ಗಿಡದಲ್ಲಿ ಬೆಳೆದ ಸಿಹಿಕುಂಬಳ

ನಮ್ಮ ಮನೆಯ ತರಕಾರಿ ಬಳ್ಳಿ ಹತ್ತಿರದ ಮನೆಯಲ್ಲಿ ಕಾಯಿ ಬಿಟ್ಟಿದೆ, ಈ ತರಕಾರಿ ಬಳ್ಳಿಯಲ್ಲಿ ಬೆಳೆಯದೇ ಗಿಡದಲ್ಲಾದರೂ ಬೆಳೆಯಬಾರದಿತ್ತಾ, ಸುಮ್ಮನೇ ನೆರೆಹೊರೆಯವರಿಗೆ ಕಿರಿಕಿರಿ. ಹೀಗೆಲ್ಲಾ ನಗರದಲ್ಲಿ ಸಣ್ಣ ಪುಟ್ಟ ತರಕಾರಿ ಕೃಷಿ ಮಾಡುವವರು ಯೋಚನೆ ಮಾಡುತ್ತಾರೆ. ಸೋರೆಕಾಯಿ, ಕುಂಬಳಕಾಯಿ, ಸಿಹಿ ಕುಂಬಳ (ಚೀನಿ ಕಾಯಿ), ಪಡುವಲಕಾಯಿ ಹೀಗೆ ಬಳ್ಳಿಯಲ್ಲಿ ಕಾಯಿ ಬಿಡುವ ತರಕಾರಿಗಳದ್ದು ಇದೇ ಕಥೆ.

Image

ಪುರಿ ಜಗನ್ನಾಥ ಸ್ವಾಮಿಯ ನೈವೇದ್ಯ

ಅಮ್ಮ ಹೇಳುತಿದ್ದಳು ‘ಶ್ರೀಕೃಷ್ಣ ಪರಮಾತ್ಮ ಬೆಳಗಿನ ಸ್ನಾನವನ್ನು ರಾಮೇಶ್ವರದಲ್ಲಿ ಮಾಡಿದರೆ, ಬದರಿನಾಥದಲ್ಲಿ ದ್ಯಾನ ಮಾಡಿ ಪುರಿಯಲ್ಲಿ ಉಂಡು, ದ್ವಾರಕೆಯಲ್ಲಿ ಮಲಗುತ್ತಾನಂತೆ.  ಅಷ್ಟು ಮಹತ್ವ ಇದೆ ಜಗನ್ನಾಥ ಪುರಿ ನೈವೇದ್ಯ. ಅಲ್ಲಿ ನೈವೇದ್ಯದ ಕ್ರಿಯೆಯನ್ನು *ಮಹಾಭೋಗ* ಎನ್ನುತ್ತಾರೆ. ಅದೇಕೆ ಮಹಾಭೋಗ ಎನ್ನುತ್ತಾರೆ ಅಂದರೆ  ಆದು ಸರ್ವ ಶಕ್ತ ವಿಷ್ಣುವಿನ ಪ್ರಸಾದ.

Image

ಪನ್ನೀರು - ಹನಿಗವಿತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಪರಮೇಶ್ವರಪ್ಪ ಕುದರಿ
ಪ್ರಕಾಶಕರು
ಹರಿ ಪ್ರಕಾಶನ, ಮಾಸ್ತಮ್ಮ ಬಡಾವಣೆ, ಸ್ಟೇಡಿಯಂ ಹತ್ತಿರ, ಚಿತ್ರದುರ್ಗ-೫೭೭೫೦೧
ಪುಸ್ತಕದ ಬೆಲೆ
ರೂ.೧೦೦.೦೦, ಮುದ್ರಣ: ೨೦೨೦

‘ಪನ್ನೀರು' ಹನಿಗವಿತೆಗಳ ಪುಸ್ತಕವನ್ನು ರಚಿಸಿದವರು ಶಿಕ್ಷಕರಾದ ಪರಮೇಶ್ವರಪ್ಪ ಕುದರಿಯವರು. ಇವರ ಬಗ್ಗೆ ಬೆಂಗಳೂರಿನ ಸಾಹಿತಿ ವೈ.ಬಿ.ಎಚ್. ಜಯದೇವ್ ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ- “ ಕನ್ನಡ ಸಾರಸ್ವತ ಲೋಕದಲ್ಲಿ ಸುಮಾರು ಮೂರು ದಶಕಗಳಿಂದಲೂ ಕವಿಯಾಗಿ, ಸಾಹಿತಿಯಾಗಿ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀ ಪರಮೇಶ್ವರಪ್ಪ ಕುದರಿ ಅವರು ಹಳ್ಳಿಯ ಬಡನೆಂಟನಂತಹಾ ಸ್ನೇಹ ಜೀವಿ.

ನಮ್ಮ ಹೆಮ್ಮೆಯ ಭಾರತ (ಭಾಗ 53 - 54)

೫೩.ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯರ ಯಶೋಗಾಥೆ
ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿ ಎಂಬ ಪ್ರದೇಶವು ಮಾಹಿತಿ ತಂತ್ರಜ್ನಾನದ ಅನುಶೋಧನೆ ಮತ್ತು ಅಭಿವೃದ್ಧಿಗಾಗಿ ಜಗತ್ತಿನಲ್ಲೇ ಹೆಸರುವಾಸಿ. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಭಾರತೀಯ ಇಂಜಿನಿಯರರು ದೊಡ್ಡ ಸಂಖ್ಯೆಯಲ್ಲಿ ಸಿಲಿಕಾನ್ ವ್ಯಾಲಿಯ ವಿವಿಧ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಲು ಶುರುಮಾಡಿದರು. ಭಾರತದ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತು, ಸಿಲಿಕಾನ್ ವ್ಯಾಲಿಯ ಕಂಪೆನಿಗಳಲ್ಲಿ ಶ್ರದ್ಧೆಯಿಂದ ದುಡಿದ ಇವರು ಆ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಿಗೆ ಭಡ್ತಿ ಪಡೆದರು.

Image

ಆರಕ್ಕೇರದ ‘ಕಪೂರ್’ ಮನೆತನದ ರಾಜೀವ್!

ಅಜ್ಜ ಹಿಂದಿ ಚಿತ್ರರಂಗದ ದಂತಕತೆಯಾದ ಪೃಥ್ವೀರಾಜ್ ಕಪೂರ್, ತಂದೆ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ 'ಶೋ ಮೆನ್' ರಾಜ್ ಕಪೂರ್, ಅಣ್ಣಂದಿರು ಖ್ಯಾತ ನಟರೂ, ನಿರ್ದೇಶಕರೂ ಆದ ರಣದೀರ್ ಕಪೂರ್, ರಿಷಿ ಕಪೂರ್, ಚಿಕ್ಕಪ್ಪಂದಿರೂ ಸಾಮಾನ್ಯದವರಲ್ಲ. ಅವರೂ ಹಿಂದಿ ಚಿತ್ರರಂಗವನ್ನು ಹಲವಾರು ವರ್ಷಗಳ ಕಾಲ ಆಳಿದವರೇ. ಶಮ್ಮಿ ಕಪೂರ್ ಹಾಗೂ ಶಶಿ ಕಪೂರ್.

Image

ಪ್ರತಿ ಸಂಜೆ ಪ್ರೀತಿ ಅಭಿಮಾನ, ಪ್ರತಿ ಬೆಳಗು ವಿರಹ ವಿದಾಯ...

ಪ್ರಿಯ ಓದುಗರೇ, ಬೆಂಗಳೂರಿನ ವಿವೇಕಾನಂದ ಹೆಚ್. ಕೆ. ಇವರ ‘ಜ್ಞಾನ ಭಿಕ್ಷಾ ಪಾದಯಾತ್ರೆಯು ನೂರು ದಿನ ಪೂರೈಸಿದ ಬಗ್ಗೆ ಅವರು ತಮ್ಮದೇ ನುಡಿಗಳಲ್ಲಿ ಅನುಭವಗಳನ್ನು, ದಾಟಿ ಬಂದ ಊರುಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಓದಿ, ನಿಮ್ಮ ಊರಿಗೆ ಬಂದಾಗ ಅವರ ಜೊತೆ ಹೆಜ್ಜೆ ಹಾಕುವುದರ ಮೂಲಕ ಬೆಂಬಲಿಸಿ…

Image