ಭಾರತೀಯ ಚಿತ್ರಕಲೆ - ಭಾಗ 4

ತಂಜಾವೂರು ಚಿತ್ರಕಲೆ
ತಮಿಳುನಾಡಿನ ತಂಜಾವೂರು ಈ ಚಿತ್ರಕಲೆಯ ಮೂಲ. ಆರಂಭದಲ್ಲಿ ಇವನ್ನು ಪ್ರಾರ್ಥನಾ ಕೋಣೆಗಳಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇವು ಅಲಂಕಾರಿಕ ಚಿತ್ರಗಳಾಗಿಯೂ ಜನಪ್ರಿಯವಾಗಿವೆ.

ಈ ಚಿತ್ರಗಳು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದವುಗಳೇ ಆಗಿರುತ್ತವೆ. ಉದಾಹರಣೆಗೆ, ದಶಾವತಾರಗಳು, ಬೆಣ್ಣೆ ಕದಿಯುವ ಬಾಲಕೃಷ್ಣ ಇತ್ಯಾದಿ. ಇಲ್ಲಿರುವ ಚಿತ್ರ ಮಹಾಶಿವನ ವಾಹನ ನಂದಿಯದು.

ಮರದ ಹಲಗೆ ತುಂಡುಗಳಲ್ಲಿ ಸ್ಕೆಚ್ ಬರೆದು, ಕಲಾವಿದರು ಬಣ್ಣ ತುಂಬುತ್ತಾರೆ. ಅವನ್ನು ಅಂದಗೊಳಿಸಲು ಬಣ್ಣದ ಕಲ್ಲುಗಳು, ಆಭರಣಗಳು ಮತ್ತು ಗಾಜಿನ ತುಂಡುಗಳನ್ನು ಬಳಸುತ್ತಾರೆ. ಚಿತ್ರಗಳ ಕಂಬಗಳು, ಮಾಲೆಗಳು ಮತ್ತು ಆಭರಣಗಳಿಗೆ ಚಿನ್ನದ ತಗಡನ್ನು ತಗಲಿಸಿ ಚಿತ್ರಗಳನ್ನು ಆಕರ್ಷಕವಾಗಿಸುತ್ತಾರೆ.

Image

ತಂದೆಯ ಮೂರು ಸೂತ್ರಗಳು

ಒಂದಾನೊಂದು ಕಾಲದಲ್ಲಿ, ಶ್ರೀಮಂತನೊಬ್ಬ ಅವನ ಇಬ್ಬರು ಮಗಂದಿರೊಂದಿಗೆ ದೂರದ ಹಳ್ಳಿಯಲ್ಲಿ ವಾಸಿಸುತ್ತಿದ್ದ.  ಅವನು ರೋಗದಿಂದ ಬಳಲುತ್ತಿದ್ದ. ಸಾಯುವ ಮುಂಚೆ ಅವನು ಇಬ್ಬರು ಮಗಂದಿರನ್ನೂ ಹತ್ತಿರ ಕರೆದ.

ತನ್ನ ಸಂಪತ್ತನ್ನು ಅವರಿಗೆ ಕೊಡುತ್ತಾ, ಆ ಸಂಪತ್ತನ್ನು ಜೋಪಾನವಾಗಿ ಇಡಲಿಕ್ಕಾಗಿ ಮೂರು ಸೂತ್ರಗಳನ್ನು ಶ್ರೀಮಂತ ಹೇಳಿದ: “ನನ್ನ ಪ್ರೀತಿಯ ಮಗಂದಿರೇ, ಜೀವಮಾನವಿಡೀ ನನ್ನ ಹಾಗೆ ಶ್ರೀಮಂತಿಕೆಯಲ್ಲಿಯೇ ಬದುಕಬೇಕು ಎಂದಾದರೆ, ನಾನು ಈಗ ಹೇಳುವ ಮೂರು ಸೂತ್ರಗಳನ್ನು ನೀವು ಪಾಲಿಸ ಬೇಕು.”

Image

ದೈನಂದಿನ ಚಟುವಟಿಕೆಗಳ ಭಾಗವಾಗಲಿ ವಿಶ್ವ ಪರಿಸರ ದಿನ

ಇಂದು ಜೂನ್ ೫, ವಿಶ್ವ ಪರಿಸರ ದಿನ. ಪರಿಸರ ದಿನವನ್ನು ವರ್ಷದಲ್ಲಿ ಒಂದು ದಿನ ನೆನಪಿಸಿಕೊಳ್ಳುವುದು, ಕಾಟಾಚಾರಕ್ಕೆ ಗಿಡ ನೆಡುವುದು, ಉದ್ದುದ್ದ ಭಾಷಣ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಗಿಡ ಮರ ಹಾಗೂ ಪರಿಸರದ ಫೋಟೋಗಳನ್ನು ಹಾಕಿ ಶುಭಾಷಯ ಕೋರುವುದಕ್ಕೆ ಸೀಮಿತವಾಗಬಾರದು. ಪ್ರತಿಯೊಂದು ದಿನ ಪರಿಸರ ದಿನವಾಗಬೇಕು. ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಬೇಕು.

Image

ಬಾಳೆದಿಂಡಿನ ಅಂಬಡೆ

Image

ತಯಾರಿಕಾ ವಿಧಾನ: ಮೊದಲಿಗೆ ಬಾಳೆದಿಂಡಿನ ನಾರನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ. ಅರ್ಧ ಗಂಟೆ ನೆನೆಯಲು ಹಾಕಿದ ಅಕ್ಕಿ ಹಾಗೂ ತೊಗರಿ ಬೇಳೆಯನ್ನು ಜಾಲರಿಯಲ್ಲಿ ನೀರು ಹೋಗುವಂತೆ ಜಾಲಾಡಿ. ಬಾಳೆದಿಂಡನ್ನು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ತರಿ ತರಿಯಾಗಿ ನೀರನ್ನು ಹಾಕದೇ ರುಬ್ಬಿರಿ.

ಬೇಕಿರುವ ಸಾಮಗ್ರಿ

ಬೇಕಾಗುವ ವಸ್ತುಗಳು: ಬಾಳೆ ದಿಂಡು ಸಣ್ಣ ತುಂಡು, ತೊಗರಿ ಬೇಳೆ ೧/೨ ಕಪ್, ಬೆಳ್ತಿಗೆ ಅಕ್ಕಿ ೧/೨ ಕಪ್, ತೆಂಗಿನ ತುರಿ ೧ ದೊಡ್ಡ ಚಮಚ, ಕೆಂಪು ಮೆಣಸು ೬-೭, ಸ್ವಲ್ಪ ಇಂಗು, ಹುಣಸೆ ಹುಳಿ, ರುಚಿಗೆ ಉಪ್ಪು. ಕರಿಯಲು ಎಣ್ಣೆ

 

ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಕನ್ನಡಕ್ಕೆ: ಶ್ರೀನಿವಾಸ ವೈದ್ಯ
ಪ್ರಕಾಶಕರು
ಮನೋಹರ ಗ್ರಂಥಮಾಲಾ, ಧಾರವಾಡ
ಪುಸ್ತಕದ ಬೆಲೆ
ರೂ.೬೦.೦೦ ಮುದ್ರಣ: ೨೦೧೩

ನೊಬೆಲ್ ಬಹುಮಾನ ಪುರಸ್ಕೃತ ಆಂಗ್ಲ, ಸ್ಪಾನಿಷ್ ಲೇಖಕರಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಇವರ ‘No one writes to the Colonel’ ಎಂಬ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಶ್ರೀನಿವಾಸ ವೈದ್ಯ ಇವರು. ಶ್ರೀನಿವಾಸ ವೈದ್ಯ ಇವರು ಸೃಜನ ಶೀಲ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದ್ದಾರೆ. ಬರೆದದ್ದು ಕಡಿಮೆಯಾದರೂ ಬರೆದುದನ್ನು ಗಮನಿಸಲೇ ಬೇಕಾದ ಬರಹಗಳು ಇವರು ರಚಿಸಿದ್ದಾರೆ.

ಪಾಂಡೆಮಿಕ್

ಮಗಳು, 'ಅಮ್ಮ ಹೋಳಿಗೆ, ಮಾವಿನಹಣ್ಣಿನ ಸೀಕರಣಿ ಭಾಳ್ ಚಲೋ ಐತಿ!' ಅಂತ ಚಪ್ಪರಿಸಿಕೊಂಡು ತಿನ್ನುತ್ತಿರುವಾಗಲೇ, ಅಮಿತನಿಗೆ ಹೊರಗಡೆ ಏನೋ ಘೋಷಣೆ ಕೇಳಿಸಿದಂತೆ ಆಗಿ ಮಗಳಿಗೆ, 'ಒಂದ್ನಿಮಿಷ ಸುಮ್ಮನಿರು' ಎಂದು ಅತ್ತ ಕಿವಿಗೊಟ್ಟ.

Tags

ದಾಖಲೆಗಳ ಸರದಾರ, ಹಾಕಿ ದಿಗ್ಗಜ-ಬಲ್ಬೀರ್ ಸಿಂಗ್

ಕೆಲವೊಮ್ಮೆ ನನಗೆ ಪತ್ರಿಕೆಯಲ್ಲಿ ಯಾರಾದರೂ ಖ್ಯಾತ ವ್ಯಕ್ತಿಗಳು ನಿಧನ ಹೊಂದಿದ ಸುದ್ದಿ ತಿಳಿದಾಗ ಬೇಸರದ ಜೊತೆ ನಾಚಿಗೆಯೂ ಆಗುತ್ತದೆ. ಯಾಕೆಂದರೆ ಅವರ ಸಾಧನೆಗಳನ್ನು ಬದುಕಿರುವಾಗ ನಾವು ಗಮನಿಸಿರುವುದೇ ಕಮ್ಮಿ ಎಂದು ನಾಚಿಗೆ ಪಡುತ್ತೇನೆ. ಈಗ ನೋಡಿ ಇತ್ತೀಚೆಗೆ ನಮ್ಮ ಹಾಕಿಯ ಅಗ್ರಮಾನ್ಯ ಆಟಗಾರ, ಮಾಜಿ ನಾಯಕರಾದ ಬಲ್ಬೀರ್ ಸಿಂಗ್ ಸೀನಿಯರ್ ತಮ್ಮ ೯೬ನೇ ವರ್ಷದಲ್ಲಿ ನಿಧನ ಹೊಂದಿದರು.

Image

ತೇಜೋ-ತುಂಗಭದ್ರ

ಪುಸ್ತಕದ ಲೇಖಕ/ಕವಿಯ ಹೆಸರು
ವಸುಧೇಂದ್ರ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
Rs.380.00 ಮುದ್ರಣ ೨೦೧೯

ತೇಜೋ-ತುಂಗಭದ್ರ ಎನ್ನುವ ಈ ಬೃಹತ್ ಕಾದಂಬರಿಯು ಹೆಸರೇ ಹೇಳುವಂತೆ ೨ ನದಿ ದಂಡೆಯಲ್ಲಿ ಬರುವ ಲಿಸ್ಬನ್, ವಿಜಯನಗರ, ಗೋವಾ ನಗರಗಳಲ್ಲಿ ಕತೆ ಮುಂದುವರೆಯುತ್ತದೆ. ೧೫-೧೬ನೇ ಶತಮಾನದ ಹಳೆಯ ಕತೆಯಾದರೂ ಸಾರಾಂಶವು ಈಗಿನ ವರ್ತಮಾನಕ್ಕೆ ಹತ್ತಿರವಾಗುತ್ತೆ. ಆ ಶತಮಾನದ ಸಮಯದಲ್ಲಿದ್ದ ಸತಿ ಪದ್ಧತಿ, ಯಹೂದಿಗಳ ಹತ್ಯೆ, ಗುಲಾಮರ ಚಟುವಟಿಕೆಗಳು ಮತ್ತು ಅವರ ಯಾತನಾಮಯ ದಿನಗಳು ಓದುಗರ ನಿದ್ದೆಯನ್ನು ಕೆಡಿಸುತ್ತವೆ.

ತೂಕ ಇಳಿಕೆ ಆರೋಗ್ಯದ ಗಳಿಕೆ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ.ಎಲ್. ರಾಘವೇಂದ್ರ ರಾವ್
ಪ್ರಕಾಶಕರು
ಮಧುರ ಪ್ರಕಾಶನ, ರಾಜಾಜಿನಗರ, ಬೆಂಗಳೂರು-೫೬೦೦೧೦
ಪುಸ್ತಕದ ಬೆಲೆ
Rs 30.00, ಮುದ್ರಣ ೨೦೦೯

ಇಂದಿನ ದಿನಗಳಲ್ಲಿ ಎಲ್ಲರನ್ನೂ ಭೀತಿಗೊಳಗಾಗಿಸುವುದು ದೇಹದ ಸ್ಥೂಲತೆ. ದೇಹದ ತೂಕ ಅಧಿಕವಾದಂತೆಲ್ಲಾ ದೇಹ ಸ್ಥೂಲವಾಗುತ್ತದೆ. ಇದರಿಂದ ಮುಕ್ತರಾಗಲು ದೇಹದ ದಂಡನೆ ಅಗತ್ಯವಾಗಿರುತ್ತದೆ.