ಪುಸ್ತಕ ನಿಧಿ - ಅಲೀಸ್ ಇನ್ ವಂಡರ್ ಲ್ಯಾಂಡ್ ಕನ್ನಡದಲ್ಲಿ ನಾ. ಕಸ್ತೂರಿ ಅವರಿಂದ
ಇಂಗ್ಲೀಷಿನಲ್ಲಿ Alice in wonderland ತುಂಬಾ ಹೆಸರಾದ ಪುಸ್ತಕ . ಇಂಗ್ಲೀಷ್ ನ ಈ ಪುಸ್ತಕವನ್ನು ನಾ.ಕಸ್ತೂರಿ ಅವರು ರೂಪಾಂತರಿಸಿದ್ದಾರೆ 'ಪಾತಾಳದಲ್ಲಿ ಪಾಪಚ್ಚಿ ' ಎಂಬ ಹೆಸರಿನಲ್ಲಿ. ಅದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದ ಈ ಕೊಂಡಿಯಲ್ಲಿ ನಿಮಗೆ ಸಿಗುತ್ತದೆ.
ಅಲ್ಲಿನ ಒಂದು ಪುಟ ನಿಮಗಾಗಿ ಇಲ್ಲಿದೆ....
" ಎಲ್ಲ ಹಕ್ಕಿಗಳ ರೆಕ್ಕೆಗಳೂ ಒದ್ದೆಯಾಗಿ ಮೈಗೆ ಅಂಟಿಕೊಂಡಿದ್ದವು. ಅವುಗಳ ಒದ್ದೆ ಆರುವುದು ಹೇಗೆ?
ಇಲಿಯು ತನ್ನಮಾತನ್ನು ಆರಂಭಿಸಿತು ........ ನನ್ನ ಮಾತನ್ನು ಕೇಳುತ್ತ ಇರಿ ; ನಿಮ್ಮ ಒದ್ದೆ ಒಣಗುವುದರಲ್ಲಿ ಸಂಶಯ ಇಲ್ಲ ...ಕೊಂಚ ಒಣ ವೇದಾಂತ ಹೇಳುತ್ತೇನೆ. ಗಮನವಿಟ್ಟು ಕೇಳಿ. ಚೇತನಾಚೇತನಾತ್ಮಕವಾದ ಪಂಚನಭೂತಗಳಿಂದ ಸ್ರಷ್ಟಿಸಲ್ಪಟ್ಟಿರುವ ಈ ಪ್ರಪಂಚಕ್ಕೆ ಚೈತನ್ಯಸ್ವರೂಪನಾದ ಪರಮಾತ್ಮನೇ ಮೂಲಾಧಾರನು. ಚೈತನ್ಯವೆಂಬುದು ಅನಾದಿನಿತ್ಯ , ಸ್ವಯಂಜ್ಯೋತಿ ಮತ್ತು ಅಖಂಡ . ಅದರಲ್ಲಿ ಜ್ನಾನಜ್ನೇಯಾತ್ಮಕವಾದ ಪ್ರಪಂಚವು .... ಇರಲಿ. ಇದಕ್ಕಿಂತ ಶುಷ್ಕವಾದದ್ದು ಇಲ್ಲಿ ಕೇಳಿ. ನಮ್ಮ ದೇಶವು ಉತ್ತರ ಅಕ್ಷಾಂಶ ಹನ್ನೆರಡರಿಂದ ಹದಿನೈದು ಡಿಗ್ರಿವರೆಗೂ ಪಸರಿಸಿದೆ, ಸಮಭಾಜಕವ್ರತ್ತಕ್ಕೂ ಸಂಕ್ರಾಂತಿವ್ರತ್ತಕ್ಕೂ ಮಧ್ಯೆ ಇರುವ ಪ್ರದೇಶಗಳಲ್ಲಿ ಅಹೋರಾತ್ರಿಗಳ ನಡುವಿನ ವ್ಯತ್ಯಾಸ ಕಡಿಮೆ. ಮೇಷ ಸಂಕ್ರಮಣ ಕಾಲದಲ್ಲಿ ಸಮಭಾಜಕ ವ್ರತ್ತದಲ್ಲಿ ಸೂರ್ಯನು ನೆಟ್ಟಗೆ ನೆತ್ತಿಯ ಮೇಲೆ ಕಾಣುವನಷ್ಟೇ , ಆದ ನಮ್ಮ ಸೀಮೆಯಲ್ಲಿ ಕೊಂಚ ಓರೆಯಾಗಿ ಕಾಣುವನು. ಆಗ .........."