ಭಾಗ - ೪: ವೇದಗಣಿತ ಕಿರು ಪರಿಚಯ - ವೇದಾಂತದಲ್ಲಿ ಕಟಪಯಾದಿ ಪದ್ಧತಿ

ಭಾಗ - ೪: ವೇದಗಣಿತ ಕಿರು ಪರಿಚಯ - ವೇದಾಂತದಲ್ಲಿ ಕಟಪಯಾದಿ ಪದ್ಧತಿ

ಚಿತ್ರ

ಭಾಗ - ೪: ವೇದಗಣಿತ ಕಿರು ಪರಿಚಯ - ವೇದಾಂತದಲ್ಲಿ ಕಟಪಯಾದಿ ಪದ್ಧತಿ 
ವಿಷಯ: ಆದಿ ಶಂಕರರು ರಚಿಸಿದ ಸ್ತ್ರೋತ್ರದಲ್ಲಿ ಕಟಪಯಾದಿ ಪದ್ಧತಿಯ ಕಲ್ಪನೆ
ವಿವರಣೆ: ಆದಿ ಶಂಕರರು ರಚಿಸಿರುವ ಒಂದು ಶ್ಲೋಕವು ಈ ಕೆಳಗಿನಂತಿದೆ.
ನ ತಾತೋ ನ ಮಾತಾ ನ ಬಂಧುರ್ನ ನಾಪ್ತಾ
ನ ಪುತ್ರೋ ನ ಪುತ್ರೀ ನ ಭೃತ್ಯೋ ನ ಭರ್ತಾ l
ನ ಜಾಯಾ ನ ವಿದ್ಯಾ ನ ವೃತ್ತಿರ್ಮಮೈವ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾಭವಾನಿ ll
ಅರ್ಥ: ಓ ಭವಾನಿಯೇ! ನನ್ನ ಪಿತನಾಗಲಿ, ಮಾತೆಯಾಗಲಿ ನನ್ನ ರಕ್ಷಕರಲ್ಲ. ನನ್ನ ಬಂಧುವಾಗಲಿ, ಆಪ್ತನಾಗಲಿ, ಪುತ್ರನಾಗಲಿ, ಪುತ್ರಿಯಾಗಲಿ, ಭೃತ್ಯನಾಗಲಿ (ಸೇವಕನಾಗಲಿ), ಭರ್ತನಾಗಲಿ (ಒಡೆಯನಾಗಲಿ), ಹೆಂಡತಿಯಾಗಲಿ, ನನ್ನ ವಿದ್ಯೆಯಾಗಲಿ, ನನ್ನ ವೃತ್ತಿಯಾಗಲಿ, ಯಾವುದೂ ಅಲ್ಲ. ಕೇವಲ ನೀನೊಬ್ಬಳೆ, ನೀನೊಬ್ಬಳೆ ಅಂತಿಮ ಗತಿಯು (ರಕ್ಷಕಳು/ದಿಕ್ಕು). 
ಕಟಪಯಾಧಿಯ ಹಿನ್ನೆಲೆಯಲ್ಲಿ ಸ್ತ್ರೋತ್ರದ ವ್ಯಾಖ್ಯಾನ : 
೧) ದ್ವಿಮಾನ ಪದ್ಧತಿಯಂತೆ ಒಂದು ಸಂಖ್ಯೆಯು ಅಂತಿಮವಾಗಿ ’೦’ ಹಾಗು ’೧’ಗಳೊಂದಿಗೆ ಸಂಬಂಧ ಹೊಂದಿರುತ್ತದೆ.  ವಿಭಜಿಸಲ್ಪಡುತ್ತದೆ. ಅದೇ ವಿಧವಾಗಿ ಒಬ್ಬ ಮಾನವನ ರೂಪವು ಅಂತಿಮವಾಗಿ ಭೌತಿಕ ಹಾಗು ಆಧ್ಯಾತ್ಮಿಕ ವಸ್ತುಗಳೊಂದಿಗೆ ಅನುಬಂಧವನ್ನು ಹೊಂದಿರುತ್ತದೆ. 
೨) ಈ ಎರಡು ವಿಧವಾದ ವಸ್ತುಗಳಲ್ಲಿ ಅಂತಿಮವಾಗಿ ಭೌತಿಕವಾದ ವಸ್ತುಗಳು ಸೊನ್ನೆಗಳಂತೆ ನಿರುಪಯುಕ್ತವಾಗಿವೆ.
೩) ’ನ’ ಅಕ್ಷರಕ್ಕೆ ’ಕಟಪಯಾದಿ - ೨ ಪದ್ಧತಿ’ಯಂತೆ ಸೊನ್ನೆ ಬೆಲೆಯನ್ನು ನಿಗದಿಗೊಳಿಸಿದಾಗ, ಮೇಲಿನ ಶ್ಲೋಕವು ಎಲ್ಲಾ ವಿಧವಾದ ಭೌತಿಕ ಕಾಯಗಳು - ತಂದೆ, ತಾಯಿ, ಮಗ, ಮಗಳು ಎಲ್ಲವೂ ಶೂನ್ಯ ಅಂದರೆ ಬೆಲೆಯಿಲ್ಲದವುಗಳಾಗುತ್ತವೆ.
೪) ಅಂತಿಮವಾಗಿ ಆಧ್ಯಾತ್ಮಿಕ ವಸ್ತುವೊಂದೇ ಬೆಲೆಯುಳ್ಳದ್ದು ಅಥವಾ ಉಪಯೋಗವುಳ್ಳದ್ದಾಗುತ್ತದೆ. 
೫) ಮೇಲಿನ ಸ್ತೋತ್ರದಲ್ಲಿ ಭವಾನಿ ದೇವಿಯನ್ನು ಉದ್ದೇಶಿಸಿ ಹೇಳಿರುವ ’ಏಕ’ ಶಬ್ದಕ್ಕೆ ಸಂಖ್ಯೆ ಒಂದು - ೧,  ಎನ್ನುವುದು ಅದರ ಪದಶಃ ಅರ್ಥವಾಗಿದೆ. 
೬) ಅದರ ಅರ್ಥ ಭವಾನಿ ಮಾತ್ರಳೇ ’ಒಂದು’ ಆಗಿದ್ದಾಳೆ ಅಂದರೆ ಉಪಯೋಗವುಳ್ಳವಳಾಗಿದ್ದಾಳೆ. 
೭) ಸಂಖ್ಯೆ ೧ (ಒಂದು) ಎಡಭಾಗಕ್ಕೆ (LHS) ಎಷ್ಟೇ ಸೊನ್ನೆಗಳನ್ನು ಇರಿಸಿದರೂ ಅದರ ಬೆಲೆ ಹೆಚ್ಚಾಗುವುದಿಲ್ಲ. ಇದರ ಅಂತರಾರ್ಥವು ಒಬ್ಬ ವ್ಯಕ್ತಿಯು ಭೌತಿಕ ವಸ್ತುಗಳಿಗೆ ಎಷ್ಟೇ ಪ್ರಾಧಾನ್ಯತೆಯನ್ನು ಕೊಟ್ಟರೂ ಅದರಿಂದ ಅವನಿಗೆ ಯಾವುದೇ ಪ್ರಯೋಜನವಿಲ್ಲ. 
೮) ಯಾವಾಗ ಸಂಖ್ಯೆ ೧ಕ್ಕೆ ಪ್ರಾಧಾನ್ಯತೆಯು ಏರ್ಪಡುತ್ತದೆಯೋ ಅಂದರೆ ಯಾವಾಗ ಸಂಖ್ಯೆ ೧ರ ಬಲಗಡೆ (RHS) ಸೊನ್ನೆಗಳನ್ನು ಸೇರಿಸುತ್ತಾ ಹೋಗುತ್ತೇವೆಯೋ ಆಗ ಸಂಖ್ಯೆಯ ಬೆಲೆಯು ಹೆಚ್ಚಳವಾಗುತ್ತಾ ಹೋಗುತ್ತದೆ. ಇದರ ಅಂತರಾರ್ಥವು ಯಾವಾಗ ಒಬ್ಬ ವ್ಯಕ್ತಿಯು ಆಧ್ಯಾತ್ಮಿಕ ವಿಷಯಗಳಿಗೆ ಪ್ರಾಧಾನ್ಯತೆಯನ್ನು ಕೊಡುತ್ತಾನೆಯೋ ಆಗ ಭೌತಿಕ ವಿಷಯಗಳ ಬೆಲೆಯೂ ಹೆಚ್ಚುತ್ತಾ ಹೋಗುತ್ತದೆ. 
೯) ಶ್ಲೋಕದ ಆರಂಭದಲ್ಲಿ ಎಲ್ಲಾ ವಿಧವಾದ ಭೌತಿಕ ವಿಷಯಗಳನ್ನು ಕೊಡಲಾಗಿದ್ದರೆ ಅಂತಿಮವಾಗಿ ಆಧ್ಯಾತ್ಮಿಕ ಸತ್ಯವಾದ ಭವಾನಿಯ ಕುರಿತ ಉಲ್ಲೇಖವಿದೆ ಎನ್ನುವುದು ಒಬ್ಬರು ಗಮನಿಸಬಹದು. 
೧೦) ಮತ್ತೊಂದು ವಿಷಯವನ್ನೂ ಒಬ್ಬರು ಗಮನಿಸಬಹುದು. ಅದೇನೆಂದರೆ ಗತಿ ಶಬ್ದಕ್ಕೆ ಮತ್ತೊಂದು ಅರ್ಥವೂ ಇದೆ, ಅದೆಂದರೆ ದಿಕ್ಕು ಅಥವಾ ಅನುಕ್ರಮ. ಒಂದು ಸಂಖ್ಯೆಯಲ್ಲಿನ ಅಂಕೆಗಳಿಗೆ ಒಂದು ಪ್ರಧಾನ ಅಂಕೆಯನ್ನನುಸರಿಸಿ ಅವುಗಳನ್ನಿರಿಸಿದ ಕ್ರಮವನ್ನು ಆಧರಿಸಿ ಅವುಗಳ ಸ್ಥಾನಬೆಲೆಯು ನಿರ್ಧರಿಸಲ್ಪಡುತ್ತದೆ. 
****
 
 
 
ಆಂಗ್ಲ ಮೂಲ: ಶ್ರೀಯುತ ಡಾ. ರೇಮೆಳ್ಳ ಅವಧಾನಿಗಳು ರಚಿಸಿರುವ ವೇದ ಗಣಿತ -೪, ಪ್ರಕಟಣೆ: ಶ್ರೀ ವೇದಭಾರತಿ, ಭಾಗ್ಯನಗರ VEDIC MATHEMATICS - 4  (PUBLISHED BY SHRI VEDA BHARATHI, AUTHOR: Dr. Remella Avadhanulu) 
 
ಇದರ ಹಿಂದಿನ ಲೇಖನ’ಕ್ಕಾಗಿ ’ಭಾಗ – ೩: ವೇದಗಣಿತ ಕಿರು ಪರಿಚಯ ಕಟಪಯಾದಿ ಪದ್ಧತಿ - ೨’ ಈ ಕೊಂಡಿಯನ್ನು ನೋಡಿ 
https://sampada.net/blog/%E0%B2%AD%E0%B2%BE%E0%B2%97-%E0%B3%A9-%E0%B2%B5...
 
ಡಾ. ರೇಮೆಳ್ಳ ಅವಧಾನಲು - ಚಿತ್ರಕೃಪೆ: ಗೂಗಲ್ 

Rating
No votes yet

Comments

Submitted by makara Tue, 04/11/2017 - 22:16

ವೇದ ಗಣಿತದ ಕಿರು ಪರಿಚಯ - ಈ ಸರಣಿಯ ಲೇಖನವನ್ನು ವಾರದ ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿರುವ ಸಂಪದದ ನಿರ್ವಾಹಕ ಮಂಡಳಿಗೆ ಹಾಗು ವೈವಿಧ್ಯಮಯ ಲೇಖನಗಳನ್ನು ಒಪ್ಪಿ ಆದರಿಸುವ ಸಂಪದ ಮಿತ್ರರಿಗೆ ಹಾಗು ಈ ಸರಣಿಯ ಲೇಖನಗಳನ್ನು ಹಂಚಿಕೊಳ್ಳುತ್ತಿರುವ ಫೇಸ್ ಬುಕ್ ಬಳಗದ ಗೆಳೆಯರಾದ ಶ್ರೀಯುತ ನಾಗೇಶ್, ಗೋಪಿನಾಥರಾವ್ ಹಾಗು ನನ್ನ ಸಹೋದರಿ ಶ್ರೀಮತಿ ಭಾರತಿ ಬಸವರಾಜ್ ಎಲ್ಲರಿಗೂ ನನ್ನ ಧನ್ಯವಾದಗಳು. ವಂದನೆಗಳೊಂದಿಗೆ ಶ್ರೀಧರ್. ಈ ಸರಣಿಯ ಮುಂದಿನ ಲೇಖನಕ್ಕೆ ಈ ಕೊಂಡಿಯನ್ನು ನೋಡಿ.https://sampada.net/blog/%E0%B2%AD%E0%B2%BE%E0%B2%97-%E0%B3%AB-%E0%B2%B5...