ನಿಮ್ಮ ನಾಣ್ಯದ ಹುಟ್ಟೂರು ಯಾವುದು ಗೊತ್ತಾ?

ಇದೇನಪ್ಪಾ ಹೀಗೆ ಕೇಳ್ತೀರಾ ಅಂತ ಅಂದ್ಕೋತೀರಾ? ಹಾಗಾದ್ರೆ ಕೇಳಿ. ಈಗೀಗ ಭಾರತೀಯ ನಾಣ್ಯಗಳು ಅನೇಕ ಇತಿಹಾಸದ ಪುಟ ಸೇರಿವೆ. ಮೊದಲಾದರೆ ಆಣೆಗಳಿದ್ದವು. ನಂತರ ಪೈಸೆಗಳು, ರೂಪಾಯಿಗಳು ಬಂದವು. ಒಂದು ಪೈಸೆ ನಾಣ್ಯದಿಂದ ಹಿಡಿದು ಹತ್ತು ರೂಪಾಯಿ ನಾಣ್ಯಗಳವರೆಗೂ ವ್ಯವಹಾರದಲ್ಲಿ ಬಳಕೆಯಿತ್ತು. ಅಪರೂಪದ ಸಂದರ್ಭದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ೨೦, ೫೦, ೬೦, ೭೫, ೧೦೦, ೧೫೦ ...ಹೀಗೆ ಹತ್ತು ಹಲವಾರು ಸಂಗ್ರಹ ಪ್ರಿಯರಿಗೆ ಅನುಕೂಲವಾಗುವಂತಹ ಸಂದರ್ಭೋಚಿತ (ಗಣ್ಯರ ಜನ್ಮದಿನ, ಖ್ಯಾತ ಸಂಸ್ಥೆಯ ವಾರ್ಷಿಕೋತ್ಸವ ಹೀಗೆ..) ನಾಣ್ಯಗಳ ಬಿಡುಗಡೆಯೂ ನಡೆಯುತ್ತಿತ್ತು. ವರ್ಷಗಳು ಕಳೆದಂತೆ ನಾಣ್ಯಗಳು ನಗಣ್ಯವಾಗತೊಡಗಿದವು.

Image

ವಿಶ್ವಕವಿ ರವೀದ್ರನಾಥ ಟಾಗೋರ್

ಜಗತ್ತಿನ ಬಹುಪಾಲು ಜನಸಂಖ್ಯೆ ಹೊಂದಿರುವ ಏಷ್ಯಾ ಖಂಡದಲ್ಲಿ ಪ್ರಪ್ರಥಮವಾಗಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತರಾದವರು ಎಂಬ ಹೆಗ್ಗಳಿಕೆ ವಿಶ್ವಕವಿ ರವೀಂದ್ರನಾಥ ಟಾಗೋರ್ ಅವರದು.

ಕೊಲ್ಕತಾದಲ್ಲಿ ೭ ಮೇ ೧೮೬೧ರಲ್ಲಿ ಜನಿಸಿದ ಟಾಗೋರರ ೧೫೯ನೇ ಜನ್ಮ ಜಯಂತಿ ಇವತ್ತು ನಮ್ಮ ದೇಶದಲ್ಲಿ ರವೀಂದ್ರ ಜಯಂತಿಯಾಗಿ ಆಚರಿಸಲ್ಪಡುತ್ತಿದೆ. ಪಶ್ಚಿಮ ಬಂಗಾಳದ ಜನರಿಗಂತೂ ಬೈಸಾಕಿಯ ಇಂದಿನ ದಿನ ಸಂಭ್ರಮದ ದಿನ.

Image

ಪುಕ್ಕಲು ಸಿಂಹ ಮತ್ತು ಜಾಣ ಆಡು

ಹಿಂದೊಮ್ಮೆ ಮುದಿ ಆಡೊಂದು ತನ್ನ ಹಿಂಡಿನಿಂದ ಬೇರೆಯಾಯಿತು. ಆಗಲೇ ಸಂಜೆ ದಾಟಿ ಕತ್ತಲಾಗುತ್ತಿತ್ತು. ತನ್ನ ಹಳ್ಳಿಗೆ ಹೇಗೆ ಹೋಗಿ ಸೇರುವುದೆಂದು ಆಡಿಗೆ ಚಿಂತೆಯಾಯಿತು.

ಆ ಕತ್ತಲಿನಲ್ಲಿ ನಡೆದು ತನ್ನ ಹಳ್ಳಿ ಸೇರಲು ಸಾಧ್ಯವಿಲ್ಲವೆಂದು ಮುದಿ ಆಡಿಗೆ ಅರ್ಥವಾಯಿತು. ಹಾಗಾಗಿ, ಅಲ್ಲೇ ಎಲ್ಲಾದರೂ ರಾತ್ರಿ ಕಳೆಯಲು ನಿರ್ಧರಿಸಿತು. ಅಲ್ಲಿ ಗುಡ್ಡದ ಬದಿಯಲ್ಲೊಂದು ಗವಿ ಕಂಡಿತು. ಅದರಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದ ಮುದಿ ಆಡು ಗವಿಯೊಳಗೆ ಹೋಯಿತು. ಹಠಾತ್ತನೇ ಗವಿಯೊಳಗೆ ವಾಸ ಮಾಡುತ್ತಿದ್ದ ಭಯಾನಕ ಸಿಂಹದೊಂದಿಗೆ ಮುದಿ ಆಡು ಮುಖಾಮುಖಿಯಾಯಿತು.

ಮುದಿ ಆಡು ಈಗ ಓಡಿ ಹೋಗುವಂತಿರಲಿಲ್ಲ; ಸಿಂಹದೊಂದಿಗೆ ಕಾದಾಡಲೂ ಸಾಧ್ಯವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮುದಿ ಆಡಿಗೆ ಒಂದು ಉಪಾಯ ಹೊಳೆಯಿತು.

Image

ನಿಸ್ಸಾರ ಅಹಮದ್ದರಿಗೆ ಶ್ರದ್ಧಾಂಜಲಿ

ನಾವು ಶಾಲೆಯಲ್ಲಿ ಕನ್ನಡ ಕಲಿಯುವಾಗ ಓದಿದ ಕನ್ನಡ ಪದ್ಯಗಳನ್ನು  ಬಿಟ್ಟರೆ, ಇತರೆ ಕವಿಗಳು/ಕವನಗಳನ್ನು  ನಾನು ಬಲ್ಲವನಲ್ಲ. ಕಾರಣ ಇಷ್ಟೇ. ನನಗೆ ಕವನಗಳು/ಪದ್ಯಗಳು ಸುಲಭವಾಗಿ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ ಕಂಡದ್ದನ್ನು ಮಾತ್ರ ನಾನು ಓದಿ ತಿಳಿಯಬಲ್ಲೆ.

ಅನಂತದ ಸಿರಿಬೆಳಕಿನಲ್ಲಿ ಐಕ್ಯರಾದ ಕವಿ ನಿಸಾರ್ ಅಹಮದ್

“ಜೋಗದ ಸಿರಿಬೆಳಕಿನಲ್ಲಿ ….. ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ” - ೧೯೭೦ರ ದಶಕದಲ್ಲಿ, ನನ್ನ ತಲೆಮಾರಿನ ಯುವಕರಲ್ಲಿ ರೋಮಾಂಚನ ಮೂಡಿಸಿದ ಕವನ. ಈಗಲೂ ಕನ್ನಡ ನಾಡಿನ ಎಲ್ಲ ತಲೆಮಾರಿನವರಲ್ಲಿ ರೋಮಾಂಚನ ಚಿಮ್ಮಿಸುವ ಕವಿತೆ. ಅದನ್ನು ಬರೆದ ಕವಿ ಕೆ.ಎಸ್. ನಿಸಾರ್ ಅಹಮದ್ (೮೪) ಇಂದು ನಮ್ಮೊಂದಿಗಿಲ್ಲ. ನಿನ್ನೆ, ೩ ಮೇ ೨೦೨೦ರಂದು ನಮ್ಮನ್ನಗಲಿದರು. (ಜನನ: ೫ ಫೆಬ್ರವರಿ ೧೯೩೬, ದೇವನಹಳ್ಳಿ, ಬೆಂಗಳೂರು ಜಿಲ್ಲೆ)

ನಮ್ಮ “ಸಂಪದ"ದ "ಶ್ರಾವ್ಯ" ವಿಭಾಗದಲ್ಲಿ ಅವರ ಸಂದರ್ಶನ ಲಭ್ಯ (ಸಂಪುಟ ೭). ಆ ಸಂದರ್ಶನವನ್ನು (೪೮ ನಿಮಿಷ) ಇವತ್ತು ಪುನಃ ಕೇಳಿದೆ. ಜನಪ್ರಿಯ ಕವಿಯಾಗಿ, ಪ್ರಾಧ್ಯಾಪಕರಾಗಿ, ಚಿಂತಕರಾಗಿ, ಕನ್ನಡದ ಕಟ್ಟಾಳುವಾಗಿ, ಮಾನವತಾವಾದಿಯಾಗಿ ನಿಸಾರ್ ಅಹಮದರ ವ್ಯಕ್ತಿತ್ವ ಅದರಲ್ಲಿ ಮೂಡಿ ಬಂದಿದೆ.

Image

ದಿನದಿನವೂ ಭೂತಾಯಿಗೆ ಶರಣು

ಇವತ್ತು ಬೆಳಗಾಗುತ್ತಿದ್ದಂತೆ ಮಡದಿಯೊಂದಿಗೆ ಅಡ್ಡೂರಿನ ನಮ್ಮ ತೋಟಕ್ಕೆ ಪ್ರಯಾಣ - ತೆಂಗಿನ ಮರಗಳಿಗೂ, ಇತರ ಗಿಡಗಳಿಗೂ ವಾರಾಂತ್ಯದಲ್ಲಿ ನೀರುಣಿಸಲಿಕ್ಕಾಗಿ.

ಅಲ್ಲಿ ಗೇಟಿನ ಪಕ್ಕದಲ್ಲೇ ಇರುವ ಹಳೆಯ ಪುನರ್ಪುಳಿ (ಕೋಕಂ) ಮರದಲ್ಲಿ ಹಣ್ಣುಗಳನ್ನು ಕಂಡು ಖುಷಿ. ಯಾಕೆಂದರೆ, ಕಳೆದ ವರುಷ ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ) ಕೆಲಸಗಾರರು ಅದರ ಗೆಲ್ಲುಗಳನ್ನು ಕಡಿದು ಹಾಕಿದ್ದರಿಂದಾಗಿ ಅದು ಫಲ ಕೊಟ್ಟಿರಲಿಲ್ಲ. ಅಂತೂ ಅದರ ಹಣ್ಣುಗಳನ್ನೆಲ್ಲ ಕೊಯ್ದೆ.

Image

ಧ್ಯಾನದಿಂದ ಹೊಸ ಬದುಕು (ಭಾಗ 3)

ಧ್ಯಾನ ಮಾಡುವುದು ಹೇಗೆ?
ಧ್ಯಾನ ದೊಡ್ದ ಸಾಧನೆ. ಧ್ಯಾನದ ಪೂರ್ಣ ಅನುಭವ ಸಿಗಬೇಕಾದರೆ ಪಾಲಿಸಬೇಕಾದ ಕೆಲವು ನಿಯಮಗಳು: ಧ್ಯಾನ ಮಾಡುವಾಗ ಸ್ವಲ್ಪ ಹಸಿವಾಗಿರಬೇಕು, ಸ್ವಲ್ಪ ಸುಸ್ತಾಗಿರಬೇಕು ಮತ್ತು ಯಾವುದೇ ನಿರೀಕ್ಷೆ ಇರಬಾರದು. ಅಂದರೆ, ಆಹಾರ ಸೇವನೆಗೂ ಧ್ಯಾನಕ್ಕೂ ಕನಿಷ್ಥ ಅರ್ಧ ಗಂಟೆಯ ಅಂತರ ಇರಬೇಕು. ಹೆಚ್ಚು ಹಸಿವಾದಾಗ ಅಥವಾ ಹೆಚ್ಚು ಸುಸ್ತಾದಾಗ ಧ್ಯಾನ ಮಾಡಿದರೆ ನಿದ್ದೆ ಬರುತ್ತದೆ. ಹಾಗಾಗಿ, ಕಷಾಯ ಅಥವಾ ಆರೋಗ್ಯಕರ ಪಾನೀಯ ಕುಡಿದು ಹಸಿವು ನಿವಾರಿಸಿಕೊಂಡು ಅರ್ಧ ಗಂಟೆಯ ನಂತರ ಧ್ಯಾನ ಮಾಡಬೇಕು. ಹಾಗೆಯೇ ತೀರಾ ಸುಸ್ತಾಗಿದ್ದಾಗ, ಅರ್ಧ ತಾಸು ಆರಾಮವಾಗಿ ಕುಳಿತು ಅಥವಾ ಶವಾಸನ ಮಾಡಿ ದಣಿವು ಪರಿಹರಿಸಿಕೊಂಡ ನಂತರ ಧ್ಯಾನ ಮಾಡಬೇಕು.

Image

ಧ್ಯಾನದಿಂದ ಹೊಸ ಬದುಕು (ಭಾಗ 2)

ಧ್ಯಾನ ಎಂದರೇನು?
ಅದೊಂದು ಅನುಭವ. ಶಬ್ದಕೋಶದ ಪುಟ ನೋಡಿದರೆ, "ದೀರ್ಘ ಚಿಂತನೆ” ಅಥವಾ "ಯಾವುದೇ ಸತ್ಯ, ವಿಸ್ಮಯ ಅಥವಾ ಪವಿತ್ರ ವಸ್ತುವಿನ ಬಗ್ಗೆ ಮನಸ್ಸನ್ನು ನಿರಂತರವಾಗಿ ತೊಡಗಿಸುವುದು" ಎಂಬ ಅರ್ಥ ಸಿಗಬಹುದು. ಆದರೆ, ಧ್ಯಾನ ಇವೆಲ್ಲಕ್ಕಿಂತ ಮಿಗಿಲಾದ ಅನುಭವ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು - ಅದೊಂದು ವಿವರಿಸಲಾಗದ ಅನುಭವ ಎಂಬ ಸತ್ಯ.

Image

ಧ್ಯಾನದಿಂದ ಹೊಸ ಬದುಕು (ಭಾಗ ೧)

ಜೆನ್ ಗುರುಗಳೊಬ್ಬರಲ್ಲಿ ಶಿಷ್ಯನೊಬ್ಬ ಕೇಳಿದ ಪ್ರಶ್ನೆ: "ಗುರುಗಳೇ, ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ಇಂತಹ ಮಹಾತ್ಮರಾಗಲು ನೀವೇನು ಮಾಡಿದಿರಿ?" ತಕ್ಷಣ ಗುರುಗಳ ಉತ್ತರ, “ನನಗೆ ಹಸಿವಾದಾಗ ತಿಂದೆ ಮತ್ತು ನಿದ್ದೆ ಬಂದಾಗ ಮಲಗಿದೆ.”

ಚಕಿತನಾದ ಶಿಷ್ಯ ಕೇಳಿದ, "ಗುರುಗಳೇ, ಎಲ್ಲರೂ ಇದನ್ನು ಮಾಡುತ್ತಾರೆ. ಹಾಗಿರುವಾಗ ಇದರಲ್ಲಿ ವಿಶೇಷ ಏನಿದೆ?” ಈ ಪ್ರಶ್ನೆಗೆ ಗುರುಗಳ ಮಾರ್ಮಿಕ ಉತ್ತರ, “ಎಲ್ಲರೂ ಇದನ್ನು ಮಾಡುವುದಿಲ್ಲ. ಅವರೆಲ್ಲ ಏನು ಮಾಡುತ್ತಾರೆಂದು ಗಮನಿಸು. ಅವರು ಹಸಿವಿಲ್ಲದಿದ್ದರೂ ರುಚಿಯ ಚಪಲದಿಂದ ತಿನ್ನುತ್ತಾರೆ. ನಿದ್ದೆ ಬಾರದಿದ್ದರೂ ಮಲಗಿ ನಿದ್ರಿಸಲು ಚಡಪಡಿಸುತ್ತಾರೆ; ಹಾಸಿಗೆಯಲ್ಲಿ ಮಲಗಿ, ಯಾವುದೋ ಸಮಸ್ಯೆಯಿಂದ ಪಾರಾಗುವುದು ಹೇಗೆಂದು ಗಂಟೆಗಟ್ಟಲೆ ಚಿಂತಿಸುತ್ತಾರೆ.”

Image

ಇರ್ಫಾನ್ ಖಾನ್ ಎಂಬ ಅಪ್ರತಿಮ ನಟನ ಹೇಗೆ ಮರೆಯಲಿ?

ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ ಎಂಬ ಸುದ್ದಿ ಈ ಕೊರೋನಾ ಮಹಾಮಾರಿಯ ಸುದ್ದಿಯ ನಡುವೆ ದೊಡ್ಡ ಸುದ್ದಿಯಾಗಲೇ ಇಲ್ಲ. ಇರ್ಫಾನ್ ಖಾನ್ ಎಂಬ ಈ ನಟ ಯಾವತ್ತೂ ನಮ್ಮ ಪಕ್ಕಾ ಹೀರೋ ಛಾಯೆ ಹೊಂದಿರುವ ನಟ ಎಂದು ಅನಿಸಲೇ ಇಲ್ಲ. ಪಕ್ಕದ ಮನೆಯ ಬೆರಗು ಕಣ್ಣಿನ ಹುಡುಗನಂತೆಯೇ ಭಾಸವಾಗುತ್ತಿತ್ತು. ಎಲ್ಲಾ ನಟರಂತೆ ಸುಂದರ ವರ್ಣ, ಚಾಕಲೇಟ್ ಮುಖ, ಅದ್ಭುತ ನೃತ್ಯಗಾರ ಎಂಬೆಲ್ಲಾ ಗುಣವಿಶೇಷಗಳನ್ನು ಹೊಂದಿರಲಿಲ್ಲ. ಆದರೆ ಒಬ್ಬ ಪಕ್ಕಾ ಕಮರ್ಶಿಯಲ್ ನಟನಿಗೆ ಬೇಕಾದ ಎಲ್ಲಾ ಗುಣಗಳು ಈ ನಟನಿಗೆ ಇತ್ತು ಎಂದರೆ ತಪ್ಪಾಗದು. ಬಹುತೇಕ ಮಂದಿ ಇವರ ಚಿತ್ರಗಳನ್ನು ನೋಡಿರಲೂ ಬಹುದು. 

Image