ಚಿಪ್ಕೋ ಆಂದೋಲನ: ಹಿಮಾಲಯದ ಅರಣ್ಯ ರಕ್ಷಣೆಗೆ ಜನಾಂದೋಲನ
೨೦೧೮ರಲ್ಲಿ ಕೇರಳದಲ್ಲಿ ಮತ್ತು ಕರ್ನಾಟಕದ ಕೊಡಗಿನಲ್ಲಿ ಮಹಾಮಳೆ ಹಾಗೂ ಮಹಾನೆರೆಯಿಂದಾದ ಜೀವಹಾನಿ ಮತ್ತು ಸೊತ್ತು ಹಾನಿಯ ನೆನಪು ಮಾಸುವ ಮುನ್ನ ೨೦೧೯ರಲ್ಲಿ ಪುನಃ ಅಂತಹದೇ ಅನಾಹುತ. ಇದಕ್ಕೆ ಮುಖ್ಯ ಕಾರಣ ಪಶ್ಚಿಮಘಟ್ಟಗಳಲ್ಲಿ ಕಾಡಿನ ಮಹಾನಾಶ ಎಂಬುದನ್ನು ತಿಳಿಯಲು ಯಾವುದೇ ಸಂಶೋಧನೆ ಅಗತ್ಯವಿಲ್ಲ.
ಈ ಸಂದರ್ಭದಲ್ಲಿ, ಐದಾರು ದಶಕಗಳ ಮುಂಚೆಯೇ ಹಿಮಾಲಯ ಪರ್ವತ ಶ್ರೇಣಿಯ ಉದ್ದಕ್ಕೂ ಸುಂದರಲಾಲ್ ಬಹುಗುಣ “ಚಿಪ್ಕೋ” (ಮರಗಳನ್ನು ರಕ್ಷಿಸಲಿಕ್ಕಾಗಿ ಅಪ್ಪಿಕೋ) ಆಂದೋಲನದ ಮೂಲಕ ಅರಣ್ಯ ರಕ್ಷಣೆ ಮಾಡಿದ್ದನ್ನು ನೆನಪು ಮಾಡಿಕೊಳ್ಳುವುದು ಅಗತ್ಯ.
- Read more about ಚಿಪ್ಕೋ ಆಂದೋಲನ: ಹಿಮಾಲಯದ ಅರಣ್ಯ ರಕ್ಷಣೆಗೆ ಜನಾಂದೋಲನ
- Log in or register to post comments