೨೦೦ ಎಕ್ರೆ ಸಾವಯವ ತೋಟ: ತಿರುನೆಲ್‍ವೇಲಿಯ ಜೆ.ಸಿ. ಫಾರ್ಮ್
ಸಕ್ಕರೆ ಉದ್ಯಮದಲ್ಲಿ ೪೦ ವರುಷಗಳ ಸೇವೆಯ ಬಳಿಕ ನಿವೃತ್ತರಾದಾಗ ಜಯಚಂದ್ರನ್ ಕೈಗೊಂಡ ದಿಟ್ಟ ನಿರ್ಧಾರ: ಕೃಷಿ ಕಾಯಕ. ತನ್ನ ಕುಟುಂಬದವರ ಸಹಾಯದಿಂದ ೨೦೦ ಎಕ್ರೆ ಜಮೀನಿನಲ್ಲಿ ಜೆ.ಸಿ. ಅಗ್ರೋ ಫಾರ್ಮ್ ಶುರು ಮಾಡಿ, ಸಾವಯವ ಕೃಷಿಯಲ್ಲಿ ತೊಡಗಿದರು. ಕಳೆದ ೧೧ ವರುಷಗಳ ಅವರ ಕಾಯಕದ ಫಲ: ಸಾವಯವ ಕೃಷಿ ಲಾಭದಾಯಕವೆಂದು ಸಾಬೀತು ಮಾಡಿರುವುದು.
ಹಸುರು ಕ್ರಾಂತಿಯ ಅವಧಿಯಲ್ಲಿ ಲಕ್ಷಗಟ್ಟಲೆ ಕೃಷಿಕರು ರಾಸಾಯನಿಕ ಗೊಬ್ಬರ ಮತ್ತು ರಾಸಾಯನಿಕ ಪೀಡೆನಾಶಕಗಳನ್ನು ತಮ್ಮ ಹೊಲಗಳಿಗೆ ಸುರಿದು ಫಸಲಿನ ಪ್ರಮಾಣ ಹೆಚ್ಚಿಸಿದ್ದನ್ನು ಅವರು ಕಂಡಿದ್ದರು. ಕೆಲವೇ ವರುಷಗಳ ರಾಸಾಯನಿಕ ಕೃಷಿಯಿಂದಾಗಿ ಮಣ್ಣಿನ ಆರೋಗ್ಯ ಹದಗೆಟ್ಟು ಸಾವಿರಾರು ಎಕ್ರೆ ಕೃಷಿಜಮೀನು ಕೃಷಿಗೆ ನಿರುಪಯುಕ್ತ ಆದದ್ದನ್ನೂ ಕಂಡಿದ್ದರು.
- Read more about ೨೦೦ ಎಕ್ರೆ ಸಾವಯವ ತೋಟ: ತಿರುನೆಲ್‍ವೇಲಿಯ ಜೆ.ಸಿ. ಫಾರ್ಮ್
- Log in or register to post comments
ಹಾಗೇ ಸುಮ್ಮನೆ - ೨. ಮುಕ್ತರಾಗುವುದು ಹೇಗೆ
ರಾಶಿಯವರು ವಿದ್ಯಾರ್ಥಿಯಾಗಿದ್ದಾಗ ಪಂಚ್ ಪತ್ರಿಕೆಯ ಸಂಚಿಕೆಗಳನ್ನು ಓದಿ ಆನಂದಿಸಿದರು. ಅವುಗಳಲ್ಲಿನ ಚುರುಕು, ಸ್ಪೂರ್ತಿ, ಸುಸಂಸ್ಕೃತ ದೃಷ್ಟಿ, ವಿಡಂಬನಾ ನೋಟ ಅವರನ್ನು ನಗಿಸಿ ಸಂತೋಷ ಕೊಟ್ಟವು. ಹಾಗಾಗಿ ಇಂಗ್ಲಿಷ್ನಲ್ಲಿನ ಈ ತರನ ಉಕ್ತಿಗಳನ್ನು ತಮ್ಮ ಸಮಾಜ ಜೀವನಕ್ಕೆ ಅಳವಡಿಸಿ ಸ್ನೇಹಿತರೊಡನೆ ಮಾತನಾಡುವಾಗ ಕನ್ನಡದಲ್ಲಿ ನುಡಿದರೆ ಜೊತೆಯವರು ಬಲು ಸಂತೋಷಪಡುತ್ತಿದ್ದರು.
ಅವರು ಹೇಳಿದರು - ಇಷ್ಟೆಲ್ಲಾ ಸುಖ ಸಂತೋಷಗಳನ್ನು ನನಗೆ ಒದಗಿಸಿಕೊಟ್ಟ ನಾನು ಋಣಿಯಾಗಿರಬೇಕು. ಇಂಥ ಸಾಂಸ್ಕೃತಿಕ ಋಣ ತೀರಿಸಬೇಕಾದರೆ ಅಲ್ಲಿ ಕಲಿತದ್ದನ್ನು ಇಲ್ಲಿ ನಮ್ಮವರಿಗೆ ಬಡಿಸಬೇಕು. ಆಗಲೇ ಋಣ ಮುಕ್ತನಾಗಲು ಸಾಧ್ಯ.
ಹೀಗೆಲ್ಲ ವಿಚಾರಿಸಿ ಅವರು ಮುಂದೊಂದು ದಿನ ಕೊರವಂಜಿ ಹಾಸ್ಯಪತ್ರಿಕೆಯನ್ನು ಕನ್ನಡದಲ್ಲಿ ಆರಂಭಿಸಿದರು.
- Read more about ಹಾಗೇ ಸುಮ್ಮನೆ - ೨. ಮುಕ್ತರಾಗುವುದು ಹೇಗೆ
- Log in or register to post comments
ಹೊಸ ವೀಡಿಯೋ: ಮಂಗಳೂರಿನ ಸಾವಯವ ಸಂತೆ
ಮಂಗಳೂರಿನ 'ವಿಷಮುಕ್ತ ಊಟದ ಬಟ್ಟಲು' ಆಂದೋಲನ ಮುನ್ನಡೆಸುತ್ತಿರುವ ಕೃಷಿಕ-ಗ್ರಾಹಕ ಬಳಗದೆ ಚಟುವಟಿಕೆಗಳು.
- Read more about ಹೊಸ ವೀಡಿಯೋ: ಮಂಗಳೂರಿನ ಸಾವಯವ ಸಂತೆ
- Log in or register to post comments
ನಮ್ಮ ಗುರುವು
ಕೈ ತುತ್ತನಿತ್ತು, ತುತ್ತಿಗೆ ಬೆಲೆಯ ತೆತ್ತು,
ಪೋಷಣೆ ಭಾರ ಹೊತ್ತು, ಏಳಿಗೆ ಬೀಜ ಬಿತ್ತು,
ಪೋಷಿಸಲು ಮಮತೆ ಪ್ರೀತಿಯನಿತ್ತು,
ಸಲಹುವ ತಾಯಿ ತಂದೆ - ಮೊದಲ ಗುರುವು.
ಜೀವಿಸಲು ಪಂಚಭೂತಗಳ ನೀಡಿ,
ಶುದ್ಧ ಪರಿಸರವ ಸೃಷ್ಠಿಯ ಮಾಡಿ,
ಜೀವಸಂತತಿ ವೃದ್ಧಿಸಲು ಕ್ರಿಯೆಯ ಹೂಡಿ,
ಪ್ರಕೃತಿಯಿದು - ಉಸಿರನೀವ ಗುರುವು.
ಪ್ರೀತಿ ಬಾಂದವ್ಯದ ಮೊಳಕೆಯನು ಚಿಗುರಿಸಿ,
ಸಂಬಂಧಗಳ ಮೌಲ್ಯವನು ಹೆಚ್ಚಿಸಿ,
ಕೂಡಿಬಾಳುವ ಭಾಗ್ಯವನು ಕಲ್ಪಿಸಿ,
ಒಡವುಟ್ಟಿದವರಿವರು - ಬಾಂದವ್ಯ ಬೆಸೆವ ಗುರುವು.
ವಿದ್ಯಾ ಸಾಧನೆಯ ಗುರಿಯ ತೋರಿ,
ಸಾಧಿಸುವ ಛಲವ ತುಂಬಿ ಅಳತೆ ಮೀರಿ,
ಗುರಿಯ ಸೇರಲು ಮಾರ್ಗವ ತೋರಿ,
ವಿದ್ಯೆ ದಾನಗೈವರಿವರು - ಗುರುವು.
- Read more about ನಮ್ಮ ಗುರುವು
- Log in or register to post comments
ಭಾಗ - ೧೮ ಮನುವಿನ ಧರ್ಮ: ಪರಿಚ್ಛೇದ ೩ ಜೈಪೂರ್ ವಿಗ್ರಹ ವಿಜಯ
ರಾಜಸ್ಥಾನ್ ಹೈಕೋರ್ಟಿನ ಪೂರ್ಣಪೀಠವು ಜೈಪುರದಲ್ಲಿರುವ ಉಚ್ಛನ್ಯಾಯಾಲಯದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಿದ ಮಹರ್ಷಿ ಮನುವಿನ ವಿಗ್ರಹದ ಕುರಿತು ವ್ಯಕ್ತವಾದ ತೀವ್ರವಾದ ವಿವಾದ ಮತ್ತು ಪ್ರತಿಭಟನೆಯನ್ನು ಪುರಸ್ಕರಿಸಿ ೨೮ ಜುಲೈ, ೧೯೮೯ರಲ್ಲಿ ಆ ವಿಗ್ರಹವನ್ನು ಅಲ್ಲಿಂದ ತೊಲಗಿಸಬೇಕೆಂದು ಒಕ್ಕೊರಲಿನಿಂದ ತೀರ್ಮಾನಿಸಿತು. ಇದನ್ನು ಪ್ರಶ್ನಿಸಿ ಡಾಕ್ಟರ್ ಸುರೇಂದ್ರಕುಮಾರ್ ಅವರ ಸಹಾಯ ಸಹಕಾರಗಳಿಂದ ನಾನು (ಧರ್ಮಪಾಲ್ ಆರ್ಯ) ಆ ತೀರ್ಪನ್ನು ರದ್ದು ಪಡಿಸಬೇಕೆಂದು ಕೋರಿ ರಿಟ್ ಪಿಟೀಷನ್ ಒಂದನ್ನು ನ್ಯಾಯಾಲಯದಲ್ಲಿ ದಾಖಲು ಮಾಡಿದೆ. ನನ್ನ ವಾದಕ್ಕೆ ಪೂರಕವಾದ ೧೫ ಅಂಶಗಳ ನಿವೇದಿಕೆಯೊಂದನ್ನು ಪರಿಶೀಲಿಸಲು ನ್ಯಾಯಲಯದ ಮುಂದಿರಿಸಿದೆ.
ನೀರ ನೆಮ್ಮದಿಗೆ ದಾರಿ ಇಲ್ಲಿದೆ ಕಾಣಿರೋ !
ನೀರ ನೆಮ್ಮದಿಗೆ ದಾರಿ ಎಲ್ಲಿದೆ? ಕಾಣಬೇಕೆಂದಾದರೆ ಬನ್ನಿ, ಉತ್ತರಕನ್ನಡದ ಶಿರಸಿ ಹತ್ತಿರದ ಹುಲೇಮಳಗಿಗೆ. ’ನೀರ ನೆಮ್ಮದಿಗೆ ಪತ್ರಿಕೋದ್ಯಮ’ ಕಾರ್ಯಾಗಾರದ ಕೊನೆಯ ದಿನ ಶಿಬಿರಾರ್ಥಿಗಳೊಂದಿಗೆ ಅಲ್ಲಿಗೆ ಹೋಗಿದ್ದೆ; ಕಣ್ಣಾರೆ ಕಂಡಿದ್ದೆ.
ಹೋದೊಡನೆ ನಮ್ಮನ್ನೆಲ್ಲ ಆ ಹಳ್ಳಿಯವರು ಕರೆದೊಯ್ದದ್ದು ನಾಗೇಶ ಹೆಗಡೆಯವರ ಕುಟುಂಬದ ಮನೆಗೆ. ಅಲ್ಲಿ ನಮ್ಮನ್ನು ಕೂರಿಸಿ, ಹೊಟ್ಟೆತುಂಬ ಉಪಾಹಾರ ಬಡಿಸಿದ ರೀತಿಯಲ್ಲೇ ಆ ಹಳ್ಳಿಯವರ ಪರಸ್ಪರ ಸಹಕಾರದ ಬಾಳುವೆಯ ಚಿತ್ರಣ ನಮಗೆ ಸಿಕ್ಕಿತ್ತು.
- Read more about ನೀರ ನೆಮ್ಮದಿಗೆ ದಾರಿ ಇಲ್ಲಿದೆ ಕಾಣಿರೋ !
- Log in or register to post comments
ಸ್ಯಾಕ್ಸೋಫೋನ್ ಸಾಮ್ರಾಟ ಕದ್ರಿ ಗೋಪಾಲನಾಥ್ ಇನ್ನಿಲ್ಲ
ಸ್ಯಾಕ್ಸೋಫೋನ್ ಎಂದೊಡನೆ ಮನದಲ್ಲಿ ಮೂಡಿ ಬರುವ ಹೆಸರು ಕದ್ರಿ ಗೋಪಾಲನಾಥ್ ಅವರದು. ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನಿನಿಂದ ನಮ್ಮ ದೇಶದ ಶಾಸ್ತ್ರೀಯ ಕರ್ನಾಟಕ ಸಂಗೀತ ಸುಶ್ರಾವ್ಯವಾಗಿ ಹೊರಹೊಮ್ಮುವಂತೆ ಮಾಡಿದ ಮಹಾ ಸಾಧನೆ ಅವರದು.
ಅವರೀಗ ೧೧ ಅಕ್ಟೋಬರ್ ೨೦೧೯ರಂದು ನಮ್ಮನ್ನಗಲಿ, ಮರಳಿ ಬಾರದ ಲೋಕಕ್ಕೆ ನಡೆದಿದ್ದಾರೆ. ಸ್ಯಾಕ್ಸೋಫೋನ್ ವಾದನದಿಂದ ಜಗತ್ತಿನಲ್ಲೆಲ್ಲ ಹೆಸರು ಗಳಿಸಿದ ಪದ್ಮಶ್ರೀ ಪುರಸ್ಕೃತ ಕದ್ರಿ ಗೋಪಾಲನಾಥರಿಗೆ ಇದೊಂದು ನುಡಿನಮನ.
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಸಜಿಪಮೂಡದಲ್ಲಿ ೬ ಡಿಸೆಂಬರ್ ೧೯೪೯ರಂದು ಕದ್ರಿ ಗೋಪಾಲನಾಥರ ಜನನ. ಅವರ ಪೂರ್ವಿಕರು ಮಂಗಳೂರಿನ ಕದ್ರಿಯವರು. ಹಾಗಾಗಿ ಅವರ ಹೆಸರಿನೊಂದಿಗೆ ಕದ್ರಿ ಸೇರಿಕೊಂಡಿತು.
- Read more about ಸ್ಯಾಕ್ಸೋಫೋನ್ ಸಾಮ್ರಾಟ ಕದ್ರಿ ಗೋಪಾಲನಾಥ್ ಇನ್ನಿಲ್ಲ
- Log in or register to post comments
ಹಾಗೇ ಸುಮ್ಮನೆ - ೧. ಸ್ವಮಠೇ ನಿಧನಂ ಶ್ರೇಯಃ!
ಒಬ್ಬನು ಒಂದು ಮಠದ ಅನುಯಾಯಿ - ಅವನು ಒಬ್ಬಳನ್ನು ಪ್ರೀತಿಸಿ ಮದುವೆಯಾಗಬಯಸಿದ್ದಾನೆ. ಆದರೆ ಅದಕ್ಕೆ ಆ ಮಠಾಧಿಪತಿಯ ಸಮ್ಮತಿಯಿಲ್ಲ. ಇನ್ನೊಂದು ಮಠಾಧಿಪತಿಯು ಈ ಮಠಾಧಿಪತಿಯ ಮೇಲಿನ ಪೈಪೋಟಿಯಿಂದ ಈ ಮದುವೆಗೆ ಬೆಂಬಲಿಸುತ್ತಾನೆ. ಮುಂದೇನು ಆಗುತ್ತದೆ ? ಆ ಸಂಗತಿ ಬಿಡಿ. ಈ ಸಂದರ್ಭದಲ್ಲಿ ಹೀಗೊಂದು ಮಾತು -
'ಸ್ವಮಠೇ ನಿಧನಂ ಶ್ರೇಯಃ , ಪರಮಠ್ಠೇ ಭಯಾವಹಃ ' ಅಂತ ಶ್ರೀಕೃಷ್ಣನೇ ಹೇಳಿದ್ದಾನೆ'. ಈ ಲೇಖನ ಕನ್ನಡದ ಪ್ರತಿಭಾವಂತ ಮತ್ತು ಸದಭಿರುಚಿಯ ಶ್ರೇಷ್ಠ ಹಾಸ್ಯಕ್ಕೆ ಹೆಸರಾದ ಅ.ರಾ. ಸೇ. ಅವರದ್ದು. ಈ ವಾಕ್ಯವನ್ನು ಮೆಚ್ಚಿದ ನಾನು ಇಬ್ಬರು ಮೂವರು ಗೆಳೆಯರಿಗೆ whatsapp ಮೂಲಕ ಕಳಿಸಿದೆನು.
- Read more about ಹಾಗೇ ಸುಮ್ಮನೆ - ೧. ಸ್ವಮಠೇ ನಿಧನಂ ಶ್ರೇಯಃ!
- 3 comments
- Log in or register to post comments
ಅತೃಪ್ತಿ
ಓ ಮನುಜನೇ, ಎಂದು ಕಾಣುವುದು ನಿನ್ನಲಿ ತೃಪ್ತಿ?
ದಿನವೂ ಬೆಳೆಯುತಿದೆ ನಿನ್ನ ಬೇಡಿಕೆಗಳ ವ್ಯಾಪ್ತಿ.
ಭೂಮಂಡಲವೇ ನಿನಗಿದ್ದರೂ, ನಿನಗಿಲ್ಲ ಸಂತೃಪ್ತಿ,
ಈ ಮೋಹಕೆ ಬಂಧಿಯಾದ ನಿನಗೆ ಎಲ್ಲಿದೇ ಮುಕ್ತಿ?
ಭೂಭಾಗವನೇ ಖಂಡಗಳಾಗಿ ವಿಂಗಡಿಸಿರುವೆ.
ಖಂಡಗಳನು ದೇಶಗಳಾಗಿ ವಿಭಜಿಸಿರುವೆ.
ನಿನ್ನ ಪ್ರಾಂತ್ಯಕೆ ಗಡಿ ರೇಖೆಯನು ಗುರುತಿಸಿರುವೆ.
ಪ್ರತಿಕ್ಷಣವೂ ಗಡಿಯನ್ನುಲ್ಲಂಘನೆಯ ಮಾಡಲು ಸಂಚು ಹೂಡುತಿರುವೆ.
ಅನ್ಯ ಜನಾಂಗವೆಂದು ಇವರ ದ್ವೇಷಿಸುತಿರುವೆ.
ಇವರು ಜೀವಿಸುವ ಹಕ್ಕನು ಕಸಿದುಕೊಳ್ಳುತಿರುವೆ.
ಉಗ್ರವಾದಿಯ ರೂಪವ ತಾಳಿ, ಇವರಲಿ ಭೀತಿ ಹುಟ್ಟಿಸಿರುವೆ.
ಎಲ್ಲರ ಮೃತ್ಯುವಾಗಿ ಇಡಿಶಾಪಕ್ಕೊಳಗಾದರೂ, ಮಹಾಸಾಧಕನೆಂದು ಬೀಗುತಿರುವೆ.
- Read more about ಅತೃಪ್ತಿ
- Log in or register to post comments