ಭಾಗ - ೫: ವೇದಗಣಿತ ಕಿರು ಪರಿಚಯ: ಸಂಗೀತ ಶಾಸ್ತ್ರದಲ್ಲಿ ಕಟಪಯಾದಿ ಪದ್ಧತಿ

ಭಾಗ - ೫: ವೇದಗಣಿತ ಕಿರು ಪರಿಚಯ: ಸಂಗೀತ ಶಾಸ್ತ್ರದಲ್ಲಿ ಕಟಪಯಾದಿ ಪದ್ಧತಿ

ಚಿತ್ರ

ಭಾಗ - ೫: ವೇದಗಣಿತ ಕಿರು ಪರಿಚಯ: ಸಂಗೀತ ಶಾಸ್ತ್ರದಲ್ಲಿ ಕಟಪಯಾದಿ ಪದ್ಧತಿ 
ವಿಷಯ: ಕರ್ಣಾಟಕ ಸಂಗೀತದಲ್ಲಿ ಕಟಪಯಾದಿ ಪದ್ಧತಿಯ ಉಪಯೋಗ
ವಿವರಣೆ: 
೧) ಕರ್ನಾಟಕ ಸಂಗೀತದಲ್ಲಿನ ಮೂಲ ರಾಗಗಳನ್ನು ಮೇಳಕರ್ತ ರಾಗಗಳು ಅಥವಾ ಜನಕ ರಾಗಗಳು ಎಂದು ಕರೆಯುತ್ತಾರೆ.
೨) ಮೇಳಕರ್ತ ರಾಗಗಳನ್ನು ವಿವಿಧ ರೀತಿಯಲ್ಲಿ ಸಂಯೋಜಿಸಿದಾಗ (ಕೂಡಿಸಿದಾಗ) ಅವು ಹೊಸದಾದ ರಾಗಗಳ ಉಗಮಕ್ಕೆ ಕಾರಣವಾಗುತ್ತವೆ, ಅವನ್ನು ಜನ್ಯರಾಗಗಳೆಂದು ಕರೆಯಲಾಗುತ್ತದೆ. 
೩) ೧೬ನೇ ಶತಮಾನದಲ್ಲಿ ಜೀವಿಸಿದ್ದ ವೆಂಕಟಮಖಿ ಎನ್ನುವ ಸಂಗೀತ ವಿದ್ವಾಂಸನು ೭೨ ಮೇಳಕರ್ತ ರಾಗಗಳನ್ನು ಗುರುತಿಸಿ ಅವೆಲ್ಲವಕ್ಕೂ ಕಟಪಯಾದಿ ಪದ್ಧತಿಯನ್ನು ಆಧರಿಸಿ ಪ್ರತ್ಯೇಕವಾದ ’ವಿಶಿಷ್ಠ ಸಂಖ್ಯಾ ಸಂಕೇತ’ವನ್ನು ಕೊಟ್ಟಿರುತ್ತಾನೆ. 
೪) ಮೇಳಕರ್ತ ರಾಗಗಳಿಗೆ ಕೊಟ್ಟಿರುವ ವಿಶಿಷ್ಠ ಸಂಕೇತಗಳನ್ನು ಸೂಚಿಸುವ ಒಂದು ಮಾದರಿಯನ್ನು ಈ ಕೆಳಗಿನ ಕೋಷ್ಠಕದಲ್ಲಿ ಕೊಡಲಾಗಿದೆ ಚಿತ್ರ ೫ - ೧ (ಇಲ್ಲಿ ಕಟಪಯಾದಿ ಪದ್ಧತಿ - ೨ನ್ನು ಅನುಸರಿಸಲಾಗಿದೆ) 
 
ಆಸಕ್ತರು ಕಟಪಯಾದಿ ಪದ್ಧತಿಯ ಹೆಚ್ಚಿನ ವಿವರಗಳಿಗೆ, ಸಂಪದಿಗರೆ ಆದ ಶ್ರೀಯುತ ಕೆ.ವಿ.ರಾಮಪ್ರಸಾದ್ (ಹಂಸಾನಂದಿ) ಅವರು ಬರೆದಿರುವ ಕೆಳಗಿನ ಲೇಖನಗಳನ್ನು ನೋಡಬಹುದು. 
http://hamsanada.blogspot.in/2008/09/blog-post_30.html
https://sampada.net/comment/18628 
***
ಆಂಗ್ಲ ಮೂಲ: ಶ್ರೀಯುತ ಡಾ. ರೇಮೆಳ್ಳ ಅವಧಾನಿಗಳು ರಚಿಸಿರುವ ವೇದ ಗಣಿತ -೪, ಪ್ರಕಟಣೆ: ಶ್ರೀ ವೇದಭಾರತಿ, ಭಾಗ್ಯನಗರ VEDIC MATHEMATICS - 4  (PUBLISHED BY SHRI VEDA BHARATHI, AUTHOR: Dr. Remella Avadhanulu) 
 
ಇದರ ಹಿಂದಿನ ಲೇಖನ’ಕ್ಕಾಗಿ ಭಾಗ - ೪: ವೇದಗಣಿತ ಕಿರು ಪರಿಚಯ - ವೇದಾಂತದಲ್ಲಿ ಕಟಪಯಾದಿ ಪದ್ಧತಿ 
ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AA-%E0%B2%B5...
 

Rating
No votes yet

Comments

Submitted by makara Wed, 04/12/2017 - 18:45

ವೇದಗಣಿತದ ಈ ಸರಣಿಯನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದಿಗ ಮಿತ್ರರಿಗೆ ಹಾಗು ಇದನ್ನು ಹಂಚಿಕೊಳ್ಳುತ್ತಿರುವ ಫೇಸ್ ಬುಕ್ಕಿನ ಮಿತ್ರರಿಗೆ ಅನಂತಾನಂತ ಧನ್ಯವಾದಗಳು. ಈ ಸರಣಿಯ ಮುಂದಿನ ಲೇಖನವನ್ನು ಮಿನ್ನೇರಿಸಿದ್ದೇನೆ, ವಿವರಗಳಿಗೆ ಈ ಕೊಂಡಿಯನ್ನು ನೋಡಿ. ವಂದನೆಗಳೊಂದಿಗೆ ಶ್ರೀಧರ್ ಬಂಡ್ರಿ :)https://sampada.net/blog/%E0%B2%AD%E0%B2%BE%E0%B2%97-%E0%B3%AC-%E0%B2%B5...

ವಿಶೇಷ ಲೇಖನಗಳನ್ನು ಓದಿ, ಪರಾಮರ್ಶಿಸಿ ಅವನ್ನು ವಾರದ ವಿಶೇಷ ಬರಹಗಳನ್ನಾಗಿ ಆಯ್ಕೆ ಮಾಡಿ ಲೇಖಕರನ್ನು ಪ್ರೋತ್ಸಾಹಿಸಿ ಕನ್ನಡಮ್ಮನ ಕೈಂಕರ್ಯದಲ್ಲಿ ತೊಡಗಿರುವ ಸಂಪದಿಗ ಆಡಳಿತ ಮಂಡಳಿಗೆ ಧನ್ಯವಾದಗಳು. ವೇದಗಣಿತ ಪರಿಚಯ ಸರಣಿಯ ಈ ಲೇಖನವನ್ನೂ ಸಹ ವಿಶೇಷ ಬರಹವಾಗಿ ಆಯ್ಕೆ ಮಾಡಿದ್ದಕ್ಕೆ ಅವರಿಗೆ ನಾನು ಚಿರಋಣಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)