್ನೂ ಅನೇಕ ಧಾರಾವಾಹಿ ಬರೆಯುವ ತಾಕತ್ತಿರುವವರು. ಹೀಗೇ ಬರೆಯುತ್ತಾ ಇರಿ.
ಶ್ರೀಧರ್‌ಜಿ ಸಂಪದದಲ್ಲಿ ಕಾಣದೇ ಬಹಳ ದಿನಗಳಾದವು.. ನಮ್ಮ ಟೀಮ್ ಮಳೆ ತರಿಸುವುದರಲ್ಲಿ ವಿಫಲರಾಗಿರುವುದರಿಂದ ಶ್ರೀಧರ್‌ಜಿ, ಪಾರ್ಥಸಾರಥಿ ಮತ್ತು ಸಪ್ತಗಿರಿವಾಸಿಯವರ ಟೀಮ್ ಪ್ರಯತ್ನಿಸಿದರೆ ಹೇಗೆ...:)
ಮುಂಗಾರು ಮಳೆ ಬಗ್ಗೆ ಒಂದು ಕೊಂಡಿ- http://articles.economictimes.indiatimes.com/2014-06-25/news/50855854_1_...