ಅವಳೋ ಇಲ್ಲ ಇವಳೋ? ಉದಾತ್ತ ನಾಯಕನ ಆಯ್ಕೆ (ಚಿತ್ರ: ಹೊಸ ಬೆಳಕು)

ಅವಳೋ ಇಲ್ಲ ಇವಳೋ? ಉದಾತ್ತ ನಾಯಕನ ಆಯ್ಕೆ (ಚಿತ್ರ: ಹೊಸ ಬೆಳಕು)

 

ಇದು ಈಗಿನ ಜನಕ್ಕೆ ಹಳೆಯ ಸಿನಿಮಾ , 37 ವರ್ಷದ  ಹಿಂದಿನ ಹಿಟ್  ಚಿತ್ರ.

ನಮ್ಮ ನಾಯಕ ದೆಹಲಿಯಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.  ಅಲ್ಲಿ ಅವನಿಗೆ ಒಬ್ಬ ಯುವತಿಯ ಪರಿಚಯ ಆಗುತ್ತದೆ. ಅವಳು ಸುಂದರಿ. ಶಿಕ್ಷಿತಳು, ಶ್ರೀಮಂತಳು, ಇವನ ಮೇಲೆ ಪ್ರೇಮ ಉಂಟಾಗಿದೆ. ಅವಳು ಇವನ ಕಂಪನಿ ಮಾಲೀಕನ ಮಗಳೇ ಆಗಿರುವುದರಿಂದ ತಂದೆಗೆ ಹೇಳಿ ಮೇಲಿನ ಹುದ್ದೆ ಕೊಡಿಸಿದ್ದಾಳೆ.  ಅವಳು ತಂದೆಯ ಒಬ್ಬಳೇ ಮಗಳು. ಮಗಳ ಸಲುವಾಗಿ , ಮಗಳನ್ನು ಮದುವೆಯಾಗುವಂತೆ  ಇವನನ್ನು ಅವಳ ತಂದೆ ಕೇಳಿಕೊಳ್ಳುತ್ತಾನೆ. ಮುಂದೆ ಅವರ ಎಲ್ಲ ಆಸ್ತಿಯೂ ಮುಂದೆ ಇವನದೇ  ಆಗಲಿದೆ! ಈಗ ಅವನು ತನ್ನ ಅಭಿಪ್ರಾಯ ತಿಳಿಸಬೇಕು.  

 

ಈ ನಡುವೆ  ಅವನು ಬಹಳ ವರುಷಗಳ ನಂತರ ಮೈಸೂರಿನಲ್ಲಿರುವ ತನ್ನ ಅಕ್ಕನ ಮನೆಗೆ ಕೆಲವು ದಿನ ಹೋಗಿದ್ದಾನೆ.   ಅಕ್ಕನದು  ಮಧ್ಯಮ ವರ್ಗದ ಕುಟುಂಬ.  ಅಕ್ಕನ ಮನೆಯಲ್ಲಿ ವಯಸ್ಸಿಗೆ  ಬಂದ ಒಬ್ಬಳು ಸ್ವಂತ ಮಗಳೂ , ಒಬ್ಬ ಮಲಮಗಳು ಇದ್ದಾಳೆ. ಬಾಯಿ ಜೋರಾಗಿರುವ ಅಕ್ಕ ಮಲಮಗಳನ್ನು  ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ,  ಅವಳನ್ನು ಸುಂದರಿ ಅಲ್ಲ ಅಂತ ಹೇಳುವುದು ಒಳ್ಳೆಯ ನಡತೆ ಅಲ್ಲವಾದ್ದರಿಂದ  ಸಾಧಾರಣ ಸುಂದರಿ ಅಂತ ಹೇಳೋಣ.  ಅವಳ ಸ್ಥಿತಿಯ ಬಗ್ಗೆ ಇವನದು ಸಹಾನುಭೂತಿ, ಕರುಣೆ, ಇವನು ಅವಳ ಸ್ಥಿತಿಯನ್ನು ಬಹಳಷ್ಟು  ಮಟ್ಟಿಗೆ ಸುಧಾರಿಸುತ್ತಾನೆ.  

ಈಗ ಇವನು ಆ ಇಬ್ಬರಲ್ಲಿ ಒಬ್ಬಳನ್ನು ಆಯ್ದುಕೊಳ್ಳಬೇಕು

ತನ್ನ ಭಾಗ್ಯ ತೆರೆಯಬಹುದಾದ , 
ಒಲಿದು ಬಂದ,  ಶ್ರೀಮಂತ ವರ್ಗದ,  ಸುಂದರಿ ಹೆಣ್ಣನ್ನು ಬಿಟ್ಟು  ಮಧ್ಯಮವರ್ಗದ ಸಾಧಾರಣ ಹೆಣ್ಣನ್ನು ಈತನು ಒಲಿಯುವನು . ಅದು ಏಕೆ ?   

ಚಲನಚಿತ್ರದಲ್ಲಿ ಇವನ ಮನಸ್ಸಿನ ತೊಳಲಾಟವನ್ನೇನೋ ತೋರಿಸುತ್ತಾರೆ. ಆದರೆ ಇವನು ಏಕೆ ಈ ಆಯ್ಕೆ ಮಾಡಿದ ಎಂಬುದು ತಿಳಿಯುವುದಿಲ್ಲ. ಅದಕ್ಕೆ ಮೂಲ ಕಾದಂಬರಿಯನ್ನೇ ಓದಬೇಕೇನೋ.  ಬಹುಶಃ ಅಕ್ಕನ ಮಗಳಿಗೆ ಇವನ ಅಗತ್ಯ ಇದೆ , ಶ್ರೀಮಂತರ ಮಗಳಿಗೆ ಈತನ ಅಗತ್ಯ ಇಲ್ಲ !

ನಿಜವಾದ ಪ್ರೀತಿಯನ್ನು, ಮನುಷ್ಯನ ನಿಜವಾದ ಸ್ವಭಾವವನ್ನು ಯಾವ ಪರೀಕ್ಷೆಗಳ ಮೂಲಕ   ನಿರೂಪಿಸಬಹುದು ? ಬಡತನದಲ್ಲಿ,  ಅನಾರೋಗ್ಯದಲ್ಲಿ ?  ಆ ಸಂದರ್ಭಗಳೂ ಚಿತ್ರದಲ್ಲಿವೆ. 

 

Rating
Average: 5 (3 votes)