ಪುಸ್ತಕನಿಧಿ - 1.ಕನ್ನಡ ಕೀಚಕ - ಜಿ ಪಿ ರಾಜರತ್ನಂ / ಕೈಲಾಸಂ ಅವರ ಪುಸ್ತಕ
ಕನ್ನಡದ ಶ್ರೇಷ್ಠ ನಾಟಕಕಾರ ಕೈಲಾಸಂ ಅವರು ಕೆಲವು ನಾಟಕಗಳನ್ನು ಇಂಗ್ಲೀಷ್ನಲ್ಲಿ ಬರೆದಿದ್ದಾರೆ. ಒಂದು ನಾಟಕವನ್ನು ಕೀಚಕನ ಕುರಿತಾಗಿ ಇಂಗ್ಲೀಷಿನಲ್ಲಿ ಬರೆಯುವ ವಿಚಾರ ಇತ್ತು. ಅದರ ಕುರಿತು ಕೆಲವು ಸಂಗತಿಗಳನ್ನು ತಮ್ಮ ಆಪ್ತರೊಬ್ಬರಲ್ಲಿ ಹೇಳಿದ್ದರು. ಆ ನಾಟಕವನ್ನು ಬರೆಯುವ ಮುನ್ನವೇ ಅವರು ತೀರಿಕೊಂಡರು. ಮುಂದೆ ಆ ನಾಟಕವನ್ನು ತಮಗೆ ನೆನಪಿದ್ದ ಹಾಗೆ ಆಪ್ತರು ಇಂಗ್ಲಿಷ್ ನಲ್ಲಿ ಬರೆದರು. ಅದನ್ನು ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಜಿ ಪಿ ರಾಜರತ್ನಂ ಅವರು ಅನುವಾದಿಸಿದರು. ಈ ಪುಸ್ತಕದ ಮುಖಪುಟವನ್ನು ಜೊತೆಯಲ್ಲಿನ ಚಿತ್ರದಲ್ಲಿ ನೋಡಬಹುದು. ಈ ಪುಸ್ತಕವು archive.org ನಲ್ಲಿ ನೀವು ಕೀಚಕ ಎಂದು ಹುಡುಕಿದರೆ ಸಿಗುತ್ತದೆ.