ಹೀಗೂ ಉಂಟೇ! ಝಗಮಗಿಸುವ ಸೊತ್ತುಗಳ ಸಂಗತಿ (೧)

-ಒಂದು ಔನ್ಸಿಗಿಂತಲೂ  (೧ ಔನ್ಸ್ = ೨೮.೩೫ ಗ್ರಾಮ್) ಕಡಿಮೆ ತೂಕದ ಚಿನ್ನವನ್ನು ಉತ್ಪಾದಿಸಲು ದಕ್ಷಿಣ ಆಫ್ರಿಕಾದ ಎರಡು ಟನ್ ತೂಕದಷ್ಟು ಶಿಲೆಗಳನ್ನು ಜಾಲಾಡಿಸಬೇಕು.

-ಬೈಬಲಿನ ಕಿಂಗ್ ಜೇಮ್ಸ್ ಅವರ ಅನುವಾದದಲ್ಲಿ ಬೆಲೆಬಾಳುವ ಮುತ್ತುರತ್ನಗಳ ೧,೭೦೦ ಉಲ್ಲೇಖಗಳಿವೆ.

-ಐಸಾಕ್ ನ್ಯೂಟನ್ ಬಹಳಷ್ಟು ಸಮಯ ಮತ್ತು ಶ್ರಮವನ್ನು "ಫಿಲಾಸಫರ್ಸ್ ಸ್ಟೋನ್” ಹುಡುಕಲು ವ್ಯಯಿಸಿದ; ಅದರ ಸಹಾಯದಿಂದ ಚಿನ್ನ ತಯಾರಿಸಬಹುದೆಂಬುದು ಅವನ ಆಸೆಯಾಗಿತ್ತು.

Image

‘ಸುವರ್ಣ ಸಂಪುಟ' (ಭಾಗ ೨) -ಪಂಜೆ ಮಂಗೇಶರಾಯರ ಕವನ

ಕಳೆದ ವಾರ ಸಂಪದದಲ್ಲಿ ಪ್ರಾರಂಭಿಸಿರುವ ‘ಸುವರ್ಣ ಸಂಪುಟ' ಪುಸ್ತಕದಿಂದ ಆಯ್ದ ಕವನಗಳ ಪ್ರಕಟಣೆಗೆ ಓದುಗರಿಂದ ಬಹಳ ಬೆಂಬಲ ವ್ಯಕ್ತವಾಗಿದೆ. ಹಿಂದಿನ ಖ್ಯಾತ ಕವಿಗಳ ಕವನಗಳ ಓದುವ ಖುಷಿ ಒಂದೆಡೆಯಾದರೆ, ಅವರು ಬರೆಯುತ್ತಿದ್ದ ಕವನಗಳ ರೀತಿ, ವಿಷಯ, ರಚನೆಗಳ ಬಗ್ಗೆ ಈಗಿನ ಕಿರಿಯ ಕವಿಗಳು ತಿಳಿದುಕೊಳ್ಳುವುದು ಬಹಳಷ್ಟಿದೆ ಎನ್ನುವುದು ಹಲವರ ಅಭಿಮತ. ಈಗಿನ ಬಹುತೇಕ ಕವಿಗಳು ತಾವು ಬರೆದದ್ದೇ ಕವನವೆಂದು ತಿಳಿದುಕೊಂಡಿದ್ದಾರೆ.

Image

ತಂತ್ರಜ್ಞಾನಗಳ ಸುಳಿಯಲ್ಲಿ ಮಾನವ

ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳನ್ನು ನೋಡುತ್ತಾ ನೋಡುತ್ತಾ ಒಂದು ದಿನ ಮಾನವ ವಿಮಾನವನ್ನು ನಿರ್ಮಾಣ ಮಾಡಿ ಹಾರಲು ಕಲಿತ. ಚಂದ್ರನನ್ನು ‘ಚಂದಮಾಮಾ ಬಾ ಬಾ’ ಎನ್ನುತ್ತಾ ಅವನಿನ್ನು ಇಲ್ಲಿಗೆ ಬರಲಾರ ಎಂದು ಇವನೇ ಚಂದ್ರಲೋಕಕ್ಕೆ ಹೋದ. ದೂರದ ವ್ಯಕ್ತಿಗಳ ಸಂಪರ್ಕಕ್ಕಾಗಿ ದೂರವಾಣಿ ಕಂಡು ಹಿಡಿದ.

Image

ಹಿಮಗಿರಿಯ ಗರ್ಭದಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ಡಿಸೆಂಬರ್ ೨೦೨೦

ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಬಳಿಕ ಹೊರ ಬಂದ ಪುಸ್ತಕವಿದು. ಬಹಳ ಹಿಂದೊಮ್ಮೆ ಪ್ರಕಟವಾಗಿದ್ದರೂ, ಪ್ರತಿಗಳು ಈಗ ಮುಗಿದಿವೆ ಎಂದು ರವಿ ಬೆಳಗೆರೆಯವರು ಬರೆದಿದ್ದರು. ‘ಹಿಮಗಿರಿಯ ಗರ್ಭದಲ್ಲಿ' ಪುಸ್ತಕವು ಒಂದು ಪ್ರವಾಸ ಕಥನ. ರವಿ ಬೆಳಗೆರೆಯವರು ತಮ್ಮ ಅರುಣಾಚಲ ಪ್ರದೇಶದ ಪ್ರವಾಸದ ಅನುಭವಗಳನ್ನು ತಮ್ಮದೇ ಆದ ಶೈಲಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಒಂದು ಒಳ್ಳೆಯ ನುಡಿ (೨೯) - ಸುವಿಚಾರ

ಸತ್ಯ ಮತ್ತು ಸುಳ್ಳುಗಳ. ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಸತ್ಯ ಹೇಳುವವ ಸತ್ತೇ ಹೋದ ಎಂಬ ಮಾತೂ ಇದೆ. ಸುಳ್ಳು ಹೇಳುವವ ನೂರ್ಕಾಲ ಬದುಕಿದ ಎನ್ನುತ್ತಾರೆ. ನಮ್ಮ ಕಣ್ಣಿಗೆ ಅವ ನೂರ್ಕಾಲ ಬದುಕಿದ ಹಾಗೆ ಗೋಚರಿಸಬಹುದು. ಆದರೆ ಅದೂ ಒಂದು ಬದುಕಾ? ಒಮ್ಮೆಗೆ ಆತ ಬಚಾವಾಗಬಹುದು. ಆದರೆ ಇಡೀ ಸಮಾಜ ಅವನನ್ನು ವ್ಯಂಗ್ಯವಾಗಿ ನೋಡುತ್ತದೆ. ಎಲ್ಲಿ ಹೋದರೂ ಅವನತ್ತ ಬೊಟ್ಟು ಮಾಡಿ ತೋರಿಸುತ್ತಾರೆ. ಹಾಗಿದ್ದ ಬಾಳು ಯಾಕೆ?

Image