ಮ್ಯಾಜಿಕ್ ಮದ್ದಳೆ
ಒಂದಾನೊಂದು ಕಾಲದಲ್ಲಿ ಜಪಾನಿನಲ್ಲಿ ಗೆನ್‌ಗೊರೊ ಎಂಬ ಹೆಸರಿನವನೊಬ್ಬನಿದ್ದ . ಅವನ ಬಳಿ ಇತ್ತೊಂದು ಮ್ಯಾಜಿಕ್ ಮದ್ದಳೆ.
ಅವನು ಅದರ ಬಲಬದಿ ಬಡಿಯುತ್ತಾ “ಮೂಗು ಉದ್ದವಾಗಲಿ” ಎಂದು ಹೇಳುತ್ತಿದ್ದರೆ ಮೂಗು ಉದ್ದವಾಗುತ್ತಿತ್ತು. ಅದರ ಎಡಬದಿ ಬಡಿಯುತ್ತಾ “ಮೂಗು ಗಿಡ್ಡವಾಗಲಿ” ಎಂದು ಹೇಳುತ್ತಿದ್ದರೆ ಮೂಗು ಗಿಡ್ಡವಾಗುತ್ತಿತ್ತು. ಆದರೆ, ಈ ಮದ್ದಳೆಯನ್ನು ಮೋಜಿಗಾಗಿ ಬಳಸಬಾರದೆಂಬುದು ನಿಯಮ. ಜನರನ್ನು ಸಂತೋಷ ಪಡಿಸಲಿಕ್ಕಾಗಿ ಮಾತ್ರ ಅದನ್ನು ಬಳಸಬೇಕಾಗಿತ್ತು.
ಯಾರಾದರೂ ಬಂದು ತನ್ನ ಮೂಗನ್ನು ಉದ್ದ ಅಥವಾ ಗಿಡ್ಡ ಮಾಡಬೇಕೆಂದು ವಿನಂತಿಸಿದರೆ, ಗೆನ್‌ಗೊರೊ ಅವರಿಗಾಗಿ ಮದ್ದಳೆ ಬಾರಿಸುತ್ತಿದ್ದ. ಅವರ ಕೋರಿಕೆ ಈಡೇರಿಸಿ ಅವರನ್ನು ಖುಷಿ ಪಡಿಸುತ್ತಿದ್ದ.
- Read more about ಮ್ಯಾಜಿಕ್ ಮದ್ದಳೆ
- Log in or register to post comments