ನಿರ್ಲಿಪ್ತ

ನಿರ್ಲಿಪ್ತ

          ಸಂಜೆ ನಾಲ್ಕರ ಹೊತ್ತು ಅಮ್ಮ ಬಿಸಿ ಬಿಸಿ ಕಾಫಿಮಾಡಿ ಅಡುಗೆ ಕೋಣೆಯಿಂದ ಕಿರಣನನ್ನು ಕೂಗುತ್ತಾರೆ.  ಮನೆಯ ಜಗುಲಿಯ ಮೇಲೆ ಕುಳಿತ್ತಿದ್ದ ಕಿರಣ ಮನೆ ಎದುರುಗಡೆಬೇಲಿಗೆ ಸರಿಯಾಗಿ ಇರುವ  ಉಣಗೊಲಿನ ಮಧ್ಯದಿಂದ ಮಣ್ಣಿನ ರಸ್ತೆಯನ್ನು ದಿಟ್ಟಿಸುತ್ತ ಕುಳಿತಿದ್ದಾನೆ. ಮಲೆನಾಡಿನ ಸೆರಗಿನ ಪುಟ್ಟ ಊರು ಅದು. ಮಲೆನಾಡಿನ ಜಡಿ ಮಳೆ ಹಿಡಿದು ನಾಲ್ಕು ದಿನವಾಗಿತ್ತು, ಅವತ್ತು ಮಾತ್ರ ಆಗಸದಲ್ಲಿ ದಟ್ಟ ಮೋಡವಿದ್ದರು ಮಳೆಮಾತ್ರ ಸುರಿಯದೆ ಸುಮ್ಮನೆ ಪನ್ನಿರಿನ ಸಿಂಚನ ಮಾಡಿತ್ತು. ಶಾಲೆಯಿಂದ ಮಕ್ಕಳು ರಸ್ತೆಯಲ್ಲಿ ಆಟವಾಡಿಕೊಂಡು ಮನೆಗೆ ವಾಪಾಸು ಬರುತ್ತಿದ್ದಾರೆ. ಕಿರಣನಿಗೆ ಅಮ್ಮ ಕೂಗಿದ್ದು ಕೇಳಿಸಿತೋ ಇಲ್ಲವೋ ಗೊತ್ತಿಲ್ಲ , ಅವನು ಮಾತ್ರ ಸ್ಥಿತಪ್ರಜ್ಞನಂತೆ ಶಾಲೆಯ ಮಕ್ಕಳು ಮಣ್ಣಿನ ರಸ್ತೆಯಲ್ಲಿರಾಡಿಯೆಬ್ಬಿಸುತ್ತಾ ಹೊಗುವುದನ್ನ ನೋಡುತ್ತಲೇ ಇದ್ದಾನೆ.

ಮನಸ್ಸು ಅನ್ಯಮನ್ಸ್ಕವಾಗಿದ್ದರು  ದೂರದಲ್ಲೆಲ್ಲೋ ಕುಳಿತುಕೊಂಡು ಯಾವುದನ್ನೊ ಧೇನಿಸುತ್ತ ಯೋಚನೆ ಮಾಡುತ್ತ ಕುಳಿತರೆ, ಮತ್ತೆ ಅವನಿಗೆ ವಾಸ್ತವದಲ್ಲಿ ಏನಾಗುತ್ತಿದೆ ಎಂಬುದು ಅರಿವಿಗೆ ಬರುತ್ತಿರಲ್ಲಿಲ್ಲ. ಕಿರಣನಿಗೆಈ ವರ್ಷಕ್ಕೆ ೧೪ ತುಂಬುತ್ತೆ, ಅವನು ಶಾಲೆಗೆ ಹೋಗುತ್ತಿದ್ದರೆ ಈ ಹೊತ್ತಿಗೆ ಎಂಟು ಅಥವಾ ಒಂಬತ್ತನೆ ಈಯತ್ತೆಯಲ್ಲಿ ಇರುತ್ತಿದ್ದ. ಏನೋ ಒಂದೆರಡು ಬಾರಿ ತಂದೆ ಮತ್ತು ತಾಯಿ ಶಾಲೆಗೆ ಬಿಟ್ಟು ಬಂದಿದ್ದುಮತ್ತುಆ ಕ್ಷಣವೇ ಅವರ ಹಿಂದೇನೆ ಓಡಿ ಬಂದಿದ್ದು ಆಗಿದೆ. ಅದರ ನಂತರ ಅವನು ಶಾಲೆಯ ಮುಖ ನೋಡಿದವನಲ್ಲ.  ಅವನದು ಮಗುವಿನಂಥಮುಗ್ಧ ಮನಸ್ಸುಮತ್ತು ಪ್ರಾಪಂಚಿಕ ಜ್ಞಾನ ಇಲ್ಲದಶುದ್ಧ ತಿಳಿ ನೀರಿನಂಥ ಮನಸ್ಸು.   ಹಾಗಾಗಿಅವನ ಓರಗೆಯವರು ತಮ್ಮೊಂದಿಗೆ ಆಟ ಆಡಲು ಅವನಿಗೆ ಅರ್ಹತೆ ಇಲ್ಲದ ಹಾಗೆ ಮೂದಲಿಸುತ್ತ ಆತನನ್ನು ತಮ್ಮ ಚೇಸ್ಟೆಯ ವಸ್ತುವಾಗಿರಿಸಿಕೊಂಡಿದ್ದರುಮತ್ತು ಆತ ಸಿಕ್ಕಲ್ಲಿಆಗಾಗಅವನಿಗೆತೊಂದರೆ ಕೊಡುತ್ತಿದ್ದರು.

ಕಿರಣನಿಗೆ ಅದೆಲ್ಲವೂ ತಿಳಿಯುತ್ತಿರಲಿಲ್ಲಯಾರು ಮತ್ತು ಏಕೆ ಆತನಿಗೆ ತೊಂದರೆ ಕೊಡುತ್ತಿದ್ದಾರೆ ಮತ್ತು ಅವರಿಗೆ ತಿರುಗಿ ಉತ್ತರ ನೀಡುವಂಥ ಮಾನಸಿಕ ಶಕ್ತಿ ಮತ್ತು ತಿಳಿವಳಿಕೆ ಕೂಡ ಅವನಲ್ಲಿಇರಲ್ಲಿಲ್ಲ. ಅವನುಹಾಗೆ ಯಾರೊಂದಿಗೂ ಹೆಚ್ಚಾಗಿಬೆರೆಯುತ್ತಿರಲ್ಲಿಲ್ಲ. ಯಾರ ಜೊತೆಗೂ ಮಾತನಾಡುವುದು ಕಡಿಮೆ ಇತ್ತು. ಒಬ್ಬನೇ ಇರುವಾಗ ಮನೆಯಲ್ಲಿತಾನುಕೇಳಿ ತಿಳಿದಂತಹ ತಾಯಿ ಮತ್ತು ತನ್ನ ತಮ್ಮಂದಿರಿಬ್ಬರ ನಡುವಿನ ಸಂಭಾಷಣೆಯ  ಪದಗಳನ್ನೇ ಪುನಃ ಪುನಃ ಉಚ್ಚರಿಸುತ್ತ ತನ್ನದೇ ಆದ ಪ್ರಪಂಚದಲ್ಲಿ ಮುಳುಗಿರುತ್ತಿದ್ದ.  ಆತನ ಇಬ್ಬರು ತಮ್ಮಂದಿರು ಆರು ಮತ್ತು ಏಳನೇ ಈಯತ್ತೆಯಲ್ಲಿ ಓದುತ್ತಿದ್ದಾರೆ.  ಇಬ್ಬರು ಶಾಲೆ ಮುಗಿಸಿ ಮನೆ ಎದುರಿಗಿರುವ ಉಣಗೊಲು ತೆಗೆಯುತ್ತಿದ್ದಾರೆ.  ಎಲ್ಲೋ ನೋಡುತ್ತಿದ್ದ ಕಿರಣ ಪಕ್ಕನೆಅವರತ್ತ ತಿರುಗಿ ಒಂದು ಕಿರುನಗೆ ಬೀರಿ ಮತ್ತೆಮೋಡ ಕವಿದ ಆಗಸದಲ್ಲಿ ದೃಷ್ಟಿ ನೆಟ್ಟಿದ. ಇಬ್ಬರುತಮ್ಮಂದಿರು ತಮ್ಮ ತಮ್ಮಲ್ಲೇ ಮಾತಾಡುತ್ತ  ಮನೆಯ ಜಗುಲಿಗೆ ಬಂದುಚಪ್ಪಲಿಗಳನ್ನು ಕಳಚಿ ಒಳನಡೆದರು.

ಕಿರಣ ಸಣ್ಣವನಿದ್ದಾಗ ಅವನನ್ನು ಹೆಚ್ಚಾಗಿ ನೋಡಿಕೊಂಡಿದ್ದು ಆತನ ಅತ್ತೆ ಮತ್ತು ಅವರ ಮಕ್ಕಳು.ಅವನು ರಚ್ಚೆ ಹಿಡಿದಾಗಲೆಲ್ಲ ಅತ್ತೆಯವರೇ ಬೇಕಾಗಿದ್ದಿತು ಸಮಾಧಾನ ಪಡಿಸಲು, ಕಿರಣನಿಗೆ ಅವನ ಅತ್ತೆ ಅಂದರೆ ತುಂಬಾ ಪ್ರೀತಿ, ಯಾಕಂದರೆ ಅವನ ತಂದೆ ಮತ್ತು ತಾಯಿಗಿಂತಲೂ ಅತ್ತೆ ಹೆಚ್ಚಾಗಿ ಅಕ್ಕರೆ ತೋರಿಸುತ್ತಾರೆ ಮತ್ತು ಕೂಡಕಿರಣನನ್ನು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.  ಅತ್ತೆಯವರಿಗೆ ಕಿರಣನ ಕಾಹಿಲೆ ಗೊತ್ತಿತ್ತು . ಅವನದಲ್ಲದ ತಪ್ಪಿಗೆ ದೇವರುಯಾಕಿಷ್ಟು ತೊಂದರೆ ಕೊಡುತ್ತಾನೆ ಎಂದು ಮಮ್ಮಲ ಮರುಗಿದ್ದರು. ಆತನು ಎಲ್ಲರಂತೆ ಶಾಲೆಗೆ ಹೋಗಿವಿದ್ಯೆಕಲಿತು ದೊಡ್ಡವನಾಗಿ ಕೆಲಸಕ್ಕೆ ಸೇರಬೇಕೆಂಬ ಆಶಯ ಅವರಿಗಿದ್ದಿತ್ತು.ಕಿರಣನ ಅತ್ತೆಯವರು ಮೊದಲು ಕಿರಣನ ಊರಲ್ಲೇ ಇದ್ದಿದ್ದರು. ಈಚೆಗೆ ಕಳೆದ ಎರಡು ವರ್ಷಗಳ ಹಿಂದೆಅವರ ಮಗನಿಗೆಶಿವಮೊಗ್ಗೆಯಲ್ಲಿ ಕೆಲಸವಾದುದರಿಂದಅವರು ಕೂಡ ಮಗನ ಹಿಂದೆ ಶಿವಮೊಗ್ಗೆಗೆ ಹೋದರು.

        ಅತ್ತೆ ಅವನನ್ನು ಬಿಟ್ಟು ಶಿವಮೊಗ್ಗೆಗೆ ಹೊರಡುವಾಗ ಅವನಿಗಾದ ನೋವುಅಷ್ಟಿಷ್ಟಲ್ಲ.ಅವನಿಗೆ ಗೊತ್ತಿತ್ತು ಅವನನ್ನು ಅವನ ತಾಯಿಗಿಂತ ಹೆಚ್ಚಾಗಿನೋಡಿಕೊಂಡಿದ್ದು ಮತ್ತು ತಂದೆಯ ಹೊಡೆತಗಳಿಂದ ತಪ್ಪಿಸಿದ್ದುಅವರೆ,ಅವರು ಊರಿಗೆ ಹೋಗಿ ಎಷ್ಷ್ಟೋ ದಿನಗಳವರೆಗೆ ಅಳುತ್ತಲೇ ಇದ್ದ.ಆತನಬಗ್ಗೆ ಯಾರು ಅಷ್ಸ್ತೊಂದು ಕಾಳಜಿ ತೋರಿಸುತ್ತಿಲ್ಲವಾದ್ದರಿಂದ ಹೀಗೆ ದಿನಗಳು ಕಳೆದಂತೆ ಕಿರಣ ಮಂಕಾಗುತ್ತ ಹೋದ.  ಕಿರಣ ಚಿಕ್ಕ ಮಗುವಿದ್ದಾಗ ಸ್ಪುರದ್ರೂಪಿಯಾಗಿದ್ದ, ಅವನೆ ಮನೆಯ ಮೊದಲ ಮಗುವಾಗಿದ್ದರಿಂದ ಮನೆಯವರೆಲ್ಲರಿಗೂ ಅಚ್ಚುಮೆಚ್ಚು ಆಗಿದ್ದ.ಒಂದು ವರ್ಷದವನಿರುವಾಗ ಒಳ್ಳೆ ಬೆಳ್ಳಗೆ ಗುಂಡ ಗುಂಡಗೆ ನೋಡಿದವರ ದೃಷ್ಟಿ ತಾಕುವಂತೆ ಇದ್ದ.ಪಕ್ಕದ ಮನೆಯವರು ಇವರ ಮನೆಗೆ ಬಂದರೆ ಮಗುವಿನ ಕೆನ್ನೆ ಚಿವುಟದೆ ಹೋಗುತ್ತಿರಲಿಲ್ಲ. ಮಗು ರಚ್ಚೆ ಹಿಡಿದಾಗ ಒಂದು ಕೆಂಪು ಮೆಣಸುಹಿಡಿದು ದೃಷ್ಟಿ ತೆಗೆದು ಉರಿವ ಒಲೆಗೆ ಎಸೆದು ಅದು ಛಟ ಛಟಾರನೆ ಸಿಡಿಯಲುಅವನ ಅಜ್ಜಿ ಯಾರೋ ಮುಂಡೆರ ಕಣ್ಣು ಬಿದ್ದಿದೆ ಮಗುವಿಗೆ ಎಂದು ಹಲುಬುತ್ತಿದ್ದರು.

ಒಂದು ವರ್ಷದವರೆಗೆ ಚೆನ್ನಾಗಿದ್ದ ಅವನಿಗೆ , ಯಾವಾಗ ಅಂಬೆಗಾಲು ಇಡಲು ಪ್ರಾರಂಭಿಸಿದ ಅಲ್ಲಿಂದ ಅವನಿಗೆ ತೊಂದರೆ ಶುರುವಾಯಿತು. ಅವನಿಗೆ ಜೆನೆಟಿಕ್ಸ್ abnormalitise ಇರುವುದು ಕಂಡು ಬಂತು.  ಕಾರಣ ಅವನ ತಂದೆ ತನ್ನ ಸ್ವಂತ ಸೋದರ ಮಾವನ ಮಗಳನ್ನೇ ವರಿಸಿದ್ದ.ಬಾಲ್ಯದಲ್ಲಿ ಕಿರಣನಿಗೆ ಸರಿಯಾಗಿ ನಿಲ್ಲಲು ಬರುತ್ತಿರಲ್ಲಿಲ್ಲ ಸ್ವಲ್ಪ ನಡೆದ ತಕ್ಷಣ ಕುತ್ತಿಗೆಯಲ್ಲಿ ಬಲ ಕಳೆದುಕೊಂಡಂತಾಗಿ ಧಡಾರನೆ ಸಿಮೆಂಟಿನ ನೆಲದ ಮೇಲೆ ಬೀಳುತ್ತಿದ್ದ.  ಬಿದ್ದ ಹೊಡೆತಕ್ಕೆ ತಲೆಗೆ ಪೆಟ್ಟಾಗಿ ಗಾಯವಾಗುತ್ತಿತ್ತು.ಹೀಗೆ ಎಷ್ಟೋ ಸಲ ಬೀಳುವುದು ಏಳುವುದು ಇದ್ದೆ ಇತ್ತು. ಮೊದಲಿಗೆ ಯಾಕೆ ಮಗುವಿಗೆ ಈ ರೀತಿ ಆಗುತ್ತಿದೆ ಎಂದು ಯಾರಿಗೂ ಗೊತ್ತಿರಲಿಲ್ಲ.ಆತನ ತಂದೆ ತಾಯಿ ಅಷ್ಟೇನೂ ವಿದ್ಯಾವಂತರಲ್ಲ.ಅವರು ಮೊದಲಿಗೆ ಇದುಯಾವುದೊದೈವದತೊಂದರೆ ಎಂದು ಎಲ್ಲ ದೈವ, ದೇವಸ್ಥಾನಗಳನ್ನು ಸುತ್ತಿದ್ದು ಆಯ್ತು. ಮೈಮೇಲೆ ದೇವರು ಬರಿಸಿದ್ದು ನೋಡಿ ಆಯ್ತು ಅದರೆ ತೊಂದರೆ ಜಾಸ್ತಿಯಯಿತೆ ಹೊರತು ಕಡಿಮೆ ಆಗಲಿಲ್ಲ.

ಆಯುರ್ವೇದ ವೈದ್ಯರಲ್ಲಿ ತೋರಿಸಿದರು ಮತ್ತು ಆಲೋಪತಿ ಚಿಕಿತ್ಸೆ ಕೊಡಿಸಿದರು ಎಲ್ಲೂ ಕೂಡ ಸರಿ ಹೋಗಲಿಲ್ಲ.ಎಲ್ಲಿಗೆ ಹೋದರು ರೋಗದ ಗುಣಲಕ್ಷಣ ನೋಡಿ ಔಷಧ ನೀಡುತ್ತಿದ್ದರು ಹಾಗಾಗಿಎಲ್ಲೂ ಕೂಡ ಕಿರಣನ ತಂದೆ ಹತ್ತಿರದ ಸಂಬಂಧದಲ್ಲಿ ಮದುವೆಯಗಿದ್ದುದು ಕಾರಣ ಎಂದು ಹೇಳುವ ಪ್ರಮೇಯವೇ ಬರುತ್ತಿರಲ್ಲಿಲ್ಲ ಮತ್ತು ಡಾಕ್ಟರಗೆ ಇವರ ಹತ್ತಿರ ಸಂಬಂಧದದ ಬಗ್ಗೆ ಗೊತ್ತು ಇರುತ್ತಿರಲಿಲ್ಲ ಎಲ್ಲಾ ಸಾಮಾನ್ಯಪೇಷೆಂಟ್ಗಳಂತೆ ಇವರನ್ನು ನೋಡುತ್ತಿದ್ದರು. ಅದರಿಂದ ಕಾಹಿಲೆಗೆ ನಿಜವಾದ ಕಾರಣವೇನೆಂದು ಯಾರಿಗೂ ಗೊತ್ತಾಗುತ್ತಿರಲ್ಲಿಲ್ಲ. ಎಲ್ಲರು ಇದು ದೈವದ ಚೇಸ್ಟೆ ಎಂದು ಮೊದಲುನಂಬಿದ್ದರು. ಕೊನೆಗೊಮ್ಮೆ ಶಿವಮೊಗ್ಗದಲ್ಲಿ ನರರೋಗ ತಜ್ಞರಲ್ಲಿ ಕರೆದು ಕೊಂಡು ಹೋದಾಗ ಅವರು ಪೂರ್ವಾಪರ ವಿಚಾರಿಸಿದಾಗ ನಿಜವಾದ ಕಾರಣ ತಿಳಿದು ಬಂತು. ಅವರಿಂದ ಇಲ್ಲಿಯವರೆಗೆ ಚಿಕಿತ್ಸೆಕೊಡಿಸುತ್ತಿದ್ದಾರೆ. ಅಷ್ಟು ಸಣ್ಣ ವಯಸ್ಸಿನಲ್ಲೇ ಮಾತ್ರೆ ತಿನ್ನೋದು ಆರಂಭಿಸಿದ್ದುಅದುಇದುವರೆಗೂ ನಿಂತಿಲ್ಲ, ಅವನಿಗೆ ಶೀತ ಪ್ರಕೃತಿಯಿಂದ ದೂರ ಇರಬೇಕುಮತ್ತು ಒಂದು ದಿನ ಕೂಡ ಮಾತ್ರೆ ತಪ್ಪಿಸುವಂತಿರಲಿಲ್ಲ ಅಕಸ್ಮಾತ್ ತಪ್ಪಿದ್ದಲ್ಲಿ ನರದಲ್ಲಿ ಬಲಹೀನತೆ ಕಳೆದುಕೊಂಡು ಕುಸಿದು ಬೀಳುತ್ತಿದ್ದ.

          ಇಂಥ ತೊಂದರೆ ಇರುವುದರಿಂದ ಎಂಟು, ಒಂಬತ್ತು ವರ್ಷದವರೆಗೆ ಮನೆಯಲ್ಲಿ ಅವನಿಗೆ ಶಾಲೆಗೆ ಕಳುಹಿಸುತ್ತಿರಲಿಲ್ಲ. ಎಲ್ಲಾದರೂ ಶಾಲೆಯಲ್ಲಿ ಬಿದ್ದರೆ ಅವನನ್ನು ನೋಡಿಕೊಳ್ಳುವರು ಯಾರು ಎಂಬ ಸಹಜ ಆತಂಕ ಅವರಲ್ಲಿತ್ತು. ಹಾಗಾಗಿ ಮನೆಯಲ್ಲಿ ಇಟ್ಟು ಒಬ್ಬ ಟೀಚರ್ಗೆ ಪಾಠ ಹೇಳಲು ಗೊತ್ತು ಮಾಡಿದರು. ಆದರೆ ಮೊದಲೇ ಯಾವುದೇ ಕಾರ್ಯ ಚಟುವಟಿಕೆ ಇಲ್ಲದ ದೇಹ ಮತ್ತು ಮನಸ್ಸು ಇನ್ನು ಮಗುವಿನ ಹಾಗೆ ಇರುವುದರಿಂದ ಅವನಿಗೆಅವರೊಂದಿಗೆಹೆಚ್ಚಾಗಿ ಹೊಂದಿಕೊಳ್ಳಲುಸಾಧ್ಯವಾಗಿಲ್ಲ ,  ಹಾಗಾಗಿ ಅವರಿಂದ ಹೆಚ್ಚೇನು ಉಪಯೋಗವಾಗಲಿಲ್ಲ.  ಹತ್ತು ವರುಷದವನಿರುವಾಗ ಅವನ ಅತ್ತೆ ಶಾಲೆಗೆ ಕರೆದುಕೊಂಡು ಹೋಗಿ ಶಾಲೆಯ ಮಾಸ್ತರರಲ್ಲಿ ಮಾತನಾಡಿ ಅವರನ್ನ ಒಪ್ಪಿಸಿ ೩ನೆಯ ಇಯತ್ತೆಯಲ್ಲಿ ಕೂರಿಸಿ ತಾವು ಸ್ವಲ್ಪ ಹೊತ್ತು ಅವನ ಜೊತೆಗೆ ಇರುತ್ತಿದ್ದರು. ಇತರ ಮಕ್ಕಳು ಅವನ ಅತ್ತೆ ಇರುವತನಕ ಸುಮ್ಮನ್ನಿದ್ದು ಅವರು ಹೋದ ಮೇಲೆ ಅವನ ಮೇಲೆ ತಮ್ಮ ಚೇಸ್ಟೆಯನ್ನು ಪ್ರಾರಂಭಿಸುತ್ತಿದ್ದರು. ಇವರಚೇಸ್ಟೆಗೆಹೆದರಿ ಅವನ ಮನಸ್ಸಲ್ಲಿ ಭಯ ಮನೆ ಮಾಡಿತು. ಅದರ ನಂತರ ಶಾಲೆ ಬಗ್ಗೆ ಹೆಸರು ಎತ್ತಿದರೆ ಅವನಿಗೆ ನಡುಕ ಹತ್ತಲು ಶುರುವಾಯಿತು. ಮತ್ತೆ ಮನೆಯವರೆಲ್ಲಾ ಇವನು ಇನ್ನು ಮನೆಯಲ್ಲೇ ಇರಲಿ ಎಂದು ತೀರ್ಮಾನಿಸಿದರು.

              ತಂದೆಗೆ ಮೊದಲು ತುಂಬಾ ಪ್ರೀತಿಯಿತ್ತು ಮೊದಲ ಮಗ ಕಿರಣನ ಬಗ್ಗೆ, ಆದರೆ ಈ ಕಾಹಿಲೆಯಿಂದ ಅವ್ರು ರೋಸಿಹೋಗಿದ್ದರು. ತುಂಬಾ ಖರ್ಚು ಮಾಡಿ ಮಗನನ್ನು ಗುಣ ಪಡಿಸಲು ಪ್ರಯತ್ನಿಸಿದರೂ, ಆಮೇಲೆ ಅವರ ಸಂಸಾರ ಬೆಳೆದಂತೆ ಮಧ್ಯಮ ವರ್ಗದ ಕುಟುಂಬವಾದ್ದರಿಂದ ದುಡಿಮೆ ಅನಿವಾರ್ಯವಾಗಿತ್ತು.  ಹಾಗಾಗಿ ಹೊರಗಡೆ ದುಡಿದು ಸುಸ್ತಾಗಿ ರಾತ್ರೆ ಬರುತ್ತಿದ್ದ ತಂದೆಗೆ ಮಗನ ಬಗ್ಗೆ ಹೆಚ್ಚಿಗೆ ಕಾಳಜಿ ತೋರಲು ಆಗುತ್ತಿರಲಿಲ್ಲ. ಆದರೆ ಕಿರಣ ಎಲ್ಲಾ ಸಾಮಾನ್ಯ ಮನುಷ್ಯರಂತೆ ಬದಲಾಗುತ್ತನೆಂದು ಅವರಿಗೆ ನಂಬಿಕೇನೆ ಇರಲಿಲ್ಲ.ಹೀಗಾಗಿ ಕಿರಣನಿಗೆ ಅವನ ಪ್ರೀತಿಯ ಅತ್ತೆಯ ಸನಿಹ ಬೇಕಾಗಿದ್ದಿತ್ತು.ಅವತ್ತು ಕೂಡಅವನಅತ್ತೆ ಶಿವಮೊಗ್ಗೆಯಿಂದ ಬಂದ್ರು ಅವರು ಉಣಗೊಲಿನ ಹತ್ತಿರ ಬರುತ್ತಿದ್ದಂತೆ ಅವನ ಮೈಯಲ್ಲಿ ಮಿಂಚಿನ ಸಂಚಾರವಾಗಿ‘ಅತ್ತೆ ಬಂದ್ರು’ ‘ಅತ್ತೆ ಬಂದ್ರು’ ಎಂದು ಉದ್ಘರಿಸಿದ.  ಅತ್ತೆಗೂ ಕೂಡ ಅವನನ್ನು ನೋಡಿ ಖುಷಿಯಾಗಿಬಾಚಿ ತಬ್ಬಿಕೊಂಡರು. ತುಂಬಾ ಹೊತ್ತು ಮಾತುಕತೆ ನಡಿಯಿತು ತಮ್ಮಂದಿರ ಬಗ್ಗೆ ದೂರನ್ನು ಹೇಳಿ ಅತ್ತೆಯಿಂದ ಅವರಿಗೆ ಬಯ್ಯಿಸಿ ನಂತರಅವನಿಗೆ ಸಮಾಧಾನವಾಯಿತುಆ ಸಂದರ್ಭದಲ್ಲಿ ಕಿರಣನಿಗೆ ನಿದ್ದೆ ಬಂದದ್ದೆ ಗೊತ್ತಾಗಲ್ಲಿಲ್ಲ.ಅತ್ತೆ ಅವನನ್ನು ಮತ್ತೆ ಎಬ್ಬಿಸಿ ಊಟ ಮಾಡಿಸಿ ತಮ್ಮ ಪಕ್ಕದಲ್ಲೇ ಮಲಗಿಸಿಕೊಂಡರು. ಹೀಗೆನಾಲ್ಕು ದಿನ ಮನೆಯಲ್ಲಿದ್ದ ಅತ್ತೆ ೫ದನೆ ದಿನಕ್ಕೆಊರಿಗೆ ಹೊರಡಲು ಅನುವಾದರು. ಅವರು ಇದ್ದಷ್ಟು ದಿನ ಕಿರಣ ತುಂಬಾ ಗೆಲುವಾಗಿ ಇದ್ದ ಎಲ್ಲರೊಂದಿಗೆ ಖುಷಿ ಖುಷಿಯಾಗಿ ಇದ್ದ. ಅವರು ಹೊರಡುವ ದಿನ ಕಿರಣ ತುಂಬಾ ಮೌನಿಯಾಗಿದ್ದ.  ಅತ್ತೆಯನ್ನು ಉಣಗೊಲಿನವರೆಗೆ ಬೀಳ್ಕೊಟ್ಟ ಕಿರಣ ತಾನು ಅಲ್ಲೇ ನಿಂತು ಅತ್ತೆಗೆ ಟಾಟಾ ಮಾಡಿದ. ಅತ್ತೆ ರಸ್ತೆ ದಾಟುವವರೆಗೂ ತನ್ನ ದೃಷ್ಟಿ ನೆಟ್ಟ.ಅತ್ತೆ  ತಿರುಗಿ ಕಿರಣನನ್ನುನೋಡಿದರು ಕಿರಣಬುದ್ಧನ ನಗೆ ನಕ್ಕ ಅತ್ತೆಯ ಕಣ್ಣಂಚಲಿ ನೀರಿತ್ತು ಹಾಗೆಯೇಕಿರಣನ ಎರಡುಗಲ್ಲ ಕಣ್ಣೀರಿಂದ ತೋಯ್ದು ಹೋಗಿತ್ತು.